ಕಾವ್ಯಯಾನ
ಮುಖವಾಡಗಳ ಕವಿತೆಗಳು ಸುಜಾತಾ ರವೀಶ್ ಮುಖವಾಡ ಧರಿಸಿ ಧರಿಸಿ ಬೇಸರವೆನಿಸಿ ತೆಗೆಯಹೋದಳು ಒಂದು ದಿನ ಎಳೆದರೂ ಇಲ್ಲ ತೊಳೆದರೂ ಇಲ್ಲ ಚಾಕುವಿನಿಂದ ಕೆತ್ತಿದರೂ ಬರಲಿಲ್ಲ ಕೊನೆಗೆ ಡಾಕ್ಟರ ಬಳಿ ಹೋದಾಗ ತೆಗೆಯಲಾಗದು ಜೀವಕಪಾಯ ಎಂದರು! ಗತ್ಯಂತರವಿಲ್ಲ ಮಾಡುವುದೇನು? ಸಾಯಲು ತೆಗೆದಿಡುವುದಾ ಬದುಕಲು ಹಾಕಿಕೊಳ್ಳುವುದಾ ತೆಗೆದಿಟ್ಟು ಸತ್ತು ಬದುಕುವುದಾಹಾಕಿಕೊಂಡು ಬದುಕಿ ಸಾಯುವುದಾನಿರ್ಧರಿಸಲಾಗುತ್ತಿಲ್ಲ ಅವಳಿಗೀಗ ಕಚೇರಿಯ ರಾಜಕಾರಣ ಕೆಲಸದ ಕಸಿವಿಸಿಚಿಟ್ಟೆನಿಸುವ ತಲೆನೋವು ಏನೋ ಒಂದು ಬೇಯಿಸಿಟ್ಟರೆ “ಥೂ..ಉಪ್ಪುಮಯ ಪಲ್ಯ ನನ್ನ ಬೇಗ ಮೇಲೆ ಕಳಿಸಿ ಬಿಡ್ತೀಯಾ “ ಕಟ್ಟಿಕೊಂಡಾಗಿನಿಂದ ಸುರಿಸಿದ ಕಣ್ಣೀರುಉಪ್ಪಾಗಿ ಕ್ಷಾರವಾಗಿದೆ ಇವಳ ಸ್ವಗತ ಮಾತಿಗೇನು ಕಮ್ಮಿ ಇಲ್ಲ ಖಾರಕ್ಕೆ ಮೆಣಸಿನ ಕಾಯೇ ಬೇಕಿಲ್ಲ ಚುಚ್ಚಿ ನೋಯಿಸುವ ಉವಾಚಒಟ್ನಲ್ಲಿ ನೆಮ್ಮದಿ ಹಾಳು ಬೇಸರ ಬಿಕ್ಕಿನ ಜತೆ ಹಸಿವನೂ ನುಂಗಿ ಮಲಗಿದಳು ಎಲ್ಲಾ ಮರೆತ ಅವನಿಗೇನೋ ಲಹರಿ ಕೊಂಚ ಕೊಸರಾಟ ಮಿಡುಕಾಟ ಉಸಿರಾಟ ಗಾದೆಯ ನಿಜ ಮಾಡಿದ ಸಾರ್ಥಕ್ಯ ಎದೆಗೊರಗಿದ ಅವಳಿಗೊಂತರಾ ಸಮಾಧಾನ ಅಲಾರಾಂ ಸದ್ದಿಗೆ ಎದ್ದಾಗ ಏನೋ ಚೈತನ್ಯ ಜಗವೇ ಸುಂದರವೆನಿಸಿ ಕಾಫಿ ತಂದಿತ್ತಾಗ “ಕಲಗಚ್ಚು! ಇಷ್ಟು ದಿನವಾದರೂ ಹದವರಿತಿಲ್ಲ” ಮಾತಿಗೆ ಬೆನ್ನಾಗಿ ಕಿವುಡಾದಳು ಮೂಕಳಾದಳುಮತ್ತೆ ಎದುರಾಡಲು ಕಸುವಿಲ್ಲ ಸಮಯವಂತೂ ಮೊದಲೇ ಇಲ್ಲ ***********




