ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅನುಬಂಧ

ಅಕ್ಷತಾ ಜಗದೀಶ

Butterfly Blue Sky Sun Nature. A blue butterfly (Papilio Salmoxis) flying through a sunny sky royalty free stock photos

ಆ ನೀಲಿ ‌ಆಗಸದಿ ಚಿತ್ತಾರ ಮೂಡಿಸಲೇನು…..
ಮೌನದಲಿ ಅಡಗಿದ ಭಾವನೆಗಳ
ಮಾತಿನಲ್ಲಿ ಬಹಿರಂಗ‌ ಪಡಿಸಲೇನು….

ಎಲ್ಲಾ ಆಸೆಗಳ , ಎಲ್ಲಾ ಕನಸುಗಳ
ಎಲ್ಲೆಲ್ಲೂ ಓಡುವ ಮನದೊಳಗೆ
ಬಂಧಿಸಿರುವೇ ಈಗ……

ಬರೆವ ಕವಿತೆಯೋಳಗೆ
ಮನದ ಮಾತು ಕುಣಿದಾಡಿ…
ಪದಗಳೊಡನೆ‌ ಪುಟಿದೆದ್ದು
ರಾಗದಲಿ‌ ಬೆರೆತು ಅರಳಿದಾಗ..
ಆಹಾ ಸಂತೋಷವೇ…!
ಎಂಥಹ ಆಹ್ಲಾದವು..

ಚೂರು ಪ್ರೀತಿ ಭಾವದೊಳು ಬೆರೆತಾಗ
ಸುಂದರ ಬಾಳಿನ ಪ್ರಾರಂಭ ಆಗ..
ಇರಲೀ ಹೀಗೆ ಈ ಬಂಧ..
ಮರೆಯಲಾರದ ಅನುಬಂಧ.

*************************

About The Author

Leave a Reply

You cannot copy content of this page

Scroll to Top