ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವರು-ಇವರು

ಕೆ.ಎ. ಎಂ. ಅನ್ಸಾರಿ

ಮುಸ್ಸಂಜೆಯ ಹೊತ್ತು
ಮನೆಯತ್ತ
ಹೆಜ್ಜೆಯಿಡಲು
ಮಡದಿಯ
ಬಾಡಿದ ಮುಖ ದರ್ಶನ…

ಗೊತ್ತಾ ಇವರು ಇನ್ನಿಲ್ಲವಾದರಂತೆ…
ನಾನು
ಇನ್ನಾ ಲಿಲ್ಲಾಹ್.. ಎನ್ನುವಾಗ
ಮೊಗದಲ್ಲಿ ನಗುವ ಕಂಡ ಅವಳು…
ನಗಬಾರದೆಂದಳು…

ಒಂದೆರಡು ವರುಷಗಳ ಹಿಂದೆ
ಇವರು ಅವರನ್ನು
ಕೊಂದಿ ದ್ದರು..
ಸಾವಿಗೆ ಸಂಭ್ರಮಿಸಬಾರದು..

ದಫನ ವಾಗಿರಬಹುದೇ..
ನಾ ಕೇಳಿದ ಪ್ರಶ್ನೆ..
ಹೌದು. ಈಗ ಮುಗಿದಿರಬಹುದೆನುವ
ಉತ್ತರ..

ಇವರು-ಅವರು
ಇಬ್ಬರೂ ಊರಿನವರು ..
ಅದೇನೋ ಜಗಳ ತಾರಕಕ್ಕೇರಿದಾಗ
ಇರಿತದಿಂದ ಅವರು
ಪರಲೋಕ ತಲುಪಿದ್ದರು..
ಇಂದು ಇವರ ಸರದಿ..

ಮೆಲ್ಲನೆ ಮಸೀದಿಯತ್ತ ಹೆಜ್ಜೆ ಹಾಕಿದೆ..
ಪಕ್ಕದಲೇ ಖಬರಸ್ಥಾನ.
ಗುಂಪು ಕಟ್ಟಿ ನಡೆದ ಇವರು
ಒಬ್ಬಂಟಿ ಮಲಗಿದ್ದರು..
ಹೊತ್ತೊಯ್ದವರು ಮಣ್ಣು ಮಾಡಿ
ಮರಳಿದ್ದರು..

ಬಡ-ಸಿರಿವಂತ ರೆಲ್ಲರೂ
ಮಲಗುವ ತಾಣವಿದು..
ಇವರೀಗ ಒಬ್ಬಂಟಿ..
ಸುಮ್ಮನೇ ಪಕ್ಕದಲಿ ಯಾರು ಮಲಗಿರುವುದೆಂದು
ಕುತೂಹಲದಿ ನೋಡಿದೆ…

ಹೌದು..
ಪಕ್ಕದಲಿ ಅವರ ಹೆಸರು ಕೆತ್ತಿದ ಕಲ್ಲು
ನಗುವಂತೆ ಕಾಣಿಸಿತು..
ಅಂದಿನ ಶತ್ರುಗಳು ಇಂದು
ಅಕ್ಕ-ಪಕ್ಕದಲಿ ಮಲಗಿದ್ದರು ..!!!

*****************************

About The Author

Leave a Reply

You cannot copy content of this page

Scroll to Top