ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಡಾ . ಅಜಿತ್ ಹರೀಶಿ.

ಎದೆಯೊಳಗೆ ಸಿಕ್ಕಿಬಿದ್ದ
ಪದಗಳು ಸೀಳಿ
ಹೊರಬಂದು ಘೀಳಿಡುತ್ತವೆ
ನಮ್ಮನು ಕಟ್ಟಿಹಾಕಲು
ನಿನಗಾವ ಹಕ್ಕಿದೆಯೆಂದು…?

ಈ ಮುರಿಯದ ಮೌನ
ಆ ಅಕಾಲ ಪ್ರಸವ
ಈ ಮುದವಿಲ್ಲದ ಮನ
ಆ ಕಳೆಗೆಟ್ಟ ಮಳೆ
ಹದ ಬಿದ್ದು ಮೊಳೆಯಲಿ

ಅರ್ಧ ಗೀಚಿದ ಕವಿತೆ
ಅಂತ್ಯ ಕಾಣದ ಕತೆ
ಮಧ್ಯೆ ನಿಂತ ಬದುಕಿನಂತೆ
ಮುಂದೇನೆಂಬ ಚಿಂತೆ

ಅವಸರಕ್ಕೆ ಬಿದ್ದು
ಮುಗಿಸುವ ದಾರಿ
ಅದಿಲ್ಲವೋ ಸದ್ದಿಲ್ಲದೆ
ಮಾಡಬೇಕು ತಯಾರಿ…!
********************

About The Author

Leave a Reply

You cannot copy content of this page

Scroll to Top