ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಗಝಲ್

ರತ್ನರಾಯ ಮಲ್ಲ

Womens hat with red bow red lips. Vector illustration EPS10 stock illustration

ಒರಟಾದ ಅಧರಗಳಲಿ ನುಲಿಯುತಿದೆ ನಿನ್ನದೆ ಹೆಸರು
ಎದೆಯ ಎಡ ಭಾಗದಲ್ಲಿ ಕುಣಿಯುತಿದೆ ನಿನ್ನದೆ ಉಸಿರು

ಹಗಲಿರುಳು ಕಳೆಯುತಿರುವೆ ನಿನ್ನಯ ಕನವರಿಕೆಯಲ್ಲಿ
ಕನಸುಗಳೆಂಬ ಹೆಪ್ಪಿನಿಂದ ಭಾವವು ಆಗಿದೆ ಮೊಸರು

ಈ ರಾತ್ರಿಯು ಹರಿಯುತಿದೆ ನಿದ್ರೆಯ ಆಲಿಂಗನವಿಲ್ಲದೆ
ಹಾಸಿಗೆಯ ತುಂಬೆಲ್ಲ ಬರಿ ನಿನ್ನ ಮಾದಕತೆಯ ಒಸರು

ಗಾಳಿ ಬೀಸುತಿದೆ ಅನುರಾಗದ ಕಡಲು ಭೋರ್ಗರೆಯಲು
ಕಂಗಳ ಬಾಯಾರಿಕೆಯಲ್ಲಿ ಬರಿ ನಿನ್ನ ಬಿಂಬದೆ ಕೊಸರು

‘ಮಲ್ಲಿ’ಯ ಈ ಬಿಳಿ ಬಾಹುಗಳು ನಿನ್ನನ್ನೇ ಹುಡುಕುತಿವೆ
ಅಂತರವನ್ನು ಮುಗಿಸಲು ಅನುವಾಗಿದೆ ಪ್ರಣಯದ ಕೆಸರು

********************************

About The Author

Leave a Reply

You cannot copy content of this page

Scroll to Top