ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಬದುಕು ಮತ್ತು ಬಣ್ಣಗಾರ ನೂರುಲ್ಲಾ ತ್ಯಾಮಗೊಂಡ್ಲು ಬದುಕು ಮತ್ತು ಬಣ್ಣಗಾರ ಹೊರಗೆ ಎಷ್ಟೊಂದು ಗೊಂದಲ, ಗಲಭೆ, ಚೀರಾಟ ಹುಟ್ಟು ಹಾಕಿದೆಪಾರ್ಲಿಮೆಂಟ್ ನ ಕೊಣೆಗಳು ಮೌನದ ಜಪದಲ್ಲಿ ಮುಳುಗಿವೆಯೋ ?ಇಲ್ಲ , ಹಾಗೆ ಆಗಲು ಸಾಧ್ಯವಿಲ್ಲಜೀವಮಿಡಿತದ ಸದ್ದು ಅಷ್ಟು ಬೇಗ ಅಳಿದುಹೋಗದುನಾನು ನನ್ನಂಥಹ ಲಕ್ಷ ಲಕ್ಷ ಎದೆಗಳಲಿ ಜೀಕುತ್ತಿರುವ ರಕ್ತ, ದಂಗೆ ,ಕ್ರಾಂತಿ ,ಬಂಡಾಯ ದನಿ ಕಮರಿ ಹೋಗದು ಕಾಲಭೈರನ ಹಾದಿ ಮುಗಿಲು ಹರಿಯೊವರೆಗೂ ಹಾದಿದೆರಂಗದ ಮರೆಯಲಿ ನಿನ್ನ ಮುಖವಾಡದ ವ್ಯಂಗ್ಯ ನಗೆಬೋಳೆ ಶಂಕರನ ಕಥಿತ ಕಥನ !ನಾಟಕಾಂಕಕ್ಕೆ ನೂರೆಂಟು ನೆಪದ ಪಾತ್ರ ಈಗ ನಿನ್ನಿಂದ ಸಾಧ್ಯ… ದೂರಿದಷ್ಟು ದುಬಾರಿಯಾದ ಬೈಗಳುಆದರೆ ಪೆಟ್ರೋಲ್ , ಗ್ಯಾಸ್, ಈರುಳ್ಳಿಗಿಂತ ಹೆಚ್ಚೇನಲ್ಲಜನರ ಸಂಕಟ ,ತಾಳ್ಮೆ , ಸಾವು ನೋವುಗಳ ಪಾತ್ರ ನಿಜದ ರಂಗದಲ್ಲಿ ರಣ ರಣಿಸುತ್ತಿವೆನೀನು ಮಾತ್ರ ಗೋಸುಂಬೆ ಬಣ್ಣಧಾರಿ !ನಿನಗೆ ಮಣ್ಣ ಕುಲದ ಬದುಕಿನ ಪಾತ್ರ ತಿಳಿಯದುಏಕೆಂದರೆನೀನು ಬಣ್ಣ ಕಲಸಿ ವರೆಸಿ ಈಗನೀನೇ ಮೆತ್ತುಕೊಂಡವನುಬಣ್ಣಗಳ ಬಣ್ಣನಿಯ ಮಾತಷ್ಟೇ ಆಡುವ ನೀನೇನುಸೂತ್ರಧಾರನೇನಲ್ಲನಿನ್ನ ಬಣ್ಣ ಬಣ್ಣ ತರ್ಕದ ಮುಖವಾಡ ಕಳಚಿಸಾಧ್ಯವಾದರೆ ಹೊರಗೆ ಬಾಇಲ್ಲ ಬಣ್ಣ ಬಳಿದುಕೊಂಡೇ ಉಳಿ…ನಾಳೆ ಮುಂಗಾರಲಿ ಬಣ್ಣ ಕೊಚ್ಚಿಹೋಗುವವರೆಗೂಈಗ, ಬಣ್ಣಗಾರನ ನಿಜದ ಬಣ್ಣ ಬಯಲಾಗಿದೆ ***********

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಶರಣಾಗು ಚಕ್ರವರ್ತಿಯೇ!! ನಿನ್ನ ಕಿರೀಟಗಳಲಿ ಅಂಟಿಸಿದವಜ್ರಗಳು ಇಲ್ಲವಾಗುತ್ತವೆನೀನು ಕೂತ ಸಿಂಹಾಸನದಕಾಲುಗಳಿಗೆ ಗೆದ್ದಲಿಡಿಯುತ್ತವೆನಿನ್ನರಮನೆಯಬುನಾದಿಕುಸಿದು ಬೀಳುತ್ತದೆ. ನಿನ್ನ ಅಂತ:ಪುರದ ರಾಣಿಯರುಅವರ ದಾಸಿಯರುಕಾವಲಿನ ಸೇವಕರ ಜೊತೆಓಡಿ ಹೋಗುತ್ತಾರೆ ನಿನ್ನ ವಂದಿ ಮಾಗಧರುಶತ್ರು ಸೈನ್ಯದ ಜೊತೆ ಸೇರಿಕತ್ತಿಮಸೆಯುತ್ತಾರೆ. ನೀನಾಳಿದ ನರಸತ್ತ ನಾಮರ್ದ ಪ್ರಜೆಗಳೆಲ್ಲವೀರ್ಯವತ್ತಾಗಿಹೊಸ ಸೂರ್ಯನಹುಟ್ಟಿಸುತ್ತಾರೆ ಹೊಸ ಹೂತೋಟಗಳ ಬೆಳೆಸುತ್ತಾರೆಇರುಳಬಣ್ಣವನೆಲ್ಲ ಅಳಿಸಿಹಗಲಿನ ಬೆಳಕಿನ ಬಣ್ಣಬಳಿಯುತ್ತಾರೆ ನಿನ್ನ ಶಸ್ತ್ರಾಗಾರದ ಖಡ್ಗಗಳನ್ನೆಲ್ಲಕಡಲಿಗೆಸೆದುಆ ಕೊಠಡಿಯಲ್ಲಿ ವೀಣೆ ತಂಬೂರಿಗಳನ್ನಿಡುತ್ತಾರೆ ನಿನ್ನೆಲ್ಲ ವಿಜಯದಸಂಕೇತವಾಗಿಕಟ್ಟಿಸಿದಸ್ಮಾರಕ ಸ್ಥಾವರಗಳನ್ನೆಲ್ಲಒಡೆದು ಹಾಕಿಅಲ್ಲಿಮಕ್ಕಳಿಗೆ ಹಾಲು ನೀಡುವಕೆಂದಸುಗಳ ಕಟ್ಟುತ್ತಾರೆ! ಸುಮ್ಮನೆಶರಣಾಗಿಬಿಡುಬಡಿದಾಡಿ ಹೈರಾಣಾಗಬೇಡ! ******** ಕು.ಸ.ಮದುಸೂದನರಂಗೇನಹಳ್ಳಿ

ಕವಿತೆ ಕಾರ್ನರ್ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ದೀಪಾಜಿ ಬದುಕು ಬಯಲಾಗಿದೆ ಬಾಳು ಹಣ್ಣಾಗಿದೆ ಬೇಕೆ ನಿನಗೀಗ ದೀಪದೇಹ ಬೆಂಡಾಗಿದೆ ಮನವೂ ಮಾಗಿಹೋಗಿದೆ ಬೇಕೆ ನಿನಗೀಗ ದೀಪ ಸುತ್ತಲು ಆವರಿಸಿ ನಿಂತ ಮಬ್ಬುಗತ್ತಲಿಗೆ ಎಷ್ಟೆಣ್ಣೆ ಸುರಿವೆಬಾಯ್ತುಂಬಿಕೊಂಡ ಗಾಳಿ ಉದುವ ದ್ವೇಷಿಗಳಿಗೆ ನಂಜಿದೆ ಬೇಕೆ ನಿನಗೀಗ ದೀಪ ಒಂದಿಷ್ಟು ಮೆಟ್ಟಿಲಾಚೆ ಬಾಗಿಲಿಲ್ಲದ ಬದುಕೊಂದಿದೆಸುತ್ತೆಲ್ಲ ಸಣ್ಣಗೆ ಮಳೆ ಇದೆ ದೀವಟಿಗೆ ಕುಡಿ ಮೇಲೆ ಅಂಗೈ ಹಿಡಿದೆ ಬೇಕೆ ನಿನಗೀಗ ದೀಪ.. ಕೂಸೆರಡು ಕೈಹಿಡಿದು ಪ್ರೇಮದಾರಿ ತೋರಿಸುತಿವೆಮುಳ್ಳ ಕಣಿವೆಯ ಮೇಲೆ ಮಮತೆಯ ಸೇತುವೆ ಕಟ್ಟಲಾಗಿದೆ ಬೇಕೆ ನಿನಗೀಗ ದೀಪ.. ಗಂವ್…ಎನ್ನುವ ಯೌವನವಿಲ್ಲ ಹುಚ್ಚೆಬ್ಬಿಸುವ ಕಾಮದ ತಹತಹಿ ಇಲ್ಲಇದ್ದುದೊಂದೆ ವಾತ್ಸಲ್ಲ ಹಿಡಿಯಷ್ಟು ಒಲವು ಇದೆ ಬೇಕೆ ನಿನಗೀಗ ದೀಪ… *******

ಕಾವ್ಯಯಾನ Read Post »

ಇತರೆ

ಪ್ರಸ್ತುತ

ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗುಂಪುಗಳು ಗಂಗಾಧರ ಬಿ ಎಲ್ ನಿಟ್ಟೂರ್ ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗುಂಪುಗಳು ಅವಲೋಕಿಸಲೇಬೇಕಾದ ಕೆಲ ಅಂಶಗಳು  //    ಪರಸ್ಪರ ಪರಿಚಯ, ವಿಚಾರ ವಿನಿಮಯ, ಆರೋಗ್ಯಕರ ಚರ್ಚೆ, ಪ್ರತಿಭೆಯ ಅನಾವರಣ ಹಾಗೂ ಹೊಸ ಕಲಿಕೆಯ ಮೂಲ ಉದ್ದೇಶದಿಂದ ಇಂದು ಎಲ್ಲ ಕ್ಷೇತ್ರದಲ್ಲೂ ಸಾಮಾಜಿಕ ಜಾಲತಾಣವನ್ನು ಮಾಧ್ಯಮವನ್ನಾಗಿಸಿಕೊಂಡು ಒಂದಲ್ಲ ಒಂದು ವಾಟ್ಸಾಪ್ ಅಥವಾ ಫೇಸ್‌ಬುಕ್ ಗುಂಪು ರಚನೆಯಾಗಿರುವುದು ಸರ್ವರಿಗೂ ತಿಳಿದ ಸಾಮಾನ್ಯ ಸಂಗತಿ. ಯಾರು ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ, ಅಭಿರುಚಿ ಇದೆಯೋ ಅಂಥವರು ತಮ್ಮಿಷ್ಟದ ಆಯಾ ಕ್ಷೇತ್ರದ ಒಂದು ಅಥವಾ ಹಲವು ಗುಂಪುಗಳಲ್ಲಿ ಸಕ್ರಿಯ ಸದಸ್ಯರಾಗಿ ಗುಂಪಿನ ಸದ್ಭಳಕೆಯಲ್ಲಿ ತೊಡಗಿದ್ದಾರೆ.       ಸದಾ ಒಂದಿಲ್ಲೊಂದು ಕ್ರಿಯಾತ್ಮಕ ಚಟುವಟಿಕೆ ರೂಪಿಸಿ ಸರ್ವ ಸದಸ್ಯರನ್ನು ಹುರಿದುಂಬಿಸಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆಗೆ ವೇದಿಕೆ ಕಲ್ಪಿಸುತ್ತಿರುವ ವಿವಿಧ ಬಳಗಗಳ ಸಂಚಾಲಕರು ಅಥವಾ ಅಡ್ಮಿನ್ ಗಳ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ.    ಆಯಾ ಕ್ಷೇತ್ರದ ಬಳಗಗಳು ತಮ್ಮ ಬಳಗದ ಸದಸ್ಯರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ನಾನಾ ಪ್ರಕಾರಗಳನ್ನು ಪರಿಚಯಿಸುವ ಮತ್ತು ಅದರಲ್ಲಿ ತೊಡಗಿಸುವ ವಿವಿಧ ಸ್ಪರ್ಧೆಗಳನ್ನು ನಡೆಸಿ ಸಲಹೆ ಸೂಚನೆಗಳೊಂದಿಗೆ ಜ್ಞಾನಾರ್ಜನೆಗೆ ಇಂಬು ನೀಡುತ್ತಿರುವುದಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಫರ್ಧಾಥಿಗಳಿಗೆ ಪುಸ್ತಕ ಅಥವಾ ನಗದು ರೂಪದ ಪುರಸ್ಕಾರ ಇಲ್ಲವೇ 3 ಬಹುಮಾನಗಳ ಘೋಷಣೆ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿವೆ. ಕೆಲವೇ ಕೆಲ ಬಳಗಗಳು ಮಾತ್ರ ಭಾಗವಹಿಸುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸ್ಥಾನ ನೀಡಿ ಉತ್ತೇಜಿಸುವ ಜತೆ ಅಭಿನಂದನಾ ಪತ್ರ ನೀಡಿ ಗೌರವಿಸುವ ಸಂಪ್ರದಾಯ ರೂಢಿಸಿಕೊಂಡಿವೆ. ಇದು ಸ್ತುತ್ಯಾರ್ಹ ಮತ್ತು ಮಾದರಿ ಕಾರ್ಯ. ಇತರೆ ಗ್ರೂಪ್ ಗಳ ಚಟುವಟಿಕೆಗಳಿಗಿಂತಲೂ ವಿಭಿನ್ನ, ವಿಶೇಷ ನಡೆ ಎಂದು ಬಣ್ಣಿಸುವ ಜತೆ ಇದು ಆಯಾ ಬಳಗದ ಮುಖ್ಯಸ್ಥರ ಸಹೃದತೆಗೆ ಸಾಕ್ಷಿಯೂ ಸಹ ಆಗಿದೆ ಎಂದರೂ ಅತಿಶಯೋಕ್ತಿ ಏನಲ್ಲ.        ಆದಾಗ್ಯೂ ಈ ಪ್ರೋತ್ಸಾಹ – ಪ್ರೇರಣೆಗೆ ಮೌಲ್ಯ – ಘನತೆ ಇಮ್ಮಡಿಸುವ ನಿಟ್ಟಿನಲ್ಲಿ, ಬಳಗದ ಚಟುವಟಿಕೆಗಳು ಮತ್ತು ನಿರ್ವಾಹಕ ಮಂಡಳಿಯ ಬಗ್ಗೆ ಈಗಾಗಲೇ ಸದಸ್ಯರಲ್ಲಿರುವ ಅಭಿಮಾನವನ್ನು ಚಿರಕಾಲ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಹಾಗೂ ಬಳಗದ ಸರ್ವ ಸದಸ್ಯರ ಸೌಹಾರ್ದತೆಯನ್ನು ಸದಾ ಕಾಪಾಡುವ ದಿಸೆಯಲ್ಲಿ ವಾಟ್ಸಾಪ್ ಗುಂಪು / ಬಳಗದ ಅಡ್ಮಿನ್ ಗಳು ಅಥವಾ ಸಂಚಾಲಕರು ತಂತಮ್ಮ ಗುಂಪಿನ ಚಟುವಟಿಕೆಗಳನ್ನು ಮತ್ತು ಸ್ಪರ್ಧೆಯನ್ನು ಆಯೋಜಿಸುವ ವೇಳೆ ಈ ಕೆಳಕಂಡ ಕೆಲ ಅಂಶಗಳನ್ನು ಅವಶ್ಯವಾಗಿ ಅವಲೋಕಿಸುವುದು ಅಥವಾ ಪಾಲಿಸುವುದು ಅವಶ್ಯ  ಎನಿಸುತ್ತದೆ …. * ಸಾಮಾನ್ಯವಾಗಿ ಯಾವುದೇ ಬಳಗಗಳಲ್ಲಿ ಪ್ರಮುಖವಾಗಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಹಳೆಯ ಮತ್ತು ಹೊಸ ಹೊಸ ಆವಿಷ್ಕಾರ – ಸಂಶೋಧನೆಗಳ ಕುರಿತು ಹಾಗೂ ಆಯಾ ಕ್ಷೇತ್ರದ ಸಾಧಕರುಗಳ ಕುರಿತು ಪರಸ್ಪರ ವಿಚಾರ ವಿನಿಮಯ, ಮಾಹಿತಿಯ ಹಂಚಿಕೆಯ ಕಾರ್ಯವಾಗಬೇಕು ಎಂಬುದು ಹಿರಿಯರ, ಅನುಭವಿ ಪರಿಣಿತರ ಮತ್ತು ತಜ್ಞರ ಅಭಿಪ್ರಾಯ. * ಎರಡನೆಯದಾಗಿ ಆಯಾ ಬಳಗದ ಸದಸ್ಯರ ಪ್ರತಿಭೆ, ಸಾಧನೆ, ಸಂಶೋಧನೆ, ಆರೋಗ್ಯಕರ ಚರ್ಚೆ, ಜ್ಞಾನಾನುಭವಗಳ ಅನಾವರಣಕ್ಕೆ ಅವಕಾಶ ಕಲ್ಪಿಸುವ ಕಾರ್ಯ ನಡೆಯಬೇಕು. * ವಾಟ್ಸಾಪ್ ಅಥವಾ ಫೇಸ್ ಬುಕ್ ಗುಂಪು ಎಂಬುದು ಒಂದು ರೀತಿ ಸಾರ್ವಜನಿಕ ವಲಯವಿದ್ದಂತೆ. ಅಲ್ಲಿ ಕೇವಲ ನಮ್ಮ ಪರಿಚಿತರಷ್ಟೇ ಅಲ್ಲ, ನಮಗೆ ಪರಿಚಯವಿಲ್ಲದ ನಮ್ಮ ಸ್ನೇಹಿತರ ಸ್ನೇಹಿತರು, ವಿವಿಧ ವಯೋಮಾನದವರು, ಹೊಸಬರು, ಕಲಿಕಾರ್ಥಿಗಳು ಮತ್ತು ಪರಿಣಿತರು ಸಹ ಇರುತ್ತಾರೆ. ಹಾಗಾಗಿ ವೈಯಕ್ತಿಕ / ವ್ಯಕ್ತಿಗತ ವಿಚಾರಗಳ ವಿನಿಮಯ, ಅನಗತ್ಯ ಚರ್ಚೆ, ಹಾಯ್ ಬಾಯ್ ಮೆಸೆಜ್, ವೈಯಕ್ತಿಕ ಅಥವಾ ಸಾಮುದಾಯಿಕವಾಗಿ ಯಾವುದೇ ರೂಪದ ಅವಮಾನ, ನಿಂದನೆ, ಅವಹೇಳನ, ಮನಸ್ತಾಪಕ್ಕೆ ಕಾರಣವಾಗುವಂತಹ ಸಂದೇಶಗಳ ರವಾನೆ ಮಾಡದೆ ಜ್ಞಾನ ವೃದ್ಧಿ, ಪರಸ್ಪರ ಪ್ರೀತಿ, ವಿಶ್ವಾಸ, ಗೌರವಾದರ ಮೂಲಕ ಬಾಂಧವ್ಯ ಬೆಸೆಯುವುದಕ್ಕೆ ಮಾತ್ರ ಆದ್ಯತೆ ನೀಡಬೇಕು. *  ಸುಲಭವಾಗಿ ವಿವಿಧ ರೂಪದಲ್ಲಿ ಹಣ ವಸೂಲಿ, ವೈಯಕ್ತಿಕ ಲಾಭ ಇತ್ಯಾದಿ ಸ್ವಾರ್ಥ ಪರ ಧೋರಣೆಯ / ದುರುದ್ದೇಶದಿಂದ ಕೂಡಿದ ಕೆಲವು ಬಳಗಗಳು ಸಹ ರಚನೆಯಾಗುತ್ತಿವೆ. ಸದಸ್ಯರು ಇಂತಹ ಬಳಗಗಳ ಬಗ್ಗೆ ಎಚ್ಚರದಿಂದಿರಬೇಕು. * ಸಾಮಾನ್ಯವಾಗಿ ಶಿಕ್ಷಣ, ಸಾಹಿತ್ಯ, ಸಂಗೀತ, ವಿಜ್ಞಾನ, ಕಲೆ ಮತ್ತು ಸಾಂಸ್ಕೃತಿಕ ಬಳಗಗಳಲ್ಲಿ ಸ್ಪರ್ಧೆಗಳನ್ನು ನಡೆಸುವ ಪರಂಪರೆ ಅತಿ ಹೆಚ್ಚು ರೂಢಿಯಲ್ಲಿದೆ. ಸ್ಪರ್ಧೆಗಳನ್ನು ನಡೆಸುವುದು ಅತ್ಯಂತ ಸೂಕ್ಷ್ಮ ಕಾರ್ಯ. ಹಾಗಾಗಿ ಅನಿವಾರ್ಯ ಮತ್ತು ತೀರಾ ಅಗತ್ಯ ಎಂದಾದಲ್ಲಿ ಮಾತ್ರ ಸ್ಪರ್ಧೆಗಳನ್ನು ಆಯೋಜಿಸಬೇಕು. ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಅಥವಾ ಆಯಾ ಕ್ಷೇತ್ರದ ಒಳ ಪ್ರಕಾರಗಳ ಸ್ಪರ್ಧೆ ನಡೆಸುವಾಗ ಆಯಾ ಪ್ರಕಾರದಲ್ಲಿ ಆಳವಾಗಿ ಅಧ್ಯಯನ ನಡೆಸಿರುವ ಅಥವಾ ಈಗಾಗಲೇ ಆ ಕ್ಷೇತ್ರದಲ್ಲಿ ಕೃಷಿ ಮಾಡಿ ಹೆಸರಾಗಿರುವ ಬಳಗದ ಸದಸ್ಯರಲ್ಲದ ಹೊರಗಿನ ಪರಿಣಿತರನ್ನು  ಮಾತ್ರವೇ ತೀರ್ಪುಗಾರರನ್ನಾಗಿ ನೇಮಿಸುವುದು ಸೂಕ್ತ. * ಸ್ಪರ್ಧೆಗಳನ್ನು ನಡೆಸುವ ವೇಳೆ ಯಾವುದೇ ಕಾರಣಕ್ಕೂ ಆಯಾ ಬಳಗದ ಸದಸ್ಯರನ್ನು ತೀರ್ಪುಗಾರರನ್ನಾಗಿ ನೇಮಿಸಲೇಕೂಡದು. ಇದರಿಂದಾಗಿ ಸದಸ್ಯರ ನಡುವಿನ ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದು. ಇಲ್ಲವೇ ಒಬ್ಬೊಬ್ಬರೇ ಆ ಗುಂಪಿನಿಂದ ವಿದಾಯ ಹೇಳುವ ಪ್ರಸಂಗ ಸೃಷ್ಟಿಯಾದರೂ ಅಚ್ಚರಿಯೇನಿಲ್ಲ. ಆರಂಭದಲ್ಲಿ ತುಂಬಾ ವೇಗವಾಗಿ ಚಟುವಟಿಕೆಗಳು ನಡೆದು ಕ್ರಮೇಣ ಕ್ಷೀಣಿಸಬಹುದು ಅಥವಾ ನಿಂತೇ ಹೋಗಬಹುದು. ಇದು ಕಟ್ಟು ಕಥೆಯಲ್ಲ. ಯೋಚಿಸಲೇಬೇಕಾದ ವಾಸ್ತವ ಸಂಗತಿ * ಪ್ರಥಮ, ದ್ವಿತೀಯ, ತೃತೀಯದ ಹೊರತಾಗಿ ಉತ್ತಮ, ಅತ್ಯುತ್ತಮ ಎಂಬ ಬಹುಮಾನಗಳ ಘೋಷಣೆ ಇರಲೇಕೂಡದು. ಎಲ್ಲರಿಗೂ ಒಂದಲ್ಲ ಒಂದು ಬಹುಮಾನ ನೀಡಲೇಬೇಕೆಂಬ ಔದಾರ್ಯ ತೋರುವುದಾದಲ್ಲಿ ಅದೇ 3 ಬಹುಮಾನಗಳ ಪಟ್ಟಿಯಲ್ಲೇ ಎಲ್ಲರನ್ನೂ ಸೇರಿಸಬಹುದಲ್ಲವೇ. * ಪ್ರಥಮ, ದ್ವಿತೀಯ ಎಂಬಿತ್ಯಾದಿ ಬಹುಮಾನ ಘೋಷಣೆ ಬದಲು ಭಾಗವಹಿಸುವ ಎಲ್ಲರಿಗೂ ಅಭಿನಂದನಾ ಪತ್ರ ನೀಡಿ ಸುಮ್ಮನಿರುವುದು ಒಳಿತು ಅಥವಾ ಪ್ರತಿಭೆಗೆ ಅನುಗುಣವಾಗಿ ಅದಕ್ಕೊಪ್ಪುವ ಗೌರವ ಸೂಚಕ ವಿಶೇಷಣ ಪದ ನೀಡುವ ಮೂಲಕ ಅಭಿನಂದನಾ ಪತ್ರ ವಿತರಿಸಬಹುದು. ಹೇಗೂ ಭಾಗವಹಿಸದೆ ಇರುವ ಸದಸ್ಯರಿಗಂತೂ ಅಭಿನಂದನಾ ಪತ್ರ ವಿತರಿಸುವುದಿಲ್ಲವಲ್ಲ. ಹಾಗಾಗಿ ಭಾಗವಹಿಸುವ ಆಯಾ ಬಳಗದ ಸದಸ್ಯರಿಗೆ ಇದೇ ಒಂದು ದೊಡ್ಡ ಪ್ರೋತ್ಸಾಹ – ಪುರಸ್ಕಾರವೆಂದು ಪರಿಗಣಿಸಲ್ಲಡುತ್ತದೆ ಅಲ್ಲವೆ. * ಪ್ರತಿಭೆಗೆ ಬಹುಮಾನವೇ ಎಂದಿಗೂ ಮಾನದಂಡವಾಗಲಾರದು. ಅದರಲ್ಲೂ ಸರ್ಕಾರಿ ಸಂಸ್ಥೆಗಳ ಹೊರತಾಗಿ ಅನ್ಯ ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿ – ಪುರಸ್ಕಾರ ಅಥವಾ ಅಭಿನಂದನಾ ಪತ್ರಗಳು ಯಾವುದೇ ರೀತಿಯ ಸರ್ಕಾರಿ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣನೆಗೆ ಬಾರದಿರುವುದರಿಂದ ಅವು ಕೇವಲ ಪ್ರೋತ್ಸಾಹದ ಉದ್ದೀಪನಗಳು ಮಾತ್ರ. ಭಾಗವಹಿಸುವ ಸ್ಪರ್ಧಾರ್ಥಿಗಳು ಸಹ ಇದನ್ನು ಮನಗಂಡು ಅವುಗಳ ಬೆನ್ನ ಹಿಂದೆ ಬೀಳುವುದಾಗಲಿ ಅಥವಾ ಬಹುಮಾನ ದೆಸೆಯಿಂದಲೇ ಭಾಗವಹಿಸಲು ಮುಂದಾಗುವುದು ತರವಲ್ಲ. * ಎಲ್ಲಾ ಬಳಗಗಳಲ್ಲಿ ಅಲ್ಲದೆ ಇದ್ದರೂ ಸಾಮಾನ್ಯವಾಗಿ ಬಹುತೇಕ ಬಳಗಗಳಲ್ಲಿ ನಡೆಯುವ ಎಲ್ಲರನ್ನೂ ಓಲೈಸುವ ತಂತ್ರಗಾರಿಕೆಯ ಪರಿಣಾಮವಾಗಿ ಬಹುಮಾನಗಳ ಘೋಷಣೆಯಲ್ಲಿಯೂ ಸಹಜವಾಗಿಯೇ ವೈರುದ್ಯಗಳು ಸಂಭವಿಸುತ್ತವೆ. ಇದರಿಂದಾಗಿ ನೈಜ ಪ್ರತಿಭೆಗೆ ಧಕ್ಕೆ ಉಂಟಾಗಬಹುದು, ನಿರಾಸಕ್ತಿ ಮೂಡಬಹುದು, ಕಮರಬಹುದು, ತುಳಿತಕ್ಕೆ ಒಳಗಾಗಬಹುದು ಅಥವಾ ವಾಮಮಾರ್ಗದ ಹಾದಿ ತುಳಿಯಲು ಕಾರಣವಾಗಬಹುದು ಇಲ್ಲವೇ ನಿಜ ಪ್ರತಿಭೆ ಸತ್ತು ಹೋಗಲೂಬಹುದು. * ಸ್ಪರ್ಧೆಯಲ್ಲಿ ಭಾಗವಹಿಸುವ ಸದಸ್ಯರಲ್ಲೇ ಒಬ್ಬರು ಮತ್ತೊಬ್ಬರ ರಚನೆ ಕುರಿತು ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲು ಸೂಚಿಸುವುದು ಮತ್ತೊಂದು ಎಡವಟ್ಟಿಗೆ ಕಾರಣ. ಅದರ ಬದಲು ತೀರ್ಪುಗಾರರೇ ಬಹುಮಾನಿತ ರಚನೆಗಳ ಆಯ್ಕೆಯ ಕುರಿತು ತಮ್ಮ ಅನಿಸಿಕೆ ಬರೆಯುವಂತೆ ವ್ಯವಸ್ಥೆ ಮಾಡುವುದು ಹೆಚ್ಚು ಸೂಕ್ತ. * ಸಾಹಿತ್ಯ ಬಳಗಗಳಲ್ಲಿ ಒಬ್ಬರು ಮತ್ತೊಬ್ಬರ ರಚನೆಯ ಕುರಿತು ಅಭಿಪ್ರಾಯಿಸುವ ಅನಿಸಿಕೆಯನ್ನು “ವಿಮರ್ಶೆ” ಎಂದು ಕರೆಯಲೇಬಾರದು. ಏಕೆಂದರೆ ವಿಮರ್ಶೆ ಎಂಬ ಶಬ್ಧದ ಅರ್ಥ, ವ್ಯಾಪ್ತಿ, ವಿಸ್ತಾರ ಪರಿಧಿ ಮತ್ತು ಹಿರಿಮೆ – ಗರಿಮೆ ಬಹಳವೇ ದೊಡ್ಡದು. ಕಲಿಕಾರ್ಥಿಗಳ ಅನಿಸಿಕೆ ಎಂದಿಗೂ ವಿಮರ್ಶೆಯಾಗಲಾರದು. ಅದು ವಿಮರ್ಶಾ ಲೋಕದಲ್ಲಿ ಪಳಗಿದ ಬಹು ದೊಡ್ಡ ದೊಡ್ಡ ವಿದ್ವಾಂಸರು ಮಾಡುವ ಕಾರ್ಯ. ಹಾಗಾಗಿ ” ವಿಮರ್ಶೆ ” ಎಂಬ ಪದ ಬಳಕೆ ಸರ್ವಥಾ ಸಲ್ಲದು.     ಗುಂಪುಗಳು ಮೂಲ ಸ್ವರೂಪ ಮತ್ತು ಮೂಲ ಉದ್ದೇಶ ಮರೆತಲ್ಲಿ ಪರಿಶ್ರಮ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿ ದಿಕ್ಕು ದೆಸೆಯಿಲ್ಲದೆ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು ಅಥವಾ ಕಳಂಕಕ್ಕೆ ತುತ್ತಾಗಬಹುದು.         ಹಾಗಾಗಿ ಇಂತಹ ಹತ್ತು ಹಲವು ಸೂಕ್ಷ್ಮ ಸಂಗತಿಗಳ ಕುರಿತು ಬಳಗಗಳ ಅಡ್ಮಿನ್ ಗಳು / ಸಂಚಾಲಕರು ಎಚ್ಚರಿಕೆ ವಹಿಸಿ ಗುಂಪುಗಳ ರಚನೆ ಮತ್ತು ಚಟುವಟಿಕೆಗಳ ಆಯೋಜನೆ ಮಾಡಲು ಮುಂದಾಗಬೇಕು. ಆಗ ಮಾತ್ರ ಅಂತಹ ಬಳಗಗಳು ಚಿರಕಾಲ ಉಳಿಯುತ್ತವೆ, ಬೆಳೆಯುತ್ತವೆ, ಮಾದರಿಯಾಗುತ್ತವೆ ಮತ್ತು ಜನಮಾನಸದಲ್ಲಿ ಹೆಸರಾಗಿ ಹಸಿರಾಗುತ್ತವೆ. ಆ ದಿಕ್ಕಿನಲ್ಲಿ ಗುಂಪುಗಳ ರಚನೆಯಾಗಲಿ ಎಂಬುದಷ್ಟೇ ಈ ಲೇಖನದ ಆಶಯ. ********** –

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯನ

ಕಾಪಾಡಬೇಕಿದೆ ರಾಮಕೃಷ್ಣ ಸುಗತ ನೀವು ಆಯ್ಕೆ ಮಾಡಿದ್ದೀರಿ ಫಲವತ್ತಾದ ಮಣ್ಣನ್ನುಅಷ್ಟೇ ಆಸ್ಥೆಯಿಂದ ಬೆಳೆಸಿದ್ದೀರಿ ಹೂವಿನ ತೋಟವನ್ನುಕರೆಸಿದ್ದಿರೇನು ನಿಮ್ಮದೇ ದೇವಲೋಕದ ವರ್ಣಕರನ್ನುಎಷ್ಟು ಬಣ್ಣ ಬಣ್ಣದ ಹೂಗಳುತಿಳಿಯುತ್ತಿಲ್ಲ ಅವುಗಳ ವಾಸನೆನೀವು ಆಯುವಂತರು ಸ್ವಾಮಿಎಂದೋ ಕೊಯ್ದು ಬಿಟ್ಟಿದ್ದೀರಿ ನಮ್ಮ ಮೂಗನ್ನು ಮನೆಯ ಹಿಂಭಾಗದಲ್ಲಿ ಹುಲ್ಲು ಬೆಳೆದಿದ್ದಕ್ಕೆನೀವು ದೂರು ಕೊಡುತ್ತೀರಿನೀವು ಪುಣ್ಯವಂತರು ಸ್ವಾಮಿನೀವು ಕಾಲಿಟ್ಟು ಹೋದ ನಮ್ಮದೇ ಓಣಿಗಳಲ್ಲಿಎಲ್ಲೋ ಮೂಲೆಯಲ್ಲಿ ಚಿಗುರುವ ಚಿಗುರಿಗೂಅರ್ಜಿ ಹಾಕುತ್ತಿದ್ದೇವೆ ಅನ್ಯಗ್ರಹ ಜೀವಿಗಳಂತೆ ಪ್ರೀತಿಯೆಂದರೆ ಕುದಿಯುವ ನಿಮ್ಮನ್ನುಚಳಿಗಾಲದ ತಂಪು ರಾತ್ರಿಗಳು ಏನೆಂದು ಕಾಡಿಯಾವುನೀವು ಆರೋಗ್ಯವಂತರು ಸ್ವಾಮಿನಾವು ಬೆಚ್ಚಗೆ ಮಲಗಿದರೆನಿದ್ರಾಹೀನತೆಯಿಂದ ಬಳಲುತ್ತೀರಲ್ಲಾಕನಿಷ್ಠ ನಮ್ಮ ಮನೆಗೆ ಬೆಂಕಿ ಹಚ್ಚುವಾಗಲಾದರೂಬಿಸಿಲಿಗೆ ನಿಂತುಕೊಳ್ಳಿ ಸರಿ ನಾನಿನ್ನು ಬರುತ್ತೇನೆಎದೆಯಲ್ಲಿ ಉಗಿಯ ಬಂಡಿಯೊಂದು ಓಡುತ್ತಿದೆನಿತ್ಯವೂ ನೋವು ಹೊತ್ತು ಸಾಗುತ್ತಿದೆಯಾರೋ ಕಟ್ಟಿಟ್ಟ ನಿಲ್ದಾಣಕ್ಕೆನನ್ನ ಹೆಸರಿಟ್ಟಿದ್ದಾರೆಇದೀಗ ನಾನು ಇಳಿಯಲೇಬೇಕಿದೆಹಳಿಯನ್ನೇ ಕಸಿವವರ ಮಧ್ಯೆ ಸರಕನ್ನು ಕಾಪಾಡಬೇಕಿದೆ **********

ಕಾವ್ಯಯನ Read Post »

ಅನುವಾದ

ಅನುವಾದ ಸಂಗಾತಿ

ಹೂವಿನ ಹೃದಯ ಚೂರಾಗಿದೆ ಮೂಲ: ನೋಷಿ ಗಿಲ್ಲಾನಿ(ಪಾಕಿಸ್ತಾನಿಕವಿಯಿತ್ರಿ) ಕನ್ನಡೆ: ಮೇಗರವಳ್ಳಿರಮೇಶ್ ಮೇಗರವಳ್ಳಿ ರಮೇಶ್ ಹೂವಿನ ಹೃದಯ ಚೂರಾಗಿದೆಅದರ ಸುಗ೦ಧ ತ೦ಗಾಳಿಯೊಡನೆ ಸ್ನೇಹ ಬೆಸೆದಿದೆ. ಯಾರು ಹೇಳಬಲ್ಲರು ಹಾಳುಗೆಡವಿದವರಾರೆ೦ದು ಹೂವನ್ನು?ದ೦ಡನೆಯ ತೀರ್ಪಿನಡಿಯಲ್ಲಿ ಕಳೆಯುತ್ತಿದ್ದೇವೆ ನಾವು ಈ ಸ೦ಜೆಯನ್ನು! ಯಾರೂ ಈಗ ಪಯಣ ಕೈಗೊಳ್ಳುವ೦ತಿಲ್ಲಆದರೂ ನೀ ಇಚ್ಛಿಸಿದರೆ ನಾ ಬರಬಲ್ಲೆ. ಈ ನಗರದ ಎಲ್ಲ ಬೀದಿಗಳೂ ಮಲಗಿವೆಎಚ್ಚರವಾಗಿರುವುದೀಗ ನನ್ನ ಪಾಳಿ. ಈ ಸ೦ಜೆಯ ಅನಿಶ್ಚತೆಯಲ್ಲಿಎಲ್ಲವೂ ಕ೦ಪಿಸುತ್ತಿವೆ. ನಮ್ಮ ಮಿಲನವನ್ನು ನಾವು ಹೇಗೆ ತಾನೇ ಸ೦ಭ್ರಮಿಸ ಬಲ್ಲೆವುನನ್ನ ಹೃದಯ ಅಗಲಿಕೆಯ ಹೆದರಿಕೆಯಲ್ಲಿ ತೊಳಲುತ್ತಲಿರುವಾಗ? ಎಲ್ಲವನ್ನೂ ಮೀರಿ ಆಶಿಸುತ್ತಿದೆ ನನ್ನ ಹೃದಯಈ ಸ೦ಜೆಯನ್ನು ನಾವು ನಮ್ಮದಾಗಿಸಿಕೊಳ್ಳೋಣ **********

ಅನುವಾದ ಸಂಗಾತಿ Read Post »

You cannot copy content of this page

Scroll to Top