ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

  ಡಾ ಪ್ರತಿಭಾ  ಹಳಿಂಗಳಿ

ಭಯ ಅಂದರೆ ಏನು ಎನ್ನುವವರು ಕೂಡ ಈ ಕೊರೊನಾ ಮಹಾಮಾರಿಗೆ ಹೆದರುವಂತಾಗಿದೆ.ತನ್ನ ಕಬಂಧ ಬಾಹುಗಳಿಂದ ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ರೋಗಕ್ಕೆ ಚಿಕಿತ್ಸೆ ಇನ್ನು ಲಭ್ಯವಿಲ್ಲ.

           ಇದರ ಮುಖ್ಯ ಲಕ್ಷಣ ಸೀನು,ಕೆಮ್ಮು,ಜ್ವರ ನೋಡಿದರೆ ಸಾಮಾನ್ಯ ನೆಗಡಿ,ಕೆಮ್ಮಿನಂತೆ ಈ ರೋಗ ಯಾವುದೇ ಹೊತ್ತಿನಲ್ಲಿ ತನ್ನ ಅಸ್ತಿತ್ವ ಬದಲಾಯಿಸಿ ಭಯಂಕರ ವಾಗಿಬಿಡುತ್ತದೆ.ಉಸಿರಾಟದ ತೊಂದರೆ ಉಂಟಾಗಿ ಸರಿಯಾಗಿ ಉಸಿರಾಡಲು ಆಗದೆ ಆಕ್ಸಿಜನ್, ವೆಂಟಿಲೇಟರಗಳ ಬಳಕೆ ಅನಿವಾರ್ಯ ವಾಗುತ್ತದೆ.ಕೊರೊನಾ ಪೀಡಿತ ಎಲ್ಲಾ ರೋಗಿಗಳಿಗೂ ಆಕ್ಸಿಜನ್ ಮತ್ತು ವೆಂಟಿಲೆಟರ್ ಗಳ ಅವಶ್ಯಕತೆ ಇರುವುದಿಲ್ಲ ಬಹಳಷ್ಟು ಜನರಲ್ಲಿ ಅದು ಸಾಮಾನ್ಯ ಕೆಮ್ಮು, ಶೀತ ,ಜ್ವರ ದಂತಹ ಲಕ್ಷಣ ಹೊಂದಿ ಸರಿಹೋಗುತ್ತದೆ.

                    ಇಷ್ಟು ಆದರೆ ಕೊರೊನಾ ಕ್ಕೆ ಯಾರ ಹೆದರುತ್ತಿರಲಿಲ್ಲವೆನೊ? ಆದರೆ ಇದು ಸಾಮಾನ್ಯ ಎನಿಸುತ್ತಲೆ ಕೆಲವರಿಗೆ ಉಸಿರಾಟದ ತೊಂದರೆ ಉಂಟಾಗಿ ರೋಗಿ ಸಾವನ್ನಪ್ಪಬಹುದು.ಇದರಲ್ಲಿ ಸಾವಿನ ಪ್ರಮಾಣ ಕಡಿಮೆ ಇರಬಹುದು ಆದರೆ ಇದು ಅತಿ ವೇಗವಾಗಿ ಹಬ್ಬುವ ,ಮತ್ತು ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಕೆಮ್ಮು, ಸೀನು ಇದರ ಮೂಲಕ ಮತ್ತು ಶ್ವಾಸದ ಮೂಲಕವೂ ಈ ರೋಗ ಹೊರಡುತ್ತದೆ.

ಇದರಲ್ಲಿ ನಾವೇನು ಮಾಡಲು ಸಾಧ್ಯ ಇದರ ಬಗ್ಗೆ  ಅಷ್ಟೇ ನಾವು ಗಮನ ಹರಿಸಬೇಕು. ನಾವು ನೋಡುತ್ತಿರುವ ಹಾಗೆ ಪ್ರತಿಯೊಬ್ಬ ಮನುಷ್ಯನ ಸಹಜ ಚಟುವಟಿಕೆ ಮತ್ತು ಆರ್ಥಿಕತೆಗೆ ಹೊಡೆತ ಬಿದ್ದಂತಾಗಿದೆ. ನಿತ್ಯದ ಜನಜೀವನ ಅಸ್ತವ್ಯಸ್ತ ಆಗಿದೆ.ಬಸ್ಸಿನಲ್ಲಿ ಕೂರಲು ಭಯ,ಹೊಟೆಲಿಗೆ ಹೋಗಲು ಭಯ, ಜನಸಂದಣಿ ಯಂತು ಆಗಲೇ ಬಾರದು.

ಅದರಂತೆ ಸಾಮಾಜಿಕವಾಗಿಯೂ ಬಹಳಷ್ಟು ಬದಲಾವಣೆಗಳಾಗಿವೆ. ಮದುವೆಗಳನ್ನು ಸರಳವಾಗಿ ಮಾಡಬೇಕು. ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು . ಯಾರಾದರೂ ತೀರಿ ಹೋದರು ಸಹ ಜನ ಜಾಸ್ತಿ ಸೇರಬಾರದು. ಯಾವುದೇ ಕಾರ್ಯಕ್ರಮ ಮಾಡಲು ಜನ ಸೇರಬಾರದು. ಕಾರ್ಯಕ್ರಮ ಮಾಡಲೇ ಕೂಡದು ಹೀಗೆ ಜನರ ಸಾಮಾಜಿಕ ಕೊಂಡಿಗಳು ಕಳಚುತ್ತಿದ್ದು ಮನುಷ್ಯ ಒಬ್ಬಂಟಿಯಾಗಿ ಬದುಕಬೇಕಾಗಿದೆ.ಇದು ಇಂದಿನ ತುರ್ತು ಕೂಡಾ

ಪ್ರತಿಯೊಬ್ಬರೂ ಇದರ ಬಗ್ಗೆ ಹೆದರದೆ ಆತ್ಮವಿಶ್ವಾಸ ದಿಂದ  ಇದನ್ನೆದುರಿಸುವ ಧೈರ್ಯ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ ಕಡ್ಡಾಯವಾಗಿ ಧರಿಸಬೇಕು. ಮೇಲಿಂದ ಮೇಲೆ ಕೈ ತೊಳೆಯುತ್ತಿರಬೇಕು.ಅನಿವಾರ್ಯ ಕಾರಣ ಗಳಿದ್ದರೆ ಮಾತ್ರ ಮನೆಯಿಂದ ಹೊರ ಹೋಗಬೇಕು. ಇದು ಯಾರೋ ನಮ್ಮ ಮೇಲೆ ಹೇರಿದ ಕಾನೂನು ಆಗಬಾರದು. ನಾವೇ ಸ್ವಯಂ ಪ್ರೇರಿತರಾಗಿ ನಮ್ಮ ಮತ್ತು ನಮ್ಮ ಸುತ್ತಲಿನ ಜನರ ಸೌಖ್ಯ ಕ್ಕಾಗಿ ಇದನ್ನು ಅನುಸರಿಸಲೇಬೇಕು .

     ‌‌                **********

About The Author

4 thoughts on “ಭಯ ಪಡುವುದೇನಿಲ್ಲ”

  1. ಜಯಶ್ರೀ. ಅಬ್ಬಿಗೇರಿ

    ಮಾಹಿತಿಪೂರ್ಣ ಉಪಯುಕ್ತ ಲೇಖಕರು

Leave a Reply

You cannot copy content of this page

Scroll to Top