ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಶಿವಲೀಲಾ ಹುಣಸಗಿ

ಅರಿವಿಗೆ ಬಾರದ ಕ್ಷಣ ನೆನೆದು
ಭಯದ ನಡುವೆ ನಲುಗುತಿವೆ
ಹಿಂಡಿ ಹಿಪ್ಪೆಯಾದ ಮನಗಳು
ಆದ್ರತೆಗೊಂದು ಭದ್ರತೆಯಿಲ್ಲದೆ
ಅಂಜಿಕೆಯ ಹಿನ್ನೋಟ ತಲೆ ಕೆಳಗೆ
ಬಿಂಬಗಳ ಮೆಲುಕಿನ ಶರಣಾಗತಿ
ಗೊತ್ತು ಗುರಿಯಿಲ್ಲದ ಮೌನಕೆ
ಕೊರಳೊಡ್ಡಿ ನೇಣಿಗೇರಿದವರೆಲ್ಲ
ಥಟ್ಟನೆ ಪ್ರತ್ಯಕ್ಷವಾದ..ಪ್ರೇತಾತ್ಮದಂತೆ
ನರಕಗಳು ಅಂತಸ್ತಿನ ಅರಮನೆಯ
ಉತ್ಸವ ಮೂರ್ತಿಗಳಾಗುವಾಗೆಲ್ಲ
ಬಿಕ್ಕಳಿಕೆಗಳು,ನೀರಿಳಿಯದಾ ಗಂಟಲಲ್ಲಿ
ಉಸಿರ ಬಿಗಿದಾಟಕೆ ಹರಕೆಯ ಜಪತಪ
ನೆತ್ತಿಗಾದ ಗಾಯಕೆ ಸುಣ್ಣದಾ ಶೂ
ಚಿತ್ತದಲ್ಲಿ ಮೂಡಿದ ನಕ್ಷತ್ರಗಳೆಲ್ಲವೂ
ಬಾನ ಹುಡುಕಿ ಹೊರಟಂತೆ
ಮಾನಗಳೆಲ್ಲ ಬಿಕರಿಯಾಗಿಹವು
ಮಾರುಕಟ್ಟೆಗೂ ಲಗ್ಗೆಯಿಡದೆ
ಸಂದಿಗೊಂದಿಗಳಲ್ಲಿ ಅಡಗಿರುವ
ಗಿರಾಕಿಗಳಿಗೇನು ಕೊರತೆಯಿಲ್ಲ
ಮಾಂಸದ ಮುದ್ದೆ ಯಾವುದಾರೇನು
ಹರೆಯದಲಿ ಮಾಗಿರಬೇಕು ಅಷ್ಟೇ
ತುಟಿಕಚ್ಚಿ ನರಳುವಾಗೆಲ್ಲ ಟೊಂಕದಾ
ಡಾಬು ಸಡಿಲವಾಗಿ ಕಳಚಿದಂತೆ
ಮನಸಿಗೆ ರುಚಿಸದಿದ್ದರು ಲೋಭವಿಲ್ಲ
ದೇಹದಂಗಗಳಿಗೆ ಮೋಹದ‌ ಉಡುಗೊರೆ
ಇಳೆಯ ಸೇರುವ ಕಾಯ ನಿರ್ಮೊಹಿ
ಮಣ್ಣಾದವರ ಚರಿತ್ರೆ ಅರಹುವವರಿಲ್ಲ
ಸಾವು…ಎಂದೆಂದಿಗೂ ಸಾವೇ
ನಿರಾಂತಕ,ನಿರಾಕಾರಕ್ಕೆ ಮುನ್ನುಡಿ
ದಿಕ್ಕುಗಳ ಒಗ್ಗೂಡಿಸಿ ಐಕ್ಯವಾದಂತೆ
ಶೂನ್ಯದುಂಗುರವ ತೊಡಿಸಿದಂತೆ

*******

About The Author

6 thoughts on “ಶೂನ್ಯದುಂಗುರ….”

  1. Dr. Naveenkumsr A.G

    ದೇಹದಂಗಡಿಗೆ ಮೋಹದ ಉಡುಗರೆ ಕಲ್ಪನೆಯೇ ಅದ್ಬುತವಾಗಿದೆ ಸಾಲು ದ್ವನ್ಯಾರ್ಥ ಭಾವ ಓದುಗನನ್ನು ಚಿಂತನೆಗೆ ಏಳಿಸುವಂತಿದೆ ಕವನ

  2. ಹೌದು ನಿರಾಕಾರ ಸಾವಿನ ಶೂನ್ಯದುಂಗುರ ಅರ್ಥವಾಗದ್ದು, ಮೌನದ ತಲ್ಲಣ .ಕವನ ಅರ್ಥಪೂರ್ಣವಾಗಿ ದೆ

Leave a Reply

You cannot copy content of this page

Scroll to Top