ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಓ.. ಮನಸೇ

ವಿಭಾ ಪುರೋಹಿತ್

ಕ್ಷಣದ ಏಕಾಂತದಲಿ
ಅಮೂರ್ತವಾಗಿ
ನನ್ನೆದುರಲ್ಲೇಯಿರುವಿ
ಎದೆಯಲ್ಲಿ ಗೆಜ್ಜೆ ಕಟ್ಟಿ ಥಕಥಕ
ಕುಣಿಸಿ ಅಟ್ಟಕ್ಕೇರಿದ ಅತಿರೇಕ
ನಿನ್ನ ನೋಡಬೇಕೆಂಬ
ಉತ್ಕಟತೆ ಜಲಪಾತಕ್ಕೂ
ಜೋರಾಗಿ ಜೀಕಿದೆ
ಹಾರಿದ ಹನಿಗಳು
ಚಂದಿರನ ಗಲ್ಲಕ್ಕೆ ಸವರಿದ್ದೇ ತಡ
ತಂಪಿನಲ್ಲೇ ತಾಪ ಅನುಭವಿಸಿ
ಧಗಧಗ ಉರಿಯುತ್ತ ಉರುಳಿ
ಅವಳ ಸ್ಪರ್ಶಕ್ಕೆ ಘರ್ಷಕ್ಕೆ
ಆತು ಕೂತಿರುವೆ
ಮರಿ ಭಾಷ್ಪವಾಗಿ
ನುಡಿಯುತಿರೆ ಮಿಡಿಗಾವ್ಯ

ಓ… ಮನಸೇ ಅದ್ಭುತ !
ಏನೋ ಭೋರ್ಗರೆತ
ಅದರಲ್ಲೊಂದು ಥಳುಕು
ಸಣ್ಣ ಸೆಳೆತ ದೇದೀಪ್ಯಮಾನ
ಊಹಿಸಿರಲಿಲ್ಲ
ಶಬ್ದಾತೀತ ಅನುಭೂತಿ
ಮನಸ್ಸು ವಿಚಾರಗಳು
ಆಯಸ್ಸಿನ ಅಂಕೆ
ವಯಸ್ಸಿನ ಶಂಕೆ
ಇವೆರಡನ್ನೂ ಮೀರಿದ
ನಳನಳಿಸುವ ತಾಜಾತನ
ನವೊನವೋನ್ಮೇಶ
ಎಂಥ ವಿಚಿತ್ರ !
ಮನಸಿಗೆ ಪ್ರವಾಸ ಪ್ರಯಾಸ
ಇದ್ದಂತಿಲ್ಲ
ಥಟ್ಟಂತ ಪ್ರತ್ಯಕ್ಷ
ಥಟ್ಟಂತ ಅಂತರ್ಧಾನ
ಸೇರದ ದಾರಿಯೇನಲ್ಲ
ಸೇರುವೆ ಎಂದಾದರೊಮ್ಮೆ


About The Author

1 thought on “ಓ.. ಮನಸೇ”

Leave a Reply

You cannot copy content of this page

Scroll to Top