ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹೇಗೆ ಉಸಿರಾಗಲಿ

blue and red abstract painting

ಲಕ್ಷ್ಮೀ ಪಾಟೀಲ್

ಹಾಡಿಗೆ ನಿಲುಕದ ಕವಿತೆಗಳಿವು
ಭಾವ ರಾಗದ ಕೊಂಡಿ ಎಲ್ಲಿ ಜೋಡಿಸಲಿ
ಸತ್ತಂತೆ ಸುಪ್ತಬಿದ್ದಭಾವಗಳಿವು
ತಾಳ ಮೇಳ ಲಯಗಳಹೇಗೆ ಮೀಟಲಿ

ಗಂಡಿನ ಅಟ್ಟಹಾಸ ಹಿಸುಕುವಕವಿತೆಗಳಿವು
ಹೆಣ್ಣಿನ ಕೋಮಲ ಎಲ್ಲಿ ಚಿತ್ರಿಸಲಿ
ಕಾವ್ಯದ ಮಾಧುರ್ಯ ನಲುಗಿಸುವಕವಿತೆಗಳಿವು
ಮುದದ ನಂದನವನ ಎಲ್ಲಿ ತೋರಿಸಲಿ

ಅಂತೆ ಕಂತೆಗಳಲಿ ನಿತ್ಯ ರೋದಿಸುವಳೀಕವಿತೆ
ಭಾವ ಬದಲಿಸಿಭಾವವೀಣೆಎಲ್ಲಿ ನುಡಿಸಲಿ
ಆಕ್ಸಿಜನ್ನಳಿಕೆ ಕಟ್ಟಿಕೊಂಡು ತೀವ್ರನಿಗಾ
ಘಟಕದಲ್ಲಿ ನನ್ನ ಕವಿತೆಗಳು
ನಾನೇ ಹಾಡಾದಹಾಡಿಗೆ ಹೇಗೆ ಉಸಿರಾಗಲಿ

***************************************

About The Author

2 thoughts on “ಹೇಗೆ ಉಸಿರಾಗಲಿ”

  1. ಕೊನೆಯ ಸಾಲುಗಳು ತೀವ್ರಹತಾಶ ಭಾವನೆಗಳನ್ನು ಹೊರಹಾಕುತ್ತ ಕವಿತೆಗೆ ಇನ್ನಷ್ಟು ಒತ್ತು ಕೊಡಿತ್ತಿವೆ.

Leave a Reply

You cannot copy content of this page

Scroll to Top