ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

12ನೇ ಶತಮಾನದಿಂದ ಇಲ್ಲಿಯವರೆಗೂ ಮಹಿಳೆಯರಾದ ನಾವು ಪ್ರತಿಯೊಂದು ವಿಷಯದಲ್ಲೂ ಪ್ರತಿಭಟನೆಯ ಮಾಡಿಯೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದೇವೆ. ಸಮಾನತೆಯೆಂದು ಎಷ್ಟೇ ಬೊಬ್ಬೆ ಹೊಡೆದರು ಅದರ ಸಂಪೂರ್ಣ ಫಲ ದೊರೆಯುತ್ತಿಲ್ಲ .ಹಾಗಾಗಿ ಮಹಿಳೆಯರು ಒಂದು ಹೆಜ್ಜೆ ಮುಂದೆ ಇಡಬೇಕು .ಇಲ್ಲವೆಂದರೆ ನಮ್ಮನ್ನು ನಾವೇ ಅಂತರ್ಯದಲ್ಲಿ ಅಂಜಿಕೆ ಎಂಬ ಶೋಷಣೆ ಮಾಡಿಕೊಂಡಂತಾಗುತ್ತದೆ . ಡಾಕ್ಟರ್ ಗುರುರಾಜ ಕರ್ಜಗಿ ಅವರು ಹೇಳುವಂತೆ ಚಕ್ರವರ್ತಿ ಆಗಬೇಕೆಂದರೆ ಯಾವುದೇ ಅದೃಷ್ಟದ ಗೆರೆಗಳು ಬೇಕಾಗಿಲ್ಲ .ಆತ್ಮಸ್ಥೈರ್ಯವಿದ್ದರೆ ಸಾಕು . ಆ ಬಲದಿಂದಲೇ ಏನನ್ನು ನಾವು ಗೆಲ್ಲಬಹುದು. ಸಾಮಾಜಿಕವಾಗಿ ,ರಾಜಕೀಯವಾಗಿ ,ಆರ್ಥಿಕವಾಗಿ, ಕೌಟುಂಬಿಕವಾಗಿ ಮಹಿಳೆಯು ಒಂದಲ್ಲ ಒಂದು ರೀತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾಳೆ .

ಸಾಧನೆ ಮಾಡಿದ ಮಹಿಳೆಯರನ್ನೆಲ್ಲ ಒಮ್ಮೆ ಹಿಂದಿರುಗಿ ನೋಡಿದರೆ ನಮಗೆ ಸಾಲು ಸಾಲುಗಳ ಪಟ್ಟಿಯೇ ಸಿಗುತ್ತದೆ. ಸಮಾಜ ಸೇವೆ ಎಂದ ತಕ್ಷಣ ನೆನಪಿಗೆ ಬರುವುದು ಮದರ ತೆರೇಸಾ . ಬಡವರ, ದಲಿತರ ,ಅನಾರೋಗ್ಯ ಮಕ್ಕಳ ಸೇವೆ ಮಾಡುತ್ತಾ ವಿಶ್ವದಲ್ಲೇ ಗುರುತಿಸಿಕೊಂಡವರು. ಹಾಗೆ ಮೊದಲ ಮಹಿಳಾ ಪ್ರಭಾವಿ ರಾಜಕಾರಣಿ ,ಪ್ರಧಾನಮಂತ್ರಿಯಾಗಿ ಹೊರಹೊಮ್ಮಿದ ಇಂದಿರಾಗಾಂಧಿಯವರು , ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯಾಗಿ ಎಲ್ಲಾ ಮಹಿಳೆಯವರಿಗೂ ಸ್ಫೂರ್ತಿದಾಯಕರಾದ ಕಿರಣ ಬೇಡಿಯವರು, ಈ ಸಂದರ್ಭದಲ್ಲಿ ನಾವು ನೆನೆಯಬಹುದು. ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮೊದಲ ಮಹಿಳಾ ಭೂ ಸೇನಾ ಅಧಿಕಾರಿ ಮೇ ಪ್ರಿಯಾ ಝಿಂಗಲ್ ,ಮಹಿಳಾ ನ್ಯಾಯಾಧೀಶರು ಫಾತಿಮಾ ಬೀವಿ ಹೀಗೆ ಮಹಿಳೆಯರ ಕೊಡುಗೆ ಅಳತೆ ಮಾಡಲು ಸಾಧ್ಯವಿಲ್ಲ.

ಹಿಂದಿನ ಕಾಲ ಘಟ್ಟವನ್ನು ಪರಿಗಣಿಸಿದರೆ ಕೆಳದಿ ಚೆನ್ನಮ್ಮ ,ರಾಣಿ ಚೆನ್ನಮ್ಮ, ಲಕ್ಷ್ಮೀಬಾಯಿ ರಾಜ್ಯ ,ದೇಶವೆಂದು ಹೋರಾಟ ನಡೆಸಿದ ಛಲಗಾರ್ತಿಯರು. ಇವರೆಲ್ಲ ತಮ್ಮನ್ನು ತಾವೇ ಜನಸೇವೆಗೆ ಒಪ್ಪಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾದವರು . ಮಹಿಳೆಯರ ಸಾಧನೆ ಹೀಗಿರಲು ನೂರು ವರ್ಷಗಳು ಕಳೆದರೂ ಒಂದು ಮಹಿಳೆಯು ಕಸಾಪಕ್ಕೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲಿಲ್ಲ ಎನ್ನುವುದೇ ವಿಪರ್ಯಾಸ . ವಚನಕಾರ್ತಿಯರು ವಚನಗಳ ಮೂಲಕ ತಮ್ಮ ಸೇವೆಯನ್ನು ಅಕ್ಷರ ಲೋಕಕ್ಕೆ ನೀಡುತ್ತಾ ಬಂದಿದ್ದಾರೆ . ಅವುರುಗಳಲ್ಲಿ ಅಕ್ಕಮ್ಮ ,ಅಕ್ಕಮಹಾದೇವಿ, ಗಂಗಮ್ಮ, ಲಕ್ಷ್ಮಮ್ಮರನ್ನು ನೋಡಬಹುದು. ಇಂದು ಗೀತಾ ನಾಗಭೂಷಣ್, ಡಾಕ್ಟರ್ ಅನುಪಮ ನಿರಂಜನ, ಎಂ.ಕೆ ಇಂದಿರಾ, ತ್ರಿವೇಣಿ , ವೈದೇಹಿ ಡಾಕ್ಟರ್ ಅನುಪಮಾ ಇವರೆಲ್ಲ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದ್ದದು.ಏನೇ ಇರಲಿ ಯಾವುದೇ ಲಿಂಗ, ಮತ , ಜಾತಿ , ಧರ್ಮ, ಇನ್ನಿತರ ಪಂಗಡಕ್ಕೆ ಜೋತು ಬೀಳದೆ ಸಶಕ್ತವೆನಿಸಿದ ಮಹಿಳೆಯೊಬ್ಬಳು ಕಸಾಪಕ್ಕೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬೇಕೆಂದು ನಾವೆಲ್ಲ ಒಂದೇ ಮನಸ್ಸಿನಿಂದ ಪಣತೊಡಬೇಕು.

************************

ಎಂ.ಜಿ.ತಿಲೋತ್ತಮೆ

About The Author

Leave a Reply

You cannot copy content of this page

Scroll to Top