ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅರುಣಾ ರಾವ್

ಸ್ವಪ್ನದಲ್ಲಿ ಕಂಡೆ ಸುಂದರ ಲೋಕ

ಮನೆಗಳು ಮಹಲು ಮಾಲು ಮಂದಿರ

ರಸ್ತೆ ಸೇತುವೆ ಮಾರುಕಟ್ಟೆ ಜನ

ನೋಡುತ ನಡೆದೆ ಬೀದಿಯ ಗುಂಟ

ಸಿನಿಮಾ ನೋಡಲು ನೆರೆದ ತರುಣರು

ವಸ್ತ್ರಭಂಡಾರದಿ ಸೀರೆ ಬಳೆಗಳು

ಪುಸ್ತಕ ಭಾರವ ಬೆನ್ನಲ್ಲಿ ಹೊತ್ತು

ನಗುತ ಸಾಗುವ ಪುಟ್ಟ ಮಕ್ಕಳು

ಕಚೇರಿಗಳಿಗೆ ಸಾಗುವ ಜನರು

ದೇಗುಲಗಳಲಿ ನೆರೆದ ಭಕ್ತರು

ಮದುವೆ, ಮುಂಜಿ ಸಮಾರಂಭಗಳು

ಚರ್ಚು ಮಸೀದಿ ಪ್ರಾರ್ಥನೆ ಮೊಳಗು

ರಸ್ತೆಯಂಚಿನಲ್ಲಿ ವ್ಯಾಪಾರ ಜೋರು

ಹೋಟೆಲುಗಳಲ್ಲಿ ತಿಂಡಿಗೆ ಸಾಲು

ಎಲ್ಲರ ಮುಖದಲ್ಲಿ ಸಂತಸ ಹೊನಲು

ಕಾಣುತ ಸಾಗುತ ಹೋಯಿತು ಹೊತ್ತು

ದೂರದಲ್ಲೆಲ್ಲೋ ಕೋಲಾಹಲವು

ಓಡುತ ನಡೆದು ನೋಡುತ ನಿಂತೆ

ನಡೆದು ಬರುವಂತೆ ಆಕಾರವೊಂದು

ಕಣ್ಣಿಗೆ ಕಾಣದು ಇದೆ ಆದರದು

ಮಂದಿ ಆತಂಕದಲ್ಲಿ ಸೇರಿ ಮನೆಯನು 

ಬಾಗಿಲು ಮುಚ್ಚಿ ಅಂಗಡಿ ಮುಂಗಟ್ಟು

ಶಾಲೆಯ ಬಾಗಿಲು ತೆರೆವುದು ಯಾವತ್ತು

ಮೊದಲಿನ ದಿನಗಳ ಕಾಣುವೆವೆಂತು

ಕಾಣದ ಆಕಾರವದು ಮೆರೆಯಿತು ಜೋರು

ಅವನಿಗೆ  ಎಂದಿಗೆ ಬಂದೀತು ಸಾವು

ಹೆಂಗಸು ಗಂಡಸು ಮಕ್ಕಳು ಮರಿಗಳು

ಭೇದವೆ ಇಲ್ಲದೆ ಬಲಿಯ ಪಡೆದನು

ನೋಡುತ ನಿಂತ ಕಾಲದು ನಡುಗಿತು

ಓಡುತ ಓಡುತ ಸೇರಿ ಮನೆಯನು

ಕದವನು ಇಕ್ಕಿ ಹಾಕಿ ಚಿಲಕವನು

ಹೊರಹಾಕಿದೆನು ನಿಟ್ಟುಸಿರೊಂದನು

ರಾವಣ ಕೀಚಕ ಭಸ್ಮಾಸುರರು

ಕಾಲನ ಬಲೆಗೆ ಜಾರಿ ಬಿದ್ದರು

ಪ್ಣೇಗು ಕಾಲರಾ ಮಸಣ ಸೇರಿದರು

ಕೊರೊನಾಗೆಂದು ನಿಜದಲ್ಲಿ ಸಾವು 

********************************

About The Author

6 thoughts on “ಕನಸು”

  1. Practicality of life depicting the real life struggle for survival and well being. You have enhanced every single aspect so well that in every line of poem I can see myself feel myself. What more can I say…..
    Awesome dear.
    Good going. Let you flourish more in this spellbounding skill of such splendid write ups. God bless you abundantly dear.

Leave a Reply

You cannot copy content of this page

Scroll to Top