ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆ_ಪ್ರೀತಿ

Couple Kissing Under Umbrella

ಮತ್ತೆ ಸುರಿದಿದೆ ಮಳೆ
ತುಂತುರು ಹನಿಗಳಾಗಿ
ನಮ್ಮೊಲವು ಶುರುವಾದ
ಗಳಿಗೆಯಂತೆ

ಒಮ್ಮೆಲೇ ಧೋ ಎಂದು
ರಭಸವಾಗಿ
ನಮ್ಮ ಪ್ರಣಯೋತ್ಕರ್ಷದ
ಆ ರಸಕ್ಷಣಗಳಂತೆ

ಕೆಲವು ಕಾಲ ಶಾಂತ ಪ್ರಶಾಂತ
ಸದ್ದಿಲ್ಲದೇ ನಿರಂತರ ಸೋನೆ
ನಿನ್ನೆದೆಗೆ ಒರಗಿ
ನಾ ಪಡೆದ ನೆಮ್ಮದಿಯಂತೆ

ಇಂದೀಗ ಎಲ್ಲ ಸ್ತಬ್ಧ
ಎಲ್ಲೋ ತೊಟ ತೊಟ ಸದ್ದು
ಸಂಪೂರ್ಣ ನೀರವತೆ
ಮುಗಿದು ಹೋದ
ನಮ್ಮ ಪ್ರೀತಿ ಕಥೆಯಂತೆ

*********

ಸುಜಾತಾ ರವೀಶ್

      

About The Author

3 thoughts on “”

Leave a Reply

You cannot copy content of this page

Scroll to Top