ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ದಡ

ಫಾಲ್ಗುಣ ಗೌಡ ಅಚವೆ ಮತ್ತೆ ಅದೇ ಏಕಾಂಗಿತನಮರಿ ಮಾಡುತ್ತಲೇ ಇದೆಕಾವು ಕೊಡದಿದ್ದರೂ ಮೊನ್ನೆ ನಡೆದ ಅಸಂಗತ ನಾಟಕದನಾಯಕ ಅವನ ಪಾತ್ರದಲ್ಲಿಯೇನೆಲೆಗೊಂಡಂತಿದೆ ಇನ್ನೂಧಾವಂತಗಳ ದಾಟದೇದಗದಿ ದಳ್ಳುರಿಯ ಎದುರಿಸಲಾಗದೇಹೊಸ ಹುಡುಕಾಟಗಳ ಲೆಕ್ಕಿಸದೇತಡಕಾಡಿಸುತ್ತಲೇ ಇದೆಚುಕ್ತಾ ಮಾಡಲಾಗದಬಡತನದ ಕನಸುಗಾರಿಕೆ ಇಲ್ಲಿಯೇ ಇದ್ದು ಅಲ್ಲಿ ಹೊರಟಂತೆದಾಪುಗಾಲಿಟ್ಟವರುಮನವಿ ಕೊಟ್ಟಂತಿದೆಗೈರು ಹಾಜರಾದ ಕುರಿತು ಸಾವು ಸಮನಿಸುವಂತಸವಾಲುಗಳಿವೆ ಇನ್ನೂಅಂಟಿಕೊಂಡಿವೆ ಅರವತ್ತರನಂತರದ ಆಹ್ವಾನಗಳು ಕಾಲದ ಹೆಜ್ಜೆಗಳಿಗೆ ಒಂದಷ್ಟುಬಣ್ಣ ಬಳಿದರೂಹಿಂದೆ ಬಳಿದ ಸುಣ್ಣವೇಇಣುಕುತ್ತಿದೆ ಅಲ್ಲಲ್ಲಿ ಸಹಜ ನಿಯಮವೇ ಬದಲಾವಣೆಸ್ತಬ್ಧಗೊಂಡಿದೆ ಹರಿವುನಿದ್ದೆಯ ಮಂಪರಿದೆಅಲೆಯದ ಕಡಲಿಗೆಹೊಸ ಅಲೆಯುಕ್ಕಿಸೋಸುನಾಮಿ ಅದೆಲ್ಲಿದೆಯೋ? ಆಧುನಿಕ ಅವಾಂತರಗಳುಮತ್ತೆ ಮತ್ತೆ ಆವರಿಸಿಗುಂಗೆ ಹುಳವಾಗಿ ಗಿರಕಿ ಹೊಡೆದನೂರೆಂಟು ನರಳಿಕೆಗಳುಜಗ್ಗಿದಂತೆನಿಸಿವೆ ಅಚ್ಚರಿಯೆಂದರೆಹೊರಟ ಹೈದರಿಗೆಇನ್ನೂ ಆಚೆ ದಡನಿಲುಕಿಲ್ಲ! **********

ದಡ Read Post »

ಕಾವ್ಯಯಾನ

ಖಾದಿ ಮತ್ತು ಕಾವಿ

ಎಮ್. ಟಿ. ನಾಯ್ಕ.                         ಜನ ಸೇವಕನೆಂದಿತು ಖಾದಿ ಧರ್ಮ ರಕ್ಷಕನೆಂದಿತು ಕಾವಿ ಇಂಚಿಂಚಾಗಿ ಮಾನವ ಕುಲವ ನುಂಗಿ, ನೀರು ಕುಡಿಯುತ್ತಿರುವ ಗೋಮುಖ ವ್ಯಾಘ್ರಗಳು     ವಿಷಯ ಲಂಪಟತೆಗೆ     ಇನ್ನೊಂದು ಹೆಸರು     ಖಾದಿ ಮತ್ತು  ಕಾವಿ ಇವುಗಳ ಹೆಸರೆತ್ತಿದರೆ ಸಾಕು ಬೀದಿ ನಾಯಿಗಳೂ ಕೂಡ ಮೂಗು ಮುಚ್ಚುತ್ತವೆ ಹಸಿ ಹಾದರದ ಕತೆಗೆ ನಸು  ನಾಚುತ್ತವೆ! ಹೊನ್ನು ಹೆಣ್ಣು ಮಣ್ಣಿನ ವಾಸನೆ ಗರ್ಭಗುಡಿಯೊಳಗೆ……! ಎಷ್ಟೆಲ್ಲಾ  ಸತ್ಯಗಳು ಕತ್ತಲೆಯ  ಗರ್ಭದೊಳು ….. !? ಖಾದಿಯದೋ……ರಾಜಕುಲ ಕಾವಿಯದೋ ……ದೇವಕುಲ ಇಬ್ಬರಿಗೂ ಬೇಕಂತೆ ಝಡ್ ಪ್ಲಸ್ ರಕ್ಷಣೆ ಇಬ್ಬರದೂ ಒಂದೇ ಮುಖ ಸದಾ ನಗುಮುಖ ಆದರೆ .. ಅನಾವರಣಗೊಳ್ಳುವುದೊಮ್ಮೊಮ್ಮೆ ಇವರ  ಬಹುಮುಖ! *************

ಖಾದಿ ಮತ್ತು ಕಾವಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಅಲೆಮಾರಿಯ ದಿನದ ಮಾತುಗಳು ಅನುದಿನದ ಅನುಭಾದ ನುಡಿಗಳು(ಗಂಗಾಧರ ಅವಟೇರ ಅವರ “ಅಲೆಮಾರಿಯ ದಿನದ ಮಾತುಗಳು”) ಪ್ರೊ.ಗಂಗಾಧರ ಆವಟೇರ ಬಹುಕಾಲದ ಗೆಳೆಯ.ಬೊಗಸೆ ತುಂಬ ಪ್ರೀತಿ ತುಂಬಿಕೊಂಡೇ ಮಾತನಾಡುವಾತ. ಮನದಲ್ಲಿ, ಮಾತಲ್ಲಿ ಎರಡಿಲ್ಲದ ನೇರ ನುಡಿಯ ತುಂಬ ಹೋರಾಟದ ಬದುಕನ್ನು ಬದುಕುತ್ತ ಬಂದಾತ.ಅದಕ್ಕೆ ಹಿನ್ನೆಲೆಯಾಗಿಯೇ ಬದುಕಿದಾತಸದ್ಯಕ್ಕೆ ಇತಿಹಾಸ ಪ್ರಸಿದ್ಧ ಕುಕನೂರ ತಾಲೂಕಿನ‌ ಮಹಾದೇವ ದೇವಾಲಯ ನೆಲೆಸಿರುವ ಇಟಗಿಯ ಶ್ರೀ ಮಹೇಶ್ವರ ಪಿ.ಯು.ಕಾಲೆಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮಹಾಲಿಂಗಪೂರದಲ್ಲಿ ಉಪನ್ಯಾಸಕನಾಗಿದ್ದಾಗಿನಿಂದಲೂ ಅವರ ಆತ್ಮೀಯ ಸ್ನೇಹದ ಸವಿ ನನಗೆ ದೊರಕಿದುದುಂಟು.ಅದನ್ನೆಲ್ಲ ಬರೆಯಲು ಇದು ಉಚಿತ ವೇದಿಕೆಯಲ್ಲ.ಸದ್ಯಕ್ಕೆ ‘ಅಲೆಮಾರಿಯ ದಿನದ ಮಾತುಗಳು ‘ಕೃತಿಯನ್ನು ನನ್ನ ಮುಂದಿಟ್ಟುಕೊಂಡು ಆ‌ ಕುರಿತು ನನ್ನ ಅನಿಸಿಕೆ ವ್ಯಕ್ತ ಮಾಡಲು ಹೊರಟಿದ್ದೇನೆ. ಗಂಗಾಧರ ಅವರ ಬಗ್ಗೆ ಬರೆಯುವಾಗ ಬಹುವಚನ ಬಳಸುವದು ಸ್ನೇಹಕ್ಕೆ ಮಾಡಿದ ಅಪಚಾರ ಎಂದು ಞಬಾವಿಸಿ ಏಕವಚನವನ್ನೆ ಬಳಸಿದ್ದೇನೆ.‌ ಅಲೆಮಾರಿ ಎನ್ನುವ ಪದಕ್ಕು ಗಂಗಾಧರನಿಗೂ ಬಿಡದ ನಂಟು.ಅವನು ಮೂಲತಃ ಅಲೆಮಾರಿಯೇ. ಪ್ರಥಮತಃ ಕವಿಯಾದ ಅವನಲ್ಲೊಂದು ಕವಿ ಜೀವವಿದೆ.ಅದು ಬಡವರ ನೋವಿಗೆ ಮಿಡಿಯುವ,ಅನ್ಯಾಯ ಕಂಡಾಗ ಆಕ್ರೋಶಗೊಳ್ಳುವ ಹೃದಯದ ಮಿಡಿತವಿರುವ ಜೀವ .ಹೀಗಾಗಿ ಇಲ್ಲಿರುವ ದಿನದ ಮಾತುಗಳಲ್ಲಿ ವ್ಯಕ್ತಮಾಡುವ. ವಿಚಾರಗಳು ಗದ್ಯಗಂಧಿಯಾದರೂ ಪದ್ಯದ ಭಾವವನ್ಬು ಬಿಟ್ಟಿಲ್ಲ.ಇಂದು ನಮ್ಮಯುವಜನಾಂಗ ಅತಿಯಾಗಿ ಓದುವ ಪುಸ್ತಕ ಯಾವಿದಾದರೂ ಅದು ಪೇಸ್ ಬುಕ್.ಅವರು ಎಲ್ಲಿ ಓದುತ್ತಾರೆಯೋಅಲ್ಲಿಯೆ ಅವರಿಗೆ ಒಳಿತಾಗುವಂಥದನ್ನು,ಉಪಯುಕ್ತವಾಗುವದನ್ನು ನೀಡಬೇಕು.ಮತ್ತೆ ದೀರ್ಘವಾದುದನ್ನು ಬರೆದರೆ ಓದಲು ಯಾರಿಗೆ ಪುರುಸೊತ್ತಿದೆ? ಓದುಗರ ನರನಾಡಿ ಗೊತ್ತಿರುವ ಲೇಖಕ ಇಂತಹುದನ್ನು ಪ್ರಯತ್ನ‌ಮಾಡುತ್ತಾನೆ. ಅವಟೇರ ಅದರಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.ದಿನಕ್ಕೊಂದರಂತೆ ತಮ್ಮವ್ಯಾಟ್ಸಪ್ ಮತ್ತು‌ಮುಖಪುಟದಲ್ಲಿ ಬರೆದು ಹಾಕಿದ ಬರಹಗಳನ್ನು ಸಂಗ್ರಹಿಸಿ ಇಲ್ಕಿ ನೀಡಿದ್ದಾರೆ. ಇವು ಕವಿತೆಗಳೇ? ಗದ್ಯದ ತುಣುಕಗಳೇ?ಚಿಂತನೆಗಳೇ? ಹಾಗೆ ನೋಡಿದರೆ ಎಲ್ಲವೂ ಹೌದು.ಆದ್ದರಿಂದ ಬೆನ್ನುಡಿ ಬರೆದ ಹಿರಿಯ ಕವಿಮಿತ್ರ ಡಾ.ಗುಂಡಣ್ಣ ಕಲಬುರ್ಗಿ ಗದ್ಯಗಂಧಿ ಇವುಗಳನ್ನು ಬರಹಗಳು ಎಂದಿದ್ದಾರೆ.ಕನ್ನಡದಲ್ಲಿ ಗಪದ್ಯ ಎಂಬ ಪ್ರಕಾರವೊಂದಿದೆ ಅಂತಹ ಪ್ರಕಾರಕ್ಕೆ ಸೇರಬಹುದಾದ ಲೇಖಗಳಿವು ಎನ್ನಬಹುದು. ಆದರೆ ಇಲ್ಲೊಂದು ಅಪಾರ ಓದಿನ ಅನುಭವದ ಮೂಸೆಯಲ್ಲಿ ಹೃದ್ಯಗೊಂಡ ಮನಸ್ಸಿದೆ. ಕವಿತ್ವದ ಮೂಸೆಯಲ್ಲಿ ಹದಗೊಂಡ ದನಿಯಿದೆ.ಕನ್ನಡದಲ್ಲಿ ಇಂತಹದೊಂದು ಸಂಕಲನ ಬಂದಿದೆಯೇ ? ಅಥವಾ ಇದೇ ಮೊದಲಿನದೆ ?ಪ್ರಾಜ್ಞರು ಹೇಳಬೇಕು.ನಾನು ಬಲ್ಲಂತೆ ಇದು ಪ್ರಥಮ ಪ್ರಯತ್ನವೇ ಇರಬೇಕು. ಅಲೆಮಾರಿ ಮಾತ್ರ ಬದುಕಿನ ಆಳವಾದ ಅನುಭವ ಗಳಿಸಬಲ್ಲ.ನಮ್ಮ ಹಿಂದಿನ ಹಿರಿಯರು ದೇಶ ಸುತ್ತಬೇಕು,ಕೋಶ ಓದಬೇಕು ಎನ್ನುತ್ತಿದ್ದರು.ಗಂಗಾಧರ ಅವರು ಬರೀ ದೇಶ ಸುತ್ತಿಲ್ಲ ಅವರ ಬದುಕುನಿಡಸೂರಿನಿಂದ ಆರಂಭವಾಗಿಅಮೀನಗಡ ಹುನಗುಂದ,ಧಾರಚಾಡ,ಮೂಡಲಗಿ,ತೇರಸದಾಳ,ರಬಕವಿ,ಮಹಾಲಿಂಗಪೂರ,ಕೆಸರಗೊಪ್ಪ,ಈಗ ಸದ್ಯಕ್ಕೆ ಇಟಗಿಯಲ್ಲಿ ನೆಲೆನಿಂತಿದೆ.ಬದುಕಿನ ಅನ್ನಕ್ಕಾಗಿ ಅವರು ಮಾಡಿದ ಸಾಹಸವೂ ಕೂಡ ಒಂದು ದೊಡ್ಡ ಪ್ರಬಂಧದ ವಸ್ತುವಾದೀತು. ದಾರಿಯೆಂದರೆ ಬದುಕಿಗ ಸಂಬಂಧಿಸಿದ್ದು.ಅದು ಚಲನಶೀಲರಿಗೆ ಮಾತ್ರ ದಕ್ಕಿದ್ದು. ಅಲೆದಾಡಬೇಕುನೆಲೆಯಿಲ್ಲದ ಅಲೆಮಾರಿಯಂತೆ ಎನ್ನುವ ವಾಕ್ಯದಂತೆ ಆರಂಭವಾಗುವ ಈ ಅನುಭವೋಕ್ತಿಗಳು ಬದುಕಿನ ಸೂತ್ರಗಳನ್ನು ವಿವರಿಸುತ್ತವೆ.ಸೋಲುಗಳನ್ನು ಎದುರಿಸಿ ,ಎದುರಿಸಿ ಗಟ್ಟಿಗೊಂಡ ಮನಸ್ಸುಕೊನೆಗೆ ಈ ಸ್ಥಿತಿ ಮುಟ್ಟುತ್ತದೆ. ಸೋಲು ಪ್ರತಿಯೊಬ್ಬರನ್ನುಕ್ಷಣ ಕಾಲ ಅಸ್ತಿತ್ವವನ್ನೂ ಅಲುಗಾಡಿಸುತ್ತದೆ ನಿಜ.ಆದರೆ ಅದೇ ಅಂತಿಮವಲ್ಲ ಎಂಬ ತಿಳಿವಳಿಕೆ ಇರಬೇಕು ಹೀಗೆ ಅನುಭವ ಹರಳುಗಟ್ಟಿದಾಗ ಮಾತ್ರ ಇಂತಹ ಸೂಕ್ತಿಗಳು ಬರಲು ಸಾಧ್ಯ.ಮಾಡಿದ ಉಪಕಾರವನ್ನು ಮರೆಯುವದು ಎಷ್ಟು ಕೃತಘ್ನತೆಯರೂಪ ಎನ್ನುವದನ್ನು ವಿವರಿಸಲು ಮತ್ತೊಬ್ಬರು‌ ಮಾಡಿದಉಪಕಾರವನ್ನು ಮರೆತವರುಹೆತ್ತ ತಂದೆ ತಾಯಿಗಳನ್ನುಮರೆತರೆ ಆಶ್ಚರ್ಯ ಪಡಬೇಕಾಗಿಲ್ಲ ಇಂತಹ ಮಾತುಗಳು ಇಂದಿನ ಜನಾಂಗಕ್ಕೆಒಂದಿಷ್ಟಾದರೂ ಯೋಚನೆ ಮಾಡಲು ಹಚ್ಚುತ್ತವೆ.ಮನೆ, ಕುಟುಂಬ,ತಂದೆ, ತಾಯಿ ಇತ್ಯಾದಿ ಮೌಲ್ಯಗಳನ್ನು ಮರೆಯುತ್ತಿರುವ ಜನಕ್ಕೆ ಹಿತವಚನ‌ ನೀಡುತ್ತವೆ. ನಮಗೆ ದ್ವೇಷ ಮಾಡಲುಬಹಳಷ್ಟು ದಿನ ಇಲ್ಲಇರುವಷ್ಟು ದಿನಎಲ್ಲರನ್ನು ಪ್ರೀತಿಸೋಣ ಇಂಥ ಮಾತುಗಳು ಏಲ್ಲೊ ಓದಿದ ಮಾತು ಎನಿಸುತ್ತವೆ.ಆದರೂ ಒಂದು ಸಂದೇಶ ಅಲ್ಕಿ ಇದ್ದೇ ಇದೆ.ಉಪನ್ಯಾಸಕರಾಗಿ ಹತ್ತಾರು ವರುಷ ಕಳೆದಿರುವ ಗಂಗಾಧರ ಅಂಥವರಿಗೆ ಮಾತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರ ನಡುವಿನ ಈ ಅಂತರ ಹೊಳೆಯಲು ಸಾಧ್ಯ ವಿದ್ಯಾರ್ಥಿಗಳುಎಂದರೆಸುಂದರವಾದ ಕನಸುಗಳ‌ಮೇಲೆ ಸವಾರಿ ಮಾಡುವ ಸರದಾರರುವಿದ್ಯಾರ್ಥಿನಿಯರುಎಂದರೆವಾಸ್ತವವನ್ನು ಅರಗಿಸಿಕೊಂಡು ನೆಲದ ಮೇಲೆಹೂವು ಭಾರವಾದ ಹೆಜ್ಜೆ ಹಾಕುವ ಶ್ರಮಜೀವಿಗಳು ಕಾಲೆಜು ಹಂತದ ಹುಡುಗ ಹುಡುಗಿಯರ ಮನಸ್ಥಿತಿಯನ್ಬು ಅರಿತ ಆವಟೇರ‌ ಅವರು ಹುಡುಗರು ಹೇಗೆ ಕನಸುಗಳಲ್ಲಿ ಕರಗಿ ಹೋಗುತ್ತಾರೆ?ಹುಡುಗಿಯರು ಹೇಗೆ ವಾಸ್ತವ ಅರಿತು ಶ್ರಮ‌ಹಾಕಿ ಮುಂದೆ ಬರುತ್ತಾರೆ ಎನ್ನುವದನ್ನು ಸೂಕ್ಷ್ಮವಾಗಿ ಗುರುತಿಸುತ್ತಾರೆ.ಇಂದು ಕಾಲೇಜುಗಳ‌ ಫಲಿತಾಂಶವನ್ನು ನೋಡಿದಾಗ ಈ ಅನಭವೋಕ್ತಿ ನಿಜ ಎನಿಸುತ್ತದೆ.ಬಹಳ ಹಿಂದೆ ಕವಿ ಡುಂಡಿರಾಜ್ ಹುಡುಗಿಯರು ಮುಂದೆ ಮುಂದೆಹುಡುಗರು ಅವರ ಹೊಂದೆ ಹಿಂದೆ ಎಂಬ ಚುಟುಕು ಬರೆದಿದ್ದನ್ನು ನೆನಪಿಸಬಹುದು.ಎಲ್ಲ ಕಲೆಗಳಿಗಿಂತ ಜೀವನ ಎಂಬುದು ಪರಮ ಕಲೆ.ಅದನ್ನು ಹೇಳಿ ಕೊಡಲು ಮಾತ್ರ ಯಾವುದೆ ಶಾಲೆ‌ ಕಾಲೆಜು ಗಳಿಲ್ಲ. ಅದರಲ್ಲಿ ಯಶಸ್ವಿಯಾದವರಿಗೆ ಯಾವುದೆ ವಿಶ್ವ ವಿದ್ಯಾಲಯ ದ ಪ್ರಮಾಣ ಪತ್ರದ ಅಗತ್ಯವಲ್ಲ. ಬದುಕುವ ಕಲೆಕರಗತ ಮಾಡಿಕೊಂಡವರಿಗೆಯಾವುದೆ ವಿಶ್ವ ವಿದ್ಯಾಲಯದಅರ್ಹತೆಯ ಪ್ರಮಾಣ ಪತ್ರದ ಅಗತ್ಯವಿಲ್ಲ ಬದುಕು ಸರಳ ರೇಖೆಯಲ್ಲಅದರಲ್ಲಿಯೂ ಆಗಾಗ ವಕ್ರರೇಖೆಯಪ್ರತಿಪಫಲನಗಳು ಉಂಟಾಗುತ್ತವೆ ಇಂತಹ ಮಾತುಗಳು ಬದುಕಿನ ವ್ಯಾಖ್ಯಾನ‌ಮಾಡಲು ಹವನಿಸುತ್ತವೆ.ಯೋಗ ಎಂಬ‌ ಮಾತಿಗೆ ಅರ್ಥ ಹೇಳುತ್ತ ಯೋಗ ವ್ಯಾಯಾಮವಲ್ಲದೇಹ ಮತ್ತು ಮನಸ್ಸುಗಳನಿಯಂತ್ರಣ ಮಾಡುವ ಸಾಧನ ಎಂದು ವಿವರಿಸಿರುವದು ಒಂದು ರೀತಿಯಲ್ಲಿ ಯೋಗ ಚಿತ್ತವೃತ್ತಿ ನಿರೋಧ ಎಂಬ ಪರಂಪರೆಯ ಮಾತನ್ನು ನೆನಪಿಸುತ್ತದೆ.ಮಾತಿನ‌ ಬಗೆಗಿನ ಅವರ ಚಿಂತನೆ ಹೀಗಿದೆ. ನಾವು ಆಡುವ ಮಾತುಉದಯಿಸುವ ಸೂರ್ಯನ ಕಿರಣಗಳಂತೆಹೊಳೆಯುತ್ತಿರಲಿ,ಆದರೆಅವುಗಳು ಯಾರನ್ನು ಸುಡದಿರಲಿ ಎನ್ನುವ ಚಿಂತನೆ ಮಾತು ಸುಡುವ ಬೆಂಕಿಯಾ ಗಬಾರದು, ಬೆಳಗುವ ಹಣತೆಯಾಗಬೇಕು ಎನ್ನುವ ದನ್ನು ನೆನಪಿಸುತ್ತದೆ.ಹೀಗೆ ಇಲ್ಲಿನ ಮಾತುಗಳು ಸಂಕ್ಷಿಪ್ತವಾಗಿದ್ದಂತೆ ಕಾವ್ಯಾತ್ಮಕವಾಗಿವೆ.ಆದರೆ ದೀರ್ಘವಾಗುತ್ತಾ ಹೋದಂತೆ ಜಾಳು ಜಾಳು ಎನಿಸುತ್ತವೆ .ಕವಿತೆಯೆ ಆಗಲಿ,ಒಂದು ಸೂಕ್ತಿಯೇ ಆಗಲಿ ಅದು ವಿವರಣೆಯಾಗುತ್ತಾ ನಡೆದಂತೆ ಅವುಗಳ ಅರ್ಥ ಸಾಂದ್ರತೆ ಕಡಿಮೆಯಾಗುತ್ತದೆ. ದೇವರು,ಧರ್ಮ ಇಂತಹ ಅನುಭಾವದ ಮಾತುಗಳೂ ಇವೆ. ಪ್ರೊ.ಗಂಗಾಧರ ಅವಟೇರ ಅವರ ಸ್ನೇಹವಲಯ ದೊಡ್ಡದು.ಹೀಗಾಗಿ ಅರವತ್ತು ಪುಟಗಳ ಈ -ಅಲೆಮಾರಿಯ ದಿನದ ಮಾತುಗಳು -ಸಂಕಲನ ಕ್ಕೆ ೩೬ ಪುಟಗಳ ಬೇರೆಯವರ ಅಭಿಪ್ರಾಯ, ಮುನ್ನುಡಿ ಪ್ರಸ್ತಾವನೆಗಳೇ ಇವೆ.ಮೂಗುತಿ ಮುಂಭಾರ ಎನ್ನುವಂತೆ! ಇರಲಿ ಪ್ರೀತಿಯ ಭಾರ ತುಸು ಹೆಚ್ಚಾದರೂ ತಡೆಯಬಹಯದಲ್ಲವೇ.ಮೊಬಾಯಲ ಮಾಧ್ಯಮದ ಮೂಲಕ ಜೀವನ ಸಂದೇಶ ಹಂಚಿದ ಗೆಳೆಯರನ್ನು ಅಭನಂದಿಸುತ್ತೇನೆ.ನನಗೆ ಕವಿ ಗಂಗಾಧರ ಆವಟೇರ ಇಷ್ಟ.ಅವರು ಇನ್ನಷ್ಟು ಕವಿತೆ ಬರೆಯಲಿ ಎಂದು ಹಾರೈಸುತ್ರೇನೆ. ********* ಡಾ.ಯ.ಮಾಯಾಕೊಳ್ಳಿ

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಮತ್ತೆ ಮತ್ತೆ ಹೇಗೆ ಹಾಡಲಿ

ಸಂತೆಬೆನ್ನೂರು ಫೈಜ್ನಟ್ರಾಜ್ ಹಾಡಿದ ಹಾಡನೆ ಮರಳಿ ನಾನುಮತ್ತೆ ಮತ್ತೆ ಹೇಗೆ ಹಾಡಲಿಕಡಲೊಳಗೆ ಬೆರೆತ ಆ ನದಿಯಯಾವ ಕಣ್ಣಿನಿಂದ ನಾನು ನೋಡಲಿ೧ ಬಂದವರು ಹೋದವರು ಇದನೆ ತಾನೆಹಾಡಿ ಹೋದರು ಬಿದಿರ ಸೀಳಿದಂತೆತೂತ ಕೊರೆದು ಎದೆಯ ತೆರೆದುಹಾಡಿದರೂ ನಾ ಹೋದರು ಕೇಳದಂತೆ೨ ಕಾಡ ಕರುಣೆ ಹೂವ ಪ್ರೀತಿಜೋಲಿಯ ಲಾಲಿ ಪಿಸ ಮಾತಿನೊಲುಮೆಒಲ್ಲೆನೆಂದರು ಮತ್ತೆ ಮನಕಿಳಿದುತಿದಿಯೊತ್ತೆ ರಾಗ ಚಿಮ್ಮಿ ಭಾವ ಕುಲುಮೆ೩ ನಮ್ಮವರು ನಿಮ್ಮವರು ಎಂದಿಗೂಹಾಡಿದುದನೆ  ಹಾಡಿ ದಣಿದ ಕಥೆಯೂಹಾಡೊಂದೆ ಇಲ್ಲಿ ಭಾವ ಬೇರೆಇರಲಿ ಮನುಜ ಪ್ರೀತಿ ಬೇಡ ದುಗುಡ ವ್ಯಥೆಯೂ! **************

ಮತ್ತೆ ಮತ್ತೆ ಹೇಗೆ ಹಾಡಲಿ Read Post »

ಕಾವ್ಯಯಾನ

ರುಬಾಯಿ

ಶಾಲಿನಿ ಆರ್. ೧.  ಮುಂಗಾರಿನ ಮಳೆಹನಿ      ಇಳೆಗೆ ಇಳಿದ ದನಿ      ನನ್ನ ರಮಿಸುವ ಪ್ರೀತಿ,      ಒಡಲ ಸೋಕಿ ಜೇನ್ಹನಿ… ೨.   ಮಳೆ ಬಂತು ನಾಡಿಗೆ       ತೆನೆ ತಂತು ಬೀಡಿಗೆ       ಅಚ್ಚ ಪಚ್ಚ ಪಯರು,       ಹೊನ್ನೂತ್ತಿ ಸೊಬಗಿಗೆ… ೩.   ಮಳೆಯಿದು ಮಮತೆ ಸೆರಗು       ಭುವಿಯಲೆಲ್ಲ ಹಾಸಿ ಬೆರಗು       ಧಾತ್ರಿ ತಂದಿತು ಒಸೆದು ಪ್ರೀತಿ,       ಮೊಗೆದು ತುಂಬಿ ಸಿರಿ ಸೊಬಗು… ೪.   ಮುಂಗಾರು ಮಳೆ ತಂದ ಒಲವ       ಭಾವ       ಒಡಮೂಡಿದೆ ಇಳೆಯಲೆಲ್ಲ ಜೀವ       ಸುತ್ತಮುತ್ತ ಹಸಿರ ಹೊನಲ ಗಾಳಿ,       ಮೂಡಿತಲ್ಲಿ ನಾಳಿನ ನಂಬಿಕೆ ದೈವ… ೫.   ಮುಂಗಾರಿನ ಕರಿಮುಗಿಲ ಕಾನನ       ಸುರಿಯುತಿದೆ ಜೀವಹನಿ ತಾನನ       ಚೆಂದದೊಡಲ ಇಳೆಗದು ಸಂಭ್ರಮ       ಬಾಳಿನಂದದಲಿ ಉಸಿರ ನರ್ತನ… ***********

ರುಬಾಯಿ Read Post »

ಕಾವ್ಯಯಾನ

ಅವನು ಗಂಡು

ಚೇತನಾ ಕುಂಬ್ಳೆ ಬೆಳಕು ಹರಿದೊಡನೆ ಹೊಸ್ತಿಲ ದಾಟುವನುಕತ್ತಲಾವರಿಸಿದೊಡನೆ ಮನೆಯ ಕದವ ತಟ್ಟುವನುಉರಿವ ಬಿಸಿಲು, ಕೊರೆವ ಚಳಿ, ಸುರಿವ ಮಳೆಯನ್ನದೆಹಗಲಿರುಳೂ ದುಡಿಯುವನುಯಾಕೆಂದರೆ, ಅವನು ಗಂಡು…ಜವಾಬ್ದಾರಿಗಳ ಭಾರವನ್ನು ಹೆಗಲಲ್ಲಿ ಹೊತ್ತವನು ಮಡದಿಯ ಪ್ರೀತಿಯಲ್ಲಿ ಅಮ್ಮನ ವಾತ್ಸಲ್ಯವನ್ನರಸುವನುಮಕ್ಕಳ ತುಂಟಾಟಗಳಲ್ಲಿ ಕಳೆದ ಬಾಲ್ಯವನ್ನು ಕಂಡು ಸಂಭ್ರಮಿಸುವನುಮುಗಿಯದ ಹಾದಿಯುದ್ಧಕ್ಕೂ ಕನಸ ಬಿತ್ತುತ್ತಾ ನಡೆಯುವನುಹರಿದ ಚಪ್ಪಲಿಗೆ ಹೊಲಿಗೆ ಹಾಕುತ್ತಾಯಾಕೆಂದರೆ,ಅವನು ಗಂಡುಬೆವರ ಹನಿಯ ಬೆಲೆ ಎಷ್ಟೆಂದುಅರಿತವನು ಸ್ವಭಾವ ಸ್ವಲ್ಪ ಒರಟು,ಆದರೂ ಮೃದು ಹೃದಯಮಾತು ಬಲ್ಲವನೇ ಆದರೂ ಮಿತಭಾಷಿಎದೆಯೊಳಗೆ ಹರಿವ ಒಲವ ಝರಿಕೋಪದೊಳಗೆ ಪ್ರೀತಿಯ ಬಚ್ಚಿಟ್ಟವನುಮನದೊಳಗೆ ಮಧುರ ಭಾವನೆಗಳಿದ್ದರೂಮೌನದಲ್ಲಿಯೇ ಎಲ್ಲವನ್ನೂ ಅರ್ಥಮಾಡಿಸುವನುಯಾಕೆಂದರೆ , ಅವನು ಗಂಡುಮನದ ತುಡಿತಗಳೆಲ್ಲವನ್ನು ಅಕ್ಷರಗಳಲ್ಲಿ ಹಿಡಿದಿಡಲರಿಯದವನು ಅನುಭವದ ಬೆಳಕಿನಲ್ಲಿಸರಿತಪ್ಪುಗಳನ್ನು ಹೇಳಿಕೊಟ್ಟುಬಾಳಿನುದ್ಧಕ್ಕೂ ದಾರಿದೀಪವಾದವನುಕಷ್ಟ ಸುಖಗಳಲ್ಲಿ ಹೆಗಲಾದವನುಎದೆ ಹೊತ್ತಿ ಉರಿಯುತ್ತಿದ್ದರೂತುಟಿಗಳಿಗೆ ನಗುವ ಲೇಪಿಸಿಕೊಂಡವನುನೋವಿನಲ್ಲೂ ಅಳಲು ಮರೆತವನುಯಾಕೆಂದರೆ, ಅವನು ಗಂಡುಭಾವನೆಗಳನ್ನು ತೋರ್ಪಡಿಸಲರಿಯದೆ ಎಲ್ಲವನ್ನೂ ಒಳಗೊಳಗೇ ಅದುಮಿಟ್ಟುಕೊಂಡವನು. ********

ಅವನು ಗಂಡು Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕತೆಗಳು ಮಕ್ಕಳ ಸಾಹಿತ್ಯ ಕೃತಿ ಪರಿಚಯ ಪುಸ್ತಕದ ಹೆಸರು- ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕತೆಗಳು ಲೇಖಕರು – ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯ ಪ್ರಕಾಶಕರು – ಅಕ್ಷಯ ಪ್ರಕಾಶನ – ತುಮಕೂರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಕ್ಕಳಿಗೆ ಹೆಚ್ಚು ಕುತೂಹಲ ಕೆರಳಿಸಿ ಅವರಿಗೆ ನೀತಿಯನ್ನು ತಿಳಿಸುವ ಬಹುಮುಖ್ಯ ಪ್ರಕಾರವೆಂದರೆ ಈ ಕಥಾಪ್ರಕಾರ. ಇದು ಮಕ್ಕಳಲ್ಲಿ ಕಲ್ಪನಾ ಕೌಶಲ್ಯವನ್ನು ಬೆಳೆಸುವುದಲ್ಲದೆ ಆಲಿಸುವ ಸಾಮರ್ಥ್ಯವನ್ನು ಕೂಡ ಹೆಚ್ಚಿಸುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಪ್ರಕಾರವಾದ ಕತೆಗಳು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡುವಲ್ಲಿಯೂ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಇದಕ್ಕೊಂದು ಉತ್ತಮ ನಿದರ್ಶನವಾಗಿ ವೀರಮಾತೆ ಜೀಜಾಬಾಯಿಯವರು ಚಿಕ್ಕಂದಿನಲ್ಲೇ ಶಿವಾಜಿಯಲ್ಲಿ ಉದಾತ್ತ ಗುಣಗಳನ್ನು ಬೆಳೆಸಿದ ಪರಿಯನ್ನು ನಾವಿಲ್ಲಿ ಸ್ಮರಿಸಬಹುದು. ಇಂತಹ ಈಗಾಗಲೇ ಲೋಕದಲ್ಲಿ ಪ್ರಚಲಿತದಲ್ಲಿದ್ದು ಮೆಚ್ಚುಗೆಯ ಮೂಲಕ ಹೃದಯವಾಸಿಯಾಗಿರುವ ಒಟ್ಟು ಮೂವತ್ತ ನಾಲ್ಕು ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕಥಾಗುಚ್ಛವೇ ಈ ಹೊತ್ತಗೆಯಾಗಿದೆ. ಇದರ ಲೇಖಕರು ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯನವರು ಹಾಗೂ ಪ್ರಕಾಶಕರು ಅಕ್ಷಯ ಪ್ರಕಾಶನ, ತುಮಕೂರು. ಇದರಲ್ಲಿನ ಕಥೆಗಳಿಗೆ ಸೂಕ್ತವಾದ ಚಿತ್ರಗಳನ್ನು ರಚಿಸಿ ಪುಸ್ತಕದ ಸೊಗಸನ್ನು ಕಲಾವಿದೆಯಾದ ಶ್ರೀಮತಿ ಸಿ. ಎಸ್ ನಿರ್ಮಲ ಕುಮಾರಿಯವರು ಹೆಚ್ಚಿಸಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಲೋಕದಲ್ಲಿ ಪ್ರಸಿದ್ದವಾಗಿರುವಂತಹ ನಾವು ನೀವೆಲ್ಲರೂ ನಮ್ಮ ಬಾಲ್ಯವನ್ನು ಸವಿದು ಬೆಳೆದು ಇಂದು ಕಣ್ಮರೆಯಾಗಿರುವ ಅತ್ಯಮೂಲ್ಯ ಮೌಲ್ಯಗಳುಳ್ಳ ಈ ಕತೆಗಳನ್ನು ಮಕ್ಕಳಮಟ್ಟಕ್ಕೆ ಅರ್ಥವಾಗುವಂತೆ ಲೇಖಕರು ಬಹಳ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಖಪುಟವು ಗಮನಸೆಳೆಯುವಂತಿದ್ದು ಆಕರ್ಷಕ ಸನ್ನಿವೇಶದ ಚಿತ್ರವನ್ನು ಒಳಗೊಂಡಿದೆ. ಈ ಪುಸ್ತಕಕ್ಕೆ ಬೆನ್ನುಡಿಯನ್ನು ಡಿ. ಸುಮಿತ್ರ ಸಣ್ಣಗುಡ್ಡಯ್ಯನವರು ಬರೆದಿದ್ದಾರೆ. ಒಳಪುಟಗಳಲ್ಲಿರುವ ಪ್ರತಿಯೊಂದು ಕತೆಯೂ ಉನ್ನತ ಮೌಲ್ಯವನ್ನು ಹೊಂದಿದ್ದು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಬೀರುತ್ತವೆ. ಬೆಕ್ಕು ಕಲಿಸಿದ ಪಾಠ ಕತೆಯು ಅಲ್ಪಜ್ಞಾನಿಯಾದವನು ಎಂದಿಗೂ ಗರ್ವ ಪಡಬಾರದು. ಮರಕ್ಕಿಂತ ಮರ ದೊಡ್ಡದಿರುತ್ತದೆ ಎಂಬ ನೀತಿಯನ್ನು ಸಾರಿದರೆ, ಹುಡುಗಿಯನ್ನು ಬಯಸಿದ ಸಿಂಹ ಕತೆ ವಿವೇಚನೆಯಿಲ್ಲದೆ ಯಾರಿಗೂ ಕೋಪದಲ್ಲಿ ಮತ್ತು ಖುಷಿಯಲ್ಲಿ ಮಾತು ಕೊಡಬಾರದು ಎಂಬುದನ್ನು ತಿಳಿಸುತ್ತದೆ. ಕೋತಿ ಚೇಷ್ಟೆ ಕತೆಯು ಆತುರದ ಬುದ್ದಿಯಿಂದ ಪೇಚಾಟಕ್ಕೆ ಸಿಲುಕಿಕೊಳ್ಳುವ ಪ್ರಸಂಗವನ್ನು ತಿಳಿಸಿದರೆ ಠಕ್ಕ ನರಿ ಕತೆಯು ಅಸೆ, ಆಮಿಷ, ಅನಿವಾರ್ಯತೆಗೆ ಒಳಗಾಗಿ ವಂಚನೆಯ ಬಲೆಯಲ್ಲಿ ಸಿಲುಕಿಕೊಳ್ಳುವ ಪರಿಯನ್ನು ತೋರಿಸಿಕೊಡುತ್ತದೆ. ಚೇಷ್ಟೆಯ ಫಲ ಕತೆಯು ಚೇಷ್ಟೆ ಅತಿಯಾದರೆ ಆಪತ್ತಿನ ಸಂದರ್ಭದಲ್ಲೂ ಸಹಾಯ ಸಿಗದೇ ಹೋಗುವ ನೀತಿಯನ್ನು ತಿಳಿಸುತ್ತದೆ. ಪರಸ್ಪರ ಸಹಾಯ ಕತೆಯಲ್ಲಿ ಒಬ್ಬರಿಗೊಬ್ಬರು ಸಹಕಾರ ಇಲ್ಲದಿದ್ದರೆ ಒಬ್ಬಂಟಿಯಾಗಿ ಹೆಚ್ಚಿನ ಹೊರೆಯನ್ನು ಹೊರಬೇಕಾದ ಪರಿಸ್ಥಿತಿಯನ್ನು ತಿಳಿದರೆ ಕೋಟಿಯ ನ್ಯಾಯ ಕತೆಯಲ್ಲಿ ಬೆಕ್ಕುಗಳ ಪರಸ್ಪರ ಜಗಳದಿಂದ ಇಬ್ಬರ ಜಗಳ, ಮೂರನೆಯವರಿಗೆ ಲಾಭ ಎಂಬುದನ್ನು ತಿಳಿಯಬಹುದು. ಮೇಕೆಗಳ ಮೇಲಾಟವು ಗರ್ವದಿಂದ ಹಳ್ಳಕ್ಕೆ ಬೀಳುವುದನ್ನು ತೋರಿಸಿದರೆ ಚಿನ್ನದ ಮೊಟ್ಟೆಯ ಕೋಳಿ ಕತೆಯು ಅತಿ ಆಸೆ ಗತಿಗೇಡು ಎಂಬುದನ್ನು ಅರಿವು ಮಾಡಿಕೊಡುತ್ತದೆ. ಮುದುಕಿಯ ಹುಂಜ ಕತೆಯು ಕೇವಲ ತನ್ನಿಂದಲೇ ಬೆಳಗಾಗುವುದಿಲ್ಲ ಎಂಬ ನೀತಿ ಹೇಳಿದರೆ ಮಗು ಯಾರದು? ಕತೆಯು ಸತ್ಯಕ್ಕೆ ಜಯವಿದೆ ಎಂಬುದನ್ನು ನಿರೂಪಿಸುತ್ತದೆ. ಬುದ್ದಿವಂತ ದೊರೆ ಕತೆಯಲ್ಲಿ ಸತ್ಯವು ಯಾವುದಾದರೊಂದು ರೀತಿಯಲ್ಲಿ ಅರಿವಾಗುತ್ತದೆ ಎಂಬುದನ್ನು ತಿಳಿಸಿದರೆ ಯಾರ ಶಕ್ತಿ ಹೆಚ್ಚು? ಕತೆಯು ಗಾಳಿಗಿಂತಲೂ ಸೂರ್ಯನೇ ಶಕ್ತಿಶಾಲಿ ಎಂಬ ತೀರ್ಮಾನವನ್ನು ಕೊಡುತ್ತದೆ. ದುಂದುಗಾರ್ತಿ ಕತೆಯು ಮಾತಿಗೂ ವರ್ತನೆಗೂ ಇರುವ ಸತ್ಯವನ್ನು ಅರಿಯುವ ನೀತಿಯನ್ನು ತಿಳಿಸಿದರೆ ಬೆಕ್ಕಿನ ಕೊರಳಿಗೆ ಘಂಟೆ ಕತೆಯು ಕಲ್ಪನೆಯ ಕನಸುಗಳೆಲ್ಲವೂ ನನಸಾಗುವುದಿಲ್ಲ ಎಂಬುದನ್ನು ತಿಳಿಸುತ್ತವೆ. ಓಟದ ಸ್ಪರ್ಧೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಸೋಲುಂಟಾಗುತ್ತದೆ ಮತ್ತು ತಾಳ್ಮೆಯಿಂದ ಕಠಿಣವಾದದ್ದನ್ನು ಸಾಧಿಸಬಹುದು ಎಂಬುದನ್ನು ತಿಳಿಸುತ್ತದೆ. ವೇಷ ಕತೆಯು ಸತ್ಯವನ್ನು ಹೆಚ್ಚುಕಾಲ ಬಚ್ಚಿಡುವುದಕ್ಕೆ ಸಾಧ್ಯವಿಲ್ಲ ಎಂಬ ನೀತಿಯನ್ನು ಸಾರಿದೆ. ಹೀಗೆ ದೊರೆ ಮತ್ತು ಆಮೆ, ನರಿ ಮತ್ತು ಕೊಕ್ಕರೆ, ಸಿಂಡರೆಲ್ಲ, ಸೊಹ್ರಬ್ ಮತ್ತು ರುಸ್ತುಮ್, ಬ್ಲೆನ್ಹೀಮ್ ಯುದ್ಧ, ಡೊಂಬರ ಚೆನ್ನೆ, ಕುರೂಪಿ ಬಾತುಕೋಳಿ ಮರಿ, ತೊಟಕಪ್ಪ, ಸಿರಾಕ್ಯೂಸಿನ ಇಬ್ಬರು ಅಪೂರ್ವ ಸ್ನೇಹಿತರು, ಜಾರ್ ಚಕ್ರವರ್ತಿ ಮತ್ತು ರೈತ, ಪ್ರೀತಿಯ ಮೂಲಕ ನೀತಿ, ಬೊ ಬೊನ ತುಂಟಾಟ, ನಾವಾಬಾಯಣ, ಮದುವಣಿಗನ ಪ್ರೇತ, ಪಾಪದ ಹುಡುಗ ಪೀಟರ್, ಸಾಂಕೊ ಪಾಂಜಾನ ತೀರ್ಪುಗಳು ಮತ್ತು ವ್ಯರ್ಥವಾದ ವರಗಳು.. ಹೀಗೆ ಒಂದೊಂದು ಕತೆಯೂ ವಿಭಿನ್ನವಾಗಿದ್ದು ಓದಿದಾಗ ಒಂದು ರಸಮಯ ಅನುಭವವನ್ನು ನೀಡುತ್ತವೆ. ಒಟ್ಟಾರೆಯಾಗಿ ಈಗಾಗಲೇ ಲೋಕಪ್ರಸಿದ್ಧವಾಗಿ ಜನರ ಮನದಲ್ಲಿ ಅಚ್ಚೂತ್ತಿದ್ದ ಕತೆಗಳನ್ನು ಮಕ್ಕಳಿಗೆಂದು ತಮ್ಮದೇ ಆದ ಸರಳ ಭಾಷೆಯಲ್ಲಿ ಪ್ರೊ. ಜಿ ಎಸ್ ರವರು ಬರೆದಿದ್ದಾರೆ. ಇಲ್ಲಿಯ ಪಾತ್ರಗಳ ಜಾಣ್ಮೆ, ಸಾಹಸ, ಛಲ, ಸಹನೆ ಮುಂತಾದ ಸದ್ಗುಣಗಳು ಮಕ್ಕಳನ್ನು ಪ್ರೇರೇಪಿಸಲಿ, ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲಿ ಎಂಬುದು ಇಲ್ಲಿಯ ಕತೆಗಳ ಹೂರಣ. ಇಂಥದ್ದೊಂದು ಕೃತಿ ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿದೆ. ಈ ಪುಸ್ತಕವು ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಒಳ್ಳೆಯ ಓದಿನ ಅಭಿರುಚಿಯನ್ನು ಬೆಳೆಸುವಂತ ಕೃತಿಯಾಗಿದೆ.. ********* ತೇಜಾವತಿ ಹೆಚ್. ಡಿ.

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಗಝಲ್

ಜಯಶ್ರೀ.ಜೆ. ಅಬ್ಬಿಗೇರಿ ಬೀಳುಗಳಲ್ಲೇ ಬೀಳುವುದಕ್ಕಿಂತ ಬೀಳುಗಳಿಂದ ಮೇಲೇಳುವುದು ಮೇಲುಆಸೆ ಹೊತ್ತ ಮನಗಳಿಗೆ ದಾರಿ ತಪ್ಪಿಸುವುದಕ್ಕಿಂತ ದಾರಿಯಾಗುವುದು ಮೇಲು ನೆರೆಮನೆಯ ಗೋಡೆಗಳಿಗೆ ಕಿವಿಯಾಗುವುದಕ್ಕಿಂತ ಮನಗಳಿಗೆ ಕಿವಿಯಾಗುವುದು ಮೇಲುಇತರರ ನೋಡಿ ನಗುವುದಕ್ಕಿಂತ ಇತರರ ಕೂಡಿ ನಗುವುದು ಮೇಲು ಗಾಳಿಗೆ ಮಾತೆಸೆದು ಇರಿಯುವುದಕ್ಕಿಂತ ಮಸಿಯಾಗಿಸದೇ ಹಸಿರಾಗಿಸುವುದು ಮೇಲುಅಳೆದಳೆದು ಆಳುವುದಕ್ಕಿಂತ ಆಳಾಗಿ ಅರಸನಾಗುವುದು ಮೇಲು ನಿನ್ನ ಕೊಲುವೆ ಗೆಲುವೆ ಎನ್ನುವದಕ್ಕಿಂತ ಒಲವೇ ಗೆಲುವೆಂಬುದು ಮೇಲುತುಳಿದು ಬೆಳೆಯುವುದಕ್ಕಿಂತ ಬೆಳೆಯುತ್ತ ಬೆಳೆಸುವುದು ಮೇಲು ಅತ್ತು ಸತ್ತು ಬೇಸತ್ತು ಬದುಕುವುದಕ್ಕಿಂತ ಸತ್ತ ಮೇಲೂ ಬದುಕುವುದು ಮೇಲುಮಣ್ಣಲ್ಲಿ ಮಣ್ಣಾದ ಮೇಲೂ ಜನರ ಹಲ್ಲಿನಲ್ಲಿರುವುದಕ್ಕಿಂತ ನಾಲಿಗೆಯಲ್ಲಿರುವುದು ಮೇಲು **************

ಗಝಲ್ Read Post »

ಕಾವ್ಯಯಾನ

ಇಳಿ ಸಂಜೆ

ಫಾಲ್ಗುಣ ಗೌಡ ಅಚವೆ ಸುತ್ತಲೂ ಹರಡಿರುವ ತಂಪು ಬೆಳಕನು ಕಂಡುಸಣ್ಣ ಅಲೆ ಅಲೆಯುತಿದೆ ಇಳಿ ಸಂಜೆಯಲ್ಲಿನದಿದಡದ ಮೌನಕ್ಕೆ ಶರಣಾಗಿದೆ ಜಗವುತಂಬೆಲರು ಕೇಳುತಿದೆ ಹಿರಿ ಜೀವವೆಲ್ಲಿ? ಎಲ್ಲಿ ಹೋದನೋ ಅವನು? ದಾರಿ ಯಾವುದೋ ಎನೋ?ಕಾಣದೂರಿನ ಕಾಡು ಇನ್ನೂ ಕಂಡೆ ಇಲ್ಲದಿನದಿನವೂ ಬಂದಿಲ್ಲಿ ಕೂತು ಹರಟುವ ಜೀವಕತ್ತಲಾದರೂ ಇನ್ನೂ ಬಂದೇ ಇಲ್ಲ. ಹೊರಟ ದಾರಿಯ ದಿಕ್ಕು ಅವನ ಮನಸಿಗೆ ಗೊತ್ತುನಡೆದಷ್ಟು ದೂರದ ದಾರಿ ಅವನ ಜಗತ್ತುಸಂಸಾರ ಸಾಗರ ದಾಟಿ ಸಪ್ತ ಸಾಗರ ತಲುಪಿಖುರ್ಚಿ ಖಾಲಿ ಮಾಡುವ ವೇಳೆ ಅವಗೂ ಗೊತ್ತು. ಎಷ್ಟೆಲ್ಲಾ ದಿನದಿಂದ ಅಲೆಯ ಜೊತೆ ಸಂವಾದನಡೆಸಿದ್ದ ಅನುದಿನವು ಖುರ್ಚಿಯಲ್ಲಿಮನೆ ಮಂದಿ ಜನಕೆಲ್ಲ ಬೇಡವಾಗುವುದಕಿಂತಸುಮ್ಮನೆ ಹೊರಡುವುದು ಯೋಗ್ಯವೆಂದು. **********

ಇಳಿ ಸಂಜೆ Read Post »

ಅನುವಾದ

ಹೂವಿನ ಹಾಡು

ಖಲೀಲ್ ಗಿಬ್ರಾನ್ ನ ಆಂಗ್ಲ ಕವಿತೆಯಾದ “Song of Flower”ನ ಭಾವಾನುವಾದ. ಚೈತ್ರಾ ಶಿವಯೋಗಿಮಠ ಸೃಷ್ಟಿ ಉಲಿದು ಪುನರುಚ್ಛರಿಸಿದ ಮೆಲುದನಿಯು ನಾನು  ನೀಲ ನಭದಿಂದುದುರಿ, ಹಸಿರ ಹಾಸಿನ ಮೇಲೆ  ಬಿದ್ದ ನಕ್ಷತ್ರ ನಾನು ಪಂಚಭೂತಗಳೊಂದಿಗಿನ  ಸಮಾಗಮದಿಂದ   ಮಾಗಿಯು ಗರ್ಭಧರಿಸಿ,  ಚೈತ್ರ ಹಡೆದು, ವೈಶಾಖದ ಮಡಿಲಲಿ ಆಡಿ ಬೆಳೆದು, ಶರದ್ ಶಯ್ಯೆಯ ಮೇಲೆ  ಚಿರನಿದ್ರೆಗೆ ಜಾರುವ ಮಗಳು ನಾನು  ಅರುಣೋದಯದಿ ತಂಗಾಳಿಯೊಂದಿಗೆ  ಸಂಘಟಿಸಿ ಬೆಳಕಿನಾಗಮನವ ಸಾರುವೆನು . ಸಂಧ್ಯಾಕಾಲದಿ  ಹಕ್ಕಿಗಳೊಡಗೂಡಿ,  ನಿರ್ಗಮಿಸುವ ಬೆಳಕ ಬೀಳ್ಕೊಡುವೆನು . ಬಯಲುಗಳು ನನ್ನ ಸುಂದರ ಬಣ್ಣಗಳಿಂದ  ವರ್ಣರಂಜಿತವಾಗಿ ಸಿಂಗರಿಸಿಕೊಂಡಿವೆ , ಗಾಳಿ ನನ್ನ ನಸುಗಂಪಿನಿಂದ ಸುವಾಸಿತ. ನಿಶೆಯ ಕಂಗಳು ನಾನು ಸುಖನಿದ್ರೆಗೆ  ಜಾರುತ್ತಿದಂತೆ ನನ್ನ ಕಾವಲು ಕಾಯುವವು. ಬೆಳಕ ಏಕೈಕ ಕಣ್ಣಾದ  ದಿನಮಣಿಯ ಏಳುತಲಿ ದಿಟ್ಟಿಸುವೆನು . ಮದಿರೆಗೆ ಇಬ್ಬನಿಯ ಸೇವಿಸುವೆ, ಹಕ್ಕಿಗಳ ಚಿಲಿಪಿಲಿಯ ಆಲಿಸಿ, ಲಯಬದ್ಧವಾಗಿ ತೊನೆದಾಡುವ ಹುಲ್ಲಿನ  ತಾಳಕೆ ನಾ ಕುಣಿಯುವೆ. ಪ್ರೇಮಿಯ ಪ್ರೇಮ ಕಾಣಿಕೆ ನಾ,  ಮದುವೆಗೆ ಹೂಮಾಲೆ ನಾ, ಸಂತಸದ ಕ್ಷಣಗಳ ಸವಿನೆನಪು ನಾ,  ಮಡಿದ ಜೀವಕೆ ಕೊನೆಯ ಕಾಣಿಕೆ ನಾ, ಸುಖ-ದುಃಖಗಳ ಅವಿಭಾಜ್ಯ ಅಂಗ ನಾ. ಮನುಜ ಅರಿಯಬೇಕಾದ್ದು ಇದು ಕೇಳು  ಸದಾ ನಲಿವಿನ ಬೆಳಕ ತಲೆ ಎತ್ತಿ ನೋಡುವೆ. ನೋವಿನ ನೆರಳ ಎಂದಿಗೂ ತಲೆಬಾಗಿ ನೋಡೆನು, **********

ಹೂವಿನ ಹಾಡು Read Post »

You cannot copy content of this page

Scroll to Top