ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಅವನಿದ್ದಾನೆ ಮಾಲತಿ ಶಶಿಧರ್ ನನಗಾಗಿ ನೀನುದುಃಖಿಸುವುದೇನು ಬೇಡನಾನೀಗ ನಿರಾಳಅವನು ಕೂಗಿದ, ದನಿ ಹಾದುಬಂದತ್ತ ಹೆಜ್ಜೆ ಹಾಕುತ್ತಾ ಹೋಗಿದ್ದಾಗಿದೆಅಲ್ಲಿ ಅವನು ನನ್ನ ಕೈ ಹಿಡಿದಿದ್ದಾನೆಬೀಳುವ ಮಾತಿಲ್ಲಬೆನ್ನು ತಿರುಗಿಸಿ ನಡಿಗೆ ಶುರುವಿಟ್ಟಿದ್ದೇನೆಎಲ್ಲಾ ತಾಪತ್ರಯಗಳ ನಿನ್ನ ಅಡಿಗಳಲ್ಲೇಬಿಟ್ಟು ಹೊರಟದ್ದಾಗಿದೆಅವನು ದಾರಿಯುದ್ದಕ್ಕೂ ಜೊತೆಇದ್ದು ನಗಿಸುತ್ತಾನೆ, ಪ್ರೀತಿಸುತ್ತಾನೆಮುದ್ದಿಸುತ್ತಾನೆಒಮ್ಮೊಮ್ಮೆ ಬೇಸರದಿ ಕುಸಿದು ಕೂತಾಗಎಳೆದುಕೊಂಡು ಹೋಗಿಮರ ಸುತ್ತುವ ಆಟಆಡಿಸುತ್ತಾನೆನಾನು ಅರೆಬರೆ ಬರೆದು ಬಿಟ್ಟಕವಿತೆಗಳ ಕೈಗಿಟ್ಟು ಬರೆಸುವನುಕವಿತೆ ಪೂರ್ಣವಾಗುವವರೆಗೂಕೆನ್ನೆಯ ಕೆನ್ನೆಗೊತ್ತಿ ತೋಳಲಿ ಬಳಸಿನಿಲ್ಲುವನುಅವನು ಶಾಂತಿಯ ಪ್ರತೀಕಕೆಟ್ಟದಿನಗಳಿಗೆ ಅಗುಳಿ ಇಟ್ಟುಶಾಂತಿ ಮಂತ್ರ ಪಠಿಸುವನನಗೆ ಅವನೇ ಮಂತ್ರದಂಡನನ್ನ ತಲೆಯ ಮೇಲೀಗ ಹೊರೆ ಇಲ್ಲಎಲ್ಲವೂ ಅವನ ಉಸಿರ ರಭಸಕೆತೂರಿ ಹೋಗಿದೆನನ್ನ ಕುರುಳಲ್ಲೀಗ ಮೊಲ್ಲೆ ಮೊಗ್ಗಪರಿಮಳಇಳಿ ಸಂಜೆ ಹೊತ್ತಿಗೆ ಅಂದವನೋಡಿ ಹಾಡಿ ಹೊಗಳುತ್ತಾನೆನೀನು ನನಗಾಗಿ ದುಃಖಿಸುವುದೇನುಬೇಡ ನನ್ನೊಡನೆ ಈಗ ಅವನಿದ್ದಾನೆಆತ್ಮವಿಶ್ವಾಸ.. ನನಗಾಗಿ ನೀನುದುಃಖಿಸುವುದೇನು ಬೇಡನಾನೀಗ ನಿರಾಳಅವನು ಕೂಗಿದ, ದನಿ ಹಾದುಬಂದತ್ತ ಹೆಜ್ಜೆ ಹಾಕುತ್ತಾ ಹೋಗಿದ್ದಾಗಿದೆಅಲ್ಲಿ ಅವನು ನನ್ನ ಕೈ ಹಿಡಿದಿದ್ದಾನೆಬೀಳುವ ಮಾತಿಲ್ಲಬೆನ್ನು ತಿರುಗಿಸಿ ನಡಿಗೆ ಶುರುವಿಟ್ಟಿದ್ದೇನೆಎಲ್ಲಾ ತಾಪತ್ರಯಗಳ ನಿನ್ನ ಅಡಿಗಳಲ್ಲೇಬಿಟ್ಟು ಹೊರಟದ್ದಾಗಿದೆಅವನು ದಾರಿಯುದ್ದಕ್ಕೂ ಜೊತೆಇದ್ದು ನಗಿಸುತ್ತಾನೆ, ಪ್ರೀತಿಸುತ್ತಾನೆಮುದ್ದಿಸುತ್ತಾನೆಒಮ್ಮೊಮ್ಮೆ ಬೇಸರದಿ ಕುಸಿದು ಕೂತಾಗಎಳೆದುಕೊಂಡು ಹೋಗಿಮರ ಸುತ್ತುವ ಆಟಆಡಿಸುತ್ತಾನೆನಾನು ಅರೆಬರೆ ಬರೆದು ಬಿಟ್ಟಕವಿತೆಗಳ ಕೈಗಿಟ್ಟು ಬರೆಸುವನುಕವಿತೆ ಪೂರ್ಣವಾಗುವವರೆಗೂಕೆನ್ನೆಯ ಕೆನ್ನೆಗೊತ್ತಿ ತೋಳಲಿ ಬಳಸಿನಿಲ್ಲುವನುಅವನು ಶಾಂತಿಯ ಪ್ರತೀಕಕೆಟ್ಟದಿನಗಳಿಗೆ ಅಗುಳಿ ಇಟ್ಟುಶಾಂತಿ ಮಂತ್ರ ಪಠಿಸುವನನಗೆ ಅವನೇ ಮಂತ್ರದಂಡನನ್ನ ತಲೆಯ ಮೇಲೀಗ ಹೊರೆ ಇಲ್ಲಎಲ್ಲವೂ ಅವನ ಉಸಿರ ರಭಸಕೆತೂರಿ ಹೋಗಿದೆನನ್ನ ಕುರುಳಲ್ಲೀಗ ಮೊಲ್ಲೆ ಮೊಗ್ಗಪರಿಮಳಇಳಿ ಸಂಜೆ ಹೊತ್ತಿಗೆ ಅಂದವನೋಡಿ ಹಾಡಿ ಹೊಗಳುತ್ತಾನೆನೀನು ನನಗಾಗಿ ದುಃಖಿಸುವುದೇನುಬೇಡ ನನ್ನೊಡನೆ ಈಗ ಅವನಿದ್ದಾನೆಆತ್ಮವಿಶ್ವಾಸ..

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿಮ್ಮ ಹಾಗೆ ಬರೆಯಲಾಗುವುದಿಲ್ಲ ವಿ.ಎಸ್.ಶಾನಬಾಗ್ ನನಗೆ ನಿಮ್ಮ ಹಾಗೆ ಬರೆಯಲಾಗುದಿಲ್ಲನಿಮ್ಮ ಬಗ್ಗೆ ನೀವು ಬರೆದ ಹಾಗೆನನ್ನ ಬಗ್ಗೆ ನನಗೆ ಬರೆಯಲಾಗುವುದಿಲ್ಲನೀವು ಹೇಳಿದಹಾಗೆನಿಮ್ಮ ಸ್ನೇಹಕ್ಕೆ ಬರೆದಿದ್ದನೆಲ್ಲಒರೆಸಿ ಹಾಕಿದೆ ಎಲ್ಲ ಅವನು ಅವಳ ಹಳೆಯ ಪ್ರೀತಿಒಂದಾಗಿ ಮತ್ತೆ ಮತ್ತೆ ಬೇರೆಯಾದ ರೀತಿಎಲ್ಲ ಎಲ್ಲ ಎಲ್ಲ ಅನುರಾಗಕ್ಕೆಅವಳನ್ನು ಕೂಡಲಾಗುವುದಿಲ್ಲಅವನನ್ನು ಕಳೆಯಲಾಗುವುದಿಲ್ಲಇವರ ಬಗ್ಗೆನೀವು ಬರೆದಹಾಗೆನನಗೆ ಬರೆಯಲಾಗುವುದಿಲ್ಲಪ್ರೀತಿಗೆ ಎಲ್ಲ ಅವ ಅವಳ ನೆನೆದ ಹಾಗೆಅವಳು ಅವನು ನಡೆದಹಾಗೆಒದ್ದೆ ನಿಂತ ಅವರನ್ನು ಕವಿತೆಯಲ್ಲಿಕರೆಯಲಾಗುವುದಿಲ್ಲಆದ್ದರಿಂದ ನಿಮ್ಮ ಹಾಗೆಬರೆಯಲಾಗುವುದಿಲ್ಲಪ್ರೀತಿಗೆ ಎಲ್ಲ ಆದ್ದರಿಂದ ನಾನು ನಿಮ್ಮಗುಂಪಿನಲ್ಲಿ ಸಲ್ಲನೀವು ಬರೆದದ್ದೇ ಕವಿತೆತೆರೆದದ್ದೇ ಕಥೆತಾಳೆಯಾಗದಿದ್ದರೂ ಯೋಚನೆ, ರೂಪಕಕೂರಿಸಿ ಶಬ್ಧಗಳ ಜಾತಕಪೀತಿಯಲ್ಲಿ ಕೂಡಿದ ಕ್ಷಣಗಳಶಬ್ದಗಳಲ್ಲಿ ತುಂಬಿಸಲಾಗುವುದಿಲ್ಲಎಲ್ಲ ಅನುರಾಗಕೆ ಸಲ್ಲ ನಿಮ್ಮದೇ ಆದ ನುಡಿಕಟ್ಟುಗಳಿಂದನೀವೆಲ್ಲ ಕವಿತೆಯಬಗ್ಗೆ ಹೇಳುತ್ತಲೇ ಇರುವಾಗನಿಮ್ಮನ್ನು ಕೇಳಿದ್ದು ಹೆಚ್ಚು,ಬರೆದದ್ದು ಬರೇ ಹುಚ್ಚು ಅವನು ಅವಳ ಬಗ್ಗೆ ಸದಾ ಬರೆಯುವ ನಿಮ್ಮಕಾವ್ಯ,ಲಯ,ಉಪಮೆ ರೂಪಕ ಪ್ರತಿಮೆ ಪ್ರತಿಭೆಬೆನ್ನಲ್ಲೇ ಹೊತ್ತ ನಿಮಗೆನಿಮ್ಮದೇ ನುಡಿಕಟ್ಟು ಹೇಳಿದ್ದೆಲ್ಲ ಕವಿತೆನೀವು ಬರೆದದ್ದನ್ನೆಲ್ಲ ಪ್ರಕಟಿಸುವವು ಎಲ್ಲನಿಮ್ಮ ಹಾಗೆ ಬರೆದರೂ ಓದುವವರಿಲ್ಲಪ್ರೀತಿಗೆ ಎಲ್ಲ ನಮ್ಮಂತೆ ಕವಿತೆಯೂ ಪ್ರೀತಿಯಲ್ಲಿಪ್ರಕಟವಾಗುತ್ತವೆ ಕೆಲವರದು ಖಾಸಗಿಸಾರ್ವಜನಿಕವಾಗಲು ಸಲ್ಲಆದ್ದರಿಂದಲೇ ನಿಮ್ಮ ಹಾಗೆ ಬರೆಯುವುದಿಲ್ಲನಿಮ್ಮ ಸಲ್ಲದ ಪ್ರೀತಿಗೆ ಎಲ್ಲ ***********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇಳೆಯ ಸ್ವಗತ ಕಲಾ ಭಾಗ್ವತ್ ಹಕ್ಕಿ ಹಾರಾಡಿಗೂಡ ಸೇರುವ ಸಂಜೆಚಿಲಿಪಿಲಿಗಳ ಸದ್ದು ಗದ್ದಲ ತಾನೇ ಗೆದ್ದೆನೆಂಬ ದಣಿವುಹಿಗ್ಗಿ ಹಿಂದಿಕ್ಕಿ ಓಡಿಹುದುಕರುಳ ಕುಡಿಗಳ ಸಿದ್ಧಿ ಸಂಭ್ರಮದಕಥೆಗಳಿಗೆ..ಮೆಲುದನಿಯಲೇ ಉತ್ತರಒಳಗೊಳಗೆ ಏರು ಎತ್ತರ! ಪಿಸುಮಾತಿನ ರಸಘಳಿಗೆ,ಕುಸುರಿ ಮಾಡಿದೆ ಕನಸ,ಪಡುವಣದ ಕೆಂಪಂಚಿನಲಿ..ಹೋಗಿಯೇ ಬಿಟ್ಟನಾಳೆ ಬರುವೆನೆಂದು!ಇಲ್ಲೀಗ ಕಗ್ಗತ್ತಲು.. ಕೈಯೊಂದು ಚಾಚಿತು ಬಾಎಂದು ಬೆಳಕ ತೋರಲು..ಆಹಾ.. ಎಂತಹ ಶುಭ್ರ !ಎಂದಿನಂತಲ್ಲ ಇಂದು.. ಮಾಸಕೊಮ್ಮೆಯಾದರೂಮರೆಯಾದರೇ ಚಂದಈ ಚಂದ್ರಮ..ಮರುದಿನ ತುಸು ಮಾತ್ರ ನೋಡಲು.ಪುಟ್ಟ ಮಗುವಿಗೆಬೇಕಲ್ಲವೇ ಊಟದಾಟಕೆ?ಕರುಣೆಯೋ, ಒಲುಮೆಯೋ..ಇಣುಕಿದರೆ ಸೆಳವೊಂದಿಹುದು ದಿನದಂತ್ಯದ ಶಾಂತ, ಹಸಿತಅವನ ಮೊಗವೊಂದೇ ಸಾಕುಹಂಚಿಕೊಳ್ಳಲು ಸಿಹಿ-ಕಹಿಯ ಬೆಳಗಾದರೆ ಬಂದೇ ಬಿಡುವನವನುಬಡಿದೆಬ್ಬಿಸಲುಮಾತಿಗೆ ತಪ್ಪದೆ,ಮೂಡಣವ ರಂಗೇರಿಸಿ..ತಿಳಿಗೊಳದಲಿ ತೋರಿ ಪ್ರತಿಬಿಂಬಹಸಿರಿಗಷ್ಟೇ ಕೇಳುವುದುಕಿವಿಯಲೂದಿದಉಸಿರಿನ ಸ್ವರ..ಯಾಕೆ ಆಯಾಸ? ಮುಸುಕ ಸರಿಸಿ, ಮುಖವರಳಿಸಿಹಸಿ ಕನಸಲಿ ಸ್ವಾಗತಿಸಲೇಮತ್ತೆ ಸಂಜೆಯ?.. ************************************

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹಸಿರಿನೆಡೆಗೆ ನಮ್ಮನ್ನು ನಡೆಸುವ ‘ಹೂ ಹಸಿರಿನ ಮಾತು’ ಹೂ ಹಸಿರಿನ ಮಾತುಲೇಖಕಿ : ಡಾ.ಎಲ್.ಸಿ.ಸುಮಿತ್ರಾಪ್ರಕಾಶಕರು : ಅಂಕಿತ ಪುಸ್ತಕ, ಬೆಂಗಳೂರುಪ್ರಕಟಣಾ ವರ್ಷ :೨೦೧೨ಪುಟಗಳು : ೯೬ ಬೆಲೆ : ರೂ.೧೨೦ ಹಿರಿಯ ಲೇಖಕಿ ಡಾ.ಎಲ್.ಸಿ.ಸುಮಿತ್ರಾ ಅವರ ‘ಹೂ ಹಸಿರಿನ ಮಾತು’ ಸಾರ್ವಕಾಲಿಕ ಪ್ರಸ್ತುತಿಯುಳ್ಳ ಒಂದು ಕೃತಿ.  ಎಲ್ಲೆಲ್ಲೂ ಕಾಡು ಕಡಿದು, ಗುಡ್ಡಗಳನ್ನು  ಅಗೆದು, ಗದ್ದೆಗಳನ್ನು ಮುಚ್ಚಿ ಕಾಂಕ್ರೀಟು ಕಾಡುಗಳನ್ನಾಗಿ ಪರಿವರ್ತಿಸಿ ನಾವು ಪ್ರಕೃತಿಯ ಮುನಿಸಿಗೆ  ತುತ್ತಾಗುತ್ತಿರುವ ಇಂದು ಎಚ್ಚೆತ್ತುಕೊಳ್ಳಬೇಕಾದ ಕಾಲ. ಬಂದಿರುವ ಇಂದಿನ ಸಂಧರ್ಭದಲ್ಲಿ ಪರಿಸರದ ಬಗ್ಗೆ ಕಾಳಜಿಯಿರುವ ಪ್ರತಿಯೊಬ್ಬರೂ ಓದಬೇಕಾದ ಕೃತಿಯಿದು. ಸಾಹಿತ್ಯದೊಂದಿಗೆ ಉದ್ಯಾನ ಕಲೆ ಮತ್ತು ಹಸಿರುಪ್ರಿಯತೆಗಳನ್ನೂ ಮೈಗೂಡಿಸಿಕೊಂಡಿರುವ ಮಲೆನಾಡಿನ ತೀರ್ಥಹಳ್ಳಿಯ ಸುಮಿತ್ರಾ ಅವರು ಸ್ವತಃ ಕಾಡುಮೇಡುಗಳನ್ನು ಸುತ್ತಿ ಅಳಿವಿನಂಚಿನಲ್ಲಿರುವ ಅಪರೂಪದ ಗಿಡಗಳ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿ ಸಸ್ಯಶಾಸ್ತ್ರಜ್ಞರೊಂದಿಗೆ ಚರ್ಚಿಸಿ ಪುಸ್ತಕಗಳನ್ನು ಪರಾಮರ್ಶಿಸಿ ಚಿಂತನೆ ನಡೆಸಿ  ಈ ಪುಸ್ತಕವನ್ನು ಬರೆದಿದ್ದಾರೆ. ಅವರ ನಿರೂಪಣೆಯಲ್ಲಿ ವೈಜ್ಞಾನಿಕ ವಿವರಗಳೊಂದಿಗೆ ಸಾಹಿತ್ಯದ ಸೊಗಡೂ ಇರುವುದರಿಂದ  ಬಹಳ ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ. ‘ಹೂ ಹಸಿರಿನ ಮಾತಿ’ನಲ್ಲಿ ೨೩ ಜಾತಿಯ ಅಪರೂಪದ, ಪರಂಪರಾಗತ ಹಿನ್ನೆಲೆಯ ಸಸ್ಯಗಳ ಕುರಿತಾದ ವಿವರಗಳಿವೆ. ಹಲವು ಸಸ್ಯಗಳ ಉಪಪ್ರಭೇದಗಳನ್ನೂ ಅವರು ಇಲ್ಲಿ ಉಲ್ಲೇಖಿಸುತ್ತಾರೆ. ಪ್ರತಿಯೊಂದು ಗಿಡ-ಮರ-ಬಳ್ಳಿಗಳ ಮೂಲ, ಅವುಗಳ ಬೇರು-ಕಾಂಡ-ಕೊಂಬೆ-ರೆಂಬೆಗಳು, ಎಲೆ, ಹೂವು, ಹಣ್ಣು, ಕಾಯಿ, ಬೀಜಗಳ ಬಾಹ್ಯ ಸ್ವರೂಪದ ವಿವರಣೆಗಳಿಂದ ಆರಂಭಿಸಿ ಅವುಗಳ ಸಸ್ಯಶಾಸ್ತ್ರೀಯ ಹೆಸರುಗಳು,  ಕನ್ನಡದಲ್ಲಿ ವಾಡಿಕೆಯಲ್ಲಿರುವ ಹೆಸರುಗಳನ್ನು ನಮೂದಿಸುತ್ತ ಮುಂದೆ ಅವುಗಳ ಸಾಮಾನ್ಯ ಉಪಯೋಗಗಳು, ಅವುಗಳ ಔಷಧೀಯ ಗುಣಗಳು, ಬೀಜಗಳ ಲಭ್ಯತೆ, ಪರಾಗಸ್ಪರ್ಷ, ಯಾವುದರ ಹೂಗಳ ಮೇಲೆ ಜೇನು ಹುಳಗಳು ಕುಳಿತು ಜೇನು ಉತ್ಪಾದನೆ ಮಾಡಲು ಸಹಾಯಕವಾಗುವ ಅಪಾರ ಪ್ರಮಾಣದ ಸಿಹಿಯಿದೆ, ಯಾವುವು ನಿತ್ಯಹರಿದ್ವರ್ಣದ ಸಸ್ಯಗಳು ಎಂದು ಮುಂತಾದ  ಮಾಹಿತಿಗಳನ್ನು ಕೊಡುತ್ತಾರೆ. ಅಲ್ಲದೆ  ಬೇರೆ ಬೇರೆ ಗಿಡಗಳನ್ನು ಪುನರುತ್ಪಾದನೆ ಮಾಡುವುದು ಹೇಗೆ, ಬೀಜಗಳ ಮೂಲಕವೋ, ಬೇರುಗಳ ಮೂಲಕವೋ, ಗೆಲ್ಲುಗಳನ್ನು ನೆಡುವುದರ ಮೂಲಕವೋ ಎಂಬುದನ್ನೂ ತಿಳಿಸುತ್ತಾರೆ.   ಮತ್ತು ಹೆಚ್ಚು ಉಪಯುಕ್ತ ಗಿಡಗಳು ಹೇಗೆ ಅತಿಯಾದ ಬಳಕೆಯಿಂದಾಗಿ ಅಳಿವಿನಂಚಿಗೆ ಬಂದದ್ದರಿಂದ ಅವುಗಳನ್ನು ತಂದು ಪುನಃ ನೆಟ್ಟು ಬೆಳೆಸುವ ಅನಿವಾರ‍್ಯತೆಯಿದೆ ಎಂಬುದನ್ನೂ ಹೇಳುತ್ತಾರೆ. ಲೇಖಕಿ ತಮ್ಮಮುನ್ನುಡಿಯಲ್ಲಿ ಹೇಳುವಂತೆ ಈ ಕೃತಿಯಲ್ಲಿ ಅವರು ನೀಡುತ್ತಿರುವ ವಿವರಗಳು ಇಂದು ತೀರಾ ಅಪರೂಪವಾಗಿರುವ, ಇವತ್ತಿನ ತಲೆಮಾರಿನ ಯುವಕ-ಯುವತಿಯರಿಗೆ ಕೇಳಿಯೂ ಗೊತ್ತಿಲ್ಲದ ಸಸ್ಯಗಳ ಕುರಿತು ಮಾತ್ರ.  ಸುರಗಿ, ಅಶೋಕ, ರಂಜ, ಹೊಳೆ ದಾಸವಾಳ, ಹಾಲಿವಾಣ, ಕೇದಿಗೆ, ಮಾಧವಿಲತೆ, ಪಾರಿಜಾತ ಮೊದಲಾದ, ಹಿಂದೆ ನಾಡಿನ ಎಲ್ಲರ ಮನೆಗಳ ತೋಟ, ಹಿತ್ತಲು-ಬಯಲು-ಹೊಳೆಬದಿಗಳಲ್ಲಿ ಕಾಣಸಿಗುತ್ತಿದ್ದು ಪರಿಮಳ ಬೀರುತ್ತಿದ್ದ ಹೂಗಿಡಗಳು, ಸೀತಾಳೆ, ನಾಗಸಂಪಿಗೆ, ಕುರಿಂಜಿ ಹೂ, ನರ‍್ವಾಲ, ಕಾಡಿನ ದೀಪ, ಕಂಚುವಾಳ ಕಕ್ಕೆ, ಮೊದಲಾದ ಕಾಡು ಹೂಗಳು, ಶಾಲ್ಮಲಿ, ಇಪ್ಪೆಮರ,ಬೂರುಗ, ಮುತ್ತುಗ ಮೊದಲಾದ ಬೃಹತ್ ವೃಕ್ಷಗಳನ್ನು  ಲೇಖಕಿ ಓದುಗರಿಗೆ ಸಮೃದ್ಧ ವಿವರಗಳೊಂದಿಗೆ ಪರಿಚಯಿಸುತ್ತಾರೆ. ವಿದೇಶಿ ಮೂಲದವಾಗಿದ್ದು ಇಲ್ಲಿ ನೆಲೆಯೂರಿರುವ ಹೂಬಾಳೆ, ಆಲ್ಪೀನಿಯಾ,ಬ್ಲೀಡಿಂಗ್ ಹರ‍್ಭ್  ಮೊದಲಾದ ಕೆಲವು ಸಸ್ಯಗಳೂ ಇಲ್ಲಿ ಜಾಗ ಪಡೆದಿವೆ. ಹಲವಾರು ಗಿಡಮರಗಳ ಬಗ್ಗೆ ಮಾತನಾಡುವಾಗ ಲೇಖಕಿ ತಮ್ಮ ಬಾಲ್ಯದಲ್ಲಿ ಅವುಗಳ ಅಂದ ಚೆಂದ ಪರಿಮಳಗಳನ್ನು ಆಸ್ವಾದಿಸಿದ ಬಗ್ಗೆ , ಹೂಗಳನ್ನು ಮುಡಿಗೇರಿಸಿಕೊಂಡು ಖುಷಿಪಟ್ಟಿದ್ದರ ಬಗ್ಗೆ , ಹಬ್ಬ ಹರಿದಿನಗಳಂದು ಆಚರಣೆಯ ವಿಧಿಗಳಲ್ಲಿ ಅವುಗಳ ಹೂವು-ಹಣ್ಣು-ಎಲೆಗಳನ್ನು ಬಳಸಿಕೊಂಡದ್ದರ ಬಗ್ಗೆ,  ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ತೋರಣ ಕಟ್ಟುತ್ತಿದ್ದುದರ ಬಗ್ಗೆ ಸಂಭ್ರಮದಿಂದ ನೆನಪಿಸಿಕೊಳ್ಳುತ್ತ ನಿರೂಪಣೆಯ ನಡುನಡುವೆ ವೈಯಕ್ತಿಕ ಸ್ಪರ್ಶ ಕೊಡುತ್ತಾರೆ.  ಸಾಹಿತ್ಯದ ಪ್ರಾಧ್ಯಾಪಕಿಯಾದ್ದರಿಂದ ಸಹಜವಾಗಿ  ಅವರಿಗೆ ಪಂಪ, ರನ್ನ, ಜನ್ನ, ಬೇಂದ್ರೆ, ಕುವೆಂಪು, ಶಿವರುದ್ರಪ್ಪ ಮೊದಲಾದ ಕವಿಗಳ ಕವಿತೆಗಳಲ್ಲಿ ಆ ಗಿಡ-ಮರ-ಹೂವುಗಳ ಹೆಸರು ಬರುವುದು ಸಾಂಧರ್ಭಿಕವಾಗಿ  ನೆನಪಾಗುತ್ತದೆ. ರಾಮಾಯಣ, ಮಹಾಭಾರತ, ತಮಿಳಿನ ಸಂಘಂ ಕಾವ್ಯಗಳನ್ನೂ ಅವರು ಉದ್ಧರಿಸುತ್ತಾರೆ. ಒಟ್ಟಿನಲ್ಲಿ ಲೇಖಕಿಯ ಓದಿನ ವಿಸ್ತಾರಕ್ಕೆ ಈ ಎಲ್ಲ ಉದಾಹರಣೆಗಳು ಸಾಕ್ಷಿಯಾಗುತ್ತವೆ. ‘ಹೂ ಹಸಿರಿನ ಮಾತು’ ಅನೇಕ ವೈಶಿಷ್ಟ್ಯಗಳುಳ್ಳ ಕೃತಿ.  ಮೊತ್ತ ಮೊದಲಾಗಿ ಇದು ಸಾಹಿತ್ಯ-ವಿಜ್ಞಾನಗಳ ಸಂಗಮ. ಪರಂಪರಾಗತವಾಗಿ ನಮ್ಮಲ್ಲಿ ಬೆಳೆದುಕೊಂಡು ಬಂದ ಗಿಡಮರಗಳು ಅಳಿದು ಹೋಗಲು ಬಿಡಬಾರದೆಂಬ  ಕಾಳಜಿ ಇದರ ಹಿಂದೆ ಇದೆ. ನಮ್ಮ ಪರಿಸರವು ಗಿಡಮರಗಳನ್ನು ಕಳೆದುಕೊಂಡು ಬೋಳಾಗಿ  ಮನುಷ್ಯನ ಆಧುನಿಕತೆಯ ಹುಚ್ಚಿಗೆ ಬಲಿಯಾಗಬಾರದು ಎಂಬ ಕಾಳಜಿ ಇಲ್ಲಿದೆ.  ನಿಸರ್ಗದ ಮಕ್ಕಳಾದ ನಾವು ನಿಸರ್ಗವನ್ನು ಉಳಿಸಿಕೊಂಡು ಹೂ ಹಸಿರುಗಳ ಜತೆಗೆ ಸದಾ ಮಾತುಕತೆ ನಡೆಸುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ  ಒಳ್ಳೆಯದೆನ್ನುವ ಪರೋಕ್ಷವಾದ ಸಂದೇಶವೂ ಇದರೊಳಗಿದೆ. ಈ ಕೃತಿ ಗಾತ್ರದಲ್ಲಿ ಚಿಕ್ಕದಾದರೂ ಇದರ ಹಿಂದೆ ಲೇಖಕಿಯ ಅಪಾರ ಪರಿಶ್ರಮವಿದೆ. ಯಾಕೆಂದರೆ ಇದು ಒಂದೆಡೆ ಅಲುಗಾಡದೆ ಕುಳಿತು ಬರೆದದ್ದಲ್ಲ. ಆಗಲೇ ಹೇಳಿದಂತೆ ಇದರ ಹಿಂದೆ ಬಹಳಷ್ಟು ಕ್ಷೇತ್ರಕಾರ‍್ಯ ಮತ್ತು ಸಂಶೋಧನೆಗಳಿವೆ. ಸಸ್ಯಶಾಸ್ತ್ರವನ್ನು ಒಂದು ಪಠ್ಯ ವಿಷಯವನ್ನಾಗಿ ತೆಗೆದುಕೊಂಡವರಿಗೆ ಮಾತ್ರವಲ್ಲದೆ ಸಾಮಾನ್ಯ ಓದುಗರಿಗೂ ಖುಷಿ ಕೊಡಬಲ್ಲ ,ಉಪಯುಕ್ತವಾಗ ಬಲ್ಲ ಮತ್ತು ಅರಿವು ಮೂಡಿಸಬಲ್ಲ ಒಂದು ಕೃತಿಯಿದು. ಅಂಕಿತ ಪುಸ್ತಕವು ೨೦೧೨ರಲ್ಲಿ ಮುದ್ರಿಸಿ ಪ್ರಕಟಿಸಿದ  ಕೃತಿಗೆ ಕಥೆಗಾರ್ತಿ ಉಷಾ ಪಿ.ರೈಯವರು ಬರೆದು ಅಪಾರ ಅವರು ವಿನ್ಯಾಸ ಮಾಡಿದ ಸುಂದರವಾದ ಮುಖಪುಟ ಚಿತ್ರವು ಪುಸ್ತಕದ ಅಂದವನ್ನು ಹೆಚ್ಚಿಸಿದೆ.         ********************************* ಡಾ.ಪಾರ್ವತಿ ಜಿ.ಐತಾಳ್        

ಪುಸ್ತಕ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಬಾವಿ ಕಟ್ಟೆ ಕನ್ನಡ ಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ ಇಂಗ್ಲೀಷಿಗೆ: ಸಮತಾ ಆರ್. ಗುದ್ದಿ ಗುದ್ದಿ ಆಳಕ್ಕೆ ಅಗೆದುಸಿಕ್ಕ ಜೀವ ಜಲಕ್ಕೆಅತ್ತ ಇತ್ತ ಮಿಸುಕಾಡದಂತೆಕಟ್ಟಿದ್ದು ಕಟ್ಟೆ. ನೆಟ್ಟ ದಿಟ್ಟಿಗೆ ಒಂದು ಹಿಡಿಆಗಸ ಬಿಟ್ಟರೆಆಕೆ ತರುವ ಕೊಡದೊಂದಿಗಷ್ಟೇಹೇಗೋ ಬೆಳೆದದ್ದು ನಂಟು. ಅದೆಂತಹ ಆತುರ ಬಿಂದಿಗೆಗೆಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾಹಾಗೇ ಇಳಿಬಿಡುವ ಹೊತ್ತಿಗೆ ಕೈಯ ಹಿಡಿತವನ್ನೇ ಸಡಿಲಿಸಿರೊಯ್ಯನೆ ಡುಬುಕಿ ಹೊಡೆದಾಗಕೊಡ ಸೇರಿ ಜಗತ್ತು ನೋಡುವಕಾತರಕ್ಕೆ ಬಾವಿಯ ಮೈ ತುಂಬಾಅಲೆ. ಅನ್ನಕ್ಕೆ ಸಾಂಬಾರಿಗೆ ಕಾಫಿಗೆಚಹಕ್ಕೆ ನೀರು ಸದ್ದಿಲ್ಲದೇಕಲಬೆರಕೆಯಾಗುವ ಸಂಕಟಕ್ಕೆಕುದಿ ಮತ್ತಷ್ಟು ಹೆಚ್ಚುತ್ತಿದೆ. ಖಾಲಿಯಾಗುವ ಖುಷಿಗೆಕೊಡ ಇಂಚಿಂಚೇ ಮೈ ಅಲಗಿಸಿ ಕೊಳ್ಳುತ್ತಿದೆಇತ್ತ ಬಾವಿ ಹೆಜ್ಜೆ ಸಪ್ಪಳಕ್ಕೆಕಿವಿ ತಾಗಿಸಿ ಕುಳಿತಿದೆ. ಈ ಕೊಡದ ನೀರುಗಿಡದ ಬುಡಕ್ಕೋಅಡುಗೆ ಮನೆಯ ವ್ಯಂಜನಕ್ಕೋ?ಕುತೂಹಲ ತಣಿದ ದಿನಕಣ್ಣು ಹೊಳಪು ಕಳೆದುಕೊಂಡುಬಿಡುತ್ತದೆ. ಮತ್ತೆ ಕೊಡ ತುಂಬಿಕೊಳ್ಳುತ್ತಿದೆಡುಬು ಡುಬು ಎದೆಬಡಿಯುವಒಡಲಾಳದ ಸದ್ದುಎಲ್ಲಿಯದ್ದು .? ಬಿಂದಿಗೆಯದ್ದಾ..?ಬಾವಿಯದ್ದಾ..? ಅರೆ!ನನ್ನೆದೆಯೇಕೆ ಹೀಗೆಬಡಿದುಕೊಳ್ಳುತ್ತಿದೆ ಈ ಹೊತ್ತು . ************************** A stone lined well Digging and digging deep downFound the elixir of life,Not to make it waggleA stone lined well was built. Other than a piece of skyLeft for the direct sight,Got attached to a pitcher,Brought by her How hurried this pitcher is,When let to climb down,With a tightening rope around the neck,Loosening the grip, dives deep within. Then with the eagerness to see,The world through this pitcher,The well tremblesWith waves all around. When used quietly to makerice,curry,coffee or tea,The agony of being tainted,boils the water up. The pitcher is moving inch by inchWith the joy of getting emptied.Here the well is all ears,Eagerly waiting for,The rustling by the steps. Whether this pitcher willWater a plantOr a dish in the kitchen.?The moment this query gets quenchedThe eyes may loose the shine. The pitcher is getting filled again,From where does thisDub dub sound, thumping the heartdeep within, is coming?From the pitcher or the well ? Hey,why my heart is beatingSo much at this hour… ********************************************

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ನೆನಪುಗಳ ಸುತ್ತ” ರಿತೇಶ್ ಕಿರಣ್ ಕಾಟುಕುಕ್ಕೆ ಅಂದು..,ನನ್ನಪ್ಪ ಸೋರುವಮುಳಿ ಮಾಡಿನೆಡೆಗೆದೃಷ್ಟಿ ನೆಟ್ಟಿದ್ದ.,ನಾವೋ…..ಅಂಗಳದ ಬದಿಯಲ್ಲೋಹರಿವ ತೊರೆಯ ಬದಿಯಲ್ಲೋಉದುರುವ ಮಳೆಹನಿಗಳ ಜೊತೆಹರಿವ ನೀರಿನ ಜೊತೆಮೈ ಮರೆಯುತ್ತಿದ್ದೆವು…… ಅಮ್ಮನೂ..,ಅಷ್ಟೇ., ನೀರು ಹೀರಿದಸೌದೆಯ ಒಲೆಗಿರಿಸಿಕಣ್ಣು ಕೆಂಪಗಾಗಿಸಿಊದಿಸಿಕೊಂಡಿದ್ದಳು..,ಮೂರು ಹೊತ್ತುಹೊಟ್ಟೆ ತಣಿಯದಿದ್ದರೂಒಂದು ಹೊತ್ತಿಗಾದರೂಪಾತ್ರೆ ಪಗಡೆಗಳಸದ್ದಾಗುತಿತ್ತುಹೊಟ್ಟೆ ಸಮಾಧಾನಿಸುತ್ತಿತ್ತು……, ಹರಿದ.,ಅರಿವೆಗೆ ತೇಪೆ ಹಾಕಿಸಿವರುಷವಿಡಿ ಕಳೆದರೂಯಾವುದೇ ಸಂಕೋಚವಿರಲಿಲ್ಲಮನೆಯ ಒಳಗೂಹೊರಗಿನ ಜಗುಲಿಗೂ..,ದಾಟಿದರೆ ಅಂಗಳಕ್ಕೆ ಮಾತ್ರನಮ್ಮ ಮಾತುಗಳು ಕೇಳಿಸುತಿತ್ತು.ನಮ್ಮ ಕನಸುಗಳೂ ಅಷ್ಟೇ..!ಅಷ್ಟಕ್ಕೇ ಸೀಮಿತವೋ..?ತಿಳಿಯೆ ನಾ………., ಅಪ್ಪ ದಿನಾ.,ಮಳೆಯಲ್ಲಿ ತೋಯುತ್ತಿದ್ದಸಂಜೆಗೆ ನಮ್ಮಆತ್ಮೀಯ ಗೆಳೆಯನಾಗುತ್ತಿದ್ದ.ಒದ್ದೆಯಾದ ವಸ್ತ್ರದಅರಿವೂ ಅವನಿಗಿಲ್ಲ.,ಚಳಿಯ ಅನುಭವವೂ ಅವನಿಗಿಲ್ಲ.,ನಮ್ಮ ಮುಖವ ನೋಡಿಎಲ್ಲವ ಮರೆಯುತ್ತಿದ್ದಮುಖವರಳಿಸಿ ನಗುತ್ತಿದ್ದ..‌.‌‌‌….., ಮನೆಯಮಾಡಿನ ಮೇಲೆಹೊಗೆ ಸುರುಳಿಯಾಡುವಾಗಇತ್ತ ನೇಸರನು ಓಡಿದ್ದ..,ಹೊರಗೆನಾಯಿ ಬೊಗಳಿದರೂಒಳಗೆಬೆಕ್ಕು ಸುತ್ತಿ ಸುತ್ತಿ ಬರುವಾಗಲೂಅಮ್ಮ ಮಾತ್ರಒಲೆಯ ಬಾಯಿಗೆ ಪಹರೆಯಾಗಿದ್ದಳು.!ಇಂದು..,ಅದೆಲ್ಲ ನೆನಪುಗಳು ಮಾತ್ರ………., ಹೊರಗೆಮೈ ಕೈಗೆ ಮಣ್ಣಮೆತ್ತಿಸಿಕೊಂಡ ಅಪ್ಪ.,ಒಳಗೆ ಬೂದಿಮೆತ್ತಿಸಿಕೊಂಡ ಅಮ್ಮ.,ಜ್ಞಾನ ದೇಗುಲದಬಾಗಿಲ ಕಾಣದಿದ್ದರೂ..,ಅನ್ನ.., ನೀರಿನಅರಿವೂ ಇತ್ತುಮಣ್ಣ ವಾಸನೆಯೂಮೈಗಂಟಿಯೇ ಇತ್ತು………. *************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೂರು ಸಂಜೆ ಫಾಲ್ಗುಣ ಗೌಡ ಅಚವೆ. ಮೋತಿ ಗುಡ್ಡದ ಬಂಡೆಗಳ ಮೇಲೆಕುಳಿತ ಮೋಡಗಳು ಎಂಥದೋಪಿಸುಮಾತನಾಡುತ್ತ ಅಲ್ಲೇ ಕೆಳಗೆಹೈಗರ ಹುಡುಗಿಯರು ಅಬ್ಬಿಯ ನೀರು ಬೆರೆಸಿ ಮೀಯುವ ಚಂದನೋಡುತ್ತಿವೆ. ಸದಾ ವಿಪ್ರಲಂಭ ಶ್ರಂಗಾರದ ಕೊಮಣೆ ಮಾಡುತ್ತಮಂಗಟ್ಟೆ ಹಕ್ಕಿಗಳು ಆಕಾಶದೆತ್ತರಕ್ಕೆ ಹಾರುತ್ತ ಹಾರುತ್ತ ಹನಿಮೂನು ಮೂಡಿನಲ್ಲಿ ಸುಖದ ಮೂರೇ ಗೇಣು ಬಾಕಿ. ಗುಮ್ಲೆಗದ್ದೆಯಿಂದಿಳಿದು ಬರುವ ವಿಭೂತಿಯಾಣದ ಭೈರವೇಶ್ವರನ ಬೂದಿ ತೊಳೆದು ರಾಶಿ ರಾಶಿ ಕಟ್ಟಿಗೆಗಳ ಮೇಲೇರಿ ಗಂಗಾವಳಿಯ ಸಮುದ್ರದಲಿಮೀಯುತ್ತದೆ. ಅಶ್ಲೇಷಾ ಮಳೆಗೆ ಹುತ್ತದಿಂದೆದ್ದಅಣಬೆಗಳ ಕೊಡೆ ಹಿಡಿದು ಇರುವೆಗಳು ಮೊಟ್ಟೆಯನ್ನು ಹೊಟ್ಟೆಯಡಿ ಹೊತ್ತು ಹೊಸ ಮನೆಗೆ ಶಿಪ್ಟಾಗುತ್ತಿವೆ. ಅಟ್ಟದ ಗೋಣಿಚೀಲದ ಮೇಲೆ ವಾರ್ಷಿಕೋತ್ಸವ ಆಚರಿಸಿಕೊಂಡ ಬೆಕ್ಕಿನ ಸಂಸಾರ ಸೀಮಂತ ಕಾರ್ಯಕ್ರಮದ ತಯಾರಿಯಲ್ಲಿವೆ. ಒಂದೇ ಸವನೆ ಹೊಯ್ಯುವ ಜಡಿಮಳೆಯ ಹೊಳೆಗೆ ತೇಲಿ ಬಂದ ಹೈಗರ ತೋಟದ ತೆಂಗಿನ ಕಾಯಿಗಳು ನೀರಕುಳಿ ಸಣಕೂಸನ ಪಾಲಾಗಿವೆ. ಮಣಕನ ಗುಂಡಿಯಲ್ಲಿ ಗಾಳ ಹಾಕುವುದುಸಂಕ ಕಟ್ಟುವುದುಹಳ್ಳ ಹಾಯುವುದುಹಾಲ್ಟಿಂಗ್ ಬಸ್ಸು ಹಳ್ಳದಚ್ಚಿಗೆ ನಿಲ್ಲುವುದರ ಜೊತೆಪುಲೋಟು ಮನೆಯಿಂದ ಒಣ ಜಬ್ಬಿನ ಸಾರಿನ ಕಮ್ಮಗಿನ ಅದಮ್ಯ ಗಂಧ ಒಂದೇ ಸವನೆಮೂಗಿಗೆ ಬಡಿಯುತ್ತಿದೆ. ಮಕ್ಕಳು ಮನೆಯ ಮೂಲೆಯಲ್ಲೆಲ್ಲೋ ಕೂಡಿಟ್ಟ ಗೇರುಬೀಜದ ಸುಟ್ಟ ಸೊನೆಯ ಘಾಟುಇಡೀ ಊರಿಗೆ ಬಿತ್ತರಿಸಿದೆ. ಮಳೆ ಮಾತ್ರ ಹೊಯ್ಯುತ್ತಲೇ ಇದೆಆಕಾಶಕ್ಕೆ ಓಝೋನಿನಂತ ತೂತು ಬಿದ್ದಹಾಗೆ! ************************************

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರತ್ನರಾಯಮಲ್ಲ ಆ ಕಡೆ ಭಜನೆಯ ನಾದವು ಜಿನುಗುತಿದೆಈ ಕಡೆ ಆಕ್ರಂದನ ಮುಗಿಲು ಮುಟ್ಟುತಿದೆ ಕಣ್ಣೀರ ಕೋಡಿ ಹರಿಯುತಿದೆ ಸದ್ದಿಲ್ಲದೆ ಇಲ್ಲಿಅಲ್ಲಿ ಹೆಂಡದ ನಶೆ ನೆಲವು ಚುಂಬಿಸುತಿದೆ ಸಂಬಂಧಗಳು ಗೋಳಾಡುತಿವೆ ನೆನೆ ನೆನೆದುಹಲಗೆಯ ಸದ್ದಿಗೆ ಹೆಜ್ಜೆಯು ಕುಣಿಯುತಿದೆ ಗುಲಾಬಿ ಹೂ ಕಸವಾಗಿ ಬಿದ್ದಿದೆ ಬೀದಿಯಲ್ಲಿಗಡಿಯಾರದ ಮುಳ್ಳು ಹೆಣವನ್ನು ಎತ್ತುತಿದೆ ದರುಶನಕ್ಕೆಂದು ಜನ ಸಾಲುಗಟ್ಟಿಹರು ಮಲ್ಲಿಕುಣಿಯ ಮುಖ ಕಾಣದೆ ಗುಂಪು ಚದುರುತಿದೆ **********************

ಗಝಲ್ Read Post »

ಅನುವಾದ

ಅನುವಾದ ಸಂಗಾತಿ

ಒಂದೇ ಬಾಗಿಲು ಕನ್ನಡ ಮೂಲ: – ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಇಂಗ್ಲೀಷಿಗೆ:- ಡಾ.ಎನ್. ತಿರುಮಲೇಶ್ ಭಟ್ ಒಂದೇ ಬಾಗಿಲು ಕತ್ತಲು ಕವಿದಿದೆನನ್ನ ಬಾಳಮನೆಗೆ ಮಾತ್ರಒಂದೇ ಬಾಗಿಲುಒಳ ಬರುವುದೂ ಅಲ್ಲಿಂದಲೇಹೊರ ಹೋಗುವುದೂ ಅಲ್ಲಿಂದಲೇ… ಅವನು ಕರೆಯುತ್ತಿದ್ದಾನೆಅವನ ಮನೆಗೆ ಗೋಡೆ ಬಾಗಿಲುಗಳೇ ಇಲ್ಲನನ್ನ ಬಾಳಮನೆಗೆ ಮಾತ್ರ ಒಂದೇ ಬಾಗಿಲುಈ ಇಹ ಹೇಗೆ ನಿಂತಿದೆಬೆಳಕು ಬಾಗಿಲಿಗೆ ಅಡ್ಡಲಾಗಿ !ಒಳಗೆ ಕತ್ತಲು ಕವಿದಿದೆ. ಅವನೋ ಕಿಂಡಿಯಲೇಕೈತೂರಿ ಕರೆಯುತ್ತಿದ್ದಾನೆಹೊರಗೆ ಬಾ ಬಾನನ್ನ ಮಗುವೇ ಎಂದುಹೇಗೆ ಬರಲಿ ಹೇಳುಈ ಇಹದ ಕಣ್ಣು ತಪ್ಪಿಸಿಕೊಂಡು ? ಬೆಳಕು ಬಾಗಿಲ ಹೊಸ್ತಿಲಲೇಹೇಗೆ ಅಡ್ಡವಾಗಿ ನಿಂತಿದೆಹರಿವಾಣದ ತುಂಬ ಚಿನ್ನದ ಮೊಟ್ಟೆಗಳಹರಡಿಕೊಂಡು ಬಸುರಿ ಹೇಂಟೆಯAತೆಕಾಲಬುಡದ ಮಣ್ಣನ್ನೇ ಕೆದರಿಕೊಳ್ಳುತ್ತಈ ಇಹದ ಬಾಳು !ಕವಿಗೆ ಕಾಣದಂತೆ ಬೆಳಕಿನ ಆ ಲೋಕಕವಿದ ಕತ್ತಲಲ್ಲಿ… ಬೆಳಕಿಗಡ್ಡಇರುಳು ಚಂದ್ರನಿಗೂ ಅಡ್ಡಓಹ್ !ಬೆಳಕು ಕಿಂಡಿಯಲಿಅವನದೇ ಕೈಒಡೆದು ಬಿಡು ಗೋಡೆಗಳನನಗಾಗಿ…ಕತ್ತಲಿಗೆ ಹೊಂದಿಕೊAಡ ನನ್ನ ಕಂಗಳಬೆಳಕಿಗಾಗಿಹೃದಯದೀಪವ ಹಚ್ಚಿಡಲೇ ?ಎಸೆ ಈ ಕಿಂಡಿಯಲೇಬೆಳಕು ಕಿರಣಗಳಹಚ್ಚಿಕೊಳ್ಳಬೇಕಿದೆ ಈ ಹಸಿಮೈಗೆ ಬೆಳಕಮನಸ್ಸು ದೀಪವಾಗಲು ಓಹ್ !ನಾನೀಗ ಒಂದು ಬೆಂಕಿಯದ್ದೇ ಪೆಟ್ಟಿಗೆಎಸೆ ಮದ್ದು ಪೇಟಗಳ ಬೆಂಕಿಕಡ್ಡಿಗಳ ಒಳಗೆಬೆಂಕಿಯಿಡಬೇಕುಈ ಇಹಕ್ಕೂಈ ಕತ್ತಲಿಗೂ… ******************************* A Single Door Darkness has descended,Only around my life’s abode:Just a single door there is for my houseTo get in and to exit. He is beckoning to me,His house has no walls nor door.Mylife’s abode has only a single door.This earth stands betweenThe door and the lightThere is darkness within. He is beckoning to meWith his hand pushed through the windowHe calls me tenderlyCome out, come out, my child,But how do I leave,Escaping the eyes of the world?At the very threshold of the door,Meant for the light to enterLike a full-term pregnant lady-henCarrying a cradle of golden eggs aplenty,Scratching the soil with the claws at her feetStands this earthly life. That world of light is out of the poet’s sightIt is covered with darkness, hiding all lightHiding even the moon at night.Oh!Through the small windowIs his hand beckoning to me,‘Break the walls’ For me to see the lightWith eyes adjusted to darknessFor the sake of lightI shall light this lamp ofmy heartThrow through this windowRays of lightI have to smear light on this raw bodyTo light my heartOh!I am now a box of lightThrow within sticks coated with the paste ofexplosive powderI should set ablazeThis earthThis darkness. ******************************************* ಡಾ.ಎನ್. ತಿರುಮಲೇಶ್ ಭಟ್

ಅನುವಾದ ಸಂಗಾತಿ Read Post »

You cannot copy content of this page

Scroll to Top