ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ರೇಷ್ಮಾ ಕಂದಕೂರ.

ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆ
ಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ

ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿ
ಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ

ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆ
ಆ ದೇವನ ದೂಷಿಸತ ದಿನ ದೂಡುವದನು ನೋಡದಾಗಿದೆ

ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇ
ಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ

ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆ
ಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ ನೋಡದಾಗಿದೆ.

****************************

About The Author

3 thoughts on “ಗಝಲ್”

  1. ಮೇಡಂ, ಅನ್ಯಥಾ ಭಾವಿಸಬೇಡಿ. ಇದು ತಾಂತ್ರಿಕವಾಗಿ ಗಜಲ್ ಆಗಿಲ್ಲ. ಇದರಲ್ಲಿ ಕಾಫಿಯಾ ಪಾಲನೆಯಾಗಿಲ್ಲ. ಕಾಫಿಯಾ ಇಲ್ಲದೇ ಗಜಲ್ ಗಳಿಲ್ಲ.

  2. ಮೇಡಂ, ಅನ್ಯಥಾ ಭಾವಿಸಬೇಡಿ. ಇದು ತಾಂತ್ರಿಕವಾಗಿ ಗಜಲ್ ಆಗಿಲ್ಲ. ಇದರಲ್ಲಿ ಕಾಫಿಯಾ ಪಾಲನೆಯಾಗಿಲ್ಲ.

Leave a Reply

You cannot copy content of this page

Scroll to Top