ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಏಕೆ ಹೀಗೆ ಈ ಬಿರುಕುಗಳು?

Human ego. In the form of human shadows royalty free illustration

ಮಮತಾಶ0ಕರ್

ಕಳಚಿಕೊಳ್ಳುವುದೇಕೆ ಒಂದೊಂದೇ ಕೊಂಡಿಗಳು?
ಯಾವಬಾದರಾಯಣ ಸ0ಬಂಧಗಳೋ
ಬೆಸೆದುಕೊಂಡಿದ್ದವು
ಈಗ ಬೆಸುಗೆ ಬಿಟ್ಟುಕೊಳ್ಳತೊಡಗಿದೆ

ಬಿರುಕು ದೊಡ್ಡದಾಗುತ್ತಾ ಹೋದಂತೆ
ದೂರಾಗುತ್ತ ಹೋಗುತ್ತೇವೆ…
ಜೊತೆಗೆ ಅಪಾರ್ಥಗಳೂ್ ಬೆಳೆಯುತ್ತಾ ಹೋಗುತ್ತವೆ
ಅಷ್ಟೇ ಆದರೆ ಪರವಾಗಿಲ್ಲ…
ಆದರೆ ನಾವೇನು ಹೇಳಿಲ್ಲವೋ
ಅದು ಎದುರಿನವರಿಗೆ ಕೇಳುತ್ತದೆ
ನಮ್ಮ ಮೌನ ಏನೇನೋ ಹೇಳುತ್ತಿರುತ್ತದೆ…!

ಈಗ ಈ ಸ್ಂಜೆ ಕೆಂಪಲ್ಲಿ
ಕರಗಿ ಹೋಗುತ್ತಿದೆ ಸಂಬಂಧಗಳು
ಕತ್ತಲಾಗುತ್ತಿರುವಾಗ ಅನಿಸುತ್ತಿದೆ ಅವರಿಗೆ
ಸ್ವಲ್ಪವೇ ಕ್ಷಮಿಸಿದ್ದರೂ ಇರುತ್ತಿತ್ತೇನೋ
ಈ ಬಿಟ್ಟುಹೋದ ಸಂಬಂಧಗಳು….

ಆದರೇನು…
ಅಹಂಕಾರಗಳ ಯುದ್ದದಲ್ಲಿ
ವಿದಾಯವೇ ಗೆದ್ದುಬಿಟ್ಟಿದೆ…..!

**************************************

About The Author

2 thoughts on “ಏಕೆ ಹೀಗೆ ಈ ಬಿರುಕುಗಳು?”

Leave a Reply

You cannot copy content of this page

Scroll to Top