ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹೇ ರಾಮ್

10 quotes of Mahatma Gandhi that changed Indian people - महात्मा गांधी की  कही वे 10 बातें जिन्होंने लोगों को आजादी का दीवाना बना दिया

ನೂತನ ದೋಶೆಟ್ಟಿ

ಸುತ್ತ ಕ್ಲಿಕ್ಕಿಸುವ ಕ್ಯಾಮರಾ ಕಣ್ಣುಗಳು
ಚಿತ್ರಪಟದಲ್ಲಿ ಸೆರೆಯಾದದ್ದೇನೋ ಹೌದು

ಇದು ಯಾರ ಸಮಾಧಿ?
ಪ್ರಶ್ನೆಗೆ ಅಪ್ಪನ ಮೆದು ಉತ್ತರ
ಪೋಸು ಕೊಡುವವರ ಪಕ್ಕದಲ್ಲಿ
ಹಿಡಿಯಾದ ನಾನು

ಘೋಡ್ಸೆಯನು ಬಣ್ಣಿಸುವವರ ಮಾತು
ಎದೆ ಹಿಂಡಲಿಲ್ಲ
ಇತಿಹಾಸ ಹೇಳಿತ್ತು ನಿನ್ನೆಗೆ ಮರುಗಬೇಡ

ಗುಂಡಿಗೆ ಎದೆಯೊಡ್ಡಿದವಗೆ
ಕಾವಲು ಬಂದೂಕುಗಳು
ವಿಪರ್ಯಾಸಕ್ಕೂ ಮಿತಿ ಇರಬೇಕು

ತತ್ವಗಳೋ ಹೊದಿಕೆ ಹೊದ್ದ ಪುಸ್ತಕಗಳು
ಬಾಕ್ಸ್ ಆಫೀಸಿನಲ್ಲಿ ಗಾಂಧೀಗಿರಿಯ ಲೂಟಿ
ಖಾದಿಯ ಫ್ಯಾಷನ್ ಮೇಳ
ಸ್ವದೇಶಿ ಬೇಲಿಗೆ ವಿದೇಶಿ ಗೂಟ
ನಾನೊಬ್ಬನೇ ‘ ನಗ್ನ ಫಕೀರ’

**********************************************************

About The Author

2 thoughts on “ಹೇ ರಾಮ್”

Leave a Reply

You cannot copy content of this page

Scroll to Top