ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಶುಭಲಕ್ಷ್ಮಿ ಆರ್ ನಾಯಕ

ಹೃದಯ ಸಿರಿವಂತಿಕೆಗೆ ಅರಮನೆ ಗುಡಿಮನೆಗಳೆಂಬ ಭೇದವುಂಟೇ ಸಖೀ
ಗುಣ ಅವಗುಣಗಳಿಗೆ ಬಡವನು ಬಲ್ಲಿದನೆಂಬ ಅಂತರಗಳುಂಟೇ ಸಖೀ

ಅವರವರ ಭಾವಗಳಲಿ ಅವರವರ ಅರಿವಿಂಗೆ ಬಂದಂತೆ ಮಾಡುತಿಹರು
ಸನ್ನಡತೆ ದುರ್ನಡತೆಗಳಿಗೆ ನಾನು ನೀನೆಂಬ ದೂರಗಳುಂಟೇ ಸಖೀ

ಸಂಕುಚಿತ ಭಾವದಲಿ ಸ್ವಾರ್ಥದ ಬೆಂಬತ್ತಿ ತಮ್ಮ ತನಗಳ ಮರೆತಿಹರು
ಜೀವನದಿ ಸ್ವಾರ್ಥವೆಂಬ ಮುಸುಕಿಗೆ ಬಲಿಯಾಗಿ ಗೆದ್ದವರುಂಟೇ ಸಖೀ

ಬಡವನಲಿ ಕಾಣಬಹುದಲ್ಲವೇ ನಯ ವಿನಯತುಂಬಿರುವ ವಿಶಾಲ ಹೃದಯವ
ಅವನ ಕಷ್ಟ ತ್ಯಾಗ ಸಹನೆಗಳ ಅಸಹನೆಯಿಂದ ಮರೆಯಲುಂಟೇ ಸಖೀ

ಸಂಕುಚಿತ ಸ್ವಾರ್ಥದ ಬದುಕ ಕಂಡು ಶುಭ ಳ ಕೋಮಲ ಹೃದಯ ಚೂರಾಗಿದೆ
ಭೇದ ಭಾವ ಸ್ವಾರ್ಥ ಮೋಹಗಳಿಂದ ಮಹಲುಗಳ ಕಟ್ಟಲುಂಟೇ ಸಖೀ

*****************************

About The Author

10 thoughts on “ಗಝಲ್”

Leave a Reply

You cannot copy content of this page

Scroll to Top