ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಭಾ ಪುರೋಹಿತ ಕಾವ್ಯಗುಚ್ಛ

Boy with indian national flag. On green grass stock photos

ವೆಂಟಿಲೇಟರ್ ಮತ್ತು ರಕ್ಷೆ

Animation of green corona virus with city in background. Animation of green macro corona virus spreading and floating with cityscape in the background. Global vector illustration

ಭ್ರಾತೃತ್ವದ ಬಾಂಧವ್ಯ ದೆಳೆಯಲ್ಲಿ
ಫ್ಯಾಷನ್ ಗಿಫ್ಟುಗಳ ಮೋಹದನೂಲು
ಆತ್ಮೀಯತೆ ಗೌಣ ಪ್ರದರ್ಶನಕ್ಕೆ
ಕ್ಲಿಕ್ಕಾಗುವ ಕೆಂಪು ಕೇಸರಿ ಹಳದಿರಕ್ಷೆ

ತಾಯಿ ಕರುಳ ಬಣ್ಣ ಅಂಟಿದೆ
ಅದೇಕೋ ಅವಳ ಕುಡಿಗಳ ಬೆರಳು ಕೆಂಪಾಗಿವೆ! ಎಪ್ಪತ್ತು ವರ್ಷಗಳಿಂದ
ಎದೆಯಲ್ಲಿ ಬೆಂಕಿ ಇಟ್ಟು ಕೊಂಡಿದ್ದಾಳೆ

ಇತಿಹಾಸ ಗಡಿರೇಖೆಯೆಳೆದಾಗ
ಸಹಸ್ರೋಪಾದಿಯಾಗಿ ಕಂಗಾಲಾದವರನ್ನೆಲ್ಲ
ತನ್ನವರೆಂದು ತೆಕ್ಕೆಬಡಿದುಕೊಂಡಳು
ಆತ್ಮಸಾಕ್ಷಿಯಾಗಿ ಕಾಲಿಟ್ಟವರೆಷ್ಟೋ ?

ಒಂದೇ ಬಳ್ಳಿಯ ಹೂಗಳಂತೆ ಮುಡಿಗಿಟ್ಟಳು
ಸುಮ್ಮನಿರದ ಶಕುನಿಗಳ ಕ್ಯಾತೆಗೆ
ಹಣ್ಣಾಗಿದ್ದಾಳೆ ಪುಪ್ಪಸನೆಂಬ ಪುತ್ರರಕ್ಕಸರು
ಉಸಿರಾಡಲು ಬಿಡುತ್ತಿಲ್ಲ

ವೆಂಟಿಲೇಟರ್ ಅಭಾವ ,ಕೆಲವೇ ಶುಶ್ರೂಷಕರ
ಸಿಟ್ರಝೀನ್,ಡೊಲೊಗಳಿಂದ ತುಸು ಉಸುರುವಂತಹ ಗತಿಯಿದೆ
ಬೇಕಾಗುವ ವೆಂಟಿಲೇಟರ್ ಸುಲಭದ್ದಲ್ಲ

‘ನಾವು ಭಾರತೀಯರು’ ಎಂಬ ವೆಂಟಿಲೇಟರ್
ಯಾವ ಆಸ್ಪತ್ರೆಯ ಯಂತ್ರ ತಂತ್ರಗಳು
ಯಾವ ಹಬ್ಬದ ಮಂತ್ರ ಸ್ತೋತ್ರಗಳು
ಈ ಒಕ್ಕೊರಲಿನ ಭಾರತೀಯತೆಯ ಹೆದ್ದೊರೆ ಹರಿಸಲಿವೆ ?


ರಾಷ್ಟ್ರ ನಮನ

The wavy Indian flag on the sunset sky. Indian independence day. Celebration flag royalty free stock photo

ಭಾರವಾಗಿದೆಯಿಂದು ಗಾಯವಾಗಿದೆ ಕವಿತೆ
ರಕ್ತಕಾರುವದೊಂದೇ ಬಾಕಿ ಲೇಖನಿಯ ಬಾಯಿಂದ
ಮೂರು ಯುದ್ಧಗಳು ಕೊರೊನಾ ರಣಕೇಕೆ
ಗಡಿನೆಲದ ರಣಹಲಿಗೆ ರಾಜಕಾರಣದ
ಕರ್ಮಕಾಂಡ

ನಡುವೆ ನರಳುವ ನರರ ಪ್ರಲಾಪ !
ಯಾವ ಭೀತಿ ರೀತಿ ನೀತಿಗೂ ಬಗ್ಗುತ್ತಿಲ್ಲ
ಕಾಡುಪಾಪದ ಕಿಂಕಿಣಿ
ಗಡಿಯಲ್ಲಿ ಸಂಚು ನಿತ್ಯ ಗುಂಡಿನ ಸದ್ದು
ವೀರಗುಂಡಿಗೆಗಳ ಆಹುತಿ !

ವಿಕೋಪದಲ್ಲೂ ವಿಕೃತವ ಮೆರೆವ
ರಾಜಕೀಯ ತೊಗಲು ಗೊಂಬೆಯಾಟ
ಸಾಮಾನ್ಯರ ಮನೋಭೂಮಿ
ಸೋತು ಅರೆ‌ಸತ್ತು ಕಾದಿದೆ ಅಮೃತಘಳಿಗೆಗಿಂದು…….

ಚೀನಿಯಾತ್ರಿಕ ಹೂಯಾನ್ ತ್ಸಾಂಗ್ ಅಲ್ಲ ವಕ್ಕರಿಸಿದವ ಅಣುದಾಳಿಕಾರ ಹೊಡೆದೊಡಿಸುವ
ಸಿಡಿಮದ್ದುಗಳು ಸಿದ್ಧವಾಗುತಿವೆ
ಅಶ್ವಿನಿದೇವತೆಗಳ ಸದಯೆಯಲಿ

********************************

About The Author

2 thoughts on “ವಿಭಾ ಪುರೋಹಿತ ಕಾವ್ಯಗುಚ್ಛ”

Leave a Reply

You cannot copy content of this page

Scroll to Top