ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರಾಧಾ ಕೃಷ್ಣ

ಕವಿತೆ ರಾಧಾ ಕೃಷ್ಣ ಲಕ್ಷ್ಮೀ ಪಾಟೀಲ್ ಕೃಷ್ಣನ ಅಷ್ಟ ಮಹಿಷಿಯರಿಗಿಂತಲೂಹದಿನಾರು ಸಾವಿರ ನೂರುಭಕ್ತಪ್ರೇಮಿಗಳಿಗಿಂತಲೂ ಆತನ ಏಕೈಕ ಜೀವರಾಧೆಯೇ ಆತನಿಗಿಷ್ಟಗಂಡಿನಂತೆ ಸ್ವಾತಂತ್ರವನ್ನು ಉಸಿರಾಡಿದಳುಪ್ರೀತಿಗೆ ಭಾಷ್ಯ ಬರೆದಂತೆ ಬದುಕಿದಳು ಅಷ್ಟ ಮಹಿಷಿಯರು ಹದಿನಾರು ಸಾವಿರ ನೂರುಭಕ್ತ ಹೆಂಗಳೆಯರೆಲ್ಲ ಕೃಷ್ಣನ ಬರುವಿಕೆಗೆಕಾದು ಸೋತು ಹಿಡಿ ಶಾಪ ಹಾಕಿ ಮಲಗುತ್ತಿದ್ದರುಕನಸಿನಲ್ಲಿ ಸುಳಿದಂತೆ ಸುಳಿದರೆ ಬರೀ ಆತದೇಹವಾಗಿ ಜಡವಾಗುತಿದ್ದ ಮುಟ್ಟಾದುದನುಹಾಡಿರೇ ನೀವೆಲ್ಲ ಸೇರಿ ಎಂದು ಗೋಗರೆದುಬೇಡಿ ಸರಕ್ಕನೆ ಸರಿಸಿ ರಾಧೆಯ ಕೂಗಿಗೆಹಾತೊರೆದು ಓಡುತ್ತಿದ್ದ ಮನಬಿಟ್ಟು ಕದಲದೆಆತ್ಮವಾಗಿ ಅರಳುತ್ತಿದ್ದ ರಾಧೆ ಕಾಯಿಸಿ ಮಜಾ ಉಡಾಯಿಸಿದಾಗಲೆಲ್ಲಪುಟಿವ ಚೆಂಡಾಗಿ ನೋಟಕ್ಕೆ ನೂರು ರಂಗಾಗಿಕೈಗೆ ಸಿಗಲಾರದ ಕನಸುಗಳಿಗೆಲ್ಲ ರೆಕ್ಕೆ ಬರಿಸಿಮುಟ್ಟಾಗದೆ ಉಳಿವ ರಾಧೆಗೆ ಜೀವ ಕಾವ್ಯದ ವೇಷ ತೊಟ್ಟ ರಾಧೆಗೊಂದು ದ್ವಾರಕೆ ಕಟ್ಟಿಪ್ರೀತಿಸುವ ಜೀವಕ್ಕೆ ಅರ್ಪಿತಗೊಂಡರಾಧಾ ಕೃಷ್ಣನಾಗಿ ಲೋಕಾರ್ಪಣಗೊಂಡ ಪ್ರೀತಿ ರೂಪದ ಮಾದರಿ ನೀ ಮುಕುಂದಯುಗಾಂತರಿಸು ಸುರಿಸು ಪ್ರೀತಿ ಸಿಂಚನಯುಗ ಭಾರವನಿಳಿಸಿ ತಣಿಸು ಉದ್ಧರಿಸುಹಂಚು ವಿಶ್ವರೂಪ ಜೀವಕುಲಕೆಲ್ಲ ಸ್ನೇಹಸಿಂಚನಗೋಪಿ ರಾಧೆಯರಿಗೊಂದಿಷ್ಟು ಪ್ರೇಮ ಕಂಪಣ *********************

ರಾಧಾ ಕೃಷ್ಣ Read Post »

ಕಾವ್ಯಯಾನ

ದೇವರು

ಕವಿತೆ ದೇವರು ಮಾಲತಿ ಶಶಿಧರ್ ನಿನ್ನ ಮೆಚ್ಚಿಸಲೇಬೇಕೆಂಬಇರಾದೆಯೇನಿಲ್ಲ ಹುಡುಗ,ಸೊಡರ ಹೊತ್ತಿಸುವುದುದೇವರ ಮೆಚ್ಚಿಸುವುದಕ್ಕಲ್ಲಮನವ ಒಪ್ಪಿಸಲು… ನಿನ್ನ ಒಲಿಸಿಕೊಳ್ಳಲೇಬೇಕೆಂಬಹಠವೇನಿಲ್ಲ ಹುಡುಗ,ಹೂವ ಅರ್ಪಿಸುವುದುದೇವರ ಒಲಿಸಲಲ್ಲಭಕ್ತಿ ತೋರಿಸಲು… ನಿನ್ನ ಪಡೆಯಲೇಬೇಕೆಂಬಸಂಕಲ್ಪವೇನಿಲ್ಲ ಹುಡುಗ,ನೈವೇದ್ಯೆ ಕೊಡುವುದುದೇವರು ಪ್ರತ್ಯಕ್ಷವಾಗಲಿ ಎಂದಲ್ಲಪ್ರೀತಿ ಸಮರ್ಪಿಸಲು… ನಿನ್ನ ಮೆಚ್ಚಿಸಿ, ಒಲಿಸಿ, ಪಡೆದುಬಿಟ್ಟರೆಎಲ್ಲರಂತೆ ಕೇವಲಮನುಜನಾಗಿಬಿಡುವೆ,ನೀನೆಂದಿಗೂ ಮನದ ಗುಡಿಯೊಳಗೆನೆಲೆಸಿರುವ ನನ್ನ ದೇವರಾಗೆ ಉಳಿದುಬಿಡು **********************

ದೇವರು Read Post »

ಕಾವ್ಯಯಾನ

ಕವಿತೆ

ನೀನಿರಬೇಕು ಎಚ್. ಕೆ. ನಟರಾಜ ಇಳಿಸಂಜೆ ನಾನು ಮುಳುಗುವ ಸೂರ್ಯ..ನೀನೋ ರಾತ್ರೀ ಪ್ರೀತಿಸುವ ಆಗಸದ ಚಂದ್ರಮ.ಆದರೂ ಸೂರ್ಯ ಬೆಳಗುತ್ತಲೇಇರುತ್ತಾನೆ..ಚಂದ್ರ ನೀರಂತರ..ಮುದ ಕೊಡುತ್ತಿರುತ್ತಾನೆ.ನಿನ್ನಂತೆ ನಿನ್ನ ನಗುವಿನಂತೆಈ ಕತ್ತಲೆ ಬೆಳದಿಂಗಳಾಟದ ಗೊಂಬೆ ನಾನು.ಕತ್ತಲೆಯ ನಿಶೆತುಂಬಿದ ಮರುಳಹಗಲಿನಲ್ಲಿ ಬದುಕಿನ ಬಯಲಾಟದಪಾತ್ರವಾದರೂ ಆರ್ಭಟಿಸುವುದು ಇರುಳ ಬೆಳಕಿನಾಟದಲೆ..ಒಡ್ಡೋಲಗ ಪ್ರಭುಗಳು.ನೀನೆಂದರೆ ನೀನೇ ಒಡಲಾಳದ ಕರುಣೆಉಕ್ಕಿ ಬರಲು ಒಲುಮೆಯ ಚಿಲುಮೆ ಕನಸುಕಂಗಳಿಗೆ ಕಾರಿರುಳ ರಾತ್ರಿಯಲಿದೀಪ ದೀವಿಗೆಯಾಗಿ ಕಾಡುವ ನಿನನಗುವಿನಂದದಿ..ಮಲ್ಲಿಗೆ ಚಫ್ಪರಕಟ್ಟುವ ಬಯಕೆಯ ತಿರುಕ ನಾನು..ಪ್ರೇಮತಪೋವನದ ಸಂತನೂ ನಾನುನಕ್ಕು ಬಿಡೆ ಒಮ್ಮೆ.. ಕೇಕೇ ಹಾಕಿ.. ಹಸಿಇನಾಳಕೆ ಇಳಿಯಲೀ ಭೀಬತ್ಸ.. ಚಂದ್ರ ನಗುತ್ತಾನೆಹೀಗೇಕೆ ಮಾಡಿದೆ ತರುಣೆ.. ಕೇಳುತ್ತಾನೆಕನಸುಕಂಗಳಿಗೆ ಹರಿದ ಮಬ್ಬುಕಗ್ಗತ್ತಲೆನೀನಾಗು ನನ್ನ ನಗುವಿನ ತಿಳಿನೊರೆ.. ಬೆಳ್ನೊರೆ.ಅಪ್ಪಿಬಿಡು ಮನಸಾರೆ.. ಸಂಗತಿಗಳೇನು ಘಟಿಸಿಲ್ಲವಿಲ್ಲಿ.. ಅಸಂಗತವೂಸುಸಂಗತವೋ.. ಅರಿಯುವ ತವಕದೊಳಗೆಇದ್ದವರ್ಯಾರು..?ಬೆಚ್ಚಿ ಓಡುವ ಕುದುರೆ ಹಿಡಿದವರ್ಯಾರು..ಬಂದು ಬಿಡೆ ನನ ಮನದೊಳಗೆ ನುಗ್ಗಿಬಿಡೆತಡೆಯುವರ್ಯಾರು.. ನನ್ನ ಪದನುಡಿಯಪ್ರೀತಿಥೇರಿಗೆ ಅಡ್ಡ ನಿಲ್ಲುವರಾರು…??!! ಇರಬೇಕು ನೀನು.. ನಕ್ಷತ್ರಗಳ ನಗುವಾಗಿ..ಹೊಳಪಾಗಿ ಇಳಿಸಂಜೆ ಸೂರ್ಯನ ಹೊನಲಾಗೀ. .ಚಂದ್ರನ ತಂಪಾಗಿ.. ನನ್ನೊಲವ ಇಂಪಾಗಿ.. ಕಾವ್ಯಕನ್ನಿಕೆಯಾಗಿ ಏದೆಯಾಳದಿ ಸೊಂಪಾಗಿಕೊರಳ ಹಾಡಿನ ಪದವಾಗಿ.. ಕಿವಿ ತಣಿಸೋ ಮಾಧುರ್ಯವಾಗಿ.. ನನ್ನ ಪ್ರೀತಿಯರಮನೆಯ ಅರಸಿಯಾಗಿ.. ಇರಬೇಕು ನೀನು..ನನ್ನೊಲವ ಸಿರಿಯಾಗಿ ಬಿಸಿ ಬಯಕೆಯಉಸಿರಾಗಿ.. **********************

ಕವಿತೆ Read Post »

ಅನುವಾದ

ಅನುವಾದ ಸಂಗಾತಿ

ಕವಿತೆ ಧ್ಯಾನ ಕನ್ನಡಮೂಲ: ಸುನೀತಾ ಕುಶಾಲನಗರ ಇಂಗ್ಲೀಷಿಗೆ:ಸಮತಾ ಆರ್. ಧ್ಯಾನ ಎಲ್ಲೆಡೆ ಗವ್ ಎನ್ನುವಾಗಲೂಅದೇನೋ ಧ್ಯಾನಮನೆಯೊಳಗಿದ್ದರೂ ನುಗ್ಗಿಬರುವ ಕವಿತೆ ಆಕಾಶದಂತೆ ಆವರಿಸಿನಿತ್ಯ ಬೆಳದಿಂಗಳುಋತುಚಕ್ರ ಉರುಳಿದಂತೆಋತುಸ್ರಾವ ವ್ಯತ್ಯಾಸಬಣ್ಣದ ಕನಸುಗಳಿಗೆಅದೆಷ್ಟು ಕೂಸುಗಳ ಕೇಕೆಜತೆಯಾದ ಕ್ಷಣ ಕ್ಷಣವೂಕಣ ಕಣಕೂ ಹಿತಮತ್ತೊಮ್ಮೆ ಬದುಕಿಬಿಡೆಂದುಚಾಚುವ ಕೈಕಣ್ಣ ಸುತ್ತಿದ ಬಳೆಯಾಕಾರದಕಪ್ಪನೂ ನೇವರಿಸುವಕೂದಲ ಬಣ್ಣದ ಲೇಪನಕೆಹೊಸ ಹೊಳಪುಭೂತ ಭವಿಷ್ಯದಹಂಗ ತೊರೆವ ವರ್ತಮಾನತೀರಾ ಖಾಸಗಿ ಬದುಕೇಆದರೂ ಸದ್ದಿಲ್ಲದೆಮುಟ್ಟುಗೋಲಾಗುವ ಮುಟ್ಟಿಗೂಹುಟ್ಟುತ್ತಿದೆ ಹೊಸಹುರುಪುದಿನ,ದಿನಾಂಕಗಳಗಡಿದಾಟಿ ಬರುವಲವಲವಿಕೆಯ ಮತ್ತು. A Musing.. ‌‌Far and wide surrounded by gloom,‌But still have some kind of musing.‌A poem is invading even inside the home,‌Day to day covering like a moonlit sky. ‌‌Like babies giggling in‌Their rainbow dreams‌Drowning in pleasure bit by bit.‌In every intimate moment. ‌‌A held out hand is making me alive again.‌Even the coloured hair caressing‌The dark circles of eyes‌Is gleaming with new light. ‌‌As the seasons turnSo the periods change,‌The present is though‌Too personal of a life,Is careless of future and past, Silently forfeited monthly cycleIs giving birth to a new spirit.A vigorous spree is crossingAll the borders ofTime and space… *********************

ಅನುವಾದ ಸಂಗಾತಿ Read Post »

ಇತರೆ

ಕವಿತೆ

ಹಿರಿಯ ಕವಿಗಳ ಹಳೆಯ ಕವಿತೆಗಳು ಹೊಸ ಪೀಳಿಗೆಯ ಓದುಗರಿಗಾಗಿಹಿರಿಯಕವಿಗಳಕವಿತೆಯೊಂದನ್ನು ನಿತ್ಯ ನೀಡಲಾಗುವುದು ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣುಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ. ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,ಹೆಂಟೆಗೊಂದು ಮೊಗೆ ನೀರು ಹಿಗ್ಗಿ;ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿಹೆಸರು ಗದ್ದೆಯ ನೋಡಿಕೊಂಡು,ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು. ಸತ್ತಳು ಈಕೆ:ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?ಎಷ್ಟೋ ಸಲ ಈ ಮುದುಕಿ ಅತ್ತಳುಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;ಎಷ್ಟುಸಲ ಹುಡುಕುತ್ತ ಊರೂರು ಅಲೆದಳುತಪ್ಪಿಸಿಕೊಂಡ ಮುದಿಯ ಎಮ್ಮೆಗೆ? ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ. ಬನದ ಕರಡಿಯ ಹಾಗೆಚಿಕ್ಕಮಕ್ಕಳ ಹೊತ್ತುಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.ಈಕೆ ಉರಿದೆದ್ದಾಳುಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ. ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;ನನ್ನವ್ವ ಬದುಕಿದ್ದುಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ, ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,ಮನೆಯಿಂದ ಹೊಲಕ್ಕೆ ಹೋದಂತೆತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ ********************************* ಪಿ.ಲಂಕೇಶ್

ಕವಿತೆ Read Post »

ಕಾವ್ಯಯಾನ

ಕವಿತೆ

ಕವಿತೆ ಹಾಳೆ ತಿರುವಿದರೆ ಅಧ್ಯಾಯ ಮುಗಿಯದುಧರ್ಮಸ್ಥಾಪನೆಗೆ ಮತ್ತೆ ಮತ್ತೆ ಬರುತ್ತೇನೆಂದವಹೇಳಿದ್ದೂ ಅದನ್ನೇಎಲ್ಲವೂ ಮುಗಿಯದ ಅಧ್ಯಾಯ ದಾರಿಗಳು ಎಂದೋ ಕವಲೊಡೆದವುಎಲ್ಲ ಮರೆತಂತೆ ಹೆಜ್ಜೆಗಳೂ ನಡೆದವುಉಸಿರು ಭಾರದ ಜೋಕಾಲಿಜೀಕಿದಷ್ಟೂ ಎಳೆದಾಡುತ್ತಿತ್ತು ಕಟಕಟೆಯ ತೀರ್ಪಿನಲ್ಲಿಇವರು ಬೇರೆ ಬೇರೆಉಳಿಯುವುದು ಏನಿದ್ದರೂ ಲೆಕ್ಕಾಚಾರಉತ್ತರ ಹುಡುಕುವ ಪುಟ್ಟ ಕಂಗಳಲ್ಲಿಪ್ರಶ್ನೆಗಳ ಮಹಾಪೂರ ಹಾಳೆಗಳೂ ನಾಳೆಗಳಂತೆಕರೆದಷ್ಟೂ ತೆರೆಯುತ್ತವೆಚುಕ್ಕೆಯಿಡುವ ಮುನ್ನ ಅಲ್ಪವಿರಾಮಮುಗಿಸಲು ಮನಸ್ಸಿಲ್ಲಹೇಗೆಂದರೂಇದು ಮುಗಿಯದ ಅಧ್ಯಾಯ.

ಕವಿತೆ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

Anyone but the Spouse ವಾಸ್ತವ ಸಂಗತಿಗಳ ಯಥಾವತ್ ನಿರೂಪಣೆ ಪುಸ್ತಕ:Anyone but the Spouse ಸಣ್ಣ ಕಥೆಗಳು ಲೇಖಕಿ:ಪೂರ್ಣಿಮಾ ಮಾಳಗಿಮನಿ Anyone but the Spouse ಪೂರ್ಣಿಮಾ ಮಳಗಿಮನಿಯವರು ಇಂಗ್ಲಿಷ್ ನಲ್ಲಿ ಬರೆದು ಪ್ರಕಟಿಸಿರುವ ಸಣ್ಣ ಕಥಾ ಸಂಕಲನ. ಪಾಶ್ಚಾತ್ಯ ಸಂಸ್ಕೃತಿಯ ನೇರ ಪ್ರಭಾವಕ್ಕೊಳಗಾಗಿರುವ ಆಧುನಿಕ ಭಾರತೀಯ ಸಮಾಜದಲ್ಲಿ ಗಂಡು- ಹೆಣ್ಣುಗಳ ನಡುವಣ ಸಂಬಂಧ, ವೈವಾಹಿಕ ವ್ಯವಸ್ಥೆ ಮತ್ತು ಕೌಟುಂಬಿಕ ಬದುಕುಗಳಲ್ಲಿ ಆಗಿರುವ ಬದಲಾವಣೆಯ ಯುಕ್ತಾಯುಕ್ತತೆಯ ಕುರಿತು ಈ ಕಥೆಗಳು ತಣ್ಣಗೆ ಸಂಶೋಧನೆ ನಡೆಸುವಂತಿವೆ.   ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳು ೧೮೭ ಪುಟಗಳನ್ನು ಆವರಿಸಿಕೊಂಡಿವೆ. ಮೊದಲ ಕಥೆ The Travel Blogger ಮೂರು ಬಾರಿ ಪ್ರೇಮ ವಿಫಲಳಾಗಿ ನಿರಾಶಳಾದ ದೀಪಿಕಾ ಎಂಬ ಕಥಾನಾಯಕಿ ನಾಲ್ಕನೆಯ ಬಾರಿ ಪ್ರದೀಪ ಎಂಬ ಒಬ್ಬ ವಿವಾಹಿತ ವ್ಯಕ್ತಿಯನ್ನು ಆಕಸ್ಮಿಕವಾಗಿ ಭೇಟಿಯಾಗಿ ಪ್ರೀತಿಯೊಳಗೆ ಬೀಳುವುದರ ಕುರಿತಾದ  ಕಥೆ. ಅದು ಪರಸ್ಪರ ಪ್ರೀತಿಯೇ ಆದರೂ ಪ್ರದೀಪನ   ಮನಸ್ಸಿನ ತುಂಬಾ ಅಂಜಿಕೆ ಹಿಂಜರಿಕೆಗಳಿರುತ್ತವೆ. ತನ್ನ ಹೆಂಡತಿಯೊಂದಿಗೆ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡಿರುವ ಆತ ಕಥಾನಾಯಕಿಯೊಂದಿಗೆ ಕೂಡುವ ಮುಕ್ತ ಅವಕಾಶ ಸಿಕ್ಕಿದರೂ ಮುಂದೆ ಹೆಜ್ಜೆ ಇಡಲಾಗದೆ ಮಗನಿಗೆ ಹುಷಾರಿಲ್ಲವೆಂದು ಫೋನ್ ಬಂದ ಕೂಡಲೇ ಹಿಂದಿರುಗಿ ಮನೆಗೆ ಹೋಗುತ್ತಾನೆ. ಕೆಲವು ದಿನಗಳ ತನಕ ಅವನ ಸುದ್ದಿಯೇ ಇಲ್ಲದಾಗ ಕಥಾನಾಯಕಿ ಅವನ ಆಫೀಸಿಗೆ ಹೋಗಿ ವಿಚಾರಿಸಿದಾಗ ಅವನ ಗೆಳೆಯ ಅವನು ಬೈಕ್ ಅಪಘಾತದಲ್ಲಿ ಸತ್ತು ಹೋಗಿರುವ ಸುದ್ದಿ ತಿಳಿಸುತ್ತಾನೆ.ಕಥೆಯ ಕೊನೆಯ ಪಂಚ್ ಏನೆಂದರೆ ಪ್ರದೀಪನ ಗೆಳೆಯ ತಾನು ಮಾಡಿದ ತಪ್ಪಿನ ಬಗ್ಗೆ ದೀಪಿಕಾಳಲ್ಲಿ ಹೇಳಿಕೊಳ್ಳುವುದು.ಕಥಾನಾಯಕ ತಾನು ದೀಪಿಕಾಳ ಬಳಿಗೆ ಹೊಗಲೇ ಎಂದು ಕೇಳಿದಾಗ ತಾನು ಅವನನ್ನು ಒತ್ತಾಯಿಸಿ ಕಳುಹಿಸಲು ಕಾರಣ ಕಥಾನಾಯಕನ ಮಗ ತನ್ನ ಮಗನೇ ಆಗಿರುವುದು. ತನ್ನ ಅಪರಾಧಿ ಪ್ರಜ್ಞೆಯಿಂದ ಬಿಡುಗಡೆ ಹೊಂದುವುದು ಅವನ ಉದ್ದೇಶ. ಜೀವನವೆಂಬ ಯಾತ್ರೆಯಲ್ಲಿ ಇಂಥ ಬ್ಲಾಗುಗಳು ಸದಾ ಸೃಷ್ಟಿಯಾಗುತ್ತಲೇ ಇರುತ್ತವೇನೋ ಎಂಬ ಧ್ವನಿ ಇಲ್ಲಿದೆ. Take no logical love ಅನ್ನುವ ಕಥೆ ಗಂಡು ಹೆಣ್ಣುಗಳ ನಡುವಣ ಸಂಬಂಧದ ವಿಚಾರದಲ್ಲಿ ಆಧುನಿಕ ಜಗತ್ತಿನಲ್ಲಿ ಹೊಸ ತಲೆಮಾರಿನ ಹದಿಹರೆಯದವರ ಮನಸ್ಥಿತಿಯನ್ನು ಚಿತ್ರಿಸುತ್ತದೆ. ವಿವಾಹಪೂರ್ವದ ಲೈಂಗಿಕ ಸಂಬಂಧವನ್ನು ನಿಷೇಧಿಸಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಕಥಾನಾಯಕಿ ಶೆಹರ್ ಒಂದೆಡೆಯಾದರೆ ನಿಸರ್ಗದ ಕೂಗನ್ನು ಸ್ವೀಕರಿಸಿ ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸುವುದೇ ಆರೋಗ್ಯಕರವೆಂದು ಹೇಳುವ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಯುವ ವರ್ಗವನ್ನು ಪ್ರತಿನಿಧಿಸುವ ಟೀನಾ ಇನ್ನೊಂದೆಡೆ. ಬಾಯ್ ಫ್ರೆಂಡ್ಸ್‌ ಇಲ್ಲದಿರುವ ಶೆಹರಳನ್ನು ಲೈಂಗಿಕ ವಿಚಾರದಲ್ಲಿ ಏನೂ ತಿಳಿಯದ ಪೆದ್ದಿಯೆಂದು ಗೇಲಿ ಮಾಡಿ ಅವಳನ್ನು ನೋಯಿಸುವವರೇ ಇರುವ ಗುಂಪಿನಲ್ಲಿ ಇರಲಾಗದೆ ಬದಲಾಗಲು ಪ್ರಯತ್ನಿಸುವ ಶೆಹರ್ ಕೊನೆಗೂ ತಾನು ಕಂಡುಕೊಳ್ಳುವ ಬಾಯ್ ಫ್ರೆಂಡಿನಿಂದ ಬಯಸುವುದು ಲೈಂಗಿಕ ಸುಖದ ಜತೆಗೆ ಹೃದಯದ ಪ್ರೀತಿಯನ್ನು. ಆದರೆ ಆಗಲೇ ಸಾಕಷ್ಟು ಲೈಂಗಿಕ ಬಯಕೆಗಳನ್ನು ತೀರಿಸಿಕೊಂಡಿರುವ ಆ ಹುಡುಗ ಅವಳಿಗೆ ಮಾನಸಿಕವಾದ ಪ್ರೀತಿ ಕೊಡುವಲ್ಲಿ ವಿಫಲನಾಗುತ್ತಾನೆ. ವಿವಾಹಿತ ಸ್ತ್ರೀಯೊಬ್ಬಳಲ್ಲಿ ಅನುರಕ್ತನಾಗಿ ಅವಳಿಗಾಗಿ ಹಂಬಲಿಸುವ ವಿವಾಹಿತನಾದ ಒಬ್ಬ ವ್ಯಕ್ತಿಯು ಪ್ರೇಮ ನಿವೇದನೆ ಮಾಡಲು ಹೊರಟಾಗ .ತನ್ನ ಗಂಡ ಕಾಯಿಲೆಯಿಂದ ನರಳುತ್ತ ಮಲಗಿರುವುದರಿಂದ ಈತ ತನ್ನ ಮೇಲೆ ಸಹಾನುಭೂತಿ ತೋರಿಸುತ್ತಿದ್ದಾನೆಂದು ಅನುಮಾನಿಸಿ ಆಕೆ ಅವನನ್ನು ತಿರಸ್ಕರಿಸುವ ಕಥೆ Lift. ಸುಖೀಸಂಸಾರವೆಂದು ನೋಡಿದವರು ತಿಳಿದುಕೊಳ್ಳುವ ಲಾವಣ್ಯ, ರಂಜಿತರ ಬದುಕಿನಲ್ಲಿ ಬಿರುಕು ಮೂಡುವುದು ರಂಜಿತನಿಂದಾಗಿಯೇ. ಸುಂದರಿಯೂ ಪ್ರತಿಭಾವಂತೆಯೂ ಆದ ಹೆಂಡತಿಯ ಬಗ್ಗೆ ಒಳಗೊಳಗೇ ಮೆಚ್ಚುಗೆಯಿದ್ದರೂ ಅದನ್ನು ತೆರೆದ ಮನಸ್ಸಿನಿಂದ ಹೇಳಲು ಅವನ ‘ಮೇಲ್ ಈಗೋ’ ಬಿಡುವುದಿಲ್ಲ. ಹೆಂಡತಿ ಕಟ್ಟಿಕೊಟ್ಟ ಬುತ್ತಿಯಿಂದ ರುಚಿಯಾದ ಪದಾರ್ಥಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡು ತಿಂದಾಗ ಅವರು ಎಷ್ಟು ಹೊಗಳಿದರೂ ಅದನ್ನು ಹೆಂಡತಿಯಲ್ಲಿ ಹೇಳದವನು. ಆಫೀಸಿನಿಂದ ಪತ್ರಿಕೆಗೊಂದು ಜಾಹಿರಾತು ಕೊಡಲು ಸುಂದರಿಯೊಬ್ಬಳ ಚಿತ್ರ ಬೇಕೆಂದು ಹೇಳಿದಾಗ ಲಾವಣ್ಯಳಿಗೆ ಹೇಳದೆಯೇ ಅವಳ ಚಿತ್ರ ಬರೆದು ಬೇರೆ ಹೆಸರಿನಲ್ಲಿ ಪ್ರಕಟಿಸುವ ರಂಜಿತ್ ಹೆಂಡತಿಯ ಮುಂದೆ ಮಾತ್ರ ಭಾವೋನ್ಮಾದಕ ಭಂಗಿಯಲ್ಲಿರುವ ಆ ಚಿತ್ರವನ್ನು ಯಾರು ಬರೆದಿರಬಹುದು ಎಂದು ಸಂದೇಹ ವ್ಯಕ್ತ ಪಡಿಸುತ್ತಾನೆ. ಆದರೆ ಅವನು ನಿರೀಕ್ಷಿಸಿದ್ದಕ್ಕೆ ವ್ಯತಿರಿಕ್ತವಾಗಿ   ಲಾವಣ್ಯ ಆ ಚಿತ್ರಕಾರನ ಬಗ್ಗೆ ಭಾವುಕಳಾಗಿ ಕನಸು ಕಾಣುತ್ತಿರುವುದನ್ನು ಗಮನಿಸಿದ ರಂಜಿತ್ ನಿಜವನ್ನು ಹೇಳಿ ತನ್ನ ತಪ್ಪುಗಳನ್ನು ಒಪ್ಪಿಕೊಂಡಾಗ ಲಾವಣ್ಯ ಸಂತುಷ್ಟಳಾಗುತ್ತಾಳೆ.   ಹೀಗೆಯೇ ವೈವಾಹಿಕ ಬದುಕಿನಲ್ಲಿ ಗಂಡ ಹೆಂಡತಿಯರ ನಡುವೆ ಸಂಬಂದ ಸೌಹಾರ್ದಯುತವಾಗಿಯೇ ಇದ್ದರೂ ಸಣ್ಣ ಪುಟ್ಟ ಕಾರಣಗಳಿಗಾಗಿ ಅಥವಾ    ಬದುಕಿನ ಏಕತಾನತೆಯಿಂದ ಬದಲಾವಣೆಯನ್ನು ತಮಗರಿವಿಲ್ಲದೆಯೇ ಒಳಮನಸ್ಸಿನಿಂದ ಬಯಸುವುದು,ಒಂದಷ್ಟು ಕಾಲ ದೂರಾಗಿ ಅನಂತರ ಮತ್ತೆ ಒಂದಾಗುವುದು – ಇಂಥ ವಸ್ತುಗಳುಳ್ಳ ಒಟ್ಟು ಹತ್ತು ಕಥೆಗಳು ಇಲ್ಲಿವೆ.(Dull Student  ಎಂಬ ಒಂದು  ಪುಟ್ಟ   ಕತೆಯ ಹೊರತಾಗಿ).ಒಟ್ಟಿನಲ್ಲಿ ಮುಕ್ತ ಲೈಂಗಿಕತೆ, ವಿವಾಹ ಪೂರ್ವ ಮತ್ತು ವಿವಾಹ ಬಾಹಿರ ಸಂಬಂಧಗಳು ಮನುಷ್ಯ ಸಹಜವೆಂಬ ಭಾವನೆ ಇಲ್ಲಿದ್ದರೂ ಅವು ಕ್ಷಣಿಕವೆಂದೂ, ಭಾರತೀಯ ಸಮಾಜವು ಇದುವರೆಗೆ ಪಾಲಿಸಿಕೊಂಡು ಬಂದ ವೈವಾಹಿಕ ವ್ಯವಸ್ಥೆಯ ವಿರುದ್ಧ ಹೋಗದೆ ಕುಟುಂಬದೊಳಗಿನ ಪ್ರೀತಿಯ ಸಂಬಂಧಗಳನ್ನು ಗಟ್ಟಿಯಾಗಿ ಇಟ್ಟುಕೊಳ್ಳುವು  ದರಲ್ಲೇ ಬೆಚ್ಚಗಿನ ಸುರಕ್ಷೆಯಿರುವುದೆಂದೂ ಈ ಎಲ್ಲ ಕಥೆಗಳು ಧ್ವನಿಸುತ್ತವೆ. ಪೂರ್ಣಿಮಾ ಅವರು ಬಳಸುವ ಕಥನ ತಂತ್ರದಲ್ಲಿ ಹೇಳಿಕೊಳ್ಳುವಂಥ ಹೊಸತನವಿಲ್ಲದಿದ್ದರೂ ಅವರ ನಿರೂಪಣಾಶೈಲಿ ಅತ್ಯಂತ ಸೊಗಸಾಗಿದೆ. ಭಾಷೆಯು ಸರಳವೂ ಸುಂದರವೂ ಆಗಿದ್ದು ಕಥೆಗಳು ಸುಖವಾಗಿ ಓದಿಸಿಕೊಂಡು ಹೋಗುತ್ತವೆ. ಅಮೆರಿಕನ್ ಇಂಗ್ಲಿಷ್ ನ ಮೂಲಕ ಇವತ್ತಿನ ಯುವಜನತೆಯ ಶಬ್ದ ಭಂಡಾರದೊಳಗೆ ಸರ್ವೇಸಾಮಾನ್ಯವಾಗಿರುವ, ಹಳಬರಿಗೆ ಅಪರಿಚಿತವೆಂದು ಅನ್ನಿಸಬಹುದಾದ ಅನೆಕ ಪದಗಳು, ಪದಪುಂಜಗಳು, ಮತ್ತು ಸಂಕ್ಷಿಪ್ತ      ಮೊಬೈಲ್ ಮೆಸೇಜ್ ಭಾಷೆಗಳು ಇಲ್ಲಿ ಯಥೇಷ್ಟವಾಗಿವೆ. ಯಾವುದೇ ಘೋಷಿತ  ಸಿದ್ದಾಂತಗಳಿಗೆ ಅಂಟಿಕೊಳ್ಳದೆ ವಾಸ್ತವ ಸಂಗತಿಗಳನ್ನು ಯಥಾವತ್ತಾಗಿ ನಿರೂಪಿಸಿ ಕುತೂಹಲವನ್ನು ಹಿಡಿದಿಟ್ಟುಕೊಂಡೇ ಸಾಗುವ ಈ ಕಥೆಗಳು ಒಂದೇ ಓಟಕ್ಕೆ ಓದಿಸಿಕೊಂಡು ಹೋಗುತ್ತವೆ.. **************************************** ಡಾ.ಪಾರ್ವತಿ ಜಿ.ಐತಾಳ್

ಪುಸ್ತಕ ಸಂಗಾತಿ Read Post »

You cannot copy content of this page

Scroll to Top