ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಶಿಕ್ಷಣ

ಹೊಸ ಶಿಕ್ಷಣ ನೀತಿ

ಚರ್ಚೆ ಕಠಿಣ ಕಾಯಿದೆ ಅತ್ಯಗತ್ಯ ಡಿ.ಎಸ್.ರಾಮಸ್ವಾಮಿ ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ. ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ ಮತ್ತು ಕೊಡು ಕೊಳ್ಳುವಿಕೆ ಇರಲಿಕ್ಕೇ ಬೇಕು. ಆದರೆ ಮೆಕಾಲೆ ಸೃಷ್ಟಿಸಿದ್ದು ಕ್ಲೆರಿಕಲ್ ಶಿಕ್ಷಣ ವ್ಯವಸ್ಥೆಯನ್ನು. ಎಲ್ಲಕ್ಕೂ ಲೆಕ್ಕ ವರದಿ ಮತ್ತು ಉಸ್ತುವಾರಿ ಕಲಿಸಿತೇ ವಿನಾ ಕಸುಬನ್ನಲ್ಲ. ಜೊತೆಗೆ ಆಸಕ್ತ ವಿಷಯದ ಅಧ್ಯಯ‌ನವನ್ನು ಕೂಡ ನಿಷೇದ ಮಾಡಿತು. ವಿಜ್ಞಾನ ಮತ್ತು ಕಲೆ ಎರಡರಲ್ಲೂ ಆಸಕ್ತಿ ಇರುವವರನ್ನು ದೂರ ಇಟ್ಟಿತು. ಆನರ್ಸ್ ಇಲ್ಲದ ಬರಿಯ ತಿಳುವಳಿಕೆಯನ್ನೇ ಜ್ಞಾನ ಎಂದು ಬಿಂಬಿಸಿದ ಕಾರಣಕ್ಕೇ ಇವತ್ತು ಪರಸ್ಪರ ಅವಲಂಬನೆಗಿಂತ ಪರಸ್ಪರ ದ್ವೇಷ ಅಸೂಯೆ ತುಂಬಿಕೊಂಡಿದೆ. ಪಠ್ಯಪುಸ್ತಕ ಆಯ್ಕೆ ಸಮಿತಿಯು ಆಯಾ ಆಳುವ ಸರ್ಕಾರದ ಹುಕುಂಗಳನ್ನು ಅಂತಃ ಪಠ್ಯವಾಗಿ ಆರಿಸುವುದು ಕೂಡ ನಿಜದ ಚರಿತೆಯನ್ನು ಮುಚ್ಚಿಟ್ಟು ತಿದ್ದಿದ ಇತಿಹಾಸವನ್ನು ಕಲಿಸುವ ಮೂಲಕ ಪರಂಪರೆಯನ್ನು ದೂರ ಇರಿಸಿ ಆವಾಹಿತ ತಿಳುವಳಿಕೆಯನ್ನು ಜ್ಞಾನವೆಂದು ಬಿಂಬಿಸಲಾಯಿತು. ಈ ಕುರಿತು ಸಾದ್ಯಂತವಾದ ಅಧ್ಯಯನ ಮತ್ತು ಕಠಿಣ ಕಾಯಿದೆ ಅತ್ಯಗತ್ಯ *******************

ಹೊಸ ಶಿಕ್ಷಣ ನೀತಿ Read Post »

ಕಾವ್ಯಯಾನ

ರಾಹತ್ ಇಂದೋರಿ

ಅನುವಾದಿತ ಕವಿತೆ ಮೂಲ: ರಾಹತ್ಇಂದೋರಿ ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ ಕಂಗಳಲ್ಲಿ ನೀರು ತುಟಿಗಳಲ್ಲಿ ಕಿಡಿಯನ್ನು ಇರಿಸಿಬದುಕ ಮಾಡಬೇಕೆಂದರೆ ಯೋಜನೆಗಳು ಹಲವು ಇರಿಸಿ ಕಲ್ಲುಮುಳ್ಳುಗಳದೇ ದಾರಿಯಲಿ ಗುರಿ ಏನೂ ದೊಡ್ಡದಲ್ಲಕೂಗಿ ಕರೆಯುತಿದೆ ದಾರಿ ಪಯಣ ಜಾರಿ ಇರಿಸಿ ಒಂದೇ ನದಿಗೆ ಎರಡು ದಡಗಳು ಸ್ನೇಹಿತರೆಬದುಕಿನೊಂದಿಗೆ ಸ್ನೇಹ ಸಾವಿನೊಂದಿಗೆ ಸಖ್ಯ ಇರಿಸಿ ಬಂದು ಹೋಗುವ ಕ್ಷಣಗಳು ಉಸುರುತಿವೆ ಕಿವಿಯಲ್ಲಿಏನೋ ಘಟಿಸುವುದಿದೆ ಎಲ್ಲ ತಯಾರಿ ಇರಿಸಿ ಜರೂರಿ ಇದೆ ಕಣ್ಣುಗಳಲಿ ಕಲ್ಪನೆ ಇರಿಸುವುದುನಿದ್ದೆ ಇರಿಸದಿದ್ದರೂ ಕನಸೊಂದಿಗೆ ಗೆಳೆತನ ಇರಿಸಿ ಬೀಸುವ ಗಾಳಿ ಹೊತ್ತಯ್ಯದಿರಲಿ ಹಗೂರ ದೇಹವನುಸ್ನೇಹಿತರೇ ಮೇಲೆ ಒಂದಿನಿತು ಭಾರದ ಕಲ್ಲು ಇರಿಸಿ ಹೊತ್ತು ತಂದಿರುವಿ ಶಾಯರಿ ಬಾಜಾರಿನಲಿ ‘ರಾಹತ್’ ಮಿಯಾಅವಶ್ಯಕತೆ ಏನಿತ್ತು ಭಾವಗಳನು ಬಾಜಾರಿನಲಿ ಬಿಕರಿಗೆ ಇರಿಸಿ *****************

ರಾಹತ್ ಇಂದೋರಿ Read Post »

ಇತರೆ

ಮನಸ್ಸು ಎಂಬ ಮನುಷ್ಯನ ತಲ್ಲಣ

ಲೇಖನ ಮನಸ್ಸು ಎಂಬ ಮನುಷ್ಯನ ತಲ್ಲಣ ವಿ ಎಸ್ ಶಾನ್ ಭಾಗ್ ಕೋರೋನ ಎಂಬ ಮಹಾಮಾರಿ ರೋಗ ಜಗತ್ತನ್ನು ಕಾಡುತ್ತಿದೆ. ಎಲ್ಲ ದೇಶಗಳ ಜನರ ನಾಲಿಗೆಯ ಮೇಲೆ ಒಂದೇ ಹೆಸರು ಕೊರೊನ ಅಂದರೆ ಕೋವಿಡ್-೧೯ ಎಲ್ಲರ ಭಾವನೆ ,ಒಂದೇ ಅದೆಂದರೆ ಅನಿಶ್ಚಿತತೆ ಮತ್ತು ಅಸಹಾಯಕತೆ,ತನ್ನ ಆತ್ಮೀಯರನ್ನು ಕಳೆದುಕೊಳ್ಳುವ ಭೀತಿ ಒಂದಾದರೆ ಆಯಾ ದೇಶದ ಜನರಿಗೆ ವಿಧಿಸಿದ ಕೆಲವು ನಿಬಂದನೆಗಳು ಮನೋಕ್ಲೇಶವನ್ನು ಉಂಟುಮಾಡಿದೆ..ಕೋವಿಡ್_೧೯ ಮನುಷ್ಯನ ಜೀವನ ಮತ್ತು ಮರಣದ ನಡುವೆ ನಿಂತಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ‍್ಯ ನಂತರ ಹುಟ್ಟಿದವರಿಗೆ ಇದು ಹೊಸತೊಂದು ಅನುಭವದ ಪ್ರಪಂಚ ತೆರೆದುಕೊಟ್ಟಿದೆ. ಕೊರೋನ ಎಂಬ ಮಹಾರೋಗಕ್ಕೆ ಔಷದ ಇಲ್ಲದ ಕಾರಣ ಭೀತಿ ಜನರನ್ನು ಕಾಡುತ್ತದೆ,  ಹಲವು ಉತ್ಪೀಡಿತ ಅನುಭವಗಳನ್ನೆಲ್ಲ ಪುಸ್ತಕರೂಪದಲ್ಲಿ ತರಲು ಲೇಖಕರು ಬರೆಯುತ್ತಿದ್ದಾರೆ.. ರೋಗದ ಬಗ್ಗೆ ಹಾಗೂ,ಅದನ್ನು ಎದುರಿಸುವ ಬಗ್ಗೆ,ತೆಗೆದುಕೋಳ್ಳಬೇಕಾದ  ಔಷದಗಳ ಬಗ್ಗೆ ಮಾಹಿತಿಕೊಡುವ ಲೇಖಕರಲ್ಲಿ ಹೆಚ್ಚಾಗಿ ಡಾಕ್ಟರರು .ಸಮಯದ ವಿರುದ್ದ ಹೋರಾಡುವವರು ಆದರೆ ಈಗ ರೋಗದ ನಂತರ  ಗುಣಮುಖರಾದವರಲ್ಲಿ ಹಲವರು ಬದುಕಿನಲ್ಲಿ  ಮಾನಸಿಕ ರೋಗಕ್ಕೆ ತುತ್ತಾದವರು.ಇವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ  . ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ದಿನಾ ಭೇಟಿಯಾಗುತ್ತಿದ್ದವರು. ಸಾವಿಗೆ ತುತ್ತಾದನ್ನು ನೋಡಿ ತನ್ನ ಜೀವನದ ಬಗ್ಗೆ ಕಳೆದುಕೊಳ್ಳುವ ಭರವಸೆ,, ,ಭವಿಷ್ಯದ ಬಗ್ಗೆ ಚಿಂತೆ,, ಬಾಸ್ನ ಅನುಚಿತ ವರ್ತನೆ, ಆಫೀಸಿನ ರಾಜಕೀಯ,ಗುಂಪುಗಾರಿಕೆ  ಇವೆಲ್ಲದರ ಮೂಲಕ ಅನುಭವಿಸುವ  ಮಾನಸಿಕ ಒತ್ತಡ, ಅನಿಶ್ಚಿತತೆ  ನಿರಾಸೆಗಳಿಂದ ಜಗ್ಗಿಹೋಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಗಮನಕ್ಕೆ ಬಂದಿವೆ. ಕರೋನ ಶಾರೀರಿಕವಾಗಿಯೂ,ಮಾನಸಿಕವಾಗಿಯೂ ಹಲವು ಯುವಕರನ್ನು ಮತ್ತು ಹಿರಿಯ ನಾಗರಿಕರನ್ನು ಬಲಿ ತೆಗೆದುಕೊಂಡಿದೆ.  ಇತ್ತೀಚೆಗೆ ಹಿರಿಯ ನಾಗರಿಕರೊಬ್ಬರು ಹಳೆಯ ಮನೆಯೊಂದರಿಂದ ಹೊಸಮನೆಗೆ ಬಂದರು.ಆದು ೧೫ನೆಯ ಮಾಳಿಗೆಯಲ್ಲಿತ್ತು ಅವರಿಗೆ ಚಾಳಿನಲ್ಲಿರುವ ಮಗಳ ಮನೆಗೆ ಕಳಿಸೆಂದು ತಂದೆ ಒತ್ತಾಯ ಮಾಡಿದಾಗ ಮಗ ಕೇಳಲಿಲ್ಲ೧೫ನೇ ಮಾಳಿಗೆ ಮನೆ ಅಪ್ಪನಿಗೆ ಬಂಧೀಖಾನೆಯಾಯಿತು.ಆದರೆ ಅಪ್ಪನ ಈ ಬಾವನೆಯನ್ನು ಅರಿಯದೇ ಅಪ್ಪನನ್ನು ಕಳೆದುಕೊಂಡ ಬಗ್ಗೆ ಅವನ ಕಥೆ ಪ್ರಮುಖ ಚಾನೆಲ್ಗಳಲ್ಲಿ ಬಿತ್ತರವಾಯಿತು .ಹೀಗೆ ಸಾಮಾಜಿಕವಾಗಿ  ಮನುಷ್ಯನ ಸಂವೇದನೆ, ಇತರರೊಂದಿಗೆ ಹೊಂದಿರುವ ಸಂಬಂಧ ಇವು ಇನ್ನೊಮ್ಮೆ ಸಾವಿನ ಬಗ್ಗೆ ಚಿಂತಿಸುವಂತೆ ಮಾಡಿವೆ ಮಾನಸಿಕ ರೋಗಕ್ಕೆ ತುತ್ತಾಗಿದ್ದ ಉದ್ಯೋಗದಲ್ಲಿರುವ ೨೬ ವರ‍್ಷದ ಯುವಕನೊಬ್ಬ ಕರೋನದ ಸಂಧರ‍್ಭದಲ್ಲಿ ತೀರಿಕೊಂಡ ತಂದೆಯ.. ಹೆಣದ  ಅಂತ್ಯಸಂಸ್ಕಾರ ದ  ಕೊನೆಯ ವಿಧಿವಿಧಾನವನ್ನು ರೋಡಿನಲ್ಲಿ ಮುಗಿಸಿ ದೇಹಕ್ಕೆ  ಅಗ್ನಿಕೊಟ್ಟ. ನಂತರ ಮನೆಯಿಂದ  ಹೊರಗೆ ಹೋಗಲಿಲ್ಲ ಕಾರಣ ಅಕ್ಕ ಪಕ್ಕದವರ ನಡತೆ…ಮನಸ್ಸನ್ನು ಘಾಸಿಗೊಳಿಸಿತ್ತು ಇವು ಹೊಸತೇನು ಅಲ್ಲ. .ಆದರೆ ಕರೋನ ಬರಿಯ ದೇಹಕ್ಕೆ ರೋಗವಾಗಿ ಬರದೆ ನಮ್ಮ ಯೋಚನೆ,,ಸಂಬಂಧ, ಆಚಾರ ವಿಚಾರಗಳನ್ನು ಪ್ರಶ್ನಿಸಿದಂತೆ ಮತ್ತು ನಮ್ಮ ನಡುವಳಿಕೆಗಳಲ್ಲಿ ಆದ ಸ್ತಿತ್ಯಂತರವು ಮಾನಸಿಕ ರೋಗಕ್ಕೆ ಬಲಿಯಾಗುವಂತೆ ಕಾಡಿದೆ..ಕರೋನ ಆರುತಿಂಗಳಿಂದ ಬಂದಿದ್ದು ಅದು ನಮ್ಮೊಂದಿಗೆ ಸ್ವಲ್ಪಕಾಲ ಉಳಿಯುವುದು ಖಂಡಿತ ಕರೋನ ಬರುವ  ಮೊದಲೇ ಶೇಖಡ ೧೦(೧೦%) ಮನೋರೋಗಿಗಳು ನಮ್ಮ ದೇಶದಲ್ಲಿದ್ದಾರೆ.ಜೀವಮಾನದಲಿ ಒಮ್ಮೆಯಾದರೂ ಮಾನಸಿಕ ರೋಗಕ್ಕೆ ತುತ್ತಾಗದೇ ಇರಲು ಸಾದ್ಯವಿಲ್ಲ.ಕರೋನ ಕೇವಲ ದುರ‍್ಬಲರನ್ನ ವಿಶೇಷವಾಗಿ ಕಾಡುತ್ತದೆ  ಮನಸ್ಸು ತಲ್ಲಣ ಗೊಳಿಸುವ ಕೆಲವು ಸಂಗತಿಗಳನ್ನ ನೋಡೋಣ: ಬ್ಯ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹಿರಿಯ ಕರ್ಮಚಾರಿಯನ್ನು ಯಾವುದೇ ಸೂಚನೆ ಕೊಡದೇ ಒಂದು ವಿಭಾಗದಿಂದ ಅಷ್ಟೆನೂ ಕ್ಷಮತೆ ಬೇಡದ ಹೊಸ ನೌಕರರಿಗೆ ಕೊಡುವ ಟಪಾಲು ವಿಭಾಗಕ್ಕೆ ವರ್ಗಾಯಿಸಿದಾಗ ಅವರು ಮಾನಸಿಕ ಖಿನ್ನತೆಗೆ ಒಳಗಾದರು. ಇದನ್ನೇ ಒಂದು ದೊಡ್ಡ ದು ಮಾಡಿ ಅವನಿಗೆ ಯಾವ ಕೆಲಸ ಕೊಡದೇ ಒಂದು ಬದಿಯಲ್ಲಿ ಕೂರಿಸಲಾಯಿತು. ಇನ್ನೊಂದು ಚಿತ್ರ ನೋಡಿ. ಸ್ಕೂಲಿಗೆ ನಿಯಮಿತವಾಗಿ ಹೋಗುವ ಹುಡುಗಿಯೊಬ್ಬಳು ಅಚಾನಕ್ ಸ್ಕೂಲಿಗೆ ಹೋಗುವುದನ್ನೇ ಬಿಟ್ಟಳು. ತಂದೆ ತಾಯಿಯರು ಅವಳನ್ನು ಡಾಕ್ಟರಿಗೆ ತೋರಿಸಿದಾಗ ಅವಳಿಗೆ ಮಾನಸಿಕ ಒತ್ತಡ ಉಂಟಾಗಿದೆ ಎಂದೂ, ಅವಳ ದಷ್ಟಪುಷ್ಟ ದೇಹ ಹುಡುಗರ ಹಾಸ್ಯಕ್ಕೆ ಒಳಪಟ್ಟಿದ್ದು ಅವಳನ್ನು ಶಾಲೆಯ ಅನುಮತಿ ಪಡೆದು ಮನೆಯಲ್ಲೇ ಟ್ಯೂಷನ್ ಪಡೆದು ಹತ್ತನೆ ತರಗತಿ ಉತ್ತೀರ್ಣಳಾದಳು.         ಈ ಎರಡು ಘಟನೆಗಳು ಒಂದಕ್ಕೊಂದು ಸಂಬಂಧ ವಿರದ ಉದಾಹರಣೆಗಳು ಎಂದೆನಿಸಬಹುದುʼಮುಂಬಯಿಯ ದೊಡ್ಡ ಪಟ್ಟಣದಲ್ಲಿ ಮಾತ್ರ ಸೀಮಿತವಲ್ಲ. ಇದು ಚಿಕ್ಕ ಚಿಕ್ಕ ಶಹರಗಳಲ್ಲಿಯೂ ಕಾಣುವಂತಹವು. ಮೇಲಿನ ಎರಡೂ ಉದಾಹರಣೆಗಳು ರೋಗಿಯನ್ನು ನೋಡಿಕೊಳ್ಳುವ ರೀತಿಯಲ್ಲಿ ಇರುವ ವ್ಯತ್ಯಾಸ ನಮ್ಮೆದುರು ಬಂದು ನಿಲ್ಲುತ್ತದೆ. ಪ್ರಖ್ಯಾತ ಬಾಲಿವುಡ್ ನಟಿ ಮಾನಸಿಕ ಕುಸಿತದ ಲಕ್ಷಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಕಂಡಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದರು. ಮಾನಸಿಕ ಖಿನ್ನತೆ ತಮ್ಮ ವ್ಯಕ್ತಿತ್ವದಲ್ಲಿ ಪರಿಣಾಮ ಬೀರುವುದಲ್ಲದೇ ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುವ ಸಾಧ್ಯತೆ ಇದೆ. ಮಾನಸಿಕ ರೋಗ ಈಗಲೂ ಸಾಮಾಜಿಕ ವಾಗಿ ಅಬಿ಼ಶಾಪ, ಮತ್ತು ವ್ಯಕ್ತಿತ್ವದ ಮೇಲಿನ ಕಲೆ ಎಂದು ೨೦ ೨೦ರಲ್ಲಿಯೂ ಚಾಲ್ತಿಯಲ್ಲಿಇರುವುದು ದುರಂತ .ಮಾನವ ಸಂಪನ್ಮೂಲ ವಿಭಾಗ ಇರುವುದು ಇದೇ ಕಾರಣಕ್ಕಾಗಿ ಅಲ್ಲವೇ? ಇತ್ತೀಚೆಗೆ ಮುಂಬಯಿಯಲ್ಲಿ ನೆಲೆಸಿರುವ ಪಂಜಾಬಿನ ಯುವಕನೊಬ್ಬ ಬೆಳಿಗ್ಗೆ ಎದ್ದಾಗ ಉಸಿರಾಡಲು) ಕಷ್ಟವಾಗುತ್ತಿದ್ದು ಕೆಲಸಕ್ಕೆ ಹೋಗದೇ ತನಗೆ ಏನೋ ಆಗಿದೆಯೆಂದು ಸಂಶಯ ಬಂದು ಡಾಕ್ಟರರ ಹತ್ತಿರ ಹೋಗಿ  ತೋರಿಸಿದ. ಇದನ್ನು ತನ್ನ ಬಾಸ್‌ಗೆ (ಮೇಲಧಿಕಾರಿಗೆ) ತಿಳಿಸಲಿಲ್ಲ. ತನ್ನ ಸಹೋದ್ಯೋಗಿಗಳಿಗೆ ಹೇಳಿ ವಿಷಯವನ್ನು ಮುಚ್ಚಿಡಲಾಯಿತು. ಡಾಕ್ಟರು ಹೇಳಿದಂತೆ ಅವನ ಸ್ನೇಹಿತರು ಅವನ ಮೇಲಧಿಕಾರಿಗೆ ತಿಳಿಸಿ ಅವನನ್ನು ಒಂದೆರಡು ತಿಂಗಳ ಮಟ್ಟಿಗೆ ರಜೆನೀಡಿ ಸಲಹಬೇಕೆಂದು ವಿನಂತಿಸಿಕೊಂಡರು. ಅವನು ಕೆಲಸದಲ್ಲಿ ನಿಪುಣತೆ ಪಡೆದು ಒಬ್ಬ ಒಳ್ಳೆಯ ಅಧಿಕಾರಿ ಎಂದು ಕರೆಸಿಕೊಂಡಿದ್ದರಿಂದ ಅವನ ಮೇಲಧಿಕಾರಿಯನ್ನು ಒಪ್ಪುವಂತೆ ಮಾಡಿ ಎರಡು ತಿಂಗಳು ರಜೆ ಸಿಕ್ಕು ಆರೋಗ್ಯ ಸುಧಾರಣೆ ಕಂಡಿತು. ಐಸಿಎಂಆರ್(ಇಂಡಿಯನ ಕೌನ್ಸಿಲ್ ಆಫ್ ಮೆಡಿಕಲ್ ರೀಸರ‍್ಚ) ಪ್ರಕಾರ ಆ ಪಂಜಾಬಿ ಯುವಕ ವ್ಯಾಕುಲತೆ, ಚಿತ್ತಕ್ಷೋಭೆ ಯ ಜೊತೆಗೆ ಮನಸ್ಸಿನ ಅಲ್ಲೋಲ ಕಲ್ಲೋಲತೆ ಚಿಂತೆ, ಯೋಚನೆಗೆ ಒಳಗಾಗಿದ್ದ. ಇತ್ತೀಚಿನ ದಿನಗಳಲ್ಲಿ ಜಾಗತೀಕರಣದಿಂದಾಗಿ ಹೊಸ ಸಾಧ್ಯತೆಗಳು ತೆರೆದುಕೊಂಡಂತೆ ಹೊಸ ಸವಾಲುಗಳು ಮತ್ತು ಆ ಸವಾಲುಗಳನ್ನು ಎದುರಿಸುವ ಮಾನಸಿಕತೆ (ಮಾನಸಿಕ ಸ್ಥಿತಿ)ಅಗತ್ಯವಿದೆ. ಆದ್ದರಿಂದ ಯುವಕರು, ಮಧ್ಯ ವಯಸ್ಕರು ಮತ್ತು ವಿದ್ಯಾರ್ಥಿಗಳು ಮನೋಚಿಕಿತ್ಸಕರ ಹತ್ತಿರ ಮಾನಸಿಕ ಸ್ವಾಸ್ಥ್ಯಕ್ಕೆ ಚಿಕಿತ್ಸೆ ಪಡೆಯುವುದು ಸಂಖ್ಯೆಯ ದೃಷ್ಟಿಯಿಂದ ಬಹಳ ಹೆಚ್ಚುವರಿ ಕಂಡಿದೆ. ಕುಟುಂಬದಲ್ಲಿ ಒಬ್ಬ ವ್ಯಕ್ತಿ ಶಿಕ್ಷಿತನಾಗಿ ಇದ್ದರೆ, ಭೂತ ಪ್ರೇತಗಳ ಮೊರೆಹೋಗುವ ತಂದೆ ತಾಯಿಗಳ ಯೋಚನೆಯನ್ನು ಬದಲಿಸುವುದರ ಸಾಧ್ಯತೆ ಜೊತೆಗೆ ಮನೋ ಚಿಕಿತ್ಸೆಗಾಗಿ ಸರಿಯಾದ ಡಾಕ್ಟರು ಸಿಗುತ್ತಾರೆ ಎನ್ನುವ ಮೂಲ ಮಾಹಿತಿ ಈಗ ಲಭ್ಯವಾಗ್ತಿದೆ. ಮುಂಬಯಿಯಂತಹ ಶಹರಗಳಲ್ಲಿಯೂ ಹಲವು ಸಂಘ ಸಂಸ್ಥೆಗಳು, ಆರ್ಥಿಕವಾಗಿ ಮನೋರೋಗಕ್ಕೆ ತುತ್ತಾದ ವ್ಯಕ್ತಿಯ ಶುಶ್ರೂಷೆಯ ಅಗತ್ಯವನ್ನು ಕಾಣುತ್ತಾರೆ. ಮನೋರೋಗಕ್ಕೆ ತುತ್ತಾದ ವ್ಯಕ್ತಿಯನ್ನು ಈ ಆರ್ಥಿಕ, ಕೈಗಾರಿಕ ಸಂಸ್ಥೆಗಳು ನೋಡಿಕೊಳ್ಳುವ ರೀತಿಯ ಮೇಲೆ ಆ ರೋಗಿಯ ಮನೋಬಲ ಅಡಗಿದೆ.ಪಡೆದುಕೊಂಡ ಸಾಲ ತೀರಿಸಲಾಗದೆ ಹತಾಶನಾದ ವ್ಯಕ್ತಿಯ ಬಗ್ಗೆ ಈ ಸಂಸ್ಥೆಗಳು ಮಾನಸಿಕವಾಗಿ ಬೆಂಬಲಕ್ಕೆ ನಿಲ್ಲುತ್ತಾರೆ ಅತ್ಯಂತ ಒಳ್ಳೆಯ ನೌಕರ ಅಥವ ಅಧಿಕಾರಿ ತನ್ನ ೧೦-೧೨ ವರ್ಷದ ಸೇವೆಯಲ್ಲಿ ಮನೋರೋಗಕ್ಕೆ ಅಂದರೆ ಮಾನಸಿಕ ತಳಮಳ, ತಗ್ಗುವಿಕೆ, ಇತರರೊಂದಿಗೆ ಬೆರೆಯುವಿಕೆ ಮುಂತಾದ ಸಂದರ್ಭದಲ್ಲಿ ಕಾಣುವ ಬದಲಾವಣೆಯನ್ನು ಮಾನವೀಯತೆಯಿಂದ ನೋಡಿದರೆ ರೋಗ ಉಲ್ಬಣಿಸದೇ ಪೂರ್ಣ ಗುಣಮುಖವಾಗುವ ಸಾಧ್ಯತೆ ಇದೆ. ಈ ಲೇಖನದ ಮೊದಲು ಕೊಟ್ಟ ಉದಾಹರಣೆಯಲ್ಲಿ ಹಿರಿಯ ಕರ್ಮಚಾರಿಯನ್ನು ಟಪ್ಪಾಲು ವಿಭಾಗಕ್ಕೆ ಹಾಕಿದ ಆ ನಿರ್ಣಯವೇ ಅಘಾತಕಾರಿಯಾಗಿ ಪರಿಣಮಿಸಿ ಅವನು ಹೃದಯಾಘಾತಕ್ಕೆ ಒಳಗಾಗಿದ್ದು ನಂತರ ಚೇತರಿಸಲಿಲ್ಲ. ಹಲವು ನೌಕರರು, ಅಧಿಕಾರಿ ವರ್ಗದವರು ತಮ್ಮ ಮನಸ್ಸಿನ ಸ್ವಾಸ್ಥ್ಯದ ಬಗ್ಗೆ  ತಮ್ಮ ಮುಂದಿನ ಅಧಿಕಾರಿಗಳೊಂದಿಗೆ ಏನೂ ಹೇಳಿಕೊಳ್ಳುವುದಿಲ್ಲ. ಕಾರಣ ಈಗಲೂ ಉನ್ನತ ಶಿಕ್ಷಣ ಪಡೆದ ಕಂಪೆನಿಯ ನಿರ್ದೇಶಕರುಗಳಿಗೂ ಸಹ ಚಿತ್ತ ಕ್ಲೇಷ, ಚಿತ್ತ ಗ್ಲಾನಿಯನ್ನು ಸರಿಯಾದ ಚಿಕಿತ್ಸೆ ಮೂಲಕ ಸರಿಪಡಿಸಬಹುದು ಎಂದು ಗೊತ್ತಿದ್ದರೂ ಮಾನವೀಯತೆಯ ಕೊರತೆಯಿಂದ ಆ ಮನೋರೋಗಿಗೆ ಭವಿಷ್ಯವೇ ಇಲ್ಲದ ಹಾಗೆ ಕರಾಳ ಸತ್ಯಕ್ಕೆ ತೆರೆದುಕೊಳ್ಳುತ್ತದೆ. ಕೆಲಕಾಲವಷ್ಟೇ ಇರುವ ಈ ಮಾನಸಿಕ ತಳಮಳದ ಈ ಜೀವನವನ್ನು ಇಡೀ ಜೀವಮಾನದ ಕೊರತೆ ಎಂದು ಕಾಣುವುದು ವಿಪರ‍್ಯಾಸ., ಹೆಚ್ಚಾಗಿ ನೌಕರ ವರ್ಗಕ್ಕೆ ಒಂದು ದೊಡ್ಡ ಆತಂಕ.             ಮನೋವಿಜ್ಞಾನದಲ್ಲಿ ಚಿತ್ತಕ್ಷೋಭೆ/ಕ್ಲೇಷ ಮತ್ತು ವ್ಯಾಕುಲತೆ (anxiety) ವಿಜ್ಞಾನದ ಬೇರೆ ಬೇರೆ ಭಾಗಗಳಾಗಿ ಡಾಕ್ಟರರು ಅದಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡುತ್ತಾರೆ. ಸಾಮಾನ್ಯವಾಗಿ ಎರಡೂ ಸ್ಥಿತಿಗಳು ತೋರಿಕೆಗೆ ಒಂದೇ ಆದರೂ ಮನೋರೋಗದ ಲಕ್ಷಣಗಳು.ಬೇರೆಬೇರೆ ಚಿತ್ತ ಕ್ಲೇಶ, ಚಿತ್ತ ಅಸ್ವಾಸ್ಥ್ಯ ಎರಡೂ ಒಂದಾದರೊಂದಂತೆ ಮರುಕಳಿಸಬಹುದು. ಚಿತ್ತ ಕ್ಲೇಶದಲ್ಲಿ ಸದಾ ಯೋಚಿಸುವುದು, ತಳಮಳ, ಮನಸ್ಸಿನ ಚಂಚಲತೆ, ನೆನಪಿನ ಕೊರಗು, ನಿದ್ದೆಯ ಕೊರತೆ ಇವೆಲ್ಲ ಒಂದಕ್ಕಿಂತ ಹೆಚ್ಚು ಕಾರಣಗಳನ್ನು ಕಾಣಬಹುದು. ಇದು ಮಾನಸಿಕ ರೋಗ ಬಹು ಸಮಯ ತೆಗೆದುಕೊಳ್ಳುವ ಮನಸ್ಸಿನ ಸ್ಥಿತಿಯದು. ಆದರೆ ಚಿತ್ತ ಅಸ್ವಸ್ಥತೆ ಅಥವಾ ಗ್ಲಾನಿ  ಒಂದು ಸಂಧರ್ಭ ಅಥವಾ ಘಟನೆಗಳಿಂದ ಆಗುವಂತಹುದು.  ಎನ್ನುವ ಪದವನ್ನು ಬಹುಬಾರಿ ಬಳಸುತ್ತೇವೆ. ಯಾವುದಾದರೂ ಘಟನೆ ಎದುರಾದಾಗ ಉಂಟಾದ ಹೆದರಿಕೆ ಅಥವಾ ಇಂಟರ್ ವ್ಯೂನಲ್ಲಿ ಆಗುತ್ತಿರುವ ನಡುಕ ಇವೆಲ್ಲ ಚಿತ್ತ ಅಸ್ವಸ್ಥತೆ (anxiety) ಗೆ   ಸಂಬಂಧ ಪಟ್ಟವು             ಇತ್ತೀಚಿನ ವರದಿ ಪ್ರಕಾರ ಚಿತ್ತಕ್ಲೇಶ ಮತ್ತು ಚಿತ್ತ ಅಸ್ವಾಸ್ಟ್ಯ  ಸಂಯುಕ್ತ ಗ್ರೇಟ್ ಬ್ರಿಟನ್ನಿನಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಚಿತ್ತಕ್ಲೇಶ  ಹಲವು ಜನರಿಗೆ ಹಲವು ರೀತಿಯಲ್ಲಿ ,ಹಲವಾರು ರೋಗ ಲಕ್ಷಣಗಳು ಕಂಡರೆ ಚಿತ್ತ ಅಸ್ವಸ್ಥತೆಯಲ್ಲಿ  ಯಾವುದಾದರೂ ಒಂದು ರೋಗದ ಲಕ್ಷಣ ಕಾಣಬಹುದು. ಚಿತ್ತ ಅಸ್ವಸ್ಥತೆ ಹೆಚ್ಚಾಗಿ ಹೆದರಿಕೆ, ಸಂದೇಹ, ಹೊಸ ಜನರೊಂದಿಗೆ ಬೆರೆಯುವ ಚಿಂತೆ, ಏಕತಾನತೆಯ ಲಕ್ಷಣಗಳು ಕಾಣಬಹುದು. ಇದು ಭಾರತೀಯರು ಅನುಭವಿಸುತ್ತಿರುವ ಸಾಮಾನ್ಯ ಲಕ್ಷಣಗಳು. ಇತ್ತೀಚಿನ ವರದಿ ಪ್ರಕಾರ ಯೋ ಯೋ ಹನಿಸಿಂಗ್ (ಗಾಯಕ) ಅನುಷ್ಕಾ ಶರ್ಮ (ನಟಿ), ಕ್ಯಾಥರಿನ್ ಚೇಟಾ, ರ‍್ಯಾನ್ ರೊನಾಲ್ಟಸ್, ಲೇಡಿ ಗಾಗಾ(ಹಾಲಿವುಡ್ ನಟರು) ಮುಂತಾದವರು ಚಿತ್ತಕ್ಲೇಶ ಅಥವಾ ಚಿತ್ತ ಅಸ್ವಸ್ಥತೆಯ ರೋಗಿಗಳು. ಮಧ್ಯಮ ವರ್ಗದ ಹೆಚ್ಚು ಹೆಚ್ಚು ಜನರು ಉದ್ಯೋಗದಲ್ಲಿದ್ದು, ಜೀವನವನ್ನು ಸುಖಿಯಾಗಿಡುವ ನಿಟ್ಟಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹಣ ಒಂದು ಆಕರ್ಷಣೆಯಾದರೆ, ತನ್ನ ಕರ್ತೃತ್ವ ಶಕ್ತಿಯ ಮೂಲಕ ಯಾರೂ ಗಳಿಸದ ಸ್ಥಾನವನ್ನು ಪಡೆಯುವ ಹಂಬಲವೂ ಕಾರಣವಾಗಿದೆ.. ಅಂದರೆ ಒಂದು ರೀತಿಯ ಸ್ಪರ್ಧಾತ್ಮಕತೆ, ಮಾನಸಿಕ ಆರೋಗ್ಯವನ್ನು ಕೆಡಿಸುವ ಬಹುಮುಖ್ಯ ಕಾರಣವಾಗಿದೆ. ಐಸಿಎಂಆರ್  ಪ್ರಕಾರ ಪ್ರತಿ ಏಳು ಭಾರತೀಯರಲ್ಲಿ ಒಬ್ಬರು ಮನೋರೋಗದ ಶಿಕಾರಿಯಾಗುತ್ತಿದ್ದಾನೆ. ಮಹಾರಾಷ್ಟ ರಾಜ್ಯದಲ್ಲಿ ಪ್ರತಿ ಲಕ್ಷ ಜನರಲ್ಲಿ ಸುಮಾರು ಹತ್ತು ಸಾವಿರ ಜನ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ. ಅದರಲ್ಲಿ ಮಾನಸಿಕ ಅಸ್ವಸ್ಥತೆ ೪೦೦೦, ಚಿತ್ತ ಕ್ಲೇಷದಿಂದ ೪೦೦೦, ಕೆಲಸ ಅರ್ಥ ಮಾಡಿಕೊಳ್ಳಲಾಗದ ವiನಸ್ಸಿನ ಕುಗ್ಗುವಿಕೆ ೩,೫೦೦ ಮತ್ತು ವರ್ತನೆಯಲ್ಲಿ ಉಂಟಾಗುವ ಲಕ್ಷಣಗಳು ೮೦೦. ಹೀಗೆ ಜನರು ಮಾನಸಿಕ ಸ್ವಾಸ್ಥ್ಯಕ್ಕಾಗಿ ಹಾತೊರೆಯುತ್ತಿದ್ದಾರೆ. ಆದ್ದರಿಂದ ಚಿತ್ತಕ್ಲೇಷದಂತಹ ಮನೋರೋಗಗಳು ಹೆಚ್ಚುತ್ತಿದ್ದು ಅದರ ಅರಿವು ಹಲವು ಜನರಿಗೆ ಅರಿವಿಲ್ಲದೇ, ಭೂತದ ಆರಾಧನೆ, ಕುರಿಬಲಿ, ಪೂಜೆ ಪುನಸ್ಕಾರಗಳ ಹಾದಿಯಲ್ಲಿ ಈಗಲೂ ನಡೆಯುತ್ತಿದೆ.. ಆದ್ದರಿಂದ ಮನೋರೋಗದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ತಮ್ಮ ಈ ಅನಾರೋಗ್ಯದ ವಿವರಗಳನ್ನು ಆಡಳಿತ ಮಂಡಳಿಯವರಿಗೆ ಕೊಡುವುದಿಲ್ಲ.  ಒಬ್ಬ ಎಂಜಿನಿಯರ್‌ಗೆ ತನ್ನ ವೈವಾಹಿಕ ಜೀವನದಲ್ಲಿ ಆದ ಕ್ಲೇಷಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ. ಕೆಲಸದಲ್ಲಿ ಮತ್ತು ಜನರೊಂದಿಗೆ ಮಾತನಾಡುವಾಗ ತಕ್ಷಣ ಉತ್ತರಿಸಲು ಸಮಯ ತೆಗೆದುಕೊಳ್ಳುತ್ತಿದ್ದ. ಒಬ್ಬ ಕಂಪನಿಯ ನಿರ್ದೇಶಕರು ಅವನನ್ನು ಕರೆದು

ಮನಸ್ಸು ಎಂಬ ಮನುಷ್ಯನ ತಲ್ಲಣ Read Post »

ಕಾವ್ಯಯಾನ

ನ್ಯಾಯಕ್ಕಾಗಿ ಕೂಗು

ಕವಿತೆ ನ್ಯಾಯಕ್ಕಾಗಿ ಕೂಗು ನೂತನ ದೋಶೆಟ್ಟಿ ಕೈ ಎತ್ತಿ ಜೈಕಾರ ಹಾಕಿದಾಗಎಲ್ಲರೂ ಒಂದೆಂಬ ಅನುಭವಬಾಯಿಸೋತ ಬಿಡುವಿನಲ್ಲಿಸಣ್ಣ ಗುಸುಗುಸು ಪತ್ರಿಕೆಯವರೆದುರುಪೋಸು ಕೊಟ್ಟವರುಬಾರದ ಭಾಷೆಯಲ್ಲಿ ತೊದಲಿದವರುಮತ್ತೆ ಚುರುಕು ಕ್ಯಾಮರಾಕ್ಕಾಗಿಕಾಲರ್ ಎಳೆದುಕೊಂಡರುನೆರಿಗೆ ಸರಿ ಮಾಡಿಕೊಂಡರುಮಿಂಚಿನ ಸಂಚಾರ ಬೇಡಿಕೆಗಳು ಉರುಹೊಡೆಯಲುಅಲ್ಲಲ್ಲಿ ಚದುರಿದವರುಹಣುಕಿದರುಒಂದಾದರು ದಂಡು, ಮೆರವಣಿಗೆಗಳೆಲ್ಲಮುಗಿದಾಗಜಾತಿ- ಮಾತು, ಊರು- ಕೇರಿಗಳಗುಂಪು ಒಡೆದು ಒಂದಾಗಿ ಬಾಳಿದಇತಿಹಾಸದ ಪುಟಗಳಲಿಪುನರಾವರ್ತನೆಯ ಮಂತ್ರಅನಿವಾರ್ಯ ವರ್ಷಗಳ ಹೊಸ್ತಿಲಲ್ಲಿಮೊರೆಯಿಡುತ್ತಿರುವ ನ್ಯಾಯ. ( 2009ರಲ್ಲಿ ಬರೆದದ್ದು. 73 ನೇ ಸ್ವಾತಂತ್ರ್ಯ ದಿನದ ಹೊಸ್ತಿಲಲ್ಲಿ ನಿಂತು ನೋಡಿದಾಗ ಕಾಲ ಅಲ್ಲಿಯೇ ನಿಂತಿದೆಯೇ ಎಂಬ ಅನುಮಾನ.) ***********************************

ನ್ಯಾಯಕ್ಕಾಗಿ ಕೂಗು Read Post »

ಕಾವ್ಯಯಾನ

ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ’

ಕವಿತ ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ ವಸುಂಧರಾ ಕದಲೂರು ನನ್ನಪ್ಪನಿಗೆ ಹೆಚ್ಚೇನೂ ಆಸೆಗಳಿರಲಿಲ್ಲನಮ್ಮ ಓದಿನ ಕುರಿತೂ…ಹೆಣ್ಣು ಮಕ್ಕಳಿಗೆ ಆದಷ್ಟು ಬೇಗಮದುವೆಯಾದರೆ ಸಾಕು. ಒಳ್ಳೆಯಹುಡುಗ ತನಗೆ ಅಳಿಯನಾಗಿ,ಮಕ್ಕಳಿಗೆ ಬಲವಾದ ಗಂಡನಾಗಿಒಟ್ಟಾರೆ ಚೆಂದಾಗಿ ಬದುಕಿದರೆ ಸಾಕು. ಇಷ್ಟೇ… ನನ್ನಪ್ಪ ಎಂದೂ ಯಾವಹೆಣ್ಣುಮಕ್ಕಳನ್ನು ಹೀಗಳೆಯಲಿಲ್ಲ,ನಿಮ್ಮ ಕೈಲಾಗದ ಕೆಲಸವಿದೆಂದುಹೇಳಿ ನಮ್ಮ ಚೈತನ್ಯವನೆಂದೂಉಡುಗಿಸಲಿಲ್ಲ.ನಾವೊಂದು ಹೊರೆಯೆಂದುನಡೆ ನುಡಿಯಲೆಂದೂ ತೋರಲಿಲ್ಲ.ಗಂಡುಮಕ್ಕಳೊಡನೆ ಹೋಲಿಸಿಜರಿಯಲಿಲ್ಲ. ಜರಿಯ ಲಂಗ ಹೊಲೆಸಿಕೊಡುವುದ ಮರೆಯಲಿಲ್ಲ. ನನ್ನಪ್ಪನಿಗೆಂದೂ ಅಪಾರಆಸ್ತಿ ಗಳಿಸುವ ಹುಕಿ ಹುಟ್ಟಿರಲಿಲ್ಲ.ಬಂಧುಜನ ಪ್ರೀತಿ; ಗಳಿಸಿದ ಸ್ನೇಹವಿಶ್ವಾಸಗಳನು ಜೋಪಾನ- ಜತನಮಾಡುವ ರೀತಿ ಇಷ್ಟೇ ಆತ ಕೊನೆಗೆನಮಗಾಗಿ ಗಳಿಸಿಟ್ಟ ಆಸ್ತಿ.. ಅಪ್ಪನಿಗೆಂದೂ ಇತರೆ ಆಸೆಗಳಿರಲಿಲ್ಲ ತನ್ನ ಮಕ್ಕಳಿಗಿಂತಲೂಕಾಣದ ಮೊಮ್ಮಕ್ಕಳ ಮೇಲೆಯೇಹೆಚ್ಚು ಮೋಹ! ಆಗಾಗ್ಗೆ ಕನಸುಕಟ್ಟಿನುಡಿಯುವ ಹುಚ್ಚು ವ್ಯಾಮೋಹ.‘ನಿಮಗೆ ಮದುವೆಯಾಗಿ, ಮೊಮ್ಮಕ್ಕಳೆಲ್ಲಾದೊಡ್ಡವರಾಗಿ ಊರ ಮನೆ ಬಾಗಿಲಿಗೆಕಾರುಭಾರಿನ ಭರಾಟೆಯಲಿಬರುವಾಗ ಅಂಗಳದಿ ನಿಂತು ಆದರದಿ ಬರಮಾಡಿಕೊಳುವೆ..’ ಹೀಗೆ.. ಒಂದು ನಿರಪಾಯಕಾರಿ ಕನಸು ಕಾಣುತ್ತಾ ನಿರುಮ್ಮಳವಾಗಿದ್ದ ಅಪ್ಪ ಮರಳಿ ಬಾರದಊರಿಗೆ ತೆರಳಿ; ಈಗ ಅವರ ಮಕ್ಕಳನೂಮೊಮ್ಮೊಕ್ಕಳನೂ ಊರಿಗೊಮ್ಮೆ ಬನ್ನಿರೆಂದು ಕರೆಯಲಾರದ ಕನಸಾಗಿ ಉಳಿದರು. ಹಬ್ಬಹರಿದಿನಗಳಲಿ ಹೋದೆವೆಂದರೂ ‘ನಾಕುದಿನ ಹೆಚ್ಚು ನಿಲ್ಲಿರೆಂದು’ ತಡೆಯಲಾರದಊರು ಈಗ ಸವೆಯಲಾರದ ದಾರಿಯಲ್ಲಿದೆ. ಆ ನನ್ನಪ್ಪನಿಗೆ ಹೆಚ್ಚು ಆಸೆಗಳಿರಲಿಲ್ಲಇದ್ದವುಗಳನೂ ಈಡೇರಿಸಿಕೊಳಲುಕಾಲನೆಂಬ ಕಟುಕ ಕರುಣೆ ತೋರಲಿಲ್ಲ.

ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ’ Read Post »

ಕಾವ್ಯಯಾನ

ಏಕಾಂತವೆಂಬ ಹಿತ

ಕವಿತೆ ಏಕಾಂತವೆಂಬ ಹಿತ ಶ್ರೀದೇವಿ ಕೆರೆಮನೆ ಇಷ್ಟಿಷ್ಟೇ ದೂರವಾಗುವನಿನ್ನ ನೋಡಿಯೂ ನೋಡಲಾಗದಂತೆಒಳಗೊಳಗೇ ನವೆಯುತ್ತಿದ್ದೇನೆಹೇಳಿಯೂ ಹೇಳಲಾಗದಒಂಟಿತನವೆಂಬ ಕೀವಾದ ಗಾಯಕ್ಕೀಗಮಾಯಲಾಗದ ಕಾಲಮುಲಾಮು ಸವರಲು ನಿರಾಕರಿಸುತ್ತಿದೆಅಸಹಾಯಕಳಾಗಿ ನೋಡುತ್ತಿದ್ದೇನೆನಮ್ಮಿಬ್ಬರ ನಡುವೆಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಅಂತರವನ್ನು ಎಂದೋ ಆಡುವ ಎರಡೇ ಎರಡುಮಾತಿನ ನಡುವೆಯೇಒತ್ತರಿಸಿ ಬರುವ ಯಾವುದೋ ರಾಜಕಾರ್ಯಮಾತು ಹಠಾತ್ತನೆ ನಿಂತುಒಂದು ನಿಮಿಷ ಎಂದು ಹೊರಟ ನಿನಗೆಕಾಲ ಗಳಿಗೆಗಳ ಹಂಗಿಲ್ಲಕಾದು ಕುಳಿತ ನನಗೆ ಮಾತ್ರಪ್ರತಿ ಕ್ಷಣವೂ ವರುಷವಾಗುತ್ತಿರ ಭಯ ಮತ್ತೆ ಮಾತನಾಡುವ ಸಮಯಕ್ಕಾಗಿನಾನು ಜಾತಕಪಕ್ಷಿಯಾಗಿ ಕಾಯುತ್ತಿದ್ದರೆಎಂದೂ ಮುಗಿಯದ ನಿನ್ನ ಕೆಲಸಗಳುಈ ಜನ್ಮದಲ್ಲಿ ಮಾತನಾಡಲು ಬಿಡದಂತೆಸದಾ ಸತಾಯಿಸುತ್ತವೆ ಈಗೀಗ ನಿಜದ ಅರಿವಾಗುತ್ತಿದೆಮಾತಿನ ನಡುವಿನ ಒಂದು ನಿಮಿಷಪುರುಸೊತ್ತಿರದ ಕೆಲಸಎಲ್ಲವೂ ನಿನ್ನದೇ ಸೃಷ್ಟಿಯೆಂಬುದುಸಮಯವೇ ಸಿಗದು ಎಂಬ ಮಾತಿನಪೊರೆಕಳಚಿ ನಿಜದ ದರ್ಶನವಾಗುತ್ತಿರುವಾಗಭ್ರಮೆಗಳೆಲ್ಲವೂ ಹರಿದು ಬಯಲಾಗುತ್ತಿದೆ ಹಿಂದೆ ಕಿತ್ತಿಡುವನಿನ್ನ ಹೆಜ್ಜೆ ಗಳಿಗೆ ನೂರಾನೆಯ ವೇಗನನಗೋ ಎದೆಯ ಮಿಡಿತ ಕಿವಿಗಪ್ಪಳಿಸಿಮುಂದಡಿಯಿಡಲಾಗದ ಸರಪಳಿತಡೆಯಲಾರೆ ದೂರವಾಗಲು ಬಯಸುವವರನ್ನುಹಿತವೆನಿಸುತ್ತಿದೆ ಈಗೀಗ ಏಕಾಂತವೂ ************************

ಏಕಾಂತವೆಂಬ ಹಿತ Read Post »

ಕಾವ್ಯಯಾನ

ಷರತ್ತು

ಕವಿತೆ ಷರತ್ತು ಮಾಂತೇಶ ಬಂಜೇನಹಳ್ಳಿ ಈಗ ಮಳೆ ಬಿಟ್ಟಿದೆ.ಅವಳ ನೆನಪುಗಳ ಹದವಾಗಿ,ಎದೆಯ ಬಾಣಲೆಯೊಳಗೆ,ಕಮ್ಮಗೆ ಹುರಿಯುವ ಸಮಯ.. ಚಿಟಪಟವೆಂದು ಒಂದಷ್ಟು,ಜೋಳದ ಕಾಳುಗಳಂತೆನೆನಪ ಬಿಸಿಗೆ ಸಿಡಿದಾವು.ಸಾವಧಾನಕ್ಕಾಗಿ ನೆನೆವ ಉರಿ ತಗ್ಗಿಸುವುದು,ಹೃದ್ಯೋಧರ್ಮ.. ನಿಗವಿಡುತ್ತೇನೆ. ಮಳೆಗೂ ಗೊತ್ತು ಧೋ!!ಎಂದುಒಂದೇ ಸಮನೆ ಸುರಿದರೆ,ಒಬ್ಬ ಪ್ರೇಮಿ ಅವಳಿಗಾಗಿ ಪರಿತಪಿಸುವುದಿಲ್ಲವೆಂದೂ,ನೆನಪಿಸುವುದಕ್ಕೆ ನೆಲ ರಾಚುವಹನಿಗಳ ಕರತಾಡನ ಸುಖಾ ಸುಮ್ಮನೆ ಅಡ್ಡಿಯಾದೀತೆಂದು. ಗರಕ್ಕನೆ ನಿಂತು ಬಿಟ್ಟರೆ ಅಬ್ಬಬ್ಬಾ!ಹುಬ್ಬೆ ಮಳೆ ಸುರಿದು ಸಮ ರಾತ್ರಿಗೆ,ಮಲಗಿದ ಬೆಳಗಿಗೆ ಮೃದು ನೆಲದಲ್ಲಿ,ಮನೋಸೆಳೆವ ಅಣಬೆಗಳಂತೆ ಉಬ್ಬುವಆಕೆಯ ನೆನಪುಗಳು ದಾಂಗುಡಿಯಾಗುತ್ತವೆ. ಮುಂದಿನದ್ದು ನಿರತ ಅನುಭವಿಸುವ,ನಾನು ಮಾತ್ರ ನನ್ನೊಳಗೆ,ಆಕೆಯ ಸದಾ ನೆನೆವ ಷರತ್ತಿಗೆಒಳಪಡುತ್ತಲೇ ಇರುತ್ತೇನೆ.. ***********************

ಷರತ್ತು Read Post »

ಇತರೆ

ಹೊಸ ಶಿಕ್ಷಣ ನೀತಿ

ಅನುಷ್ಠಾನವಾದೀತೇ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦? ಗಣೇಶ್ ಭಟ್ ಶಿರಸಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ನೀತಿಯ ಪರ ಮತ್ತು ವಿರೋಧಿ ಹೇಳಿಕೆಗಳು, ಲೇಖನಗಳು ಪ್ರಕಟವಾಗುತ್ತಿವೆ. ಹೊಸ ಶಿಕ್ಷಣ ನೀತಿಯು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವುದರ ಜೊತೆಗೆ ಇಡೀ ರಾಷ್ಟ್ರವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ.ಈ ಶಿಕ್ಷಣ ನೀತಿಯನ್ನು ಹೊಸ ಅವಿಷ್ಕಾರ, ಹೊಸ ಮನ್ವಂತರದ ಹರಿಕಾರ ನೀತಿ ಮುಂತಾಗಿ ಬಿಂಬಿಸಲಾಗುತ್ತಿದೆ. ಲಭ್ಯತೆ, ಸಮಾನತೆ, ಗುಣಮಟ್ಟ, ಉತ್ತರದಾಯಿತ್ವಗಳ ಬುನಾದಿಯ ಮೇಲೆ ಆಧರಿತ ಈ ಶಿಕ್ಷಣ ನೀತಿಯಿಂದ ಜಾಗತಿಕ ಜ್ಞಾನ ಕೇಂದ್ರ ಮತ್ತು ಶಕ್ತಿಯಾಗಿ ಭಾರತವು ಹೊರಹೊಮ್ಮಲಿದೆಯೆಂದು ಪ್ರಚಾರ ಮಾಡಲಾಗುತ್ತಿದೆ. ಈ ಶಿಕ್ಷಣ ನೀತಿಯ ಗುರಿ ಮತ್ತು ಉದ್ದೇಶಗಳು ಉದಾತ್ತವಾಗಿವೆ ಎಂಬುದು ನಿಜ. ಆದರೆ ವಾಸ್ತವವನ್ನು ನಿರ್ಲಕ್ಷಿಸಿ ನಿಗದಿಪಡಿಸುವ ಉದ್ದೇಶಗಳು ಸಫಲವಾಗುವುದು ದೂರದ ಮಾತಷ್ಟೇ ಅಲ್ಲ, ಅವುಗಳ ನಿರೂಪಣೆಯ ಪ್ರಾಮಾಣಿಕತೆಯೇ ಪ್ರಶ್ನಾರ್ಹವಾಗುತ್ತದೆ. ೨೦೨೦ ರ ಶಿಕ್ಷಣ ನೀತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದಾಗ, ಅದರ ಅನುಷ್ಠಾನಕ್ಕೆ ಇರುವ ತೊಡುಕುಗಳ ಅರಿವಾಗುತ್ತದೆ. ಉದಾಹರಣೆಗಾಗಿ,ಇದು ಭಾರತೀಯ ಶಿಕ್ಷಣ ಪದ್ಧತಿಯ ಪುನರುತ್ಠಾನದ ಪ್ರಯತ್ನವೆಂದು ಹೇಳಿಕೊಳ್ಳಲಾಗಿದೆ. ಶಿಕ್ಷಣ ಕುರಿತಾದ ಭಾರತೀಯ ವ್ಯಾಖ್ಯೆ ” ಸಾ ವಿದ್ಯಾ ಯಾ ವಿಮುಕ್ತಯೇ” – ವಿದ್ಯೆ ಅಂದರೆ ಭೌತಿಕ, ಮಾನಸಿಕ, ಆದ್ಯಾತ್ಮಿಕ ಬಂಧನಗಳಿಂದ ಬಿಡುಗಡೆ. ಇದು ನಿಸರ್ಗದ ನಿಯಮವಾದ ವಿಕಾಸಕ್ಕೆ ಪೂರಕವಾದ ವಿಚಾರ. ತಜ್ಞರ ಅಭಿಪ್ರಾಯದಂತೆ ಮೊದಲಿನ ಏಳು ವರ್ಷಗಳ ಅವಧಿಯಲ್ಲಿ ಮಗುವಿನ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಉದಾತ್ತ ಚಿಂತನೆಗಳು, ಏಕತೆಯ ಭಾವ, ಮನಸ್ಸಿನ ವಿಸ್ತಾರ, ಸಮಗ್ರತೆಯ ಕಲ್ಪನೆ, ಜೀವಜಾಲದೊಂದಿಗಿನ ಅವಿಭಾವ ಸಂಬಂಧ, ಪರಸ್ಪರ ಪ್ರೀತಿ ಮುಂತಾದವು ಮಗುವಿನ ಮನಸ್ಸಿನಲ್ಲಿ ರೂಪುಗೊಳ್ಳುವ ಅವಧಿ ೦-೭ ವರ್ಷಗಳು. ಆಟ, ಪಾಠಗಳು, ಅಷ್ಠಾಂಗ ಯೋಗ, ಧ್ಯಾನ ಪದ್ಧತಿಗಳ ಮೂಲಕ ನೈತಿಕತೆಯ ನೆಲೆಗಟ್ಟಿನ ಮೇಲೆ ಸಮಗ್ರ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಗುರಿಯಾಗಬೇಕು. ಅಂಗನವಾಡಿ (ನರ್ಸರಿ) ಯಿಂದ ೨ ನೇ ವರ್ಗದವರೆಗಿನ ಶಿಕ್ಷಣ ಪದ್ಧತಿ ವಿಶಿಷ್ಟವಾಗಿರಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಈ ವಯಸ್ಸಿನ ಮಕ್ಕಳ ಕಲಿಕೆಯನ್ನು ಮೊದಲನೇ ಹಂತದ ೫ ವರ್ಷಗಳೆಂದು ಗುರ್ತಿಸಲಾಗಿದೆ. ಜಾತಿ ಮತ ಪಂಥಗಳ ಭೇಧಭಾವಗಳನ್ನು, ಮೂಡನಂಬಿಕೆಗಳನ್ನು ಬಳಸಿ, ಬೆಳಸಿ ಅಧಿಕಾರಕ್ಕೆ ಅಂಟಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಇಂತಹ ಶಿಕ್ಷಣ ನೀಡಿಕೆಯ ಅನುಷ್ಠಾನ ತರಲು ಇಚ್ಚಿಸುವುದಿಲ್ಲ. ಸರ್ವರಲ್ಲಿ ಸಮಭಾವ ಹೊಂದದೇ, ಆದ್ಯಾತ್ಮ ಮನೋಭಾವ ಮೂಡಿಸಲು ಪ್ರಯತ್ನಿಸದೇ, ಇತಿಹಾಸದ ಘಟನೆಗಳನ್ನೇ ಬಳಸಿ ಸಮಾಜದಲ್ಲಿ ದ್ವೇಷ ಅಸೂಯೆಗಳನ್ನು ಬಿತ್ತುತ್ತಿರುವ ರಾಜಕೀಯ ಪಕ್ಷವು ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಪುನರುತ್ಠಾನ ಮಾಡುತ್ತೇವೆಂದು ಹೇಳಿಕೊಳ್ಳುವುದು ಆಷಾಡಭೂತಿ ನಡತೆ.ಮಗುವಿನ ತಲೆಯಲ್ಲಿ ಮಾಹಿತಿ ತುರುಕಲು ಹೊಸ ಹೊಸ ವಿಧಾನಗಳ ಬಳಕೆಯನ್ನು ಪ್ರೋತ್ಸಾಹಿಸುವುದೇ ಶಿಕ್ಷಣವಲ್ಲ.  ಶಿಕ್ಷಣವನ್ನು ವಿವಿಧ ಹಂತದಲ್ಲಿ ಮೊಟಕುಗೊಳಿಸಿರುವ ೨ ಕೋಟಿಗೂ ಅಧಿಕ ಮಕ್ಕಳನ್ನು ಹೊಸ ಔಪಚಾರಿಕ ಶಿಕ್ಷಣ  ವ್ಯವಸ್ಥೆಗೆ  ಮರಳಿ ತರಲು ಹೊಸ ಶಿಕ್ಷಣ ನೀತಿಯಿಂದ ಸಾಧ್ಯವೆಂದು ಪ್ರತಿಪಾದಿಸಲಾಗಿದೆ. ಈ ಮಕ್ಕಳು ಶಿಕ್ಷಣ ಮುಂದುವರೆಸದಿರಲು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ದೋಷಗಳೇ ಕಾರಣವಲ್ಲ. ತಮ್ಮ ಅಥವಾ ತಮ್ಮ ಕುಟುಂಬದ ನಿರ್ವಹಣೆಗಾಗಿ ದುಡಿಯುವ ಅನಿವಾರ್ಯಯತೆಯಿಂದ ಹೆಚ್ಚಿನವರು ಶಿಕ್ಷಣ ಮುಂದುವರೆಸುವುದಿಲ್ಲ. ಶಿಕ್ಷಣ ಪದ್ಧತಿಯನ್ನೋ, ಪಠ್ಯ ಪುಸ್ತಕಗಳನ್ನೋ ಬದಲಾಯಿದೊಡನೆ ಶಿಕ್ಷಣ ಮುಂದುವರೆಸಲು ಮಕ್ಕಳು ವಾಪಾಸು ಬರುತ್ತಾರೆಂದು ವಾದಿಸುವುದು ಜನರನ್ನು ದಾರಿತಪ್ಪಿಸುವ  ಅವಾಸ್ತವಿಕ ನೆಲೆಗಟ್ಟಿನ ನಡೆ.   ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳ ಪೂರೈಕೆಯ ಭದ್ರತೆಯಾದಾಗ ಮಾತ್ರ ಎಲ್ಲಾ ಮಕ್ಕಳೂ ಶಾಲೆಗೆ ಬರುತ್ತಾರೆ.ಆಹಾರ, ಬಟ್ಟೆ, ವಸತಿ, ಔಷಧೋಪಚಾರಗಳಂತೆಯೇ ಶಿಕ್ಷಣ ಕೂಡ ಜೀವನದ ಕನಿಷ್ಠ ಅಗತ್ಯತೆಯೆಂಬುದನ್ನು ಒಪ್ಪಿಕೊಂಡು, ಅವುಗಳನ್ನು  ಫಲಪ್ರದ ಉದ್ಯೋಗ ಸೃಷ್ಟಿಯ ಮೂಲಕ ಖರೀಧಿಶಕ್ತಿಯನ್ನು ನೀಡುವ ಭರವಸೆಯ ಈಡೇರಿಕೆಯಾದಾಗ ಮಾತ್ರ ಎಲ್ಲರಿಗೂ ಶಿಕ್ಷಣವೆಂಬ ಕನಸು ನನಸಾಗುತ್ತದೆ. ಸಿಕ್ಕಿದವರಿಗೆ ಸೀರುಂಡೆ ಯೆಂಬ ಆರ್ಥಿಕ ನೀತಿ, ಕೆಲವರ ಕೈಯಲ್ಲೇ ಸಂಪತ್ತು ಕ್ರೋಢಿಕರಣವಾಗುವ ಕೇಂದ್ರೀಕ್ರತ ಅರ್ಥವ್ಯವಸ್ಥೆಯಲ್ಲಿ ಈ ಪರಿವರ್ತನೆ  ಸಾಧ್ಯವಾಗದ ವಿಚಾರ. ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಅನುಷ್ಠಾನದಿಂದ ಮಾತ್ರ ಇದು ಸಾಧ್ಯ. ಬಂಡವಾಳವಾದೀ ವ್ಯವಸ್ಥೆಯನ್ನು ಪ್ರತಿಪಾದಿಸುವ ಪ್ರಸ್ತುತ ಸರ್ಕಾರದ ಈ ಘೋಷಣೆ ಜನರನ್ನು ಮರುಳುಗೊಳಿಸುವ ತಂತ್ರವಷ್ಟೇ!  ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ೫ ನೇ ತರಗತಿವರೆಗೆ, ಸಾಧ್ಯವಾದರೆ ೮ ನೇ ತರಗತಿಯ ವರೆಗೂ ಶಿಕ್ಷಣ ನೀಡುವುದು ಉತ್ತಮ ವಿಚಾರ. ಹೊಸ ಶಿಕ್ಷಣ ನೀತಿಯಲ್ಲಿ ಇದನ್ನು ಕಡ್ಡಾಯವಾಗಿಸದೇ,  ಸಾಧ್ಯವಾದಲ್ಲಿ ಎಂಬ ಪದ ಸೇರಿಸಿರುವುದು ಪ್ರಾದೇಶಿಕ ಭಾಷಾ ಮಾಧ್ಯಮದ ಕುರಿತಾದ ಬದ್ಧತೆಯ ಕೊರತೆ.ಹಲವು ಸರ್ಕಾರಿ ಶಾಲೆಗಳಲ್ಲೇ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಿರುವ ಈ ಸಮಯದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದ ಪಾಲಕರನ್ನು ಹೊರತರುವ ಪರಿಣಾಮಕಾರಿ ಪ್ರಾಮಾಣಿಕ ಕಾರ್ಯಯೋಜನೆ ಇಲ್ಲದಿರುವ ಈ ಹೊಸ ನೀತಿ, ಜನರ ಕಣ್ಣೊರೆಸುವ, ಭಾಷಾ ಚಳುವಳಿಗಳನ್ನು ದಾರಿತಪ್ಪಿಸುವ ಕುತಂತ್ರವಷ್ಟೆ. ತ್ರಿಭಾಷಾ ಕಲಿಕೆಗೆ ಅವಕಾಶ ಒಳ್ಳೆಯದು. ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಜೊತೆಗೆ ಇನ್ನೆರೆಡು ಭಾಷೆಗಳ ಕಲಿಕೆಯನ್ನು ಕಡ್ಡಾಯವಾಗಿಸಿ ಅವುಗಳಲ್ಲಿ ಎರಡು ಭಾಷೆಗಳು ಭಾರತೀಯ ಮೂಲದವಾಗಿರಬೇಕೆಂದಿರುವುದು ಹಿಂದಿ ಮತ್ತು ಸಂಸ್ಕೃತದ ಹೇರಿಕೆಯ ಪ್ರಯತ್ನವೆಂಬ ಭಾವನೆ ಮೂಡಲು ಕಾರಣವಾಗಿದೆ.ಕರಡು ಶಿಕ್ಷಣ ನೀತಿಯಲ್ಲಿ ಕಡ್ದಾಯಗೊಳಿಸಿದ್ದ ಇಂಗ್ಲೀಷ್ ಮತ್ತು ಹಿಂದಿಯ ಕಲಿಕೆಯನ್ನು ರಾಜಕೀಯ ಒತ್ತಡಗಳಿಂದಾಗಿ ಕೈ ಬಿಟ್ಟಿದ್ದರೂ ಸಂಶಯ ದೂರವಾಗಿಲ್ಲ.  ಆಂಗ್ಲ ಭಾಷೆಯನ್ನು ಬ್ರಿಟಿಷರ ಭಾಷೆಯೆಂದು ವ್ಯಾಖ್ಯಾನಿಸುವ ಕಾಲ ಮುಗಿದಿದೆ. ಜಾಗತಿಕ ಸಂಪರ್ಕಭಾಷೆಯಾಗಿ ಇಂಗ್ಲೀಷ್ ಕಲಿಕೆ ಅನಿವಾರ್ಯವಾಗುತ್ತಿದೆ. ಇಂಗ್ಲೀಷ್ ಅನ್ನು ಭಾಷೆಯಾಗಿ ಕಲಿಯುವದಕ್ಕೂ ಕಲಿಕಾ ಮಾಧ್ಯಮವಾಗಿ ಬಳಸುವದಕ್ಕೂ ತುಂಬಾ ವ್ಯತ್ಯಾಸವಿದೆ.ಈ ಹೊಣೆಗಾರಿಕೆಯನ್ನುಹಿಂದಿ ಪ್ರಿಯ ಕೇಂದ್ರ ಸರ್ಕಾರ ನಿಭಾಯಿಸಬಲ್ಲದೆಂಬುದಕ್ಕೆ ಆಧಾರವಿಲ್ಲ. ವೃತ್ತಿ ಆಧರಿತ ಶಿಕ್ಷಣ ನೀಡಿಕೆ,  ಹೆಚ್ಚು ಭಾಷೆಗಳನ್ನು ಕಲಿಯುವ ಅವಕಾಶ ಸೃಷ್ಟಿಸುವುದು ಉತ್ತಮ ಆಶಯಗಳು. ಆದರೆ ಇದಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಯಾರು ಭರಿಸಬೇಕು..?? ಸರ್ಕಾರಿ ಶಾಲೆಗಳಲ್ಲಿ ನೇಮಕಾತಿಗಳಿಲ್ಲ, ಖಾಸಗಿ ಶಾಲೆಗಳು ಹೆಚ್ಚುವರಿ ವೆಚ್ಚವನ್ನು ಪಾಲಕರಿಗೆ ವರ್ಗಾಯಿಸುವುದು ಸಹಜ. ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನ ವಿಧಾನ ವ್ಯವಹಾರಿಕವಾಗಿರದಿದ್ದಾಗ ಅದು ವಿಫಲಗೊಳ್ಳುತ್ತದೆ.  ತೊಂಭತ್ತರ ದಶಕದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಖಾಸಗೀಕರಣ, ಉದಾರೀಕರಣ , ಜಾಗತೀಕರಣಗಳನ್ನುಐನ್ನಷ್ಟು ವೇಗವಾಗಿ ಅನುಷ್ಠಾನಗೊಳಿಸುತ್ತಿರುವ ಬಿಜೆಪಿಯಿಂದಾಗಿ ಉಳ್ಳವರು ಇಲ್ಲದವರ ನಡುವಿನ ಅಂತರ ಹೆಚ್ಚುತ್ತಿದ್ದು, ಶೇಕಡಾ ೧೦ ರಷ್ಟು ಜನರು ದೇಶದ ಸಂಪತ್ತಿನ ೭೦% ಗೂ ಹೆಚ್ಚಿನ ಸಂಪತ್ತಿನ ನಿಯಂತ್ರಣ ಹೊಂದಿದ್ದಾರೆ.ಕೆಲವರ ಕೈಯಲ್ಲೇ ಸಂಪತ್ತು ಕೇಂದ್ರೀಕೃತವಾಗುತ್ತಿರುವ ಇಂತಹ ಸಂಧರ್ಭದಲ್ಲಿ, ೨೦೦ ಕ್ಕೂ ಹೆಚ್ಚು ವಿದೇಶಿ ವಿಶ್ವ ವಿದ್ಯಾಲಯಗಳನ್ನು ಅವ್ಹಾನಿಸುವ ಕ್ರಮವು, ಉಳ್ಳವರಿಗೇ ಶಿಕ್ಷಣ ಪದೆಯುವ ಅವಕಾಶ ದೊರಕಿಸಿಕೊಡುವದರಿಂದ, ಸಾಮಾಜಿಕ – ಆರ್ಥಿಕ ತಾರತಮ್ಯ ಇನ್ನಷ್ಟು ಹೆಚ್ಚಲು ಅವಕಾಶವಾಗಲಿದೆ.ಆರ್ ಟಿ ಇ ಎಂಬ ವಿಫಲ ಯೋಜನೆ, ಮಧ್ಯಾನದ ಊಟ, ಬೆಳಗಿನ ತಿಂಡಿಗಳ ನೀಡಿಕೆಯಿಂದಲೇ ಎಲ್ಲರಿಗೂ ಶಿಕ್ಷಣದ ಸಮಾನ ಅವಕಾಶವೆಂಬುದು ಪೊಳ್ಳು ಘೋಷಣೆ. ೧೦+೨ ಪದ್ಧತಿಯನ್ನು ೫+೩+೩+೪ ನ್ನಾಗಿ ಬದಲಿಸುವುದೇ ಮಹತ್ತರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ೧+೨+೫+೩+೪ ರ ಪದ್ಧತಿ ಜಾರಿಯಲ್ಲಿರುವಾಗ ಬದಲಾವಣೆಯ ಕುರಿತಾಗಿ ಡಂಗುರ ಸಾರುವುದು ಢೋಂಗಿತನ.  ಪದವಿಗಳಿಂದ, ತರಬೇತಿಗಳನ್ನು ನೀಡುವುದರಿಂದಲೇ ಉತ್ತಮ ಶಿಕ್ಷಕರು ನಿರ್ಮಾಣವಾಗಲಾರರು. ನೈತಿಕತೆ ಆಧ್ಯಾತ್ಮಿಕತೆ, ವಿಶಾಲ ಮನೋಭಾವಗಳು ಶಿಕ್ಷಕರಿಗೆ ಅತಿ ಅಗತ್ಯ. ಉತ್ತಮ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಇದು ಅನಿವಾರ್ಯ. ಸಂಕುಚಿತ, ಸ್ವಾರ್ಥ ಮನೋಭಾವ ಬೆಳೆಸುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ನೇತಾರರ ನಡೆ ಮಾದರಿಯಾಗಿರಬೇಕು.ಜಾತಿ,ಮತ, ಪಂಥಗಳ ಹೆಸರಿನಲ್ಲಿ ಜನರನ್ನು ಒಡೆದು,ಮೂಢನಂಬಿಕೆ ಬಿತ್ತುತ್ತಾ, ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವವರಿಂದ ಇದು ಸಾಧ್ಯವಾಗದು.  ಉತ್ತಮ ಆಶಯ ಹೊಂದಿದ ಸಿದ್ಧಾಂತಗಳ ಯಶಸ್ಸು ಅಥವಾ ವೈಫಲ್ಯಕ್ಕೆ,ಅನುಷ್ಠಾನಗೊಳಿಸುವವರ ಮನೋಭೂಮಿಕೆಯೇ ಮುಖ್ಯ ಕಾರಣ. ಉತ್ತಮ ವಿಚಾರಗಳು, ಸದಾಶಯಗಳನ್ನು ಮುಂದಿಟ್ಟುಕೊಂಡು ಸಿದ್ಧಾಂತವನ್ನು ರೂಪಿಸಲಾಗುತ್ತದೆ. ಆದರೆ ಅವುಗಳನ್ನು ಅನುಷ್ಠಾನಗೊಳಿಸುವ ಕಾರ್ಯವಿಧಾನಗಳ ಬಗ್ಗೆ, ವ್ಯವಹಾರಿಕ ಸಾಧ್ಯತೆಗಳ ಕುರಿತು, ಆಷಾಡಭೂತಿ ಪ್ರತಿಪಾದಕರು ಪ್ರಾಮಾಣಿಕವಾಗಿ ಯೋಜಿಸುವುದಿಲ್ಲ; ಯೋಚಿಸುವುದೂ ಇಲ್ಲ. ತಾವು ಘನಂಧಾರಿ ಕೆಲಸ ಮಾಡುತ್ತಿದ್ದೇವೆಂದು ತೋರಿಸಿಕೊಳ್ಳುವುದೇ ಅವರ ಉದ್ದೇಶ. ಶಿಕ್ಷಣ ನೀತಿ ೨೦೨೦ ಈ ವರ್ಗಕ್ಕೇ ಸೇರಿದೆಯೆಂಬುದು ವಿಷಾದನೀಯ. *************************

ಹೊಸ ಶಿಕ್ಷಣ ನೀತಿ Read Post »

ಕಾವ್ಯಯಾನ

ಕೈ ಚೀಲ

ಕೈ ಚೀಲ ಬಿ.ಶ್ರೀನಿವಾಸ ಆ ಹುಡುಗನ ಹೆಸರಿಡಿದು ಯಾರೂ ಕರೆಯುವುದಿಲ್ಲ.ಎಲ್ಲರೂ ಕರೆಯುವುದೇ ‘ಕೈಚೀಲ’ ಎಂದೆ.ತನ್ನ ಕುಂಟುಗಾಲಿನಲಿ ಹೋಗುವಾಗ ಯಾರಾದರೂ “ಕೈ ಚೀಲಾ…”ಕೂಗಿದರೆ ಸಾಕು ತಕ್ಷಣ ನೋಡುತ್ತಾನೆ.ಅವನಿಗೆ ಬಹಳವೆಂದರೆ ಐದೋ ಆರೋ ವರುಷವಿದ್ದೀತು. ಅವ್ವನ ಬಿಟ್ಟರೆ ಅವನಿಗೆ ಬೇರೆ ಜಗತ್ತು ಇಲ್ಲ. ಬಣ್ಣದ ಸಂಜೆಗಳೆಂದರೆ ಅವನಿಗಿಷ್ಟ. ಯಾಕೆಂದರೆ ಅವನವ್ವ ಸಂಜೆಯಾದಂತೆಲ್ಲ ಸುಂದರವಾಗಿ ಕಾಣುವಂತೆ ಅಲಂಕರಿಸಿಕೊಳ್ಳುತ್ತಾಳೆ. ಆ ಪಾಂಡ್ಸ ಪೌಡರಿನ ಪರಿಮಳ ಸಂಜೆಗಳನ್ನು ಅರಳಿಸುತ್ತದೆ. ಸಲೀಸಾಗಿ ಅವ್ವನ ಕೈ ಹಿಡಿದು ನಡೆಯುತ್ತಾನೆ. ಅಷ್ಟರಲ್ಲಿ ಯಾರಾದರೂ ಕೈ..ಚೀ..ಲಾ..!ಪಿಸುಗುಟ್ಟಿದರೂ ಸಾಕು ಅವನು ಅಲ್ಲಿಗೆ ಹೋಗುತ್ತಾನೆ. ಹೊಸ ಅಪ್ಪನನ್ನು ಕಾಣುತ್ತಾನೆ. ಹೊಸ ಅಪ್ಪನೊಡನೆ …ಅವ್ವ ಹೇಳಿಕೊಟ್ಟ ಮಾತುಗಳನ್ನೇ ಹೇಳುತ್ತಾನೆ. ಅವ್ವ ಖುಷಿಯಾಗಿದ್ದಾಳೆಂದು ಇವನೂ ಖುಷಿಯಿಂದ ಹುರಿದ ಬಟಾಣಿ ತಿನ್ನುತ್ತ ಕುಳಿತಿರುತ್ತಾನೆ. ಕೈ ಚೀಲನಿಗೊಂದು ಕನಸಿತ್ತು. ಅಷ್ಟು ಜನ ಅಪ್ಪಂದಿರನ್ನು ಗುರ್ತು ಹಿಡಿಯಲು ಸಂತೆಯಲ್ಲಿ ನೋಡಿದ ಬಣ್ಣದ ಟೋಪಿಗಳನ್ನು ತೆಗೆದಿರಿಸಿದ್ದ. ಕೆಂಪು ಹಳದಿ ಹಸಿರು ನೀಲಿ..ಬಿಳಿ..ಖಾಕಿ…ಹೀಗೆ ತರಹೇವಾರಿ ಉಲನ್ ಟೋಪಿಗಳನ್ನು ಸಾಲಾಗಿ ಇರಿಸಿದ್ದ. ಅವನ ಕನಸಿಗೆ ಅವಳವ್ವ ಅಡ್ಡ ಬರಲಿಲ್ಲ. ಎಷ್ಟೊಂದು ಅಪ್ಪಂದಿರು..! ನಾನು ಹೀಗೆ ಆಸ್ಪತ್ರೆಯಲ್ಲಿ ಮಲಗಿರುವಾಗ ಯಾಕೆ ಯಾರೊಬ್ಬರೂ ಬರುವುದಿಲ್ಲವಲ್ಲ? ಹುಡುಗನ ಹೃದಯ ಮಿಡಿಯುತ್ತಿದೆ. ಅಲ್ಲಿ ಡಾಕ್ಟ್ರು ಅವ್ವನಿಗೇನೋ ಹೇಳುತ್ತಿದ್ದಾರೆ. “ಲಕ್ಷಕ್ಕೊಬ್ಬರಿಗೆ ಮಾತ್ರ ಬರುವ ಕಾಯಿಲೆ…ವಾಸಿಯಾಗುವುದಿಲ್ಲ.” ಆಕೆ ಅಲ್ಲಿಯೇ ಕುಸಿಯುತ್ತಿದ್ದಾಳೆ. ಆ ಹುಡುಗನ ಮುಚ್ಚಿದ ಕಣ್ಣ ಪಾಪೆಯಲ್ಲಿ ಉಲನ್ ಟೊಪ್ಪಿಗೆ ಧರಿಸಿದ ಅಪ್ಪಂದಿರು ಸಾಲಾಗಿ ಬಂದು ..ಮಲಗಿದ್ದ ತನ್ನನ್ನು ನಿಧಾನಕ್ಕೆ ಎದ್ದು ಕೂಡಿಸಿ, ಮುದ್ದುಗರೆಯುತ್ತ ಬ್ರೆಡ್ಡು, ಬಿಸ್ಕತ್ತು, ಸೇಬಣ್ಣು…ತಿನ್ನಿಸುವ ಕನಸು ಕಾಣುತ್ತಾನೆ. ……ಯಾರೋ.. “ಕೈ ಚೀಲಾ..”!ಕರೆದಂತೆ ಭಾಸ ಅವ್ವ ಕೈ ಸನ್ನೆ ಮಾಡಿ ಖುಷಿಯಿಂದ ಮೊಗ ಕಂಡಂತೆ “ಅವ್ವಾ..ಹೊಸ ಅಪ್ಪ.. ಬರ್ತನಂತೆ…”!ಕನವರಿಸುತ್ತಲೇ ಇದ್ದಾನೆ. ಆಕೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಳೆ.

ಕೈ ಚೀಲ Read Post »

ಕಾವ್ಯಯಾನ

ಅಂಗಳದ ಚಿಗುರು

ಕವಿತೆ ಅಂಗಳದ ಚಿಗುರು ಬಿರುಕು ಬಿಟ್ಟ ಗೋಡೆಯ ಮೌನದಲಿಅಜ್ಞಾತ ಹಕ್ಕಿಯ ಗೂಡೊಂದು ಮುಗಿಲ ಕೂಗುತಿತ್ತು ಅಂಗಳ ತುಂಬಿದ ನೀರಿನ ದಡದಲಿಮರಿಗಳ ಹಿಂಡು ಕಣ್ಣಾಮುಚ್ಚಾಲೆ ಆಡುತಪೇಪರ ಬೋಟಿನ ಕಣ್ಣೊಳಗೆಅಲೆಗಳ ಲೆಕ್ಕದಲಿ ಮೈಮರೆತವು ಅವಳು ಬಿಡುಗಣ್ಣಲಿಪಾದಕ್ಕೆರಗಿದ ಗಾಯದ ಸಲಾಕೆ ಜಾಡಿಸುತ್ತಗೋಗರಿವ ಮುಳ್ಳುಗಳ ಹೃದಯದಲಿಕಸಿ ತುಂಬೊ ರಸದ ಮುಲಾಮಾದಳು ಬಿರುಕ ಗೋಡೆಗಳ ನಡುವೆಬೆಸುಗೆಯ ಚಿತ್ತ ಬೆನ್ನೊಳಗ ಬಿಗಿದುಕೊಂಡುಹರಿವ ತೊರೆಯಲಿ ತೇಲಿ ಬರೋ ನಾವೆಯಾದಳು ಉರಿವ ಒಲೆಗಳಲಿ ಗುಪ್ತ ಬೂದಿಯಾಗಿತೇದು ತೇಗಿ ನಕ್ಷತ್ರಗಳ ನೆಲಕ್ಕಿಳಿಸಿಗುಡಿಸಲು ಕಣ್ಣೊಳಗೆಸದಾ ಹುಣ್ಣಿಮೆಯ ಚಂದಿರ ಚಿತ್ರಿಸಿಬೆಳದಿಂಗಳ ನಕ್ಷೆಯಾದಳು ಅಂಗಳದ ಚಿಗುರಿಗೆ *************************

ಅಂಗಳದ ಚಿಗುರು Read Post »

You cannot copy content of this page

Scroll to Top