ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಸಾಹಿತ್ಯದ ಒಳಸುಳಿಗಳ ಜೊತೆ ಒಂದು ಸುತ್ತು!! ಸುಜಾತಾ ಲಕ್ಮನೆ ಅರೆಚಣವೂಅತ್ತಿತ್ತ ಅಲುಗದೇಮಗ್ಗುಲಲ್ಲೇ ಕೂತು ಕಚಗುಳಿಯಿಟ್ಟು ನಗಿಸುವಮನದನ್ನೆಯಂತೆ ಇದು –“ಸಾಮಾಜಿಕ ಜಾಲತಾಣ” !ನಾವೂ ನೀವೂ ಎಲ್ಲರೂ ಜಾಲಿಯಾಗಿ ಜಾಲಾಡಿಈಜಾಡುವ ಸುಂದರ ತಾಣ!ಮೆರೆಸಬಹುದಿಲ್ಲಿಸ್ವ-ಪ್ರತಿಷ್ಠೆ, ಸ್ವ-ಪ್ರಶಂಸೆ, ಬೊಗಳೆ ಒಂದಷ್ಟು, ವೈಯಕ್ತಿಕ ಬಿನ್ನಾಣ..!ಅಷ್ಟಷ್ಟು ಸಾಧನೆ ಸನ್ಮಾನಗಳ ಲಿಸ್ಟಿನ ಅನಾವರಣ!ಹಾಗೋ ಹೀಗೋ ಗೀಚಿ, ಬೀಗಿ,, ಎದೆ ಸೆಟೆಸಿಮೈ ಮನ ಮ(ಮೆ)ರೆಯಲು ಇದೊಂದು ಚಂದದ ನಿಲ್ದಾಣ!ಬರೆದದು ಜೊಳ್ಳೋ, ಸುಳ್ಳೋ, ಕಾವ್ಯವೋ, ವಾಚ್ಯವೋ,ನಿಯಮಬದ್ಧ ಗಜ಼ಲ್ಲೋ, ಅಪಭ್ರಂಶವೋ,ಸ್ವಂತವೋ, ಸಂಗತವೋ, ಅನೂಹ್ಯವೋಒಟ್ಟಾರೆ–ದೊಪ್ಪೆಂದು ರಾಶಿ ರಾಶಿ ಸುರುವಿಸಾಕಷ್ಟು ಲೈಕ್ ಗಿಟ್ಟಿಸಿದರೆಅಲ್ಲಿಗೆ ಸಾರ್ಥಕ್ಯ ಆ ದಿನ!!“ನೀನು ನನಗೆ ಲೈಕ್ ಕೊಡು, ನಾನೂ ಕೊಡುವೆ”“ಮತ್ತೆ ನೋಡು- ವಿರುದ್ಧ ಕಮೆಂಟ್ ಮಾಡಬೇಡ” ಒಳ ಒಪ್ಪಂದ!!ತರಾತುರಿಯಲಿ ಅಂತೂ ಗೀಚಿಹೊಗಳಿಕೆಗಷ್ಟೇ ಹಾತೊರೆದುಕಸದ ತೊಪ್ಪೆಯಂತೆ ಎಲ್ಲ ತಂದು ಸುರಿದಂತೆಲ್ಲಕೆಲವಕ್ಕೆ ಲೈಕುಗಳ ಜಡಿಮಳೆ;ಇನ್ನು ಕೆಲವಕ್ಕೆ ಜಡಿದು ಜಡಿದಂತೆ ಕೊನೆಯ ಮೊಳೆ!!ಹೆಂಗಸರು ಹೆತ್ತ ಕವನಗಳಲ್ಲಿ ಮೈ ಕಾಯಿಸಿಕೊಳ್ಳುವಜೊಲ್ಲುಬುರುಕ ಪುರುಷ ಸಿಂಹಗಳು!ಇವರು ಫ್ರೀಯಾಗಿ ಕೊಡುವ ಗುಲಾಬಿ ಗುಚ್ಛ,ತುಟಿಯಂಚಲೊತ್ತಿದ ಮುತ್ತು;ಕಣ್ಣಲ್ಲೆರಡು ಲವ್ ಸಿಂಬಾಲ್ಗಳ ಇಮೋಜಿಗಳಲಿ ಕಣ್ಣರಳಿಸಿಚಪ್ಪರಿಸಿ ಬವಳಿ ಬಂದು ಕಳೆದುಹೋಗುತ್ತಾರೆಕವಯಿತ್ರಿ ಲಲನಾ ಮಣಿಗಳು!! ಕೊಂಡಾಟ ಅಟ್ಟಕ್ಕೇರಿದಂತೆಲ್ಲಾಜಿರಲೆ ಮೀಸೆಯ ಕೆಳಗಿನ ತನ್ನ ತುಟಿಗಳ ಮೇಲೆ ನಗು ತೇಲಿಸಿತನ್ನೊಳಗೇ ಖುಷಿ ಪಟ್ಟು ಬೀಗುವವನಿಗೆತಾನು ಬರೆದುದೇ ಪರಮ ಶ್ರೇಷ್ಠವೆಂಬ ಭಾವ!!ತಪ್ಪು ಒಪ್ಪುಗಳ ಪರಾಮರ್ಶೆಯ ಉಸಾಬರಿಯೇ ಸಲ್ಲದೆಂದುಆಗಸಕೆ ಮುಖ ಮಾಡಿದ ಹೆಬ್ಬೆರಳ ಚಿತ್ರ ಒತ್ತಿ ಓದುಗಜೈ ಕಾರ ಹಾಕುತ್ತಾನೆ ನೋಡ!!“ಕೇಳಿ ಕೇಳಿ” ಲೈಕ್ ಒತ್ತಿಸಿಕೊಳ್ಳುವವರ ಪರಿಪಾಟಲಂತೂ“ಅಯ್ಯೋ ಪಾಪ” ಏನಕ್ಕೂ ಬೇಡ!! ಇಲ್ಲಿ ಮಣಗಟ್ಟಲೆ ಪ್ರಶಂಸೆಗಳ ಹೊಳೆ;ನಾಲ್ಕಾರು ಡಜನ್ ದ್ವೇಷ, ಅರ್ಧ ಕೆಜಿ ಹತಾಶೆ,ಟನ್ ಗಟ್ಟಲೆ ಹೆಸರು ಮಾಡುವ ಹಪಹಪಿ;ಗ್ರಾಂಗಟ್ಟಲೆ ಕೆಸರೆರಚಾಟ,ತಮಾಷೆಯೋಪಾದಿಯಲಿ ಎದೆಗೇ ಒದೆದಂತಿರುವ ತೇಜೋವಧೆ!ಚೂರು ಪಾರು ಒಳಗೊಳಗೇ ಗುಂಪುಗಾರಿಕೆಮೀಟರ್ ಗಟ್ಟಲೆ ಸಣ್ಣತನಗಳುಲೀಟರ್ ಗಟ್ಟಲೆ ಒಳಸುಳಿಗಳು!!ಮೂಲೆ ಮೂಲೆಯಿಂದ ಹಿನ್ನೆಲೆಯಲಿ ಪಿಸುಗುಡುವ ಕಿಸುರುಮನಸಿನ ಒಳಧ್ವನಿಗಳು!!ಸಂಕಲನ ತಂದವರದೇ ಒಂದು ಪಟಾಲಂತರದೇ ಇರುವವರು ಅಕಟಕಟಾ ಅಕ್ಷರಶಃ ಅಸ್ಪೃಶ್ಯರು!!ಪ್ರಶಸ್ತಿ, ಫಲಕ, ಹಾರ ತುರಾಯಿ, ಲೋಕಾರ್ಪಣೆಯಾದ ಪುಸ್ತಕಗಳ ಲೆಕ್ಕ!ಕ್ವಾಲಿಟಿಗಿಂತ ಕ್ವಾಂಟಿಟಿಗೇ ಪ್ರಾಶಸ್ತ್ಯ!!ಪ್ರಬುದ್ಧ ನೂರು ಗಜಲ್-ಕವನ ಬರೆದವನಿಗಿಂತ ಹಾಳೋ ಮೂಳೋಸಾವಿರ ಸಾವಿರ ಬರೆದವನೇ “ಅಂತೆ” ಗ್ರೇಟು!!ಹಾಗಂತ ಸಾಹಿತ್ಯದ ಪಡಸಾಲೆಯಲಿ ನೇತುಹಾಕುವ ನೇಮ್ ಪ್ಲೇಟು!!ಆಸ್ತಿ, ಅಂತಸ್ತುಗಳ ಪಟ್ಟಿಯೂ ಅಕ್ಕ ಪಕ್ಕ!!ಸಾರಸ್ವತ ಲೋಕದ ತುಂಬ ಬರಿ ರೇಷ್ಮೆ ಶಾಲು ಹೊದ್ದ ಟೊಳ್ಳುಬರಹಗಳ ಸದ್ದು!!ಮುತ್ತು ರತ್ನದಂಥ ಸಾಹಿತ್ಯವೆಲ್ಲ ಮೂಲೆ ಸೇರಿದವೇ ಬೇಸರದಲಿ ಎದ್ದು ಬಿದ್ದು!?ಕೈ ಚೀಲ ಹಿಡಿದು ಹಲ್ಗಿಂಜಬೇಕುವೇದಿಕೆಯ ಮೇಲೂ ರಾರಾಜಿಸಲು!!“ಅಕ್ಷರ ಮಾಧ್ಯಮಗಳಲೂ” ಇಂಥದಕ್ಕೇ ಕುಮ್ಮಕ್ಕುಗೆಲ್ಲಬೇಕೇ- ಮಾಡಲೇಬೇಕು ಅಲ್ಲಿಯೂ ಗಿಮಿಕ್ಕು!! ಎಷ್ಟು ಬರೆದರೇನು ಬಿಡಿ-ಈಗ ಮಾಮರದಲ್ಲಿ ಕೋಗಿಲೆಗಳು ಕೂಗುವುದಿಲ್ಲ!!ಕಾಣಿಸದೇ…ಬೋಳು ಮರಕೆ ಜೋತು ಬೀಳುವ ಬಾವಲಿಗಳೇಮೆರೆಯುತಿವೆಯಲ್ಲ!? ***********************************

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಕನ್ನಡದ ಇಲಿ ವಸುಂಧರಾ ಕದಲೂರು ಅಮ್ಮನ ಕೈ ಹಿಡಿದು ಹಾಲಿನ ಬೂತಿನ ಬಳಿ ನಿಂತಿದ್ದ ಕಿಶೋರನಿಗೆ ಪಕ್ಕದ ಮೋರಿಯಿಂದ ಏನೋ ಚಲಿಸುತ್ತಿರುವುದು ಕಂಡಿತು.          ಅಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದವನೇ ಪುನಃ ಆ ಕಡೆಗೇ ನೋಡತೊಡಗಿದ. ಪುಳುಪುಳನೆ ಪುಳಕ್ಕೆಂದು ಬಿಲದಿಂದ ಹೊರಬಂದ ಇಲಿಯೊಂದು ಕಸದ ಡಬ್ಬದ  ಹೊರಗೆ ಚೆಲ್ಲಿದ್ದ ಹಾಲಿನ ಕವರ್ ಅನ್ನು ಸ್ವಲ್ಪ ಎಳೆಯಿತು.       ಬರೀ ಟಾಮ್ ಅಂಡ್ ಜರ್ರಿ ಕಾರ್ಟೂನಿನಲ್ಲಿ ಇಲಿ ನೋಡಿ ಗೊತ್ತಿದ್ದ ಕಿಶೋರ ನಿಜವಾದ ಇಲಿ ನೋಡಿ ಪುಳಕಿತನಾಗಿ ಬಿಟ್ಟ. ‘ಮಮ್ಮೀ ಸೀ… ದೇರ್ ಇಸ್ ಅ ‍ರ‍್ಯಾಟ್…!’ ಜೋರಾಗಿ ಕೈ ಜಗ್ಗಿದ.      ಕೋವಿಡ್ ನ ಸಲುವಾಗಿ ಮುಂದಿನ ವಾರ ಪೂರ  ಲಾಕ್ ಡೌನ್ ಎಂದು ಅನೌನ್ಸ್ ಮಾಡಿದ್ದರಿಂದ ಗಡಿಬಿಡಿಯಿಂದ ಮನೆಗೆ ಅಗತ್ಯದ ಸಾಮಾನು – ಸರಂಜಾಮು, ಸೊಪ್ಪು-  ತರಕಾರಿ, ಬೇಳೆ, ಮಾತ್ರೆ ಇತ್ಯಾದಿ ಇತ್ಯಾದಿ ಕೊಳ್ಳುತ್ತಾ ಗಡಿಬಿಡಿಯಿಂದ ಕೆಲಸ ಮಾಡಿಕೊಂಡಿದ್ದ ಕಿಶೋರನ ಅಮ್ಮ ಸುನಂದಾ ಹಾಲಿನ ಬೂತಿನ ಉದ್ದ ಕ್ಯೂ ನಲ್ಲಿ ನಿಂತಿದ್ದರೂ ‘ಮತ್ತೇನು ಬೇಕಿದೆ?’ ಎಂದು ಒಂದೇ ಸಮನೆ ಮನಸ್ಸಿನಲ್ಲೇ ಪ್ರಶ್ನಮ ಕೇಳಿಕೊಳ್ಳುತ್ತಿದ್ದಳು.      ಕಿಶೋರ ಕೈ ಜಗ್ಗುತ್ತಿದ್ದಂತೇ, ವಾಸ್ತವಕ್ಕೆ ಬಂದವಳೇ ‘ಏನ್ ಪುಟ್ಟಾ?’ ಎಂದು ಮಗನ ಮುಖ ನೋಡಿದಳು.      ‘ ಮಮ್ಮಾ ದೇರ್ ಇಸ್ ಅ ‍‍‍ರ‍್ಯಾಟ್! ಇಟ್ ವಾಸ್ ಸೋ ಕ್ಯೂಟ್…. !’ ಎಂದು ತಾನು ಕಂಡದ್ದು ಎಷ್ಟು ಕ್ಯೂಟ್ ಎನ್ನುವ ವಿಚಾರವನ್ನು ಕಣ್ಣಿನಲ್ಲೇ ಬಿಂಬಿಸುತ್ತಾ ಅಷ್ಟೇ ಮೋಹಕವಾದ ಉದ್ವೇಗದಿಂದ ಹೇಳಿದನು.       ಸುನಂದಾ, ‘ಎಲ್ಲಿ ಕಂಡೆ? ನನಗೂ ತೋರ್ಸು’ ಮಗನ ಉತ್ಸಾಹಕ್ಕೆ ತನ್ನ ಬೆರಗನ್ನೂ ಸೇರಿಸುತ್ತಾ ಕೇಳಿದಳು.         ‘ದೇರ್, ದೇರ್, ಇನ್ ಸೈಡ್ ದ ಹೋಲ್ ಮಮ್ಮಾ…! ವೇಯ್ಟ್ ಇಟ್ ವಿಲ್ ಕಮ್ಸ್ ಔಟ್..’ ಎಂದು ಕಸದ ಬುಟ್ಟಿಯ ಪಕ್ಕದಲ್ಲಿದ ಮೋರಿಯ ಬಳಿಯಿದ್ದ ಸಣ್ಣ ಬಿಲದತ್ತ ಕೈ ತೋರಿದ.     ಅಷ್ಟರಲ್ಲಿ ಆ ಇಲಿ ಪುನಃ ತನ್ನ ಪುಟ್ಟ ಚೂಪು ಮುಖ ಹೊರ ಮಾಡಿ ಒಂದೆರಡು ಕ್ಷಣ ಅವಲೋಕಿಸಿ ಬುಳಕ್ಕನೆ ಒಳ ಹೋಗಿ ಪುಳಕ್ಕನೆ ಹೊರಬಂದು ಯಾರೋ ಮುಕ್ಕಾಲುವಾಸಿ ತಿಂದು ಎಸೆದು ಹೋಗಿದ್ದ ಬಿಸ್ಕೆಟ್ಟಿನ ತುಂಡನ್ನು ಕಚ್ಚಿಕೊಂಡು ಬಿಲ ಸೇರಿತು. ಅದರತ್ತಲೇ ಕೈ ತೋರುತ್ತಾ.., ‘ಸೋ ಫಾಸ್ಟ್ , ಸೋ ಕ್ವಿಕ್…!!  ಹೌ ಕೆನ್ ಇಟ್ ಮೂವ್ಸ್  ಸೋ ಫಾಸ್ಟ್ ಮಮ್ಮಾ..?’ ಎಂದು ತಡೆರಹಿತನಾಗಿ ಕೇಳಿದನು.                   ಕಿಶೋರನ ಪ್ರಶ್ನೆಗಳಿಗೆ ಸುನಂದಾ ಉತ್ತರಿಸಲು ತೊಡಗಬೇಕು ಎನ್ನುವಾಗಲೇ ಅಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಬಣ್ಣದಲ್ಲಿ ಬರೆದ ಖಾಲಿ ಬಾಕ್ಸಿನಲ್ಲಿ ನಿಲ್ಲುವ ಸರದಿ ಅವಳಿಗೆ ಬಂದಿತು.         ಮಗುವಿನ ಕೈ ಹಿಡಿದು ಬಾಕ್ಸಿನೊಳಗೆ ಬಂದು ನಿಂತ ಸುನಂದಾ, ಗಲ್ಲದ ಮೇಲೆ ಜಾರಿದ್ದ ಮಗನ ಮಾಸ್ಕನ್ನು ಆತನ ಮೂಗು- ಬಾಯಿಯನ್ನು ಮುಚ್ಚುವಂತೆ ಸರಿಪಡಿಸಿದಳು.     ‘ಕಿಶೋರ್,  ನೀನು ಕೇಳೋ ಪ್ರಶ್ನೆಗೆಲ್ಲಾ ಉತ್ತರ ಹೇಳ್ತೀನಿ. ಆದ್ರೆ ನೀನು ಕನ್ನಡದಲ್ಲಿ ಮಾತನಾಡ್ಬೇಕು ಆಯ್ತಾ?’ ಎನ್ನುತ್ತಾ ‘ರ‍್ಯಾಟ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ ಹೇಳು’ ಎಂದಳು.     ‘ವಾಟ್ ಇಸ್ ರ‍್ಯಾಟ್ ಇನ್ ಕನ್ನಡ?!’ ಯೋಚನೆಯಲ್ಲಿ ಮಗ್ನನಾಗಿದ್ದ ಕಿಶೋರನು ‘ಪ್ಲೀಸ್ ಯೂಸ್ ದ ಸ್ಯಾನಿಟೈಸರ್ ಬಿಫೋರ್ ಎಂಟರಿಂಗ್ ದ ಶಾಪ್ ಮ್ಯಾಡಂ’ ಎಂದು ಹೇಳಿದ ಅಂಗಡಿಯವನ ಮಾತು ಕೇಳಿ ‘ರ‍್ಯಾಟ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ?’ ಅನ್ನೋದನ್ನು ಮರೆತು ಅಮ್ಮನನ್ನು ನೋಡಿದ.               **********

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ನದಿ ಈಗ ದಿಕ್ಕು ಬದಲಿಸಿದೆ ಸ್ಮಿತಾ ಅಮೃತರಾಜ್.ಸಂಪಾಜೆ. ಜುಳು ಜುಳೆಂದು ಹರಿಯುವನನ್ನೂರಿನ ತಿಳಿನೀರಿನ ನದಿಈಗ ಕೆನ್ನೀರ ಕಡಲು. ತಪ್ಪನ್ನೆಲ್ಲಾ ಒಪ್ಪಿಕೊಂಡಂತೆತೆಪ್ಪಗೆ ಹರಿಯುತ್ತಿದ್ದ ನದಿ.. ಒಣಗಿದೆದೆಯ ಮೇಲೆ ಮೊಗೆದುತಣಿಯುವಷ್ಟು ತೇವವನ್ನುನಮಗಾಗಿಯೇ ಕಾಪಿಡುತ್ತಿದ್ದ ನದಿ.. ಅಂಗಳದ ತುದಿಯವರೆಗೂ ಬಂದುಗಲಗಲಿಸಿ ನಕ್ಕು ನೇವರಿಸಿ ಹರಿಯುತ್ತಿದ್ದ ನದಿ.. ಹೌದು! ಇದುವೇ ನದಿಮೊನ್ನೆ ಹುಚ್ಚೆದ್ದು ಕೆರಳಿದ್ದಕ್ಕೆನೆಲದ ಎದೆಯೊಡೆದು ಸೆಲೆ ಸಿಡಿದುಸಾವಿರ ನದಿಯಾಗಿ ಒಸರಿ ಹರಿದವುರಕ್ತ ಕಣ್ಣೀರ ಕೋಡಿ. ದಿಕ್ಕಾಗಿದ್ದ ನದಿ ತಾನೇದಿಕ್ಕು ಬದಲಿಸಿ ಕೆಂಪಗೆ ಹರಿಯುವಾಗನಾನೋ ದಿಕ್ಕು ಕಾಣದೆ ದಿಕ್ಕೆಟ್ಟುನದಿ ಹರಿಯುವ ದಿಕ್ಕಿಗೆ ಮುಖ ಮಾಡುವುದನಿಲ್ಲಿಸಿದ್ದೇನೆ. ಈಗ ನದಿ ತಿಳಿಯಾಗಿದೆಮುಖ ನೋಡಿಕೊಳ್ಳಬಹುದು ಎನ್ನುತ್ತಾರೆಮುಖವಾಡ ಹಾಕಲು ನದಿಗೂ ಸಾಧ್ಯವಾ..?ನನಗೆ ದಿಗಿಲಾಗುತ್ತಿದೆ. ************************************

ಕಾವ್ಯಯಾನ Read Post »

ಇತರೆ

ನನ್ನಿಷ್ಟದ ಕವಿತೆ

ನನ್ನಿಷ್ಟದ ಕವಿತೆ ಮೀನಕಣ್ಣಿನ ಸೀರೆ ಲಲಿತಾ ಸಿದ್ಧಬಸವಯ್ಯಾ.               –  ಮೀನಕಣ್ಣಿನ ಸೀರೆ ಈ ಅಪರೂಪ ಸುಂದರಿಗೆ ಸೀರೆಯ ಬಗ್ಗೆ ಎಂಥ ಮುತುವರ್ಜಿ ಎಷ್ಟೇ ಆಗಲಿ ರಾಜಕುಮಾರಿ ಅವಳು ಒಮ್ಮೆ ಹಾಗೆ ಸುತ್ತಿಕೊಂಡು ಮೈಕಾಂತಿಗೆ ಸೋಕಿಸಿ ಬಿಸಾಡಿದ ಹೊಚ್ಚ ಹೊಸ ಸೀರೆಗಳನ್ನೇ ಉಟ್ಟು ಬೆಳೆದ ನೂರಾರು ದಾಸಿಯರ ನಡುವೆ ಒಡ್ಡೋಲಗ ನಡೆಸಿದವಳು ಸ್ವಯಂವರಕ್ಕೆ ಬರುವ ಮೊದಲು ಸೀರೆಗಳ ಆಯ್ದಾದು ಅದುಬೇಡಇದುಬೇಡ ಬೇಡದ ಗುಪ್ಪೆಗಳ ಬೆಟ್ಟವೇತಯಾರು ಕೊನೆಗೆ ಹತ್ತುಮಗ್ಗಗಳ ನಿಂತನಿಲುವಲ್ಲೇ ಹೂಡಿಸಿ ಅವಳ ಕಣ್ಣೆದುರಲ್ಲೇ ಅಂಚು ಸೆರಗುಗಳ ಸಂಯೋಜಿಸಿ ರಾತ್ರೋರಾತ್ರಿ ನೆಯ್ಯಿಸಿದ ಮೀನು ಕಿವುರಿಗಿಂತಲೂ ನವುರಾದ ರೇಸಿಮೆಗೆ ಮೀನ ಕಣ್ಣಂತಕುಸುರಿ ಕೆಲಸ ಉಟ್ಟು ಬಂದಳೋ ಬಂದಳೋ ಇಡೀ ಗಂಡಸಕುಲವೇ ತಿರುಗಿ ನೋಡುವಂತೆ ನಿಂದಳೋ ನಿಂದಳೋ ನಡುಬಳಕನ್ನು ಗತ್ತಲ್ಲೇ ಸ್ಥಿರಗೊಳಿಸಿ ಏಕಾಗ್ನಿಯಂತೆ ಅಂದೇ ತೀರ್ಮಾನಿಸಿಬಿಟ್ಟ ಅವನು ಇಂಥವಳನ್ನಾಳುವದು ನನ್ನಯೋಗ್ಯತೆಗೆ ಮೀರಿದ್ದು ಏನಿದ್ದರೂ ಕಾಲುಗಳ ಬಳಿ ಕುಳಿತು ಬೇಡಬಹುದಷ್ಟೇ ಅವಳಪ್ಪಣೆಯ ಅವಳೊಳು ಹೋಗಲು ಅಷ್ಟಕ್ಕೂ ಆಸ್ಪದದಕ್ಕಲಿಲ್ಲ ಅವನಿಗೆ, ಬೇಡಹೋಗಲಿ ವೀರಾಧಿ ವೀರಅವರಣ್ಣನಿಗೂ ಪಿಶಾಚನೀಚನ ನೈಚ್ಯಾನುಸಂಧಾನ ಕೊನೆಗೂ ಆಸೆ ತೀರಿಸಿಕೊಂಡಿದ್ದು ಸಭೆಯಲ್ಲಿ ಸೆರಗೆಳೆದು *********************** ಕವಿತೆಯ ಶೀರ್ಷಿಕೆಯೇ ಮೊದಲ ಸೆಳೆತ,ಲವ್ ಅಟ್ ಫಸ್ಟ ಸೈಟ್‌ಅನ್ನೋ ಹಾಗೆ. ಬಹುತೇಕಎಲ್ಲ ಹೆಣ್ಣುಮಕ್ಕಳ ಸಹಜಗುಣವೋ ಏನೋ “ಸೀರೆ”ಎಂದಾಕ್ಷಣ ಕಿವಿನಿಮಿರುವುದು,ಕಣ್ಣರಳುವದು.ಕಪಾಟಿನ ತುಂಬ ಸೀರೆಗಳಿದ್ದರೂ ಅದೇನೋ ಮೋಹ ಹೊಸ ಟ್ರೆಂಡ್ ಸೀರೆ ಬಂತೆಂದರೆ ಈ ಥರದ್ದು ನನ್ನಹತ್ರಇಲ್ಲ ,ಈ ಬಣ್ಣಕ್ಕೆ ಆ  ಬಣ್ಣದಅಂಚಿನ ಕಾಂಬಿನೇಷನ್‌ ಚೆಂದವಿದೆಯೆಂದು ಮತ್ತೆ ಕೊಂಡುಕೊಳ್ಳುತ್ತೇವೆ. ಹೀಗೆ ಅಂದುಕೊಳ್ಳುವದರಲ್ಲಿ ತಪ್ಪೇನಿಲ್ಲ ಅನಾದಿಕಾಲದಿಂದ ಇದು ನಡೆದುಬಂದಿದೆಎನ್ನುತ್ತಾರೆ ಹಿರಿಯ ಸಾಹಿತಿ ಲಲಿತಾ ಸಿದ್ಧಬಸವಯ್ಯಾ.  ಸದ್ಯ ಸೀರೆ ಆಯ್ಕೆಯಲ್ಲಾದರೂ ಇಚ್ಛೆಯಂತೆ ಆರಿಸಿಕೊಳ್ಳಬಹುದು ! ಕವಯತ್ರಿ ಲಲಿತಾ ಸಿದ್ಧಬಸವಯ್ಯಾಅವರು ಮೀನಕಣ್ಣಿನ ಸೀರೆಯ ಮೂಲಕ ಅದ್ಭುತವಾಗಿ ಸ್ತಿç ಸಂವೇದನೆಯನ್ನು ಹಿಡಿದಿಟ್ಟಿದ್ದಾರೆ. ಮೀನ ಕಣ್ಣುಅನ್ನುವ ಶಬ್ದ ತುಂಬ ವಿಶೇಷವಾಗಿ ಅರ್ಥೈಸುತ್ತದೆ. ಜೀವಶಾಸ್ತ್ರೀಯವಾಗಿ ಮನುಷ್ಯನಿಗಿಂತಲೂ ಮೀನು ಕೆಳಮಟ್ಟದ ಪ್ರಾಣಿ, ವಿಸ್ಮಯವೇನೆಂದರೆ ಮೀನಿನ ಕಣ್ಣು ಮನುಷ್ಯನಷ್ಟೇಅಥವಾ ಮನುಷ್ಯನಿಗಿಂತ ಹೆಚ್ಚು ಬೆಳವಣಿಗೆ ಹೊಂದಿದೆಯೆನ್ನಬಹುದು. ಮೀನು ಸದಾ ನೀರಿನಲ್ಲಿರುವ ಪ್ರಾಣಿ. ನಿರಂತರವಾಗಿಅದಕ್ಕೆಆಪತ್ತುತಪ್ಪಿದ್ದಲ್ಲ. ಸುತ್ತಲಿರುವ ವೈರಿಗಳಿಂದ ತನ್ನನ್ನುತಾನು ಕಾಪಾಡಿಕೊಳ್ಳಬೇಕಾಗುವದು ಎಂಬ ಮುನ್ಸೂಚನೆಯ ಸಂಕೇತವೂ ಕವಯಿತ್ರಿಯ ಮನದಲ್ಲಿರಬಹುದು. ಮೀನ ಕಣ್ಣಿನರಚನೆ ಅಕ್ಷರಶಃ ದೂರದರ್ಶಕಅಂದರೆ  ಬೈನಾಕ್ಯುಲರ್‌ತರಹವೇಇದೆ. ಇನ್ನೂ ಒಂದು ಅಡಕವಾಗಿದೆ. ವೈಜ್ಞಾನಿಕ ಮೂಲಗಳ ಪ್ರಕಾರ ಮೀನಕಣ್ಣಿನ ರೆಟಿನಾ ಭಾಗಕ್ಕೆಏನಾದರೂ ಆಘಾತವಾದರೆ ಅದುತನ್ನಷ್ಟಕ್ಕೆತಾನೆ ಗಾಯವನ್ನು ಸರಿಪಡಿಸಿಕೊಳ್ಳುವ ತಂತ್ರೌಷಧಗುಣವಿದೆ. ಈ ಒಳಮರ್ಮವನ್ನು ಯೋಚಿಸಿಯೇ ನಮ್ಮ ಕವಿಯಿತ್ರಿ  ಮೀನಕಣ್ಣನ್ನೇರೂಪಕವಾಗಿ ಬಳಸಿಕೊಂಡಿದ್ದಾರೆ ಎಂದೆಣಿಸಬಹುದು.             ಮುಂದೆಕವನದ ಸಾಲುಗಳನ್ನು ಓದುತ್ತಾ,ಕವಯತ್ರಿಇಲ್ಲಿ ಉಪಯೋಗಿಸಿದ ಕೆಲವು ಶಬ್ದಗಳು ನಮ್ಮನ್ನುಆಕರ್ಷಿಸುತ್ತವೆ ಅವುಗಳೆಂದರೆ ಮುತುವರ್ಜಿ,ಒಡ್ಡೋಲಗ,ಏಕಾಗ್ನಿ….. ಮುಂತಾದವು. ಭೂಲೋಕದಅಪ್ರತಿಮ ಸುಂದರಿಯಂದೇ ಕರೆಯಲ್ಪಡುತ್ತಿದ್ದ ದ್ರೌಪದಿಯ ಸ್ವಯಂವರದ ಪೂರ್ವಸಿದ್ಧತೆಯನ್ನು ಅತ್ಯಂತ ಸೊಗಸಾಗಿ ಹಾಗೂ ರಾಜಕುಮಾರಿಯ ಅದೇ ಗತ್ತುಗಾಂಭೀರ‍್ಯ ಭಾಸವಾಗುವಂತೆ ಬಣ್ಣಿಸಿದ್ದಾರೆ.ಇಡೀ ಗಂಡಸುಕುಲವೇ ಮಾರುಹೋಗುವಂಥ ಸೃಷ್ಟಿಸೌಂದರ‍್ಯವೇ ಅವಳಲ್ಲಿತ್ತು ಎಂದು ಹೊಗಳುತ್ತಾ  ನಂತರದ ಸಾಲುಗಳಲ್ಲಿ ದುಶ್ಯಾಸನನ ಮನದ ಭಾವನೆಗಳೂ ಮಾತಾಡಿವೆ. ಸ್ವಯಂವರದಲ್ಲಿ ಇವಳ ರೂಪರಾಶಿಗೆ ಮನಸೋತ ದುಶ್ಯಾಸನ ತಾನು ದ್ರೌಪದಿಗೆ ತಕ್ಕವನಲ್ಲ, ಏನಿದ್ದರೂ ಅವಳ ಕಾಲಬಳಿಯೇ ತನ್ನಜಾಗಎನ್ನುತ್ತದೆ ಅವನ ಸ್ವಗತ. ಹೋಗಲಿ ತನ್ನಣ್ಣನಿಗೂ ದ್ರೌಪದಿ ದಕ್ಕುವದು ಅಸಾಧ್ಯವೆಂದೆನಿಸುತ್ತದೆ. ಮನದೊಳಗಣ ನೀಚ ತಮಸ್ಸು ಆ ಸೌಂದರ‍್ಯವನ್ನುಒಮ್ಮೆ ಮುಟ್ಟಬೇಕೆಂಬ ಉತ್ಕಟತೆಯೊಂದಿಗೆ ಉಳಿದುಬಿಟ್ಟಿರುತ್ತದೆ. ಹಾಗಾಗಿ ಕೊನೆಗೆ ಸಭೆಯಲ್ಲಿ ಸೆರಗಿಗೆ ಕೈಹಾಕುತ್ತಾನೆ ಎಂಬುದಾಗಿ ದುಶ್ಯಾಸನನ ಸ್ವಗತವನ್ನು ಚಿತ್ರಿಸಿದ್ದಾರೆ. ಇದಿಷ್ಟು ಕವಿತೆಯ ಹೊರಮೈಯೆಂದಾದರೆ …….. ಇನ್ನುಕವಿತೆಯಆಂತರ್ಯಕ್ಕೆಇಣುಕೋಣ,             ಇಲ್ಲಿದ್ರೌಪದಿ ಇಡೀ ಸ್ತಿçಸಂಕುಲವನ್ನೇ ಪ್ರತಿನಿಧಿಸುತ್ತಾಳೆ. ಸಾಮಾನ್ಯವಾಗಿ ಹೆಣ್ಣಿನ ಅಳಲು,ನೋವು,ತೊಳಲಾಟದ ಕುರಿತಾಗಿ ಬರೆದಿರುತ್ತಾರೆ,ಆದರೆಇಲ್ಲಿ ಹೆಣ್ಣಿನ ಆಯ್ಕೆ ಕುರಿತಾಗಿ ಮಾತನಾಡಿದ್ದಾರೆ. ಸೀರೆ ಆಯ್ದುಕೊಳ್ಳುವ ಸ್ವಾತಂತ್ರವನ್ನು ಸಂಭ್ರಮಿಸುತ್ತಿರುವ ಚಿತ್ರಣವಿದೆ. ಇದರಲ್ಲಿನ ಧ್ವನಿ ವಿಶೇಷವೆನಿಸುತ್ತದೆ. ಕವಯಿತ್ರಿಯ ವಿಭಿನ್ನ ವಿಚಾರಲಹರಿಯು ಈ ಕವಿತೆಗೆ ವಿಶಿಷ್ಟತೆಯನ್ನು ತಂದುಕೊಟ್ಟಿದೆ. ಮುಂದೆ ಸ್ವಯಂವರದಲ್ಲಿಯೂ ಈ ಹಕ್ಕು ಅವಳಿಗಿದೆಯೆಂದು ಸೂಚನೆ ಕಾಣುತ್ತದೆ.  ಮೀನಕಣ್ಣುಎಂದಿದ್ದಾರೆ,ನವಿಲು,ನರಿ.ಕುದುರೆಅಥವಾ ಹಕ್ಕಿ,ಹುಲಿಗಳಕಣ್ಣು ಎನ್ನಬಹುದಿತ್ತು ಎಂಬ ಪ್ರಶ್ನೆಕಾಡುತ್ತದೆ, ಅಂತೇಯೇ ಮೀನಕಣ್ಣಿನ ವೈಜ್ಞಾನಿಕ ಸಂರಚನೆಯ ಸತ್ಯಾಸತ್ಯತೆಯು ಅವಳ ಬದುಕಿನಂತೆ ಬೆರಗುಗೊಳಿಸುವಂಥದ್ದು.ಮೀನ ಕಿವಿರುಗಳಿಗಿಂತ ನವಿರಾದರೇಷಿಮೆ ಎಂದು ವರ್ಣಿಸುವಾಗ ಸುಕೋಮಲೆ ಮೃದುಭಾವದ ಹೆಣ್ಣು ಭವಿಷ್ಯದಲ್ಲಿಎದುರಾಗಲಿರುವ ಭೀಕರ ಕಠೋರಗಳನ್ನೂ ದಾಟಬಲ್ಲಳು. ದ್ರೌಪದಿಯು ಮುಂದೆ ನಡೆಯಲಿರುವಯುದ್ಧಕ್ಕೆ ಸನ್ನದ್ಧಳಾಗುವ ದೂರದೃಷ್ಟಿ ಹೊಂದಿದವಳಾಗಿದ್ದಳೆಂದು ಸೂಚ್ಯವಾಗಿ ಹೇಳುತ್ತಿದ್ದಾರೆ ಲೇಖಕಿ. ಹೆಜ್ಜೆ ಹೆಜ್ಜೆಗೂ ಅವಳು ಸಂಕಟವನ್ನುಭವಿಸಲಿದ್ದಾಳೆ,ಆದ್ದರಿಂದ ಅವಳು ಮೈಯಲ್ಲಾಕಣ್ಣಾಗಿರಬೇಕೆಂಬುದರಉದ್ದೇಶವೂ ಬಿಂಬಿತವಾಗುತ್ತದೆ, ಅರ್ಥಾಥ ಮೀನಕಣ್ಣು ಬಹಿರಂಗವಾಗಿ ಸೀರೆ ಮೇಲಿನ ಆಕೃತಿ ಮಾತ್ರವಲ್ಲ, ಸದಾ ಅಂತರಂಗದ ಒಳಗಣ್ಣು ತೆರೆದು ಸುತ್ತಲು ನಡೆಯುತ್ತಿರುವದನ್ನು ಬಹು ಎಚ್ಚರದಿಂದ ಗಮನಿಸಬೇಕೆಂಬ ಮುನ್ಸೂಚನೆ ನೀಡುತ್ತದೆ.ದುಶ್ಯಾಸನನಂತ ನೀಚರು ಮನೆಯ ಒಳಗೂ ಮನೆಯ ಹೊರಗೂಎಲ್ಲಿಯೂಇರಬಹುದು.ಅದಕ್ಕಾಗಿ ಹೆಣ್ಣು ಸದಾಕಾಲ ಜಾಗೃತರಾಗಿರಬೇಕೆಂಬ ಸಂದೇಶವನ್ನೂಕೂಡಾ ಸಾರುವದರಿಂದ ಈ ಕವಿತೆ ಇಂದಿಗೂ ಪ್ರಸ್ತುತವೆನಿಸುತ್ತದೆ. ************************* ವಿಭಾ ಪುರೋಹಿತ್

ನನ್ನಿಷ್ಟದ ಕವಿತೆ Read Post »

ಕಾವ್ಯಯಾನ

ಕಾವ್ಯಯಾನ

ನಂದಿನಿ ಹೆದ್ದುರ್ಗರವರ ಕವಿತೆ ಅವನ ಅದ್ದಿ ಬರೆದ ಪದ್ಯಗಳುಈಗಲೂ ಹೊಸದಾಗಿಯೇ ಇವೆ… ನಾಜೂಕು ಅಕ್ಷರಗಳ ನೇವರಿಸಿಒಳಗೊಳ್ಳುತ್ತೇನೆ ಹೊಸದೆಂಬಂತೆಪ್ರತಿ ಬಾರಿಯೂ… ತೆರೆದ ಬಾಗಿಲಿನ ಪಂಜರದಿಂದಹಾರಿ ಹೋದ ಹಕ್ಕಿಯೊಂದುಇಳಿಸಂಜೆಗೆ ಮರಳಿದಿನದ ಕಥೆ ಹೇಳುತ್ತದೆ. ಕೆಲವು ಹಳತುಗಳುಹೊಸತಾಗಬಹುದೆಂಬ ಪುಳಕಉಳಿದೇಹೋಗಿದೆ ಇಲ್ಲಿ…! ಹೊಳಪು ಮತ್ತು ಬೆಳಕುಬಚ್ಚಿಡುವುದೂ ಎಂಥಹರಸಾಹಸ ಪ್ರಭುವೇ…!!! ****************

ಕಾವ್ಯಯಾನ Read Post »

You cannot copy content of this page

Scroll to Top