ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸರಿತಾ ಮಧು

ನನ್ನೊಳು ಕಾವ್ಯವೋ?
ಕಾವ್ಯದೊಳಗೆ ನಾನೋ?
ಅಭಿಮಾನದ ಆಲಿಂಗನವೋ?
ಪದಪುಂಜಗಳ ಆರಾಧನೆಯೋ?
ಶೃಂಗಾರದ ವರ್ಣನೆಯೋ?
ಮನವ ಕಾಡುವ ಭಾವನೆಯೋ?
ಅರಿಯದೇ ನನ್ನೊಳು ಬೆರೆತ
ಕವಿ ಹೃದಯವೋ?

ಮನದೊಳಡಗಿದ ಕಾವ್ಯಕನ್ನಿಕೆಯೋ
ನಿನಗಾರಿದ್ದಾರು ಹೋಲಿಕೆ?

ರತಿಸೌಂದರ್ಯ ಹೆಚ್ಚಿಸುವ ಲಾಲಿತ್ಯ
ಸಹೃದಯ ಓದುಗನ ಮೆಚ್ಚಿಸುವ ಪಾಂಡಿತ್ಯ
ಕರ್ಣಾನಂದ ನೀಡುವ ಸುಂದರ ಸಾಹಿತ್ಯ
ನಿನಗಾರಿದ್ದಾರು ಹೋಲಿಕೆ?

ಯತಿ, ಪ್ರಾಸ, ಅಲಂಕಾರಗಳನು
ತೊಟ್ಟಿರುವ ಆಭರಣ ಪ್ರಿಯೆ
ನಿನಗಾರಿದ್ದಾರು ಹೋಲಿಕೆ?

ಹರಿವ ಝರಿಯಂತೆ ನಿರಂತರ
ಪ್ರವಹಿಸುವೆ ಪ್ರತಿ ಮನ್ವಂತರ
ಕವಿ ಹೃದಯಗಳ ವಿರಾಜಿತೆ
ನಿನಗಾರಿದ್ದಾರು ಹೋಲಿಕೆ?

*********

About The Author

1 thought on “ಕಾವ್ಯ ಕನ್ನಿಕೆ”

Leave a Reply

You cannot copy content of this page

Scroll to Top