ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಎ. ಹೇಮಗಂಗಾ

ಬೆರಳುಗಳು ಯಾಂತ್ರಿಕವಾಗಿ ಹೂ ಕಟ್ಟುತ್ತಿವೆ ಮನಸೆಲ್ಲೋ ಕಳೆದುಹೋಗಿದೆ
ಕಂಗಳು ಬರುವಿಕೆಯನ್ನೇ ನಿರೀಕ್ಷಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ

ಪ್ರೀತಿ, ಪ್ರೇಮದಲ್ಲಿನ ಸುಖವೇನೆಂದು ತೋರಿಸಿಕೊಟ್ಟವನು ನೀನು
ಸವಿನೆನಪಲಿ ಅಧರಗಳು ಬಿರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ

ನಿನಗಾಗೇ ಮಿಡಿಯುವ ಹೃದಯದಲಿ ನೂರೆಂಟು ತವಕ, ತಲ್ಲಣಗಳು
ಧಮನಿಗಳು ನಿನ್ನ ಹೆಸರನ್ನೇ ಜಪಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ

ಕಣ್ರೆಪ್ಪೆಯೊಳು ಅವಿತಿಹ ಕನಸು ನನಸಾಗಲು ಕಾಯುವ ಕಾಯಕವಿದು
ಕಾಲದ ಘಳಿಗೆಗಳು ತಮ್ಮಂತೆ ಸರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ

ವರ್ಷಗಳು ಉರುಳಿದರೇನು ಹೇಮ ಳ ಒಲವಿಗೆಂದೂ ಮುಪ್ಪು ಬಾರದು
ತನುವಿನ ಕಣಕಣಗಳೂ ಹಂಬಲಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ

*****************************

About The Author

4 thoughts on “ಗಝಲ್”

  1. ವೀಣಾ ಕೃಷ್ಣಮೂರ್ತಿ, ದಾವಣಗೆರೆ.

    ಮಾಯಲೋಕದಲಿ ಮನವದು ಕನಸಿನೊಳು ಜಾರಿ ಹೋಗಿದೆ.

  2. ಹೇಮಾ ನಾರಾಯಣ್ ಮೂರ್ತಿ

    ಸೂಪರ್
    ಸುಮಧುರ ಕಂಠದಲ್ಲಿ ಹಾಡಾಗಿ ಹೊರ ಹೊಮ್ಮಿದರೆ ಕೇಳುವ ಆನಂದವೇ ಪರಮಾನಂದ

  3. ನಾಗರತ್ನ ಸತ್ಯನಾಾಯಣ

    ಪ್ರೇಮದ ಉತ್ಕಟತೆ ಸುಂದರ ಸಾಲುಗಳಲ್ಲಿ ಹೊಮ್ಮಿದೆ.

  4. Dr.Ashok Kumar S Matti.

    ಗಝಲ್ ನಲ್ಲಿರುವ ಮೌಲಿಕ ವಿಚಾರಗಳು ಮೊಗ್ಗು ತಾನರಳಿ ಹೂವಾದಂತಿದೆ.

Leave a Reply

You cannot copy content of this page

Scroll to Top