ಆಗಂತುಕ ಮಳೆ ಬಾಲಕೃಷ್ಣ ದೇವನಮನೆ ಧೋ… ಧೋ… ಸುರಿವಇಂಥದೇ ಧಾರಾಕಾರ ಮಳೆ ಬಂದಾಗಹೃದಯದಲಿ ನೋವು ಹೆಪ್ಪುಗಟ್ಟಿಹನಿಯುವ ಕಂಬನಿ ಮಳೆಯ ಜೊತೆ ತೋಯ್ದು ಮರೆಯಾಗುತ್ತದೆ. ಕಳೆದ ಸಲಮಳೆ ಸುರಿದು ನದಿ ಉಕ್ಕಿ,ನುಗ್ಗಿದ ಪ್ರವಾಹ ಮನೆ ಹೊಸಿಲು ದಾಟಿಹಿಂಬಾಗಿಲಲಿ ಹೊರಟಾಗಮನೆಯೊಳಗಿನ ದವಸ-ಧಾನ್ಯ,ದುಡ್ಡು-ಬಂಗಾರ, ಪಾತ್ರೆ-ಪಗಡೆ,ಅರಿವೆಯಷ್ಟೇ ಅಲ್ಲಕೊಟ್ಟಿಗೆಯ ದನಕರುಅಂಗಳದಲ್ಲಿ ಮಲಗುತ್ತಿದ್ದ ನಾಯಿಮನೆಯೊಳಗೆ ಆಡುತ್ತಿದ್ದ ಬೆಕ್ಕುಮುಂಜಾವದಲಿ ಎಬ್ಬಿಸುತ್ತಿದ್ದ ಕೋಳಿಆಸೆ ಕನಸುಗಳೆಲ್ಲವೂರಾತ್ರೋರಾತ್ರಿತೇಲಿ ಹೋಗುವಾಗ ಉಳಿದದ್ದುಗಂಜಿಕೇಂದ್ರದಲ್ಲಿದ್ದ ಜೀವ ಮಾತ್ರ! ಮೇಲ್ಛಾವಣಿ ಕುಸಿದುಅಡ್ಡಡ್ಡ ಮಲಗಿದ ಗೋಡೆಗಳ ನಡುವೆಕ್ಷಣಮಾತ್ರದಲಿ ಕೊಚ್ಚಿಹೋದ ಕನಸುವಿಲವಲ ಒದ್ದಾಡುವಾಗಭಾವನೆಗಳು ಮಡುವುಗಟ್ಟಿಉಮ್ಮಳಿಸುವ ದುಃಖಮುರಿದ ಬದುಕುಕಂಬನಿಯಾಗಿ ಮಳೆಯೊಂದಿಗೆ ಹರಿದದ್ದುಯಾರಿಗೂ ಅರ್ಥವಾಗುವುದಿಲ್ಲ. ಈಗೀಗ ಮಳೆಯೆಂದರೆ ಭಯ!ಅದೂ ಧಾರಾಕಾರ ಮಳೆಯೆಂದರೆ ಮತ್ತೂ ಭಯ…!!ಮತ್ತೆ ಕಟ್ಟಿಕೊಂಡ ಬಾಳ ಕನಸುದೇವರೇ ಕೊಚ್ಚಿ ಹೋಗದಿರಲಿ…
