ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುದ್ದು ಮಳೆ

City Building Under Looming Dark Cloud Formation

ಮೋಡಗಳು ಒಂದನ್ನೊಂದು ಮುದ್ದಿಸಲು
ಹಣೆಗೆ ಹಣೆಯ ತಾಕಿಸಲು
ತಂಗಾಳಿಯು ಮೋಡಕೆ ತಂಪೆರೆದಾಗಲೇ
ನೀ ಬರುವೆ ಭೂಮಿಗೆ ಮಗುವಾಗಿ ಮಳೆಯಾಗಿ

ನಾಳೆಯುದುರುವ ಹಣ್ಣೆಲೆಯು ನಿನ್ನ ಸ್ಪರ್ಶ ಮಾತ್ರಕೆ ಪಾವನವು
ಒಣಭೂಮಿ ಕುಣಿಯುತಿದೆ ನಿನ್ನ
ಮಿಲನದ ಮಣ್ಣಗಂಧವ ಹೊತ್ತು

ಗಾಳಿಗೆ ತೂರಿ ಹೋಗುವ ಬೀಜಗಳು
ನಿನ್ನ ಬರುವಿಕೆಗೆ ಜಾಗ ಹಿಡಿದು ಕುಳಿತಿವೆ
ನಿನ್ನೊಡನೆಯ ಪಿಸುಮಾತುಗಳ ಕೇಳುತ್ತಲೇ
ಭೂಮಿ ಹಸಿರ ತುಂಬಿಕೊಂಡು ಮೈ ನೆರೆದಿದೆ

ಸೀರಂಗಿಯೊಡನೆಯೊಂದು ಸೂಕ್ಷ್ಮ ಸಂವೇದನೆಯು
ಸಿಂಗರಿಸಿಕೊಂಡು ಕಾಯುತ್ತಿದೆ ಒಳಬರಲು
ಕೋಣೆಯೊಳಗಿರುವ ತಬ್ಬಿರುವ ದೇಹಗಳಿಗೆ
ಮೈ ಬಿಸಿ ಏರಿಸಿ ಕಿಟಕಿಯಿಂದಲೇ ಸೋಕಿ ತಂಪೆರೆದು ರೇಗಿಸಲು

ಮಿಲನಾತುರಕ್ಕೆ ಕಪ್ಪೆಗಳು ಕಾತರಿಸಿ
ಇರುಳನ್ನೇ ಬೆಚ್ಚಿ ಬೀಳಿಸಿವೆ ಎಲ್ಲೆಲ್ಲಿನ ಮಿಲನ ಮೈಥುನಗಳ ಬೆಚ್ಚಗಿನ ಭಾವವೊಂದು ಮಳೆಯೊಂದಿಗೆ ಅನವರತ…..

******

ಮೋಹನ್ ಗೌಡ ಹೆಗ್ರೆ

About The Author

9 thoughts on “”

  1. ಶಬ್ದಗಳ ಜೋಡಣೆ ಗಾಳಿಗಂಧ ತೀಡಿದಂತೆ
    ಸುವಾಸನೆಯ ಕಂಪು ಪಸರಿಸಿದೆ.

  2. ಗುಂಡೂಟಿ ಮಳೆ ಹನಿಗಳಂತೆ ಮುದ್ದಾಗಿಯೇ ಇದೆ ಕವಿತೆ–‘ಮುದ್ದು ಮಳೆ’

  3. ಬಾಲಕೃಷ್ಣ ದೇವನಮನೆ

    ತಂಪಾದ ಮಳೆಗೆ ಹಿತವಾದ ಕಾವು…
    ಸುಂದರ ಕವಿತೆ

Leave a Reply

You cannot copy content of this page

Scroll to Top