ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಏಕಾಂತವೆಂಬ ಹಿತ

ಕವಿತೆ ಏಕಾಂತವೆಂಬ ಹಿತ ಶ್ರೀದೇವಿ ಕೆರೆಮನೆ ಇಷ್ಟಿಷ್ಟೇ ದೂರವಾಗುವನಿನ್ನ ನೋಡಿಯೂ ನೋಡಲಾಗದಂತೆಒಳಗೊಳಗೇ ನವೆಯುತ್ತಿದ್ದೇನೆಹೇಳಿಯೂ ಹೇಳಲಾಗದಒಂಟಿತನವೆಂಬ ಕೀವಾದ ಗಾಯಕ್ಕೀಗಮಾಯಲಾಗದ ಕಾಲಮುಲಾಮು ಸವರಲು ನಿರಾಕರಿಸುತ್ತಿದೆಅಸಹಾಯಕಳಾಗಿ ನೋಡುತ್ತಿದ್ದೇನೆನಮ್ಮಿಬ್ಬರ ನಡುವೆಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಅಂತರವನ್ನು ಎಂದೋ ಆಡುವ ಎರಡೇ ಎರಡುಮಾತಿನ ನಡುವೆಯೇಒತ್ತರಿಸಿ ಬರುವ ಯಾವುದೋ ರಾಜಕಾರ್ಯಮಾತು ಹಠಾತ್ತನೆ ನಿಂತುಒಂದು ನಿಮಿಷ ಎಂದು ಹೊರಟ ನಿನಗೆಕಾಲ ಗಳಿಗೆಗಳ ಹಂಗಿಲ್ಲಕಾದು ಕುಳಿತ ನನಗೆ ಮಾತ್ರಪ್ರತಿ ಕ್ಷಣವೂ ವರುಷವಾಗುತ್ತಿರ ಭಯ ಮತ್ತೆ ಮಾತನಾಡುವ ಸಮಯಕ್ಕಾಗಿನಾನು ಜಾತಕಪಕ್ಷಿಯಾಗಿ ಕಾಯುತ್ತಿದ್ದರೆಎಂದೂ ಮುಗಿಯದ ನಿನ್ನ ಕೆಲಸಗಳುಈ ಜನ್ಮದಲ್ಲಿ ಮಾತನಾಡಲು ಬಿಡದಂತೆಸದಾ ಸತಾಯಿಸುತ್ತವೆ ಈಗೀಗ ನಿಜದ ಅರಿವಾಗುತ್ತಿದೆಮಾತಿನ ನಡುವಿನ ಒಂದು ನಿಮಿಷಪುರುಸೊತ್ತಿರದ ಕೆಲಸಎಲ್ಲವೂ ನಿನ್ನದೇ ಸೃಷ್ಟಿಯೆಂಬುದುಸಮಯವೇ ಸಿಗದು ಎಂಬ ಮಾತಿನಪೊರೆಕಳಚಿ ನಿಜದ ದರ್ಶನವಾಗುತ್ತಿರುವಾಗಭ್ರಮೆಗಳೆಲ್ಲವೂ ಹರಿದು ಬಯಲಾಗುತ್ತಿದೆ ಹಿಂದೆ ಕಿತ್ತಿಡುವನಿನ್ನ ಹೆಜ್ಜೆ ಗಳಿಗೆ ನೂರಾನೆಯ ವೇಗನನಗೋ ಎದೆಯ ಮಿಡಿತ ಕಿವಿಗಪ್ಪಳಿಸಿಮುಂದಡಿಯಿಡಲಾಗದ ಸರಪಳಿತಡೆಯಲಾರೆ ದೂರವಾಗಲು ಬಯಸುವವರನ್ನುಹಿತವೆನಿಸುತ್ತಿದೆ ಈಗೀಗ ಏಕಾಂತವೂ ************************

ಏಕಾಂತವೆಂಬ ಹಿತ Read Post »

ಕಾವ್ಯಯಾನ

ಷರತ್ತು

ಕವಿತೆ ಷರತ್ತು ಮಾಂತೇಶ ಬಂಜೇನಹಳ್ಳಿ ಈಗ ಮಳೆ ಬಿಟ್ಟಿದೆ.ಅವಳ ನೆನಪುಗಳ ಹದವಾಗಿ,ಎದೆಯ ಬಾಣಲೆಯೊಳಗೆ,ಕಮ್ಮಗೆ ಹುರಿಯುವ ಸಮಯ.. ಚಿಟಪಟವೆಂದು ಒಂದಷ್ಟು,ಜೋಳದ ಕಾಳುಗಳಂತೆನೆನಪ ಬಿಸಿಗೆ ಸಿಡಿದಾವು.ಸಾವಧಾನಕ್ಕಾಗಿ ನೆನೆವ ಉರಿ ತಗ್ಗಿಸುವುದು,ಹೃದ್ಯೋಧರ್ಮ.. ನಿಗವಿಡುತ್ತೇನೆ. ಮಳೆಗೂ ಗೊತ್ತು ಧೋ!!ಎಂದುಒಂದೇ ಸಮನೆ ಸುರಿದರೆ,ಒಬ್ಬ ಪ್ರೇಮಿ ಅವಳಿಗಾಗಿ ಪರಿತಪಿಸುವುದಿಲ್ಲವೆಂದೂ,ನೆನಪಿಸುವುದಕ್ಕೆ ನೆಲ ರಾಚುವಹನಿಗಳ ಕರತಾಡನ ಸುಖಾ ಸುಮ್ಮನೆ ಅಡ್ಡಿಯಾದೀತೆಂದು. ಗರಕ್ಕನೆ ನಿಂತು ಬಿಟ್ಟರೆ ಅಬ್ಬಬ್ಬಾ!ಹುಬ್ಬೆ ಮಳೆ ಸುರಿದು ಸಮ ರಾತ್ರಿಗೆ,ಮಲಗಿದ ಬೆಳಗಿಗೆ ಮೃದು ನೆಲದಲ್ಲಿ,ಮನೋಸೆಳೆವ ಅಣಬೆಗಳಂತೆ ಉಬ್ಬುವಆಕೆಯ ನೆನಪುಗಳು ದಾಂಗುಡಿಯಾಗುತ್ತವೆ. ಮುಂದಿನದ್ದು ನಿರತ ಅನುಭವಿಸುವ,ನಾನು ಮಾತ್ರ ನನ್ನೊಳಗೆ,ಆಕೆಯ ಸದಾ ನೆನೆವ ಷರತ್ತಿಗೆಒಳಪಡುತ್ತಲೇ ಇರುತ್ತೇನೆ.. ***********************

ಷರತ್ತು Read Post »

ಇತರೆ

ಹೊಸ ಶಿಕ್ಷಣ ನೀತಿ

ಅನುಷ್ಠಾನವಾದೀತೇ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦? ಗಣೇಶ್ ಭಟ್ ಶಿರಸಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ನೀತಿಯ ಪರ ಮತ್ತು ವಿರೋಧಿ ಹೇಳಿಕೆಗಳು, ಲೇಖನಗಳು ಪ್ರಕಟವಾಗುತ್ತಿವೆ. ಹೊಸ ಶಿಕ್ಷಣ ನೀತಿಯು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವುದರ ಜೊತೆಗೆ ಇಡೀ ರಾಷ್ಟ್ರವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ.ಈ ಶಿಕ್ಷಣ ನೀತಿಯನ್ನು ಹೊಸ ಅವಿಷ್ಕಾರ, ಹೊಸ ಮನ್ವಂತರದ ಹರಿಕಾರ ನೀತಿ ಮುಂತಾಗಿ ಬಿಂಬಿಸಲಾಗುತ್ತಿದೆ. ಲಭ್ಯತೆ, ಸಮಾನತೆ, ಗುಣಮಟ್ಟ, ಉತ್ತರದಾಯಿತ್ವಗಳ ಬುನಾದಿಯ ಮೇಲೆ ಆಧರಿತ ಈ ಶಿಕ್ಷಣ ನೀತಿಯಿಂದ ಜಾಗತಿಕ ಜ್ಞಾನ ಕೇಂದ್ರ ಮತ್ತು ಶಕ್ತಿಯಾಗಿ ಭಾರತವು ಹೊರಹೊಮ್ಮಲಿದೆಯೆಂದು ಪ್ರಚಾರ ಮಾಡಲಾಗುತ್ತಿದೆ. ಈ ಶಿಕ್ಷಣ ನೀತಿಯ ಗುರಿ ಮತ್ತು ಉದ್ದೇಶಗಳು ಉದಾತ್ತವಾಗಿವೆ ಎಂಬುದು ನಿಜ. ಆದರೆ ವಾಸ್ತವವನ್ನು ನಿರ್ಲಕ್ಷಿಸಿ ನಿಗದಿಪಡಿಸುವ ಉದ್ದೇಶಗಳು ಸಫಲವಾಗುವುದು ದೂರದ ಮಾತಷ್ಟೇ ಅಲ್ಲ, ಅವುಗಳ ನಿರೂಪಣೆಯ ಪ್ರಾಮಾಣಿಕತೆಯೇ ಪ್ರಶ್ನಾರ್ಹವಾಗುತ್ತದೆ. ೨೦೨೦ ರ ಶಿಕ್ಷಣ ನೀತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದಾಗ, ಅದರ ಅನುಷ್ಠಾನಕ್ಕೆ ಇರುವ ತೊಡುಕುಗಳ ಅರಿವಾಗುತ್ತದೆ. ಉದಾಹರಣೆಗಾಗಿ,ಇದು ಭಾರತೀಯ ಶಿಕ್ಷಣ ಪದ್ಧತಿಯ ಪುನರುತ್ಠಾನದ ಪ್ರಯತ್ನವೆಂದು ಹೇಳಿಕೊಳ್ಳಲಾಗಿದೆ. ಶಿಕ್ಷಣ ಕುರಿತಾದ ಭಾರತೀಯ ವ್ಯಾಖ್ಯೆ ” ಸಾ ವಿದ್ಯಾ ಯಾ ವಿಮುಕ್ತಯೇ” – ವಿದ್ಯೆ ಅಂದರೆ ಭೌತಿಕ, ಮಾನಸಿಕ, ಆದ್ಯಾತ್ಮಿಕ ಬಂಧನಗಳಿಂದ ಬಿಡುಗಡೆ. ಇದು ನಿಸರ್ಗದ ನಿಯಮವಾದ ವಿಕಾಸಕ್ಕೆ ಪೂರಕವಾದ ವಿಚಾರ. ತಜ್ಞರ ಅಭಿಪ್ರಾಯದಂತೆ ಮೊದಲಿನ ಏಳು ವರ್ಷಗಳ ಅವಧಿಯಲ್ಲಿ ಮಗುವಿನ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಉದಾತ್ತ ಚಿಂತನೆಗಳು, ಏಕತೆಯ ಭಾವ, ಮನಸ್ಸಿನ ವಿಸ್ತಾರ, ಸಮಗ್ರತೆಯ ಕಲ್ಪನೆ, ಜೀವಜಾಲದೊಂದಿಗಿನ ಅವಿಭಾವ ಸಂಬಂಧ, ಪರಸ್ಪರ ಪ್ರೀತಿ ಮುಂತಾದವು ಮಗುವಿನ ಮನಸ್ಸಿನಲ್ಲಿ ರೂಪುಗೊಳ್ಳುವ ಅವಧಿ ೦-೭ ವರ್ಷಗಳು. ಆಟ, ಪಾಠಗಳು, ಅಷ್ಠಾಂಗ ಯೋಗ, ಧ್ಯಾನ ಪದ್ಧತಿಗಳ ಮೂಲಕ ನೈತಿಕತೆಯ ನೆಲೆಗಟ್ಟಿನ ಮೇಲೆ ಸಮಗ್ರ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಗುರಿಯಾಗಬೇಕು. ಅಂಗನವಾಡಿ (ನರ್ಸರಿ) ಯಿಂದ ೨ ನೇ ವರ್ಗದವರೆಗಿನ ಶಿಕ್ಷಣ ಪದ್ಧತಿ ವಿಶಿಷ್ಟವಾಗಿರಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಈ ವಯಸ್ಸಿನ ಮಕ್ಕಳ ಕಲಿಕೆಯನ್ನು ಮೊದಲನೇ ಹಂತದ ೫ ವರ್ಷಗಳೆಂದು ಗುರ್ತಿಸಲಾಗಿದೆ. ಜಾತಿ ಮತ ಪಂಥಗಳ ಭೇಧಭಾವಗಳನ್ನು, ಮೂಡನಂಬಿಕೆಗಳನ್ನು ಬಳಸಿ, ಬೆಳಸಿ ಅಧಿಕಾರಕ್ಕೆ ಅಂಟಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಇಂತಹ ಶಿಕ್ಷಣ ನೀಡಿಕೆಯ ಅನುಷ್ಠಾನ ತರಲು ಇಚ್ಚಿಸುವುದಿಲ್ಲ. ಸರ್ವರಲ್ಲಿ ಸಮಭಾವ ಹೊಂದದೇ, ಆದ್ಯಾತ್ಮ ಮನೋಭಾವ ಮೂಡಿಸಲು ಪ್ರಯತ್ನಿಸದೇ, ಇತಿಹಾಸದ ಘಟನೆಗಳನ್ನೇ ಬಳಸಿ ಸಮಾಜದಲ್ಲಿ ದ್ವೇಷ ಅಸೂಯೆಗಳನ್ನು ಬಿತ್ತುತ್ತಿರುವ ರಾಜಕೀಯ ಪಕ್ಷವು ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಪುನರುತ್ಠಾನ ಮಾಡುತ್ತೇವೆಂದು ಹೇಳಿಕೊಳ್ಳುವುದು ಆಷಾಡಭೂತಿ ನಡತೆ.ಮಗುವಿನ ತಲೆಯಲ್ಲಿ ಮಾಹಿತಿ ತುರುಕಲು ಹೊಸ ಹೊಸ ವಿಧಾನಗಳ ಬಳಕೆಯನ್ನು ಪ್ರೋತ್ಸಾಹಿಸುವುದೇ ಶಿಕ್ಷಣವಲ್ಲ.  ಶಿಕ್ಷಣವನ್ನು ವಿವಿಧ ಹಂತದಲ್ಲಿ ಮೊಟಕುಗೊಳಿಸಿರುವ ೨ ಕೋಟಿಗೂ ಅಧಿಕ ಮಕ್ಕಳನ್ನು ಹೊಸ ಔಪಚಾರಿಕ ಶಿಕ್ಷಣ  ವ್ಯವಸ್ಥೆಗೆ  ಮರಳಿ ತರಲು ಹೊಸ ಶಿಕ್ಷಣ ನೀತಿಯಿಂದ ಸಾಧ್ಯವೆಂದು ಪ್ರತಿಪಾದಿಸಲಾಗಿದೆ. ಈ ಮಕ್ಕಳು ಶಿಕ್ಷಣ ಮುಂದುವರೆಸದಿರಲು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ದೋಷಗಳೇ ಕಾರಣವಲ್ಲ. ತಮ್ಮ ಅಥವಾ ತಮ್ಮ ಕುಟುಂಬದ ನಿರ್ವಹಣೆಗಾಗಿ ದುಡಿಯುವ ಅನಿವಾರ್ಯಯತೆಯಿಂದ ಹೆಚ್ಚಿನವರು ಶಿಕ್ಷಣ ಮುಂದುವರೆಸುವುದಿಲ್ಲ. ಶಿಕ್ಷಣ ಪದ್ಧತಿಯನ್ನೋ, ಪಠ್ಯ ಪುಸ್ತಕಗಳನ್ನೋ ಬದಲಾಯಿದೊಡನೆ ಶಿಕ್ಷಣ ಮುಂದುವರೆಸಲು ಮಕ್ಕಳು ವಾಪಾಸು ಬರುತ್ತಾರೆಂದು ವಾದಿಸುವುದು ಜನರನ್ನು ದಾರಿತಪ್ಪಿಸುವ  ಅವಾಸ್ತವಿಕ ನೆಲೆಗಟ್ಟಿನ ನಡೆ.   ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳ ಪೂರೈಕೆಯ ಭದ್ರತೆಯಾದಾಗ ಮಾತ್ರ ಎಲ್ಲಾ ಮಕ್ಕಳೂ ಶಾಲೆಗೆ ಬರುತ್ತಾರೆ.ಆಹಾರ, ಬಟ್ಟೆ, ವಸತಿ, ಔಷಧೋಪಚಾರಗಳಂತೆಯೇ ಶಿಕ್ಷಣ ಕೂಡ ಜೀವನದ ಕನಿಷ್ಠ ಅಗತ್ಯತೆಯೆಂಬುದನ್ನು ಒಪ್ಪಿಕೊಂಡು, ಅವುಗಳನ್ನು  ಫಲಪ್ರದ ಉದ್ಯೋಗ ಸೃಷ್ಟಿಯ ಮೂಲಕ ಖರೀಧಿಶಕ್ತಿಯನ್ನು ನೀಡುವ ಭರವಸೆಯ ಈಡೇರಿಕೆಯಾದಾಗ ಮಾತ್ರ ಎಲ್ಲರಿಗೂ ಶಿಕ್ಷಣವೆಂಬ ಕನಸು ನನಸಾಗುತ್ತದೆ. ಸಿಕ್ಕಿದವರಿಗೆ ಸೀರುಂಡೆ ಯೆಂಬ ಆರ್ಥಿಕ ನೀತಿ, ಕೆಲವರ ಕೈಯಲ್ಲೇ ಸಂಪತ್ತು ಕ್ರೋಢಿಕರಣವಾಗುವ ಕೇಂದ್ರೀಕ್ರತ ಅರ್ಥವ್ಯವಸ್ಥೆಯಲ್ಲಿ ಈ ಪರಿವರ್ತನೆ  ಸಾಧ್ಯವಾಗದ ವಿಚಾರ. ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಅನುಷ್ಠಾನದಿಂದ ಮಾತ್ರ ಇದು ಸಾಧ್ಯ. ಬಂಡವಾಳವಾದೀ ವ್ಯವಸ್ಥೆಯನ್ನು ಪ್ರತಿಪಾದಿಸುವ ಪ್ರಸ್ತುತ ಸರ್ಕಾರದ ಈ ಘೋಷಣೆ ಜನರನ್ನು ಮರುಳುಗೊಳಿಸುವ ತಂತ್ರವಷ್ಟೇ!  ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ೫ ನೇ ತರಗತಿವರೆಗೆ, ಸಾಧ್ಯವಾದರೆ ೮ ನೇ ತರಗತಿಯ ವರೆಗೂ ಶಿಕ್ಷಣ ನೀಡುವುದು ಉತ್ತಮ ವಿಚಾರ. ಹೊಸ ಶಿಕ್ಷಣ ನೀತಿಯಲ್ಲಿ ಇದನ್ನು ಕಡ್ಡಾಯವಾಗಿಸದೇ,  ಸಾಧ್ಯವಾದಲ್ಲಿ ಎಂಬ ಪದ ಸೇರಿಸಿರುವುದು ಪ್ರಾದೇಶಿಕ ಭಾಷಾ ಮಾಧ್ಯಮದ ಕುರಿತಾದ ಬದ್ಧತೆಯ ಕೊರತೆ.ಹಲವು ಸರ್ಕಾರಿ ಶಾಲೆಗಳಲ್ಲೇ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಿರುವ ಈ ಸಮಯದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದ ಪಾಲಕರನ್ನು ಹೊರತರುವ ಪರಿಣಾಮಕಾರಿ ಪ್ರಾಮಾಣಿಕ ಕಾರ್ಯಯೋಜನೆ ಇಲ್ಲದಿರುವ ಈ ಹೊಸ ನೀತಿ, ಜನರ ಕಣ್ಣೊರೆಸುವ, ಭಾಷಾ ಚಳುವಳಿಗಳನ್ನು ದಾರಿತಪ್ಪಿಸುವ ಕುತಂತ್ರವಷ್ಟೆ. ತ್ರಿಭಾಷಾ ಕಲಿಕೆಗೆ ಅವಕಾಶ ಒಳ್ಳೆಯದು. ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಜೊತೆಗೆ ಇನ್ನೆರೆಡು ಭಾಷೆಗಳ ಕಲಿಕೆಯನ್ನು ಕಡ್ಡಾಯವಾಗಿಸಿ ಅವುಗಳಲ್ಲಿ ಎರಡು ಭಾಷೆಗಳು ಭಾರತೀಯ ಮೂಲದವಾಗಿರಬೇಕೆಂದಿರುವುದು ಹಿಂದಿ ಮತ್ತು ಸಂಸ್ಕೃತದ ಹೇರಿಕೆಯ ಪ್ರಯತ್ನವೆಂಬ ಭಾವನೆ ಮೂಡಲು ಕಾರಣವಾಗಿದೆ.ಕರಡು ಶಿಕ್ಷಣ ನೀತಿಯಲ್ಲಿ ಕಡ್ದಾಯಗೊಳಿಸಿದ್ದ ಇಂಗ್ಲೀಷ್ ಮತ್ತು ಹಿಂದಿಯ ಕಲಿಕೆಯನ್ನು ರಾಜಕೀಯ ಒತ್ತಡಗಳಿಂದಾಗಿ ಕೈ ಬಿಟ್ಟಿದ್ದರೂ ಸಂಶಯ ದೂರವಾಗಿಲ್ಲ.  ಆಂಗ್ಲ ಭಾಷೆಯನ್ನು ಬ್ರಿಟಿಷರ ಭಾಷೆಯೆಂದು ವ್ಯಾಖ್ಯಾನಿಸುವ ಕಾಲ ಮುಗಿದಿದೆ. ಜಾಗತಿಕ ಸಂಪರ್ಕಭಾಷೆಯಾಗಿ ಇಂಗ್ಲೀಷ್ ಕಲಿಕೆ ಅನಿವಾರ್ಯವಾಗುತ್ತಿದೆ. ಇಂಗ್ಲೀಷ್ ಅನ್ನು ಭಾಷೆಯಾಗಿ ಕಲಿಯುವದಕ್ಕೂ ಕಲಿಕಾ ಮಾಧ್ಯಮವಾಗಿ ಬಳಸುವದಕ್ಕೂ ತುಂಬಾ ವ್ಯತ್ಯಾಸವಿದೆ.ಈ ಹೊಣೆಗಾರಿಕೆಯನ್ನುಹಿಂದಿ ಪ್ರಿಯ ಕೇಂದ್ರ ಸರ್ಕಾರ ನಿಭಾಯಿಸಬಲ್ಲದೆಂಬುದಕ್ಕೆ ಆಧಾರವಿಲ್ಲ. ವೃತ್ತಿ ಆಧರಿತ ಶಿಕ್ಷಣ ನೀಡಿಕೆ,  ಹೆಚ್ಚು ಭಾಷೆಗಳನ್ನು ಕಲಿಯುವ ಅವಕಾಶ ಸೃಷ್ಟಿಸುವುದು ಉತ್ತಮ ಆಶಯಗಳು. ಆದರೆ ಇದಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಯಾರು ಭರಿಸಬೇಕು..?? ಸರ್ಕಾರಿ ಶಾಲೆಗಳಲ್ಲಿ ನೇಮಕಾತಿಗಳಿಲ್ಲ, ಖಾಸಗಿ ಶಾಲೆಗಳು ಹೆಚ್ಚುವರಿ ವೆಚ್ಚವನ್ನು ಪಾಲಕರಿಗೆ ವರ್ಗಾಯಿಸುವುದು ಸಹಜ. ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನ ವಿಧಾನ ವ್ಯವಹಾರಿಕವಾಗಿರದಿದ್ದಾಗ ಅದು ವಿಫಲಗೊಳ್ಳುತ್ತದೆ.  ತೊಂಭತ್ತರ ದಶಕದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಖಾಸಗೀಕರಣ, ಉದಾರೀಕರಣ , ಜಾಗತೀಕರಣಗಳನ್ನುಐನ್ನಷ್ಟು ವೇಗವಾಗಿ ಅನುಷ್ಠಾನಗೊಳಿಸುತ್ತಿರುವ ಬಿಜೆಪಿಯಿಂದಾಗಿ ಉಳ್ಳವರು ಇಲ್ಲದವರ ನಡುವಿನ ಅಂತರ ಹೆಚ್ಚುತ್ತಿದ್ದು, ಶೇಕಡಾ ೧೦ ರಷ್ಟು ಜನರು ದೇಶದ ಸಂಪತ್ತಿನ ೭೦% ಗೂ ಹೆಚ್ಚಿನ ಸಂಪತ್ತಿನ ನಿಯಂತ್ರಣ ಹೊಂದಿದ್ದಾರೆ.ಕೆಲವರ ಕೈಯಲ್ಲೇ ಸಂಪತ್ತು ಕೇಂದ್ರೀಕೃತವಾಗುತ್ತಿರುವ ಇಂತಹ ಸಂಧರ್ಭದಲ್ಲಿ, ೨೦೦ ಕ್ಕೂ ಹೆಚ್ಚು ವಿದೇಶಿ ವಿಶ್ವ ವಿದ್ಯಾಲಯಗಳನ್ನು ಅವ್ಹಾನಿಸುವ ಕ್ರಮವು, ಉಳ್ಳವರಿಗೇ ಶಿಕ್ಷಣ ಪದೆಯುವ ಅವಕಾಶ ದೊರಕಿಸಿಕೊಡುವದರಿಂದ, ಸಾಮಾಜಿಕ – ಆರ್ಥಿಕ ತಾರತಮ್ಯ ಇನ್ನಷ್ಟು ಹೆಚ್ಚಲು ಅವಕಾಶವಾಗಲಿದೆ.ಆರ್ ಟಿ ಇ ಎಂಬ ವಿಫಲ ಯೋಜನೆ, ಮಧ್ಯಾನದ ಊಟ, ಬೆಳಗಿನ ತಿಂಡಿಗಳ ನೀಡಿಕೆಯಿಂದಲೇ ಎಲ್ಲರಿಗೂ ಶಿಕ್ಷಣದ ಸಮಾನ ಅವಕಾಶವೆಂಬುದು ಪೊಳ್ಳು ಘೋಷಣೆ. ೧೦+೨ ಪದ್ಧತಿಯನ್ನು ೫+೩+೩+೪ ನ್ನಾಗಿ ಬದಲಿಸುವುದೇ ಮಹತ್ತರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ೧+೨+೫+೩+೪ ರ ಪದ್ಧತಿ ಜಾರಿಯಲ್ಲಿರುವಾಗ ಬದಲಾವಣೆಯ ಕುರಿತಾಗಿ ಡಂಗುರ ಸಾರುವುದು ಢೋಂಗಿತನ.  ಪದವಿಗಳಿಂದ, ತರಬೇತಿಗಳನ್ನು ನೀಡುವುದರಿಂದಲೇ ಉತ್ತಮ ಶಿಕ್ಷಕರು ನಿರ್ಮಾಣವಾಗಲಾರರು. ನೈತಿಕತೆ ಆಧ್ಯಾತ್ಮಿಕತೆ, ವಿಶಾಲ ಮನೋಭಾವಗಳು ಶಿಕ್ಷಕರಿಗೆ ಅತಿ ಅಗತ್ಯ. ಉತ್ತಮ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಇದು ಅನಿವಾರ್ಯ. ಸಂಕುಚಿತ, ಸ್ವಾರ್ಥ ಮನೋಭಾವ ಬೆಳೆಸುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ನೇತಾರರ ನಡೆ ಮಾದರಿಯಾಗಿರಬೇಕು.ಜಾತಿ,ಮತ, ಪಂಥಗಳ ಹೆಸರಿನಲ್ಲಿ ಜನರನ್ನು ಒಡೆದು,ಮೂಢನಂಬಿಕೆ ಬಿತ್ತುತ್ತಾ, ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವವರಿಂದ ಇದು ಸಾಧ್ಯವಾಗದು.  ಉತ್ತಮ ಆಶಯ ಹೊಂದಿದ ಸಿದ್ಧಾಂತಗಳ ಯಶಸ್ಸು ಅಥವಾ ವೈಫಲ್ಯಕ್ಕೆ,ಅನುಷ್ಠಾನಗೊಳಿಸುವವರ ಮನೋಭೂಮಿಕೆಯೇ ಮುಖ್ಯ ಕಾರಣ. ಉತ್ತಮ ವಿಚಾರಗಳು, ಸದಾಶಯಗಳನ್ನು ಮುಂದಿಟ್ಟುಕೊಂಡು ಸಿದ್ಧಾಂತವನ್ನು ರೂಪಿಸಲಾಗುತ್ತದೆ. ಆದರೆ ಅವುಗಳನ್ನು ಅನುಷ್ಠಾನಗೊಳಿಸುವ ಕಾರ್ಯವಿಧಾನಗಳ ಬಗ್ಗೆ, ವ್ಯವಹಾರಿಕ ಸಾಧ್ಯತೆಗಳ ಕುರಿತು, ಆಷಾಡಭೂತಿ ಪ್ರತಿಪಾದಕರು ಪ್ರಾಮಾಣಿಕವಾಗಿ ಯೋಜಿಸುವುದಿಲ್ಲ; ಯೋಚಿಸುವುದೂ ಇಲ್ಲ. ತಾವು ಘನಂಧಾರಿ ಕೆಲಸ ಮಾಡುತ್ತಿದ್ದೇವೆಂದು ತೋರಿಸಿಕೊಳ್ಳುವುದೇ ಅವರ ಉದ್ದೇಶ. ಶಿಕ್ಷಣ ನೀತಿ ೨೦೨೦ ಈ ವರ್ಗಕ್ಕೇ ಸೇರಿದೆಯೆಂಬುದು ವಿಷಾದನೀಯ. *************************

ಹೊಸ ಶಿಕ್ಷಣ ನೀತಿ Read Post »

ಕಾವ್ಯಯಾನ

ಕೈ ಚೀಲ

ಕೈ ಚೀಲ ಬಿ.ಶ್ರೀನಿವಾಸ ಆ ಹುಡುಗನ ಹೆಸರಿಡಿದು ಯಾರೂ ಕರೆಯುವುದಿಲ್ಲ.ಎಲ್ಲರೂ ಕರೆಯುವುದೇ ‘ಕೈಚೀಲ’ ಎಂದೆ.ತನ್ನ ಕುಂಟುಗಾಲಿನಲಿ ಹೋಗುವಾಗ ಯಾರಾದರೂ “ಕೈ ಚೀಲಾ…”ಕೂಗಿದರೆ ಸಾಕು ತಕ್ಷಣ ನೋಡುತ್ತಾನೆ.ಅವನಿಗೆ ಬಹಳವೆಂದರೆ ಐದೋ ಆರೋ ವರುಷವಿದ್ದೀತು. ಅವ್ವನ ಬಿಟ್ಟರೆ ಅವನಿಗೆ ಬೇರೆ ಜಗತ್ತು ಇಲ್ಲ. ಬಣ್ಣದ ಸಂಜೆಗಳೆಂದರೆ ಅವನಿಗಿಷ್ಟ. ಯಾಕೆಂದರೆ ಅವನವ್ವ ಸಂಜೆಯಾದಂತೆಲ್ಲ ಸುಂದರವಾಗಿ ಕಾಣುವಂತೆ ಅಲಂಕರಿಸಿಕೊಳ್ಳುತ್ತಾಳೆ. ಆ ಪಾಂಡ್ಸ ಪೌಡರಿನ ಪರಿಮಳ ಸಂಜೆಗಳನ್ನು ಅರಳಿಸುತ್ತದೆ. ಸಲೀಸಾಗಿ ಅವ್ವನ ಕೈ ಹಿಡಿದು ನಡೆಯುತ್ತಾನೆ. ಅಷ್ಟರಲ್ಲಿ ಯಾರಾದರೂ ಕೈ..ಚೀ..ಲಾ..!ಪಿಸುಗುಟ್ಟಿದರೂ ಸಾಕು ಅವನು ಅಲ್ಲಿಗೆ ಹೋಗುತ್ತಾನೆ. ಹೊಸ ಅಪ್ಪನನ್ನು ಕಾಣುತ್ತಾನೆ. ಹೊಸ ಅಪ್ಪನೊಡನೆ …ಅವ್ವ ಹೇಳಿಕೊಟ್ಟ ಮಾತುಗಳನ್ನೇ ಹೇಳುತ್ತಾನೆ. ಅವ್ವ ಖುಷಿಯಾಗಿದ್ದಾಳೆಂದು ಇವನೂ ಖುಷಿಯಿಂದ ಹುರಿದ ಬಟಾಣಿ ತಿನ್ನುತ್ತ ಕುಳಿತಿರುತ್ತಾನೆ. ಕೈ ಚೀಲನಿಗೊಂದು ಕನಸಿತ್ತು. ಅಷ್ಟು ಜನ ಅಪ್ಪಂದಿರನ್ನು ಗುರ್ತು ಹಿಡಿಯಲು ಸಂತೆಯಲ್ಲಿ ನೋಡಿದ ಬಣ್ಣದ ಟೋಪಿಗಳನ್ನು ತೆಗೆದಿರಿಸಿದ್ದ. ಕೆಂಪು ಹಳದಿ ಹಸಿರು ನೀಲಿ..ಬಿಳಿ..ಖಾಕಿ…ಹೀಗೆ ತರಹೇವಾರಿ ಉಲನ್ ಟೋಪಿಗಳನ್ನು ಸಾಲಾಗಿ ಇರಿಸಿದ್ದ. ಅವನ ಕನಸಿಗೆ ಅವಳವ್ವ ಅಡ್ಡ ಬರಲಿಲ್ಲ. ಎಷ್ಟೊಂದು ಅಪ್ಪಂದಿರು..! ನಾನು ಹೀಗೆ ಆಸ್ಪತ್ರೆಯಲ್ಲಿ ಮಲಗಿರುವಾಗ ಯಾಕೆ ಯಾರೊಬ್ಬರೂ ಬರುವುದಿಲ್ಲವಲ್ಲ? ಹುಡುಗನ ಹೃದಯ ಮಿಡಿಯುತ್ತಿದೆ. ಅಲ್ಲಿ ಡಾಕ್ಟ್ರು ಅವ್ವನಿಗೇನೋ ಹೇಳುತ್ತಿದ್ದಾರೆ. “ಲಕ್ಷಕ್ಕೊಬ್ಬರಿಗೆ ಮಾತ್ರ ಬರುವ ಕಾಯಿಲೆ…ವಾಸಿಯಾಗುವುದಿಲ್ಲ.” ಆಕೆ ಅಲ್ಲಿಯೇ ಕುಸಿಯುತ್ತಿದ್ದಾಳೆ. ಆ ಹುಡುಗನ ಮುಚ್ಚಿದ ಕಣ್ಣ ಪಾಪೆಯಲ್ಲಿ ಉಲನ್ ಟೊಪ್ಪಿಗೆ ಧರಿಸಿದ ಅಪ್ಪಂದಿರು ಸಾಲಾಗಿ ಬಂದು ..ಮಲಗಿದ್ದ ತನ್ನನ್ನು ನಿಧಾನಕ್ಕೆ ಎದ್ದು ಕೂಡಿಸಿ, ಮುದ್ದುಗರೆಯುತ್ತ ಬ್ರೆಡ್ಡು, ಬಿಸ್ಕತ್ತು, ಸೇಬಣ್ಣು…ತಿನ್ನಿಸುವ ಕನಸು ಕಾಣುತ್ತಾನೆ. ……ಯಾರೋ.. “ಕೈ ಚೀಲಾ..”!ಕರೆದಂತೆ ಭಾಸ ಅವ್ವ ಕೈ ಸನ್ನೆ ಮಾಡಿ ಖುಷಿಯಿಂದ ಮೊಗ ಕಂಡಂತೆ “ಅವ್ವಾ..ಹೊಸ ಅಪ್ಪ.. ಬರ್ತನಂತೆ…”!ಕನವರಿಸುತ್ತಲೇ ಇದ್ದಾನೆ. ಆಕೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಳೆ.

ಕೈ ಚೀಲ Read Post »

ಕಾವ್ಯಯಾನ

ಅಂಗಳದ ಚಿಗುರು

ಕವಿತೆ ಅಂಗಳದ ಚಿಗುರು ಬಿರುಕು ಬಿಟ್ಟ ಗೋಡೆಯ ಮೌನದಲಿಅಜ್ಞಾತ ಹಕ್ಕಿಯ ಗೂಡೊಂದು ಮುಗಿಲ ಕೂಗುತಿತ್ತು ಅಂಗಳ ತುಂಬಿದ ನೀರಿನ ದಡದಲಿಮರಿಗಳ ಹಿಂಡು ಕಣ್ಣಾಮುಚ್ಚಾಲೆ ಆಡುತಪೇಪರ ಬೋಟಿನ ಕಣ್ಣೊಳಗೆಅಲೆಗಳ ಲೆಕ್ಕದಲಿ ಮೈಮರೆತವು ಅವಳು ಬಿಡುಗಣ್ಣಲಿಪಾದಕ್ಕೆರಗಿದ ಗಾಯದ ಸಲಾಕೆ ಜಾಡಿಸುತ್ತಗೋಗರಿವ ಮುಳ್ಳುಗಳ ಹೃದಯದಲಿಕಸಿ ತುಂಬೊ ರಸದ ಮುಲಾಮಾದಳು ಬಿರುಕ ಗೋಡೆಗಳ ನಡುವೆಬೆಸುಗೆಯ ಚಿತ್ತ ಬೆನ್ನೊಳಗ ಬಿಗಿದುಕೊಂಡುಹರಿವ ತೊರೆಯಲಿ ತೇಲಿ ಬರೋ ನಾವೆಯಾದಳು ಉರಿವ ಒಲೆಗಳಲಿ ಗುಪ್ತ ಬೂದಿಯಾಗಿತೇದು ತೇಗಿ ನಕ್ಷತ್ರಗಳ ನೆಲಕ್ಕಿಳಿಸಿಗುಡಿಸಲು ಕಣ್ಣೊಳಗೆಸದಾ ಹುಣ್ಣಿಮೆಯ ಚಂದಿರ ಚಿತ್ರಿಸಿಬೆಳದಿಂಗಳ ನಕ್ಷೆಯಾದಳು ಅಂಗಳದ ಚಿಗುರಿಗೆ *************************

ಅಂಗಳದ ಚಿಗುರು Read Post »

ಇತರೆ

ನನ್ನ ಇಷ್ಟದ ಕವಿತೆ

ನನ್ನ ಇಷ್ಟದ ಕವಿತೆ ಡಾ.ಎಂ.ಗೋಪಾಲಕೃಷ್ಣ ಅಡಿಗ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನುಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರಇಷ್ಟೇ ಸಾಕೆಂದಿದ್ದೆಯಲ್ಲೋ ? ಇಂದು ಏನಿದು ಬೇಸರ?ಸಪ್ತ ಸಾಗರದಾಚೆಯೆಲ್ಲೊಸುಪ್ತ ಸಾಗರ ಕಾದಿದೆಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?ಯಾವ ಸುಮಧುರ ಯಾತನೆ?ಯಾವ ದಿವ್ಯ ಯಾಚನೆ?ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದ ಬೇಸರಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ.ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದಲೆ ನಿನ್ನನುಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು. ನವೋದಯ ಕಾಲದ ಕಾವ್ಯಗಳ ಸಾಲಿನಲ್ಲಿ ಪ್ರಾತಿನಿಧಿಕ ಕವನಗಳನ್ನು ಒಳಗೊಂಡ “ಕಟ್ಟುವೆವು ನಾವು” ಕವನ ಸಂಗ್ರಹದಲ್ಲಿ ” ಯಾವ ಮೋಹನ ಮುರಳಿ ಕರೆಯಿತು” ಕವಿತೆಯೂ ಒಂದು.೧೬ ಸಾಲುಗಳ ಈ ಕವನ ಪ್ರಸಿದ್ಧ ಭಾವಗೀತೆಯೂ , ಚಿತ್ರಗೀತೆಯೂ ಹೌದು.    ಜೋಡಿ ಸಾಲುಗಳಲ್ಲಿ ಅಂತ್ಯಪ್ರಾಸ ತ್ರಾಸವಿಲ್ಲದೇ ಸರಳವಾಗಿ , ಲಯ, ಗೇಯತೆ, ಮಾಧುರ್ಯತೆಯಿಂದ ಕೂಡಿದ ಹೃದ್ಯವೆನಿಸುವ ಸುಂದರ ಪದ್ಯ. ಕೆಲವು ಸಾಲುಗಳಂತೂ ಹಾಗೆಯೇ ನಾಲಿಗೆಯ ಮೇಲೆ ನರ್ತಿಸುವಂತೆ ಭಾಸವಾಗುತ್ತವೆ.    ಭಕ್ತಿ ಭಾವದೊಂದಿಗೆ ಕೃಷ್ಣ ಹಾಗೂ ಬೃಂದಾವನ ಗಳ ಉದಾಹರಣೆಯೊಂದಿಗೆ ನಮ್ಮ ಜೀವನ ಹಾಗೂ ನಶ್ವರವಾದ ಲೌಕಿಕ ಸುಖದಿಂದ ದೂರ ಸರಿಯುವ ಸಂದೇಶವನ್ನು ಈ ಸಾಲುಗಳು ನೀಡುತ್ತವೆ. ಅದೂ ಯಾರೋ ಕಿವಿಯಲ್ಲಿ ಮಧುರ ಕಂಠದಿಂದ ಜೇನ್ಮಳೆಯನ್ನು ಸುರಿಸಿದಂತೆ ಪದಗಳು ಲೀಲಾಜಾಲವಾಗಿ ಮನಸ್ಸಿಗೆ ನಾಟುವಂತೆ ಮೂಡಿಬಂದಿದೆ.ಪದಗಳ ಬಳಕೆಯಲ್ಲಿ ಪರ್ಯಾಯ ಪದಗಳಿಗೆ ಅವಕಾಶವೇ ಇಲ್ಲವೆಂಬಂತೆ ಪ್ರಯೋಗವಾಗಿದೆ. ಯಾವ ಮೋಹನನ ಕರೆಗೆ ಮನಸ್ಸು ಕರಗಿದೆಯೋ ಅಲ್ಲಿಗೇ ಸೆಳೆತ ಹೆಚ್ಚಾಗಿ ದೂರಕ್ಕೆ ಸಾಗುವಂತೆ ಮಾಡುವ ಅದಮ್ಯ ಶಕ್ತಿಯಿಂದಾಗಿ ಇಲ್ಲಿವರೆಗೂ ದೊರೆತದ್ದೆಲ್ಲವೂ ಬೇಡವೆನಿಸಿದೆ. “ಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ ಇಷ್ಟೇ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?”     ಮಾನವ ಶರೀರದ ರಚನೆಯಲ್ಲಿ ರಕ್ತ- ಮಾಂಸ, ಚರ್ಮದ ಹೊದಿಕೆಯಿಂದ ಕೂಡಿದ್ದು ಕ್ಷಣಿಕ ಆಸೆಗಳೆಡೆಗೆ ಬಹುಬೇಗ ಮರುಳಾಗಿಬಿಡುತ್ತದೆ. ಪ್ರೀತಿ, ಪ್ರೇಮಗಳೆಂಬ ಮೋಹವು ಕಾಮದ ಜಾಡು ಹಿಡಿದು ಇದಿಷ್ಟೇ ಸಾಕೆಂಬ ನಿರ್ಧಾರ ಮಾಡಿದಂತಿತ್ತು.ಹಾಗೆಯೇ ತನ್ನನ್ನು ಲೌಕಿಕ ಜಗತ್ತಿನ ಗೊಡವೆಗಳ ,ಆಕರ್ಷಣೆಯ ಗುಲಾಮನಾಗಿಸಿತ್ತು. ಆದರೇಕೋ ಬಯಸಿದ, ಅನುಭವಿಸಿದ ಎಲ್ಲಾ ಸುಖ ಲೋಲುಪತೆಗಳು ಬೇಡವೆನಿಸಿ ಏಕತಾನತೆಗೆ ಮನಸ್ಸು ಹಪಹಪಿಸುತ್ತಿದೆ ಎಂಬುದು ಇದರ ಮೂಲಕ ಕಂಡುಬರುತ್ತದೆ.   ಬೇಸರಿಕೆಯೊಂದು ಮನದ ಮೂಲೆಯಲ್ಲಿ ಮೊಳೆತು ಜೀವನವೆಂದರೆ ಕೇವಲ ಪ್ರಾಪಂಚಿಕ ಸುಖದಲ್ಲಿ ಮುಳುಗಿ ಸದಾಕಾಲವೂ ಖಿನ್ನತೆ, ಮಾನಸಿಕ ವೇದನೆ ಅನುಭವಿಸುತ್ತಾ ತೊಳಲಾಡುತ್ತಿರುವುದಲ್ಲ , ಬದಲಾಗಿ ಇದೆಲ್ಲವನ್ನೂ ಮೀರಿದ ದಿವ್ಯ ಅನುಭವವೊಂದು ನಮಗಾಗಿ ಕಾದಿದೆ. ಅದನ್ನು ನಾವು ಪಡೆಯಲು ಸಜ್ಜಾಗಬೇಕಿದೆ.   ” ಯಾವ ಸುಮಧುರ ಯಾತನೆ? ಯಾವ ದಿವ್ಯ ಯಾಚನೆ?” ಈ ಅದ್ಭುತ ಸಾಲುಗಳು ನೀಡುವ ಅರ್ಥ. ” ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ” ಈ ಸಾಲಿನಲ್ಲಿ ಎಲ್ಲಿಯೋ ಅಗೋಚರವಾದ ಸಪ್ತ ಸಾಗರದ ತೀರಕೆ ಸೆಳೆಯುವ ಕವಿಯ ಮನಸ್ಸಿಗೆ ಮೂಕವಾದ ಮರ್ಮರವೊಂದು ತಲುಪಿರುವಂತೆ ಭಾಸವಾಗುತ್ತಿದೆ. ನನ್ನ ಮನಸ್ಸನ್ನು ಮೆಚ್ಚಿದ ಸಾಲು ಹಾಗೂ ಸದಾ ಕಾಡುವ ಭಾವ. ಯಾವುದೋ ಅಲೌಕಿಕ ಶಕ್ತಿಯೊಂದು ಈ ಲೋಕದ ಜನರನ್ನು ಮೃದುವಾಗಿ ಎಚ್ಚರಿಸಿ ಇಹವನ್ನು ಬಿಡಲಾಗದೇ ಅಸಹಾಯಕ ಮನಸ್ಥಿತಿಯಲ್ಲಿರುವ ಯಾತನಾಮಯ ಜೀವಗಳನ್ನು ಚೈತನ್ಯಯುಕ್ತ ಜಗತ್ತಿಗೆ ಸೇರಿಸುತ್ತಿದೆ. ಹಾಗೆಯೇ ” ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ”ಈ ಸಾಲೂ ಕೂಡ ನಮ್ಮ ಸಾರ್ವಕಾಲಿಕ ಬದುಕಿಗೆ ಹಿಡಿದ ಕನ್ನಡಿಯೇ ಸರಿ. ಬದುಕೆಂದಿಗೂ ಗೊಂದಲಗಳ ಗೂಡಾಗದೇ ನೆಮ್ಮದಿಯ ತಾಣವಾಗಿರಬೇಕು.”ಇಲ್ಲ” ಗಳ ಕಡೆ ಮನಸ್ಸು ವಾಲಿರುವುದರಿಂದ ನಿಜವಾದ ಆನಂದವನ್ನು ಕೈಚೆಲ್ಲಿ ಮತ್ತೆಲ್ಲೋ ವ್ಯರ್ಥ ಪ್ರಯತ್ನ ಮಾಡುವುದೆಷ್ಟು ಸರಿ ಅಲ್ಲವೇ? ಇದ್ದುದರಲ್ಲಿ ನೆಮ್ಮದಿಯ ಕಂಡಾಗ ದೊರೆಯಬಹುದಾದ ಸಂತಸ ಪರರಿಂದ ಕಿತ್ತುಕೊಳ್ಳುವುದರಿಂದ ಸಿಗಲಾರದು, ಸಿಕ್ಕರೂ ಕ್ಷಣಿಕ.ತಮ್ಮ ಹತ್ತಿರ ಏನೋ ಇರುವುದಿಲ್ಲ ತಮಗೆ ಅದು ಬೇಕಾಗಿರುತ್ತದೆ.ಅದಕ್ಕಾಗಿ ಜಗತ್ತು ಸದಾ ಪ್ರಯತ್ನಿಸುತ್ತಲೇ ಇರುವುದನ್ನು ಕಾಣುತ್ತೇವೆ. ಪಡೆದಾಗ ಸಂತಸ ಪಡುವ ಮನಸ್ಸು ಕ್ರಮೇಣ ಮತ್ತೇನೋ ಬಯಸುತ್ತದೆ ಅಥವಾ ಇರುವುದು ಕಡಿಮೆ ಯೂ ಎನಿಸಬಹುದು. ಪುನಃ ಮನಸ್ಸು ಹಾತೊರೆಯುತ್ತದೆ.ಹೀಗೆ ಜೀವ ಇರುವ ತನಕ ಕೊರತೆಗಳಿಗೂ ಬರವಿಲ್ಲ.ಆಸೆಗಳಿರಲಿ ದುರಾಸೆಗಳು ನಿಷಿದ್ಧ. ಹೀಗೆ ಪ್ರಶ್ನೋತ್ತರಗಳ ಮೂಲಕವೇ ಸಹೃದಯ ಓದುಗರ ಅಭಿರುಚಿಗೆ ತಕ್ಕಂತೆ ಮನಮುಟ್ಟುವ , ಭಾವಗಳನ್ನು ತನ್ನೆಡೆಗೆ ಸೆಳೆಯುವ ಮೋಹಕ ಶಕ್ತಿಯಿರುವ ಪದ್ಯ. ಮರದೊಳಡಗಿದ ಬೆಂಕಿ ಕಣ್ಣಿಗೆ ಅಗೋಚರ.ಹಾಗೆಯೇ ಮನದೊಳಡಗಿರುವ ಬೇಸರವೂ. ಮನದ ಬೇಸರವು ಹೊತ್ತಿ ಉರಿದು ಕಾತರದ ರೂಪವಾಗಿದೆ. ಏನು- ಏಕೆ ಎಂಬ ಅತೀವ ಉತ್ಸುಕತೆಯ ಮನಸ್ಸಿಗೆ ಬಹಳಷ್ಟು ಕಾಡುತ್ತದೆ. ಜೀವಾಂಶವೇ ನನ್ನ ಬಿಟ್ಟು ದೂರ ಹೋದಂತೆ ಇರುವುದೆಲ್ಲವನ್ನು ಬಿಟ್ಟು ಮತ್ತೆಲ್ಲೊ ಮನಸ್ಸು ಏನನ್ನೊ ಅರಸುತ್ತಾ ಹೊರಡುತ್ತದೆ. ನಾ ಮೆಚ್ಚುವ ಈ ಕವಿತೆಯು ಸದಾ ಗುಯ್ಗುಡುತ್ತದೆ ನನ್ನ ಕಿವಿಯಲ್ಲಿ. ****************************** ಸರಿತಾ ಮಧು

ನನ್ನ ಇಷ್ಟದ ಕವಿತೆ Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು ಫೇಸ್ಬುಕ್ಕಿನ ತುಂಬ ಹರಡುವ ಪದ್ಯದ ಘಮಲಿಗೆ ತಮ್ಮ ದನಿಯನ್ನೂ ಸೇರಿಸಲು ಹಾತೊರೆಯುತ್ತಿರುವ ಅಸಂಖ್ಯ ಕವಿ ಮನಸ್ಸುಗಳ ನಡುವೆ ಕೊಟ್ರೇಶ್ ತಂಬ್ರಳ್ಳಿ ಅಮರಗೋಳಮಠ ಅವರದು ಗಮನಿಸಲೇಬೇಕಾದ ಹೆಸರು. ಸ್ವಲ್ಪ ಹದವೆನ್ನಿಸುವ ಯಾರದೇ ಕವಿತೆಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ಕೊಟ್ರೇಶ್ ಆಗೀಗ ತಮ್ಮ ರಚನೆಗಳನ್ನೂ ಈ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟು ಪ್ರತಿಕ್ರಿಯೆಗೆ ಕಾಯುತ್ತಾರೆ. ನಿಜಕ್ಕೂ ಚಂದ ಇರುವ ಅವರ ನಿಜದ ರಚನೆಗಳಿಗಿಂತ ತಕ್ಷಣಕ್ಕೆ ಕೋಪ ತರಿಸುವ, ಸ್ವಲ್ಪ ಒರಟೇ ಎನ್ನಿಸುವ ಅವರ ಪ್ರತಿಕ್ರಿಯೆ ಹೆಚ್ಚು ಸ್ಪೇಸ್ ಪಡೆಯುವದನ್ನು ಗಮನಿಸುತ್ತಲೇ ಇದ್ದೇನೆ. ಮೂಲತಃ ಲಂಕೇಶರ ಅಪ್ಪಟ ಅನುಯಾಯಿಯಾದ ಅವರು ಮಾತು ಮಾತಿಗೆ ಲಂಕೇಶರನ್ನು ಅವರು ಈಗ ಇದ್ದಿದ್ದರೆ ಹೇಗೆ ಪ್ರತಿಕ್ರಯಿಸುತ್ತಿದ್ದರು ಎಂದೆಲ್ಲ ಹೇಳುವಾಗ ಹೆಚ್ಚು ವಿದ್ಯಾಭ್ಯಾಸ ಮಾಡದೆಯೂ ಸಾಹಿತ್ಯದ ನಮ್ರ ವಿದ್ಯಾರ್ಥಿಯಾದ ಅವರ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಹುಟ್ಟುತ್ತದೆ. ನಿಜಕ್ಕೂ ಕವಿತೆ ಎಂದರೇನು? ಇದು ಯಾವತ್ತಿಗೂ ಸ್ಪಷ್ಟ ಉತ್ತರ ಸಿಕ್ಕದ ಮತ್ತು ನಿಯಮಿತ ಡೆಫಿನಿಶನ್ ಮೀರಿದ ಸಾರ್ಥಕ ಸಾಲುಗಳು ಎನ್ನುವುದೇ ನನ್ನ ನಮ್ರ ಉತ್ತರ. ಏಕೆಂದರೆ ಕವಿತೆಯನ್ನೂ ಮತ್ತು ಕವಿತೆ ಕಟ್ಟಿ ಕೊಡುವ ಹಿತವನ್ನೂ ಬರೆದ ಕವಿಗಿಂತಲೂ ಆ ಕವಿತೆಯನ್ನು ಓದಿದ ಓದುಗ ಅನುಭವಿಸಬೇಕು. ಕವಿ ತನ್ನ ಕವಿತೆಯಲ್ಲಿ ಹೇಳ ಹೊರಟ ಸಂಗತಿಗಿಂತಲೂ ಮುಖ್ಯವಾದದ್ದು ಓದುಗನಿಗೆ ಹೊಳೆಯಬೇಕು ಮತ್ತು ಆ ಅನ್ನಿಸಿಕೆಯೇ ಆ ಕವಿಯನ್ನೂ ಆ ಕವಿತೆಯನ್ನೂ ಸಾಹಿತ್ಯ ಚರಿತ್ರೆಯ ಮುಂದಣ ಪಯಣದ ಹೆಜ್ಜೆಯಾಗಿ ಕಾಣಬೇಕು. ಆದರೆ ಇವತ್ತು ಧಂಡಿ ಧಂಡಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ     ಕವಿತೆಗಳ ರೂಪದಲ್ಲಿರುವ ಗದ್ಯದ ಸಾಲುಗಳು ಆ ಅಂಥ ನಿಕಷಕ್ಕೆ ಒಳಗೊಳ್ಳುತ್ತಿವೆಯೇ? ಓದುಗ ಅವನ್ನು ಸೀರಿಯಸ್ ಆಗಿ ಓದಿದ್ದಾನೆಯೇ? ಎಂದು ಪರಿಶೀಲಿಸ ಹೋದರೆ ನಿರಾಸೆ ಕಾಡುತ್ತದೆ. ಏಕೆಂದರೆ ಸ್ವಂತಿಯ ಪಟಗಳಲ್ಲಿ, ಅನಿಷ್ಟದ ರಾಜಕೀಯ ನಿಲುವುಗಳಲ್ಲಿ, ಎಡಬಲದ ಹೊಯ್ ಕೈಗಳಲ್ಲಿ ನಿಜಕ್ಕೂ ನಿಲ್ಲಬಲ್ಲ ಕವಿತೆಗಳು ಕೇವಲ ಲೈಕುಗಳಲ್ಲಿ ಹೆಚ್ಚೆಂದರೆ ನಗುವ/ ಅಳುವ/ ಲವ್ ಸಿಂಬಲಿನ ಈಮೋಜಿಗಳಲ್ಲೇ ತಮ್ಮ ಆಯಸ್ಸು ಮುಗಿಸುತ್ತಿವೆ. ಅಲ್ಲದೇ ದಿನಕ್ಕೆ/ಗಂಟೆಗೆ ಹೊಳೆದ ಸಾಲನ್ನೇ ಕವಿತೆಯೆಂದು ತೇಲಿಬಿಡುವ ಉಮೇದಿನಲ್ಲಿ ಆ ಸಾಲುಗಳು ಪಕ್ವವಾಗಿ ಹದಗೊಂಡು ಸುಖ ಪ್ರಸವ ಕಾಣದೇ ಸಮಯ ನೋಡಿಕೊಂಡು ಹೆರಿಗೆ ಮಾಡಿಸಿದ ಸಿಸೇರಿಯನ್ ಶಿಶುಗಳಂತೆ ಕಾಣುವ ಪ್ರಮೇಯಗಳೇ ಹೆಚ್ಚು. ಕವಿಯಾದವನು ಸಾಹಿತ್ಯ ಚರಿತ್ರೆಯನ್ನು ಅರಿತಿರಬೇಕು, ಪೂರ್ವ ಸೂರಿಗಳನ್ನು ಓದಿರಲೇಬೇಕು, ಕವಿತೆಯ ರಚನೆಗೆ ಸಾಹಿತ್ಯ ವಿಭಾಗೀಕರಣದ ಹಿನ್ನೆಲೆ ಮುನ್ನೆಲೆ ಗೊತ್ತಿರಬೇಕು,ಸಾಹಿತ್ಯ ಕೃಷಿಯಲ್ಲಿ ಈಗಾಗಲೇ ತೊಡಗಿ ಕೊಂಡವರ ನಡುವೆ ಗುರ್ತಿಸಿಕೊಂಡಿರಬೇಕು ….. ಇತ್ಯಾದಿ ಇತ್ಯಾದಿಗಳೆ ಮಾನದಂಡಗಳಾದರೆ, ಪಾಪ ಕೊಟ್ರೇಶ್ ಯಾವತ್ತಿಗೂ ಕವಿ ಎನ್ನಿಸಿಕೊಳ್ಳಲಾರರು. ತಮ್ಮ ಬದುಕಿಗೆ ಸಣ್ಣದೊಂದು ಹೋಟೆಲ್ ನಡೆಸುತ್ತಿರುವ ಅವರ ಸಾಹಿತ್ಯದ ಪ್ರೀತಿ ಮತ್ತು ಪುಸ್ತಕದ ಹುಚ್ಚು ಎಂಥೆಂಥ ಶ್ರೀಮಂತರಲ್ಲೂ ವಿದ್ಯಾವಂತರಲ್ಲೂ ಇರದುದು ನನಗೆ ಗೊತ್ತಿರುವ ಅಪ್ಪಟ ಸತ್ಯ. ಆಗೀಗ ನನ್ನಂಥವರ  ಬಲವಂತಕ್ಕೆ ಕನ್ನಡದ ಪೂರ್ವ ಸೂರಿಗಳನ್ನು ಓದುವ ಸಂಕಲ್ಪ ಮಾಡುತ್ತಾರಾದರೂ ಅವರ ನಿತ್ಯದ ಜಂಜಡದಲ್ಲಿ ಅದು ಸಾಧ್ಯವಿಲ್ಲದ ಸಂಗತಿ. ಆದರೂ ಅವರ ಛಲ ಮತ್ತು ತಿಳಿಯಲೇ ಬೇಕೆನ್ನುವ ಉಮೇದು ಅವರು ನಿತ್ಯ ಸ್ತುತಿಸುವ ಲಂಕೇಶರ ಓದಿನಿಂದ ಅವರು ಪಡೆದಿದ್ದಾರೆ. ಲಂಕೇಶ್ ಯೂನಿವರ್ಸಿಟಿ ಸೃಷ್ಟಿಸಿದ ಅಸಂಖ್ಯಾತ ಪದವೀಧರರಲ್ಲಿ ಕೊಟ್ರೇಶ್ ರ್ಯಾಂಕ್ ಪಡೆದ ಮೇಧಾವಿ. ಜೊತೆಗೇ ಗೆಳೆಯ ಸ್ವಭಾವ ಕೋಳಗುಂದ ಅವರ ಜೊತೆಯಲ್ಲಿ ಬಿಡುವಾದಾಗಲೆಲ್ಲ “ಕುರಿತೋದದೆಯುಂ” ಎನ್ನುವ ಸಾಹಿತ್ಯ ಸಂಬಂಧೀ ಚಟುವಟಿಕೆ, ಕನ್ನಡದ ಪೂರ್ವ ಸೂರಿಗಳನ್ನೂ ಸಮಕಾಲೀನ ಕೃತಿಗಳ ಪರಾಮರ್ಶೆಯ ತರಗತಿಗಳನ್ನೂ ಆಯೋಜನೆ ಮಾಡುವ ಅವರ ಗುಣ ಗ್ರಾಹೀ ಚಿಂತನೆಯ ದ್ಯೋತಕ. ಕೊಟ್ರೇಶರ ಕವಿತೆಗಳನ್ನು ಕುರಿತು ಹೇಳಬೇಕಾದ ಈ ಮಾತುಗಳಲ್ಲಿ ಅವರ ವೈಯುಕ್ತಿಕ ವಿವರ ಕುರಿತ ಪರಿಚಯದ ಮಾತುಗಳ ಅವಶ್ಯಕತೆ ಏಕೆಂದರೆ ಇವತ್ತು ಬರೆಯುತ್ತಿರುವ ಹಲವು ಖ್ಯಾತ ನಾಮರ ಹಿಂದೆ ಅವರ ವಿದ್ಯಾಭ್ಯಾಸ, ಅವರ ಕೆಲಸ, ಮಾಧ್ಯಮ ಮತ್ತು ಮಾಧ್ಯಮ ಮಿತ್ರರುಗಳ ಜೊತೆಗಿನ ಒಡನಾಟವೇ ಕವಿಯ ರಚನೆಗಳಿಗಿಂತ ಮುಖ್ಯವಾಗುತ್ತಿರುವ ಕಾಲ ಘಟ್ಟದಲ್ಲಿ ಈ ಯಾವುದರ ಸಂಪರ್ಕವೂ ಸಾಧ್ಯತೆಗಳೂ ಇಲ್ಲದ ನಿರ್ವಾತದಲ್ಲಿ ತನಗನಿಸಿದ್ದನ್ನು ನಿರ್ಭಿಡೆಯಿಂದ ಬರೆಯುವ ಕೊಟ್ರೇಶ್ ಮುಖ್ಯರಾಗುತ್ತಾರೆ. ಇಲ್ಲಿನ ಪದ್ಯಗಳಿಗೂ ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣ ಜಾಗ ಕೊಟ್ಟು ಸಲಹಿದೆ. ಆದರೆ ಸಾಮಾನ್ಯವಾಗಿ ಫೇಸ್ಬುಕ್ ಸಲಹುತ್ತಿರುವ ಲೈಕುಗಳಿಂದಲೂ ಮತ್ತು ಓದುವ ಮೊದಲೇ ಒತ್ತಿಬಿಡುವ ಇಮೋಜಿಯ ಸಿದ್ಧ ಚಿತ್ರಗಳಿಂದಲೂ ಈ ಪದ್ಯಗಳು ಪಾರಾಗಿವೆ. ಅಂದರೆ ಬಲವಂತ ಬಸಿರು ಮತ್ತು ಅನಿವಾರ್ಯ ಹೆರಿಗೆಗಳಿಂದ ಈ ಪದ್ಯಗಳು ಬಚಾವಾಗಿವೆ. ಸಹಜತೆ ಮತ್ತು ಕವಿಸಮಯ ಇಲ್ಲಿನ ಬಹುತೇಕ ಕವಿತೆಗಳ ಹಿಂದೆ ಇರುವುದು ಶೃತವಾಗುವ ಅಂಶ. ಅದಕ್ಕಾಗಿ ಕೊಟ್ರೇಶ್ ಅವರನ್ನು ಅಭಿನಂದಿಸುತ್ತೇನೆ. ಬಹುತೇಕ ಪದ್ಯಗಳ ಮೊದಲ ಸಾಲು ಅಥವ ಶೀರ್ಷಿಕೆಗಳು ಈ ಕವಿಯ ವಿಸ್ತಾರವಲ್ಲದಿದ್ದರೂ ಮೇಲ್ನೋಟದ ಪೂರ್ವ ಸೂರಿಗಳ ಓದನ್ನು ದಾಖಲಿಸಿವೆ. ಯಾರನ್ನೂ ಓದದೆ ತಮಗೆ ತೋಚಿದ್ದೇ ಪ್ರಪಂಚ ಅನ್ನುವವರ ನಡುವೆ ಈ ಕವಿ ಭರವಸೆ ಹುಟ್ಟಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಕವಿತೆಗಳಲ್ಲಿ ದೌರ್ಬಲ್ಯ ಇಲ್ಲವೇ ಇಲ್ಲ ಎಂದು ಅರ್ಥವಲ್ಲ. ಭವಸಾರ ಅನ್ನುವ ಪದ್ಯ ಹೀಗೆ ಮೊದಲಾಗುತ್ತೆ. ” ನಕ್ಷತ್ರಗಳ ಮೋಹದಲ್ಲಿ ಹಗಲನ್ನು ಮರೆತು ಬಿಟ್ಟೆ..” ಆರಂಭವೇನೋ ಕುತೂಹಲ ಹುಟ್ಟಿಸುತ್ತದೆ, ನಿಜ. ಆದರೆ ಅದನ್ನು ಪದ್ಯದುದ್ದಕ್ಕೂ ವಿಸ್ತರಿಸುವುದರಲ್ಲಿ ಏನ್ನೆಲ್ಲ ಪುರಾಣ ಇತಿಹಾಸದ ಪ್ರತಿಮೆಗಳ ಮೆರವಣಿಗೆ ಇದ್ದೂ ಒಂದರ್ಥದಲ್ಲಿ ಬದುಕಿನ ಮಿತಿಯನ್ನು ಇದು ಹೇಳುತ್ತಿದ್ದರೂ ಒಟ್ಟೂ ರಚನೆ ಸಮಗ್ರೀಕರಣದ ಹಂತದಲ್ಲಿ ಇನ್ನೂ ಪಕ್ವವಾಗಬೇಕೆನ್ನಿಸುತ್ತದೆ. “ಹಣತೆ ಮತ್ತು ನನ್ನ ದಾರಿ” ಎನ್ನುವ ಕವಿತೆ ಮೇಲ್ನೋಟಕ್ಕೆ ಜಿ.ಎಸ್.ಎಸ್ ಅವರ ಬಹು ಚರ್ಚಿತ ಹಣತೆ ಹಚ್ಚುತ್ತೇನೆ ನಾನು…ಕವಿತೆಯ ನೆರಳಲ್ಲಿ ನಡೆದರೂ ಕವಿ ತನ್ನ ಮೇಲೆ ತಾನೇ ಇಟ್ಟುಕೊಂಡಿರುವ ಭರವಸೆಯ ಬೆಳಕು. ” ಮಗಳು ಮತ್ತು ಮಳೆ” ಆಕಾರದಲ್ಲಿ ಸಣ್ಣದಿದ್ದರೂ ಆಶಯದಲ್ಲಿ ದೊಡ್ಡದು. ಮಳೆಯ ಮುದದಿಂದ ಪ್ರೇರಿತ ಕವಿ ಕವಿತೆಯ ಹುನ್ನಾರದಲ್ಲಿ ಇರುವಾಗ ಕವಿಯ ಮಗಳು ಅವನ ತೊಡೆಯೇರಿ ಕೂರುತ್ತಾಳೆ. “ಬರೆಯುವ ಹಾಳೆ ಬೋರಲಾಯಿತು ಆದರೆ ಕವಿತೆಗೆ ಮಳೆಯಂತಹ ಜೀವ ತಂದಳು” ಎಂದು ಮುಕ್ತಾಯವಾಗುವ ಈ ರಚನೆ ನನಗೆ ತುಂಬ ಇಷ್ಟವಾಯಿತು. ಆದರೆ ಇಂಥದೇ ನಿರೀಕ್ಷೆಯಲ್ಲೇ “ಮಳೆಯ ಮಾರನೆ ದಿನ” ಶೀರ್ಷಿಕೆಯ ಪದ್ಯವನ್ನು ಸೀರಿಯಸ್ ಆಗಿ ಓದಿದರೆ ತಲೆ ಬರಹದಿಂದ ಆಕರ್ಷಿಸಿದರೂ ಸುಮ್ಮ ಸುಮ್ಮನೇ ತುರುಕಿದ ಪ್ರತಿಮೆಗಳ ಭಾರದಲ್ಲಿ ಕುಸಿದಿದೆ. “ಕೂಡಲ ಸಂಗಮದಲ್ಲಿ ಕೃಷ್ಣ ಮಲಪ್ರಭೆಯರು ಹರಿಯುತ್ತಿಲ್ಲ ಅಳುತ್ತಿದ್ದಾರೆ” ಎಂದು ಆರಂಭವಾಗುವ “ಅಣ್ಣಾ” ಎನ್ನುವ ರಚನೆ ಮೇಲ್ನೋಟಕ್ಕೆ ಹೊಸ ಆಶಯ ಮತ್ತು ಬಂಡಾಯದ ಚಿಂತನೆಯ ಹೊಳಹು ಅನ್ನಿಸುತ್ತದೆಯಾದರೂ ಒಟ್ಟೂ ಕವಿತೆ ಇನ್ನೂ ಮಾಗಿಸಿದ್ದಿದ್ದರೆ……ಅನ್ನಿಸುವುದು ಸತ್ಯ. ಸುಮ್ಮನೇ ಮೂಡಿಸಿದ ಆದರೆ ಬೇಕೆಂತಲೇ ತಂದು ಹೇರಿದ ಸಂಗತಿಗಳ “ರಾತ್ರಿ ಮೂರರ ಮಳೆ” ಟ್ಯಾಬ್ಲಾಯಿಡ್ ಪತ್ರಿಕೆಗಳು ಪ್ರಕಟಿಸುವ ಕಾವ್ಯ ಎಂದು ಅವು ಬಿಂಬಿಸುವ ಲಕ್ಷಣವುಳ್ಳ ರಚನೆ. ಕೃಷ್ಣನನ್ನು ನೆಪವಾಗಿಸಿಕೊಂಡು ರಾಧೆಯ ಅಳಲೆಂದು ಬಿಂಬಿಸಿದ ರಚನೆಗಳ ನಡುವೆ ಈ ಕವಿಯ “ಪ್ರಿಯೇ” ಎನ್ನುವ ಕವಿತೆ ಕುತೂಹಲ ಹುಟ್ಟಿಸುತ್ತದೆ. ನೀಲಾಕಾಶದ ಸಾಕ್ಷಿಯಲ್ಲಿ ಕೃಷ್ಣನ ಮುಗಿಯದ ಪ್ರೇಮದ ಪುಟಗಳಲ್ಲಿ ಒಂದಾಗೋಣ ಅನ್ನುವ ಕವಿಯ ನಿಲುವು ಒಪ್ಪಿತವೇ! ಅಯ್ಯಪ್ಪನ ದೇಗುಲಕ್ಕೆ ಹೆಣ್ಣು ಮಕ್ಕಳ ಪ್ರವೇಶ ನಿರಾಕರಣೆಯನ್ನು ಬಲವಾಗಿ ವಿರೋಧಿಸುವ ಶಕ್ತಿ          ” ಇರುಮುಡಿಯ ಸಹಜತೆ” ಕವಿತೆಯದು. ಆದರೆ ಬರಿಯ ಘೋಷಣೆ ಕವಿತೆಯಾಗದು ಎನ್ನುವ ಲೋಕೋತ್ತರದ ವಿಮರ್ಶೆ ಕೂಡ ಈ ರಚನೆಯ ಸಮಗ್ರತೆಯ ದೃಷ್ಟಿಯಿಂದ ಪರಿಶೀಲಿಸಿದರೆ ಉಳಿಯುವುದು ಮತ್ತದೇ ಗಿರಿಗೆ ಕೇಳಿಸದ ನರಿಯ ಕೂಗು. “ನೀಲಿ” ಶೀರ್ಷಿಕೆಯ ಪದ್ಯ ಕೃಷ್ಣನನ್ನು ಕುರಿತ ಚಿಂತನೆಯ ಜೊತೆಜೊತೆಗೇ ಕವಿ ಸ್ವಂತದ ಬದುಕಿನ ರಿಂಗಣಗಳನ್ನು ತುಲನೆ ಮಾಡಿಕೊಳ್ಳುತ್ತಲೇ ಮತ್ತೊಂದು ಹೊರಳಿಗೆ ತಯಾರಾಗುವ ಪರಿ ಆಕರ್ಷಣೀಯ. “ರಂಗ” ಎನ್ನುವ ಕವಿತೆಯಲ್ಲಿ ಕವಿ ಧ್ಯಾನಿಸುವುದು ದೇವರನ್ನೋ ಅವನ ಅಸ್ತಿತ್ವವನ್ನೋ ಅಥವ ಬದುಕಿನ ರಂಗ ಸ್ಥಳದ ಪರಿಕರವಾಗಿಯೇ ಬಳಸಲಾಗುವ ದೇವರ ಅಥವ ಸೃಷ್ಟಿಯ ಮಾಯಾ ಲೋಕವನ್ನೋ? ಅದು ಆ ಕ್ಷಣ ಓದುಗನಿಗೆ ನಿಲುಕುವ ಬೌದ್ಧಿಕತೆಯ ಮಟ್ಟದ್ದು. ನಿಜಕ್ಕೂ ಇಂಥ ರಚನೆಗಳೇ ಕಡಿಮೆಯಾಗುತ್ತಿರುವ ಹೊತ್ತಲ್ಲಿ ಈ ಕವಿಯ ಈ ರಚನೆ ನನಗಂತೂ ಹೆಚ್ಚು ಆಪ್ತವಾಗಿಸಿದ ಕವಿತೆಗಳಲ್ಲೊಂದು. ಮುಂದುವರೆದ ಕವಿ “ಓಂಕಾರ” ಪದ್ಯದಲ್ಲಿ ಹೇಳ ಹೊರಟದ್ದು ಏನು ಅನ್ನುವುದಕ್ಕೆ ಪದ್ಯದ ಕಡೆಯ ಸಾಲು “ಓಂಕಾರ…. ಓಂಕಾರ/ ಶ್ರೀಕಾರಕೆ ಜಯಕಾರ” ಓದಿದರೆ ಅವರ ನಿಲುವು ಸ್ಪಷ್ಟವಾಗುತ್ತದೆ. “ಹತ್ತನೇ ಕ್ಲಾಸಿನ ಹುಡುಗ” ವರ್ತಮಾನದ ವಿದ್ಯಾಭ್ಯಾಸ ಕ್ರಮವನ್ನು ಲೇವಡಿ ಮಾಡುತ್ತಿದ್ದರೂ ಅದಕ್ಕೆ ಪರ್ಯಾಯ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಬರಿಯ ಹೇಳಿಕೆಯೇ ಆಗಿ ಉಳಿಯುವುದು ವಿಷಾದಕರ. ಇವರ ಪದ್ಯಗಳಲ್ಲಿ ನನ್ನನ್ನು  ಹೆಚ್ಚು ಕಾಡಿದ್ದು ಮತ್ತು ನಿಜದ ಪದ್ಯದ ಗಂಧ ಪೂಸಿದ್ದು “ಹಕ್ಕಿ-ಹಿಕ್ಕೆ”. ಈ ಕವಿ ಉಪನಿಷತ್ತುಗಳನ್ನು ಓದಿದ್ದಾರೋ ಇಲ್ಲವೋ ಅರಿಯೆ. ಆದರೆ ಉಪನಿಷತ್ತುಗಳ ರೀತಿಯಲ್ಲಿ ಸಣ್ಣದೊಂದು ವಿಚಾರದ ಮೂಲಕ ಮಹತ್ತಾದುದನ್ನು ಕಾಣಿಸುವ ಪ್ರಯತ್ನ ಈ ಕವಿತೆಯಲ್ಲಿದೆ. ಅಲ್ಲಿರುವ ಯಾವುದೋ ಸಾಲನ್ನು ಇಲ್ಲಿ ಉದ್ಧರಿಸಿ ಭೇಷ್ ಅನ್ನುವುದಕ್ಕಿಂತ ಇಡೀ ಪದ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದುವುದು ಸೂಕ್ತ ಎನ್ನಿಸುತ್ತದೆ. ಆದರೂ ಪದ್ಯದ ನಡುವೆ ಹೇಗೋ ನುಸುಳಿರುವ ” ಉಗಿ ಮುಖಕ್ಕೆ” ಅನ್ನುವ ಥರದ ಪ್ರಯೋಗಗಳು ಕಾವ್ಯ ರಚನೆಯ ಅಲಂಕೃತ ಕರ್ಮಕ್ಕೆ ಲಕ್ಷಣವೆನ್ನಿಸುವುದಿಲ್ಲ. ಅದೊಂದು ಸಾಲು ಇಲ್ಲದಿದ್ದರೂ ಕವಿತೆ ಬದುಕ ಭಂಗುರತೆಯ ಮುಖಕ್ಕೆ ಉಗಿಯುತ್ತದೆ!  “ನಗ್ನ” ಪದ್ಯ ಕೂಡ ಈ ಕವಿಯು ಪ್ರಾಯಶಃ ನಿತ್ಯ ಅಲೋಚನೆಯ ಆವಿರ್ಭಾವ. “ನಿನ್ನ ಧ್ಯಾನದ ಯೋಗದಲಿ ನನ್ನಿರವನ್ನು ನಾನೇ ಮರೆ ತು ಹಟ ಮುನಿಯಂತೆ ಇಲ್ಲಿ ನಗ್ನನಾಗಿದ್ದೇನೆ” ಎಂದು ಆರಂಭವಾಗುವ ಕವಿತೆ, “ತೀಡಿದಂತೆಲ್ಲ ಘಮ ಘಮಿಸುವ ಗಂಧದ ಕೊರಡು ನಾನು” ಅನ್ನುವ ಸ್ವ ವಿಮರ್ಶೆಗೆ ಒಡ್ಡಿಕೊಳ್ಳುತ್ತ ಕಡೆಗೆ “ಇಲ್ಲಿ ನಿನ್ನದೇ ಗಂಧ, ಅಂದ ಆನಂದ ಪ್ರೇಮಾನಂದವು ನಿನ್ನ ಕಾಯುತ್ತ ಕುಳಿತಿದೆ” ಎಂದು ಕೊನೆಯಾಗುವಾಗ ಈ ಕವಿ ಇಷ್ಟೂ ಹೊತ್ತು ಧ್ಯಾನಿಸಿದ್ದು ಏನು? ಯಾಕಾಗಿ ಈ ಕನಲಿಕೆ ಎನ್ನುವುದರ ಸ್ಪಷ್ಟತೆ ದಕ್ಕುತ್ತದೆ. “ಪ್ರಾರ್ಥನೆ” ಹೆಸರಿನ ಈ ಕವಿಯ ಪದ್ಯಕ್ಕೂ ಅಡಿಗರ ಇದೇ ಹೆಸರಿನ ಬಹು ಖ್ಯಾತಿಯಾದ ಪದ್ಯಕ್ಕೂ ಹೆಸರಿನ ಕಾರಣದಿಂದ ಸಾಮ್ಯತೆ ಇದೆ. ಎರಡೂ ಪದ್ಯಗಳಲ್ಲಿ ಕವಿ ತನ್ನ ಮಿತಿಯನ್ನು ಹೇಳಿಕೊಳ್ಳುತ್ತಲೇ ಮಹತ್ತಾದುದನ್ನು ದಕ್ಕಿಸಿಕೊಳ್ಳುವ ಆರ್ತತೆಯನ್ನು ಯಶಸ್ವಿಯಾಗಿ ಹೇಳಿವೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೂ ಈ ಕವಿ ನಮ್ಮ ಪೂರ್ವ ಸೂರಿಗಳನ್ನು ಮತ್ತೆ ಮತ್ತೆ ಅಭ್ಯಾಸ ಮಾಡಿದರೆ ಇನ್ನೂ ನಿಕಷಕ್ಕೆ ಒಡ್ಡಿ ಕೊಳ್ಳಬಹುದು ಅನ್ನುವುದು ಸಹಜ ಆಶಯ. “ರಾತ್ರಿ ತುಂಬಾ ನೆನಪುಗಳು ಬಣ್ಣ ಬಣ್ಣ ತುಂಬಿದ ಸಿನಿಮಾ ಕಪ್ಪು ರಾತ್ರಿ, ಕೆಂಪು ಲೈಟು” (ಬಾರೆ ಕಟ್ಟು) ಪದ್ಯದಲ್ಲಿ ಇವರು ಧ್ಯಾನಿಸುವ ವಸ್ತು ವಿಶೇಷಗಳ, ವ್ಯಕ್ತಿ ಸಂಬಂಧಗಳ ತುಲನೆ ಬಹುತೇಕ ಇವರ ಇತರ ರಚನೆಗಳಲ್ಲೂ ಹಾಸು ಹೊಕ್ಕಾಗಿ ಬರುವ ಸಾಮಾನ್ಯ ಪರಿಕರಗಳು. ಸಾಮಾನ್ಯ ಸಂಗತಿಗಳ ಮೂಲಕವೇ ಅಸಾಮಾನ್ಯವಾದುದನ್ನು ಕಲ್ಪಿಸುವ ರಮಿಸುವ ಮತ್ತು ತನ್ನ ಆಲೋಚನಾ ಕ್ರಮದ ಮುನ್ನಡೆ. ಪ್ರಾಯಶಃ ಈ ಇದೇ ಕಾರಣಕ್ಕೇ ಇಂಥ ಅಸಾಮಾನ್ಯ ಚಿಂತನೆಯ ಮಾರ್ಗಕ್ಕೆ ಈ ಕವಿ ಹೆಚ್ಚು ಇಷ್ಟವಾಗುತ್ತಾರೆ. ಪ್ರಸ್ತುತ ಪದ್ಯ ಕೊನೆಯಾಗುವ ರೀತಿಯನ್ನು ಗಮನಿಸಿ; “ದನ ಕಾಯುವ ಹುಡುಗನೊಬ್ಬ ದಿನವೂ ಗೂಳಿ ಹತ್ತುವುದನ್ನು ನೋಡುತ್ತಾನೆ ಅಲ್ಲಿ; ಅವನಿಗೆ ಅದು ಬದುಕು:

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು Read Post »

You cannot copy content of this page

Scroll to Top