ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಹರಟೆ

ಮರೆವು ಅನುಪಮಾ ರಾಘವೇಂದ್ರ        ಅರಿತೋ…ಮರೆತೋ…ಒಂದೊಮ್ಮೆ ದಾರಿ ತಪ್ಪಿದರೂ ಕೂಡ ಮತ್ತೆ ಎಚ್ಚರಗೊಂಡು ಮೈಕೊಡವಿ ನಿಲ್ಲಬೇಕು. ಆಗ ಮರೆವು ಮರೆಯಾಗಿ ಅರಿವಿನ ಜ್ಯೋತಿ ಬೆಳಗುತ್ತದೆ ಎಂದಿದ್ದಾರೆ ವಿದ್ವಾಂಸರು. ಮರೆವು ದೇವರು ಕೊಟ್ಟ ವರ. ಆದರೆ ಯಾವುದನ್ನು ಮರೆಯಬೇಕು, ಯಾವುದನ್ನು ಮರೆಯಬಾರದು ಎಂಬ ಅರಿವು ನಮ್ಮಲ್ಲಿರಬೇಕು.         ಅದೇನೋ ಸರಿ…….. ಆದರೆ ಮೊನ್ನೆ ನಾನು ಅಡಿಗೆ ಮಾಡುತ್ತಿರುವಾಗ ಬೇರೇನೋ ನೆನಪಾಗಿ ಸ್ಟೋರ್ ರೂಮಿನ ಒಳ ಹೊಕ್ಕಾಗ ಯಾವ ಕಾರಣಕ್ಕೆ ಅಲ್ಲಿಗೆ ಹೋದೆ ಎಂಬುದೇ ಮರೆತು ಹೋಗಿತ್ತು. ಮತ್ತೆ ಮೊದಲಿದ್ದಲ್ಲಿಗೇ ಹೋದ ಕ್ಷಣದಲ್ಲಿ ಸ್ಟೋರ್ ರೂಮಿಗೆ ಹೋದ ಕಾರಣ ನೆನಪಾಗಿತ್ತು. ಇಂತಹ ಘಟನೆಗಳು ಅದೆಷ್ಟೋ……         ಒಲೆಯಲ್ಲಿ ಹಾಲಿಟ್ಟು ಧಾರಾವಾಹಿ ನೋಡುತ್ತಾ ಮೈ ಮರೆತು ಹಾಲು ಉಕ್ಕಿ ಚೆಲ್ಲಿ ಹೋಗುವುದೋ…….. ಫೋನಿನಲ್ಲಿ ಮಾತನಾಡುತ್ತಾ  ಇರುವಾಗ ತಳ ಹಿಡಿದು ಕರಟಿದ ವಾಸನೆ ಮೂಗಿಗೆ ಬಡಿದಾಗಲೇ ಒಲೆಯಲ್ಲಿ ಪಲ್ಯ ಬೇಯಿಸಲು ಇಟ್ಟಿದ್ದೇನೆಂಬ ನೆನಪು ಮರುಕಳಿಸುವುದೋ……. ಇನ್ನೊಂದು ರೀತಿಯ ಮರೆವು.          ಮದುವೆ , ಸಮಾರಂಭಗಳಿಗೆ ಹೋದಾಗ ಯಾರೋ ಬಂದು ನವಿರಾಗಿ ಬೆನ್ನು ತಟ್ಟಿ “ನಮಸ್ಕಾರ .ನನ್ನ ನೆನಪಿದೆಯಾ…?” ಎಂದಾಗ ಅವರನ್ನು ಎಲ್ಲೋ ನೋಡಿದ ನೆನಪು….. ಆದರೆ ಯಾರೆಂಬ ಸ್ಪಷ್ಟತೆ ಇಲ್ಲ….. ನೆನಪಿಲ್ಲವೆಂದು ಹೇಳಿದರೆ ತನಗೇ ಕೊರತೆ ಎಂಬ ಭಾವದಲ್ಲಿ “ಹೋ…. ಏನು ನೆನಪಿಲ್ಲದೆ. ಧಾರಾಳ ನೆನಪಿದೆ.” ಎಂದು ಹಲ್ಲು ಕಿಸಿದು ಮೆಲ್ಲನೆ ಅಲ್ಲಿಂದ ಜಾರಿಕೊಂಡ ಸಂದರ್ಭ ಅದೆಷ್ಟೋ…. ಆದರೆ ಕೆಲವೊಮ್ಮೆಅವರು “ಹಾಗಾದರೆ ನಾನು ಯಾರು ? ಹೇಳು ನೋಡುವ” ಎಂದಾಗ “ಬ್ಬೆ ಬ್ಬೆ ಬ್ಬೆ” ಎಂದು ಹೇಳಿ ಕಕ್ಕಾಬಿಕ್ಕಿಆದದ್ದೂ ಇದೆ. ಅವರ ಪರಿಚಯದ ಒಂದು ಎಳೆ ಸಿಕ್ಕಿದರೂ ಇಡೀ ಜಾತಕವನ್ನು ಜಾಲಾಡುವಷ್ಟು ಮಾಹಿತಿ ಸಂಗ್ರಹ ನಮ್ಮ ಬಳಿ ಇದ್ದರೂ ಆ ಎಳೆ ಸಿಕ್ಕದೆ ಒದ್ದಾಡುವ ಪ್ರಸಂಗ ಯಾರಿಗೂ ಬೇಡಪ್ಪಾ…          ಕೆಲವೊಂದು ವ್ಯಕ್ತಿಗಳ ಕಪಿ ಮುಷ್ಟಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ  ಪರಿಚಯವೇ ಇಲ್ಲದಂತೆ ನಡೆದುಕೊಳ್ಳುವುದನ್ನು ಏನೆನ್ನಬೇಕೋ…..? ಅದು ಜಾಣ ಮರೆವು ತಾನೇ…. ಜೀವನದ ಅನೇಕ ವಿಚಿತ್ರ ಸಂದರ್ಭಗಳಲ್ಲಿ ನಮ್ಮನ್ನು ಪಾರು ಮಾಡುವುದೂ  ಜಾಣ ಮರೆವು.  ಈ ಜಾಣ ಮರೆವಿನಿಂದ ಲಾಭ ಮಾಡಿಕೊಳ್ಳುವ ಕೆಟ್ಟ ಮನಸ್ಸಿನ ದುಷ್ಟ ಜನರೂ ಅದೆಷ್ಟೋ……    ಇವೆಲ್ಲಕ್ಕಿಂತಲೂ ಮುಖ್ಯವಾದ ಮರೆವು ರೋಗ ಅಲ್ಜ಼ೀಮರ್. ತಾನು ಯಾರು…? ತನ್ನವರು ಯಾರು ….? ತನ್ನ ಇರವಿನ ಅರಿವೇ ಇಲ್ಲದ ಪರಿಸ್ಥಿತಿ. ಹಸಿವು , ಬಾಯಾರಿಕೆ ಇಲ್ಲ . ಬಹಿರ್ದೆಸೆಯ ಪರಿಜ್ಞಾನ ಇಲ್ಲ. ಹಗಲು – ರಾತ್ರಿಗಳ ಪರಿವೇ ಇಲ್ಲ. ಉಟ್ಟ ಅರಿವೆಯ ಗೊಡವೆಯೇ ಇಲ್ಲ. ಅಬ್ಬಾ…..! ಕಲ್ಪನೆಯೇ ಭಯಂಕರ. ಮರೆವು ಒಂದು ವರ ಎಂದವರೆಲ್ಲಾ ಈ ಮರೆವು ಎಂಬುದು ದೊಡ್ದ ಶಾಪ ಎನ್ನದಿರುವರೇ……. ********

ಹರಟೆ Read Post »

ಕಾವ್ಯಯಾನ

ಕಾವ್ಯಯಾನ

ಅವಳು ನೆನಪಾದಾಗ ಎಂ.ಜಿ.ತಿಲೋತ್ತಮೆ ಹೀಗೆ ಕಾಡುವುದಾದರೆ ನಿತ್ಯನಿನ್ನ ಸ್ವರಗಳು ಮೊದಲುನನ್ನ ಎದೆಗೆ ಇಳಿದ ದಿನದ ಕ್ಷಣದಾಚೆಪರಿಪೂರ್ಣವಾಗಿದ್ದುಪರಿತಪಿಸುತ್ತಿದ್ದ ಸಂಗಾತಿ ನಿನ್ನ ಬಿಂಬ ಬಿಗಿದ ತಂತಿಗೆ ಬೆರಳುಗಮನಿಸದೆ ತಗುಲಿ ನುಡಿಸಿದ ರಾಗಕ್ಕೆಯಾವ ಭಾಯಾನದ ಹೋಲಿಕೆ?ಸಾಟಿಯಿಲ್ಲದ ಹಂಬಲವು ಹೆಮ್ಮರವಾಗಿನುಗ್ಗುವ ಪರಿಗೆ ಕೊನೆಯೆಲ್ಲಿ?ಅಧೃಶ್ಯವಾದ ನಿನ್ನ ಚಿತ್ತಾರಹುಡುಕುತ್ತಾ ಹೊರಟ ನಯನದ ಹಟಕ್ಕೆಕಡಿವಾಣವೇ ಬೇಡ ಮರಳೇ ಸೂಸಿ ಹಾಸಿರಲಿವರುಣನು ನಿನ್ನ ಹೆಜ್ಜೆಗೆ ಸುತ್ತುಗಟ್ಟಲಿಪಾದ ಮೂಡಿದಲೆಲ್ಲಾ ನಾ ಓಡಿ ಬರುವೆನಿನ್ನಲಿ ಸೆರೆಯಾಗುವೆ ಎಂದರೆಹುಸಿಯಾಗಿ ನಗುವುದು ಹೂ ಗಿಡ ಬಳ್ಳಿ ಮುಖಾಮುಖಿಯಾದರೆ ನಿನ್ನ ನೆರಳು ನಾನುನನ್ನ ಕಣ್ಣೊಳಗೆ ನಿನ್ನ ಬಂಧಿಸಿ ಕೇಳುವೆನನ್ನ ಪ್ರೀತಿ ಹೊರತು ಇಹದಲ್ಲೊಂದು ಸುಖನಿನಗೆ ಸಿಕ್ಕಿದಂತಾದರೆ ಪುನಃತೊರೆದು ಮರು ಕ್ಷಣದಾಚೆಗೆ ನಾ ಅಪೂರ್ಣ ನಾಗುವೆ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಳೆಯ ಹಾಡು ಚೈತ್ರಾ ಶಿವಯೋಗಿಮಠ ನೆಲದ ಮೇಲೆ ಪುಟಿದುಚಿಮ್ಮುವ ಸ್ಫಟಿಕದ ಮಣಿಗಳೋ?ಬಾನು ಉಲಿಯುವ ಪ್ರೀತಿಪ್ರೇಮದ ದನಿಗಳೋ! ಹನಿ ಹನಿಯ ಪೋಣಿಸಿಹೆಣೆದ ರತ್ನ ಖಚಿತ ಹಾರವೋ?ಭುವಿಯ ಒಡಲ ಹಸಿವತಣಿಸುವ ಆಹಾರವೋ? ಮೇಘ ಮಾಲೆಯ ಒಡಲತುಂಬಿ ತುಳುಕುವ ಜೀವಕಳೆಯೋ?ಭೂರಮೆಯ ಗರ್ಭಕ್ಕಿಳಿದು ಜೀವಚಿಗುರಿಸೊ ಜೀವನ ಸೆಲೆಯೋ? ಕವಿಯ ಮನದಿ ಭಾವಸ್ಫುರಿಸುವ ದಿವ್ಯ ಸಿಂಚನವೋ?ಜೀವ-ಭಾವಗಳೆರಡು ತಣಿಸಲುಮಳೆಯ ಹಾಡಿನ ರಿಂಗಣವು ******

ಕಾವ್ಯಯಾನ Read Post »

ಇತರೆ

ಲಹರಿ

ಮಾಸ್ಕಿನ ಮುಸುಕಿನಲಿ ಮುಂಗಾರು ಶಾಲಿನಿ ಆರ್. ಮತ್ತೆ ಮುಂಗಾರು. ಆದರೆ ಇದು ಕೊರೋನಾ ಮುಂಗಾರು. ಜೀವನದಲ್ಲಿ ಮೊದಲ ಬಾರಿ‌ ಮಳೆ ಮತ್ತು ನಾನು, ನನ್ನ ಗಾಡಿ ಮತ್ತೆ ನಿನ್ನ ಮೌನ, ಒಂದಕ್ಕೊಂದು ಸಂಬಂಧ ಇಲ್ಲದ ಹಾಗೆ ಲಾಕ್ ಡೌನ್ ಆಗಿರೋದು.  ಪ್ರತಿ ಸಾರಿ ಕಾಯೋ ಹಾಗೆ ಈ ಸಾರಿ ಮುಂಗಾರು ಅನುಭವಿಸಲಿಕ್ಕೆ ಮನಸ್ಸು ಹಿಂದೆ ಮುಂದೆ ನೋಡ್ತಿದೆ.ಇಳೆಯೇನೋ ತೋಯ್ತಾ, ಅದರ ಸಿರಿ ಸಂಭ್ರಮನ ಅದು ಸಂಭ್ರಮಿಸ್ತಿದೆ. ಯಾಕಂದ್ರ ಬಾಳ ವರುಷದ ಮ್ಯಾಲ ಅದಕ್ಕೆ ತನ್ನದೇ ಆದ ಸಮ್ಮಾನ ಅಭಿಮಾನ ತುಂಬಿ ತುಳುಕುತಿದೆ‌ ಅಲ್ವಾ ಅದಕ್ಕೆ.         ಯಾಕೋ ಮುಂಗಾರು ನನಗೆ ಈ ಬಾರಿ ಮುದ ಕೊಡ್ತಿಲ್ಲ ? ಅಥವಾ ಅನುಭವಿಸಲಿಕ್ಕೆ ಮನಸ್ಸೇ ಆಗ್ತಿಲ್ಲವೋ ?.   ಪ್ರತಿ ಬಾರಿ ಮಳೆಯ ಪ್ರತಿ ಹನಿಯ ಅನುಭವವನ್ನ  ಅನುಭವಿಸೋಕೆ ನಾನೇ ಅವಕಾಶ  ಮಾಡಕೋತಿದ್ದೆ. ಆಗೆಲ್ಲ ಮನಸ್ಸು ನವಿಲಾಗತಿತ್ತು.ವಾವ್ಹ್ ! ಎಂಥ ಸೋಜಿಗದ ಮುದ ಇದು ಅಂತ ಮಳೆನಲ್ಲಿನೇ ಗಾಡಿಲಿ ಹೋಗ್ತಿದ್ದೆ.ಒಂದು ರೇಂಜಿಗೆ ಒದ್ದೆ ಆದ ಮೇಲೆ ಮತ್ತೇನೂಂತ, ಮಳೆನಲ್ಲಿ ನಿಲ್ಲದೇ ಗಾಡಿನಲ್ಲಿ ಹೋಗತ್ತಿದ್ದೆ. ಮನಸ್ಸಲಿ ನೀ ಬೆಚ್ಚಗಿರ್ತಿದ್ಯಲ್ಲ, ಒಂದು ರೀತಿ ಭಂಡ ಧೈರ್ಯ ನಂಗೆ. ಹಾಗೆ ಹೋಗುವಾಗ ತುಟಿ ಬಿಗಿಹಿಡಿದರು ಹನಿಗಳು ನನ್ನೊಡಲಿಗೆ ಕ್ಷಣಮಾತ್ರದಲ್ಲಿ ನೇರವಾಗಿ ಒಳಗೆ ಹೋಗಿರೋದು ಅಮೃತದಂತಹ ಮಳೆಹನಿಗಳು. ಅದನ್ನ ಸವಿತ ನಾನು ನನ್ನ ದ್ವಿಚಕ್ರವಾಹನ ಇಬ್ಬರು ಖುಷಿಯಾಗಿ ಅನುಭವಿಸ್ತಿದ್ವಿ.     ಪ್ರತಿ ಮಳೆಗಾಲಾನು ನೆನಪಿನ ಹೂರಣನೆ. ಎಲ್ಲ ಖುಷಿಯ ಕ್ಷಣಗಳು, ದುಃಖದ ಕರಿಮುಗಿಲು, ಎಲ್ಲ ಈ ಮುಂಗಾರಿನ ಮಳೆಹನಿಲಿ ಬೆರೆತು ಹೋಗ್ತಿತ್ತು  ಅರಿವಿಗೂ ಬಾರದ್ಹಾಂಗೆ.     ಯಾವಾಗಲೂ  ಈ ಮಳೆ ನಂಗೆ ನನ್ನ ಭಾವನೆಗೆ ಸಾಥ್ ಕೊಡ್ತಿತ್ತು.ಎಂಥ ಉತ್ಸಾಹಭರಿತವಾಗಿರತಿತ್ತು. ನಿನ್ನ ನೆನಪ ಕವನ ಕೂಡ, ಮಳೆಗಾಲ ಮುಗಿಯೋದ್ರೊಳಗೆ ಕಾವ್ಯವಾಗಿಬಿಡತಿತ್ತು.ಆ ನೆನಪುಗಳ ಕಚಗುಳಿಗೆ.ಪ್ರತಿ ಭಾರಿ ಅನ್ನಕೊಳ್ಳತಿದ್ದೆ ನಾನು ನೀನು ಈ ಮಳೆ ಜೊತೆ ಜೊತೆಯಲಿ ಇನ್ನುಳಿದೆಲ್ಲ ಮುಂಗಾರೂಂತ.   ಆದರೆ ಈಗ ಬರಿ ಆತಂಕ. ಗಾಡಿಲಿ ಹೋದ್ರು.ಮುಖಕ್ಕೆ ಮಾಸ್ಕ ಇರತ್ತೆ ಅನುಭವಿಸಲಾರದ್ಹಾಂಗ ಈ ಸೋನೆ ಮಳೆನಾ. ಮುಂಗಾರಿನ ಮೋಡದಾಟ ಕೂಡ ಈ ಭಾರಿ ನೋಡೋಕಾಗ್ತಿಲ್ಲ. ನೆಪಗಳಿಗೂ ಕ್ವಾರೆಂಟೈನ್ ಮುಂಗಾರಿನ ಸಂಗಡ ಆಡಲಿಕ್ಕೆ.  ಯಾಕೆಂದರೆ ಪಕ್ಕದ ಏರಿಯಾ ರವಿನಗರದಲ್ಲೇ ಕೊರೋನಾ ಪಾಸಿಟಿವ್ . ನಾವು ಸೀಲ್ ಡೌನ್.     ಬೈ ಛಾನ್ಸ ಇವತ್ತು ಮಾಸ್ಕ ಮರೆತು ಹೋದೆ .ಅರ್ಧ ದಾರಿ ಹೋದ ಮೇಲೆ ನೆನಪಾಯಿತು  ಮಾಸ್ಕ ಹಾಕದೆ ಇರೋದು ನಿಜದ ಆತಂಕ ಮನೆ ಮಾಡ್ತು. ಸೀದ ಕೆಲ್ಸ ಮುಗ್ಸಿ ಅಲ್ಲಿ ಇಲ್ಲಿ ನೋಡದೆ ಮತ್ತೆ ಗೂಡು ಸೇರಿದಾಯ್ತು ನಾನು ಮತ್ತು ನನ್ನ ಗಾಡಿ. ಮಳೆ ಇತ್ತು ಸಣ್ಣಗೆ, ಆದರೆ ಆರಾಧಿಸೋ ಮನಸ್ಸೇ ಇರಲಿಲ್ಲ.ಜೊತೆಗೆ ನೆನೆಪುಗಳು ಈಗ ನಿನ್ನ ಅಡಿಯಾಳಗಿರುವಾಗ , ಪುರುಸೊತ್ತಾದಾಗ ಮಾತ್ರ ನನ್ನ ಬಳಿ ಬರುವ ನೆಪ  ಅವಕ್ಕೆ. ಒಂದು ರೀತಿಲಿ ಅನಾಥ ಭಾವದಂಚು ತಾಗಿದೆ ಗೊತ್ತಾ.      ಇದೆಲ್ಲ ಮತ್ತೊಂದು ಮುಂಗಾರಿನವರೆಗೆ ಮುಂದುವರಿದೆ ಇದ್ರೆ ಸಾಕು . ಎಲ್ಲ ಮೊದಲಿನ ಸಹಜ ಬದುಕು ಮರಳಿ ನಿಲ್ಲಲಿ,  ಅನುವ ಹರಕೆ , ಹಾರೈಕೆ ಈ ಮಾಸ್ಕಿನ ಮುಂಗಾರು ಮಳೆಗೆ…   *********************************

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಆವರ್ತನ ಎನ್ ಆರ್ ರೂಪಶ್ರೀ ಬದುಕೆಂದರೆ ಕನಸುಗಳ ಸಂತೆಮನಸಿನ ಭಾವನೆಗಳ ಒರತೆಕನಸಿನೂರಿನ ಪಯಣಸುಖದುಃಖಗಳ ಸಮ್ಮಿಶ್ರಣ. ಅತ್ತ ಬಂದರೂ ಬರಲಾಗದೆನಿಂತರೂ ನಿಲ್ಲಲಾಗದೆತವಕ ತಲ್ಲಣಗಳ ಮಹಾಪೂರಅಲೆಗಳ ನಡುವಿನ ಸಾಗರ. ಜೀವ ಜೀವದ ಜೀವಸೆಲೆಯಿದುನಿಲ್ಲದ ನಿರಂತರ ಪಯಣವಿದುಸಾಗುತ್ತಲೇ ಸಾಗುವ ಜಿನುಗುತ್ತಲೇ ಜಿನುಗುವ ತುಂತುರು ಮಳೆ ಹನಿಯಿದು. ಕಡಿದಂತೆ ಚಿಗುರು ಕಾಂತಿಯ ಬೆರಗುಸವಿನಯ ಭಾವದ ಸೆರಗುಮತ್ತೆ ಮತ್ತೆ ಮರುಕಳಿಸುವ ಮೆರಗು ಮೌನದಿ ಜೊತೆಗೆನ್ನ ಹುದುಗು. ಹರಿವ ಸಾಗರದಿ ಅಲೆಗಳ ನಡುವೆಪ್ರೀತಿಯ ಸಂಚಲನಬಾಳಹಾದಿಯಲ್ಲಿ ಸಾಗುತ್ತಲಿರುವಆವತ೯ನ. *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಪ್ಪ… ಸುಜಾತ ಲಕ್ಷ್ಮೀಪುರ. ಅಪ್ಪ ನೆನಪಿಗೆ ಬರುವುದು ಅಪರೂಪ… ಕಣ್ಣು ಬಿಟ್ಟಾಗಿನಿಂದ‌ ಕಂಡ‌ಅಮ್ಮನ ಮೊಗದಲ್ಲೇ ಅಪ್ಪನ‌ ಸುಳಿವು..ಅಮ್ಮನಲ್ಲಿ ಪ್ರೀತಿ ತುಂಬಿದ ಭಯ ಆತಂಕಆವಸರಿಸಿದರೆ ಗೊತ್ತಾಗುತ್ತಿತ್ತು ಅಪ್ಪ ಬಂದಾ! ಚಿಕ್ಕವಳಿರುವಾಗಲೇಮಧ್ಯ ರಾತ್ರಿ ಎಬ್ಬಿಸಿ ಕುಳ್ಳಿರಿಸುತ್ತಿದ್ದ ಓದು.. ಓದು..ತಾನು ಕಲಿತ ನಾಲ್ಕು ಅಕ್ಷರ ಸಾಲದೆಂದು ನಮ್ಮನ್ನು ಬಡಿದೆಚ್ಚರಿಸುತ್ತಿದ್ದ. ರಾತ್ರಿ ಎಷ್ಟೋ ಹೊತ್ತಿಗೆ ಕುಡಿದು ತೂರಾಡುತ್ತಾ ತಿಂಡಿ ಕಟ್ಟಿಸಿಕೊಂಡುಮನೆಗೆ ಬರುತ್ತಿದ್ದ ಅಪ್ಪ..ಹೊತ್ತು ಗೊತ್ತು ನೋಡದೆಯೇ ಎಬ್ಬಿಸಿ ತಿನ್ನಿಸುತ್ತಿದ್ದ. ಕುಡಿತ ದುಡಿಮೆಯಲ್ಲೇಜೀವ ಸವೆಸಿದ ಅಪ್ಪಮುದ್ದು ಮಾಡಿದ್ದು ನೆನಪೇ ಇಲ್ಲಾ..ಒದ್ದು ಎಬ್ಬಿಸಿ ನೀರಿಗೆಂದು ಕೊಡ ಕೊಡುತ್ತಿದ್ದ,ಆಮೇಲೆ‌ ಕೈಗೆ ಪುಸ್ತಕ. ಯೌವನದ ಹೊಸ್ತಿಲಿಗೆ ಕಾಲಿಡುವ ಮುನ್ನವೇ ಮಲಗಿದ್ದವನು ಮಲಗಿದ್ದಂತೆ ಹೊರಟುಹೋದ. ಅದೆಂದೋ ಒಂದು ದಿನ ಅಪ್ಪ ಅಮ್ಮನಿಗೆ ಹೇಳುತ್ತಲಿದ್ದ,‘ನೋಡು ನನ್ನ ‌ಮಗಳು ಚಂದ ಓದಿ ದೊಡ್ಡವಳಾಗಿ ಹೆಸರು ತರುತ್ತಾಳೆ. ನಿನ್ನ ಮಗ ನಾಲಾಯಕ್’ ಅಪ್ಪನೆಂದರೆ ಗದರಿಕೆಯ ದನಿ ಈಗಲೂ ಕೇಳಿಸುತ್ತದೆಅಪ್ಪ ಆಡಿದ್ದು ಗಳಿಸಿದ್ದು ಸಾಕಿದ್ದು ಸಲಹಿದ್ದು ಬಹಳ ಕಡಿಮೆ.ಅವನಿಟ್ಟಿದ್ದ ಒಂದೇ ವಿಶ್ವಾಸನನ್ನನ್ನು ಬೆಳೆಸಿದೆ. ನನ್ನ ನೆರಳಾಗಿ ಗೆಲುವಾಗಿ ನೆಮ್ಮದಿಯಾಗಿ ಅಮ್ಮ ನಿಂತಿದ್ದಾಳೆ.ಅಮ್ಮನ ಎದೆಯ ಗೂಡಲ್ಲಿ ಅಪ್ಪ ಈಗಲೂ ಬೆಚ್ಚಗಿದ್ದಾನೆ. ***********

ಕಾವ್ಯಯಾನ Read Post »

ಇತರೆ

ಶಿಶುಗೀತೆ

ಇರುವೆ ತೇಜಾವತಿ ಹೆಚ್.ಡಿ. ಇರುವೆ ಇರುವೆ ಎಲ್ಲಿರುವೆಎಲ್ಲಾ ಕಡೆಯಲು ನೀನಿರುವೆಶಿಸ್ತಿಗೆ ನೀನೇ ಹೆಸರಾಗಿರುವೆಹೆಚ್ಚಿನ ಭಾರವ ನೀನೊರುವೆ ಇರುವೆ ಇರುವೆ ಕೆಂಬಿರುವೆಕೋಪದಿ ಏಕೆ ನೀನಿರುವೆಅರಿಯದೆ ನಿನ್ನ ಮುಟ್ಟಿದರೆಚುರುಚುರು ಅಂತ ಕಚ್ಚಿರುವೆ ಇರುವೆ ಇರುವೆ ಕಟ್ಟಿರುವೆದಾರಿಲಿ ಏಕೆ ನಡೆದಿರುವೆಅರಿಯದೆ ಪಾದವ ಮೆಟ್ಟಿದರೆಸಾಲನು ಬಿಟ್ಟೇ ಚುಚ್ಚಿರುವೆ ಇರುವೆ ಇರುವೆ ಚಗಳಿರುವೆಕೊಟ್ಟೆಯ ಎಲ್ಲಿ ಕಟ್ಟಿರುವೆಚಟ್ನಿಗೆ ನೀನು ಚಂದಿರುವೆಮಲ್ನಾಡ ಸೀಮೆಲಿ ನೀನಿರುವೆ ಇರುವೆ ಇರುವೆ ಕಪ್ಪಿರುವೆತತ್ತಿಯ ಎಲ್ಲಿ ಬಿಟ್ಟಿರುವೆಬೆಲ್ಲವ ನೀನು ಮುತ್ತಿರುವೆಹಿಡಿಯ ಹೋದ್ರೆ ಬುಳುಗುಡುವೆ ***********

ಶಿಶುಗೀತೆ Read Post »

ಇತರೆ

ಲಹರಿ

ಮಳೆಗಾಲದ ಹಸಿ ಪ್ರೇಮಪತ್ರ… ಆಶಾಜಗದೀಶ್ ಯಾರೋ ಹುಡುಗ ಹೇಳಿದನಂತೆ ತನ್ನ ಹುಡುಗಿಗೆ, “ಹೋಗಿ ಮಳೆಯ ಹನಿಗಳನ್ನು ಎಣಿಸು.. ನಾ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ” ಎಂದು. ನನ್ನ ಅದೆಷ್ಟೋ ಸಂದರ್ಭಗಳ ಪ್ರೇಮದ ಉತ್ಕಟತೆಗೆ ಮಾತಾಗಿ ನಿಂತಿತ್ತು ಈ ಕಥೆ. ಏನೊಂದು ಹೇಳದೆಯೂ “ನನ್ನ ಪ್ರೀತಿ ಇದು” ಎಂದು ಹೇಳಿದ ಮೌನ ಮಾತಾಗಿತ್ತು ಈ ಕಥೆ. ಅರೆ… ಆ ಹೆದ್ದಾರಿಯ ಮಗ್ಗುಲ ಕಾಲುದಾರಿಯ ಪೊದೆಗೆ ಎಲ್ಲ ಗೊತ್ತಿದೆ. ನಾವು ಹೃದಯವನ್ನು  ಹಂಚಿಕೊಳ್ಳುತ್ತಾ ನಮ್ಮ ಆತ್ಮಗಳನ್ನು ಒಂದಾಗಿಸಿದ್ದನ್ನು ಕಂಡಿದೆ ಅದು. ನೋಯಿಸುವಷ್ಟು ತೀವ್ರ ಮಳೆಯಲ್ಲಿ ಕಂಗಾಲಾಗಿ ಅಳುತ್ತಾ ನಮ್ಮ ತೆಕ್ಕೆಗಳನ್ನು ಬಿಡಿಸಿಕೊಂಡು ಮನೆದಾರಿ ಹಿಡಿದಿದ್ದಕ್ಕೆ ಸಾಕ್ಷಿಯಾಗಿದೆ ಅದು. ಮತ್ತೆ ಒಂದಾಗುವ ತೀವ್ರ ಭಾವದಲ್ಲಿದ್ದೂ ಇನ್ನೊಂದೇ ಒಂದು ಹೆಜ್ಜೆಯನ್ನು ಬೇಕಂತಲೇ ಮರೆತು ನಡೆದದ್ದು ಅದರ ಮುಂದೆಯೇ. ನನ್ನ ಸಿಂಧೂರ ಹಣೆಯ ಮೇಲಿಂದ ಅತ್ತು ಇಳಿದದ್ದು ಇಂಥದೇ ಒಂದು ಹುಚ್ಚು ಮಳೆಯಲ್ಲಿ. ಹೇಳಲು ಮರೆತ ಮಾತೊಂದನ್ನು ಉಸುರಲು ನಿಂತ ಕಣ್ಣಂಚಿನ ಹನಿಯೊಂದನ್ನು ತೊಳೆದು ಅಳಿಸಿಬಿಟ್ಟಿದೆ ಈ ಮಳೆ. ಮತ್ತೆ ನಮ್ಮ ಕಣ್ಣುಗಳು ಆಡಿಕೊಳ್ಳುತ್ತಿದ್ದ ಮಾತುಗಳೆಷ್ಟೋ ಕೊಚ್ಚಿ ಹೋದದ್ದೂ ಇದೇ ಮಳೆಯಲ್ಲಿ… ಹಾಗಾಗಿ ಸುಮ್ಮನೇ ಮಳೆಯೊಂದರ ಮುಂದೆ ಕೂತು ಬಿಟ್ಟರೂ ಸಾಕು ನಿನ್ನ ಮಿಸುಗಾಟವೂ ನೆನಪಾಗತೊಡಗುತ್ತದೆ ನನಗೆ. ಮತ್ತೆ ಮಳೆಯೆನ್ನುವ ಮಾಯಾವಿಯ ಮುಂದೆ ಮಂಡಿಯೂರಿ ಸೆರಗೊಡ್ಡಿ ನಿನ್ನ ಪ್ರೇಮದ ತುಣುಕೊಂದನ್ನು ಬೇಡಿದ ಘಳಿಗೆ ಮತ್ತೆ ಮತ್ತೆ ನೆನಪ ಮೂಟೆ ಹೊತ್ತು ತರುವ ಮಹಾನ್ ಮಳೆರಾಯನ ಆಗಮನದಿಂದ ಮತ್ತೆ ಮತ್ತೆ ನವೀಕರಣಗೊಳ್ಳುತ್ತಾ ಬಂದಿದೆ… ಆದರೆ ನಮ್ಮ ನಿಲುವುಗಳು ಯಾವ ಗಟ್ಟಿ ಬುನಾದಿಯ ಮೇಲೆ ನಿಂತಿರುತ್ತವೋ, ಅವೇ ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತವೆ. ಅಂತಹ ಒಂದು ಗಟ್ಟಿ ನಿಲುವೇ ನಮ್ಮ ಆಯ್ಕೆಗಳ ವಿಷಯದಲ್ಲೂ ಕೆಲಸ ಮಾಡಿರುವುದು. ಪ್ರೀತಿಯೂ ತನ್ನ ನಿಲುವಿನ ಮೇಲೆ ತಾನು ನಿಲ್ಲುತ್ತದೆ. ಹೃದಯದ ಬುನಾದಿಯ ಮೇಲೆ ಸೌಧ ಕಟ್ಟುತ್ತದೆ. ಕೆಸರಿನಲ್ಲಿ ನಾಟಿದ ಭತ್ತದ ಸಸಿಯ ತಪಸ್ಸಿನಷ್ಟೇ ಘೋರ ತಪಸ್ಸೊಂದು ಪ್ರೇಮವನ್ನು ಇನ್ನಿಲ್ಲದಂತೆ ಪೊರೆಯುತ್ತಿರುತ್ತದೆ. ದೈಹಿಕ ಆಸೆಯೊಂದೇ ಇಷ್ಟು ದೂರ ಪೊರೆದು ನಡೆಸಲಿಕ್ಕೆ ಹೇಗಾದರೂ ಸಾಧ್ಯ!  ಜಗತ್ತನ್ನು ಎತ್ತಿ ನಿಲ್ಲಿಸಿರುವ, ಜೀವಿ ಜೀವಿಗಳ ಬೆಸೆವ ಪ್ರೇಮ, ಭೂಮಿಯನ್ನು ತಲುಪದೇ ಪೈರು ಪಚ್ಚೆಯಾಗುವುದಾದರೂ ಹೇಗೆ?! ಜೀವದ ಹಂಗು ತೊರೆದು ಹೆಣೆದ ಹೆಜ್ಜೆಗಳ ಸಾಲು, ಅವನ ಮನೆಯ ಕದ ತಟ್ಟಬೇಕಿದೆ. ಮನೆಯ ಕದದಷ್ಟೇ ಅವನ ಎದೆ ಕದವೂ ಕದಲುವುದನ್ನು ಕಂಡು ಹುಚ್ಚೆದ್ದು ಕುಣಿಯಬೇಕಿದೆ. ಕಾರ್ಮೋಡ ಕಂಡು ಗರಿ ಬಿಚ್ಚಿ ಕುಣಿವ ನವಿಲಿನಂತೆ. ಪ್ರತಿ ಗಂಡೂ ಭೂಮಿಯಂತೆ ಎದೆಸೆಟೆಸಿ ನಿಲ್ಲುತ್ತಾನೆ, ಕಣ್ಣೀರ ನುಂಗಿ ನಸು ನಗುತ್ತಾನೆ. ಪ್ರತಿ ಹೆಣ್ಣೂ ಮಳೆಯಂತೆ ನವಿರಾಗಿ, ಕೋಮಲವಾಗಿ ಸ್ಪರ್ಷಿಸುತ್ತಾಳೆ, ನೋವನ್ನು ಮರೆಸುತ್ತಾಳೆ, ಭೂಮಿಯುದರದಲ್ಲಿ ಜೀವದ ಫಲವಾಗಿ ಫಲಿಸುತ್ತಾಳೆ. ಇಳೆ ಮಳೆಯ ನಂಟು ತನ್ನ ಮಜಲುಗಳನ್ನು ಹಾಯುತ್ತಾ ಸಾಗುತ್ತಲೇ ಹೋಗುತ್ತದೆ. ಬಹುಶಃ ಇದರಿಂದಲೇ ಪ್ರೇಮವೆನ್ನುವುದು ಹುಟ್ಟಿದ್ದಿರಬೇಕು. ಬತ್ತದ ಪ್ರೇಮದ ತಿಳಿಕೊಳವೊಂದು ಪ್ರೇಮಿಗಳ ಉಡಿ ತುಂಬಿ ಕಳಿಸುತ್ತಿರಬೇಕು. ನಾವು ನಮ್ಮ ಕೈಗಳ ಮೇಲೆ ಅಚ್ಚೆ ಹೊಯ್ಸಿಕೊಳ್ಳುವಾಗಲೂ ಹೃದಕ್ಕಿಳಿಯುವ ಬಣ್ಣಕ್ಕಾಗಿ ಹುಚ್ಚು ಮಳೆಯಲ್ಲಿ ಹುಡುಕಾಡಿದ್ದೆವು. ಹುಡುಕಾಟದ ಕೊನೆಯಲ್ಲಿ ಬರಿಗೈ! ಕೊನೆಗೆ ಅರ್ಥವಾದ ಸತ್ಯವೆಂದರೆ ಅವು ಅಗೋಚರ ಬಣ್ಣಗಳು ಎಂದು. ಆದರೆ ಕಾಣುವ ಕಾಮನ ಬಿಲ್ಲಿನ ಚೂರುಗಳು ನಿನ್ನ ಕಾಮನೆಗಳ ಫಲ ಎನಿಸುವಾಗೆಲ್ಲ ನೀನು ನಡುರಸ್ತೆಯಲ್ಲಿ ಕೊಟ್ಟ ಮುತ್ತುಗಳ ಲೆಕ್ಕ ತಪ್ಪುತ್ತಲೇ ಇದೆ. ಮತ್ತೆ ಅವನ್ನೆಲ್ಲ ಈ ಹಸಿ ಮಣ್ಣಿನ ವಾಸನೆಯಲ್ಲಿ ಜೋಪಾನವಾಗಿ ಬಚ್ಚಿಟ್ಟಿದ್ದೇನೆ.  ಮತ್ತೆ ನಿನಗೆ ಗೊತ್ತಾ… ಮಳೆಗಾಲದ ಹಸಿ ನೆಲದಲ್ಲಿ ಇದ್ದಕ್ಕಿದ್ದಂತೆ ಎನ್ನುವ ಹಾಗೆ ಕಾಣಿಸಿಕೊಳ್ಳುವ ನಂಜುಳಗಳು ಆ ಮುತ್ತುಗಳ ಮೇಲೆಲ್ಲಾ ಪುಳುಪುಳು ಓಡಾಡುತ್ತಾ ಕಚಗುಳಿ ಇಡುತ್ತಿವೆಯಂತೆ. ನನಗೆ ಸುಮ್ಮಸುಮ್ಮನೇ ನಗು ಬರುತ್ತದೆ. ಯಾರನ್ನೂ ಕಣ್ಣಿಟ್ಟು ನೋಡಲಾಗದು. ದೃಷ್ಟಿ ನೆಲ ನೋಡುತ್ತದೆ. ಕಾಲ ಹೆಬ್ಬೆರಳ ರಂಗೋಲಿಯಲೂ ನಿನ್ನದೇ ಹೆಸರು. ಚಡಪಡಿಸುವ ಕೈಬೆರಳ ತುದಿಯಲ್ಲಿ ನನ್ನ ಕೂದಲೆಳೆ. ಹಗಲುಗನಸಿಗೆಳೆಸುವ ಕೆಂಪು ನಾಚಿಕೆ. ಹೇಳು ನೀನ್ಯಾರು? ಪ್ರೇಮವೆನ್ನುವುದು ಪ್ರಕೃತಿಗೆಷ್ಟು ಸಹಜವೋ ಅದರದೇ ಭಾಗವಾದ ನಮ್ಮಂತಹ ಹುಲು ಮಾನವರಿಗೂ ಸಹ. ಅದು ನೆನ್ನೆ ಇತ್ತು, ಇಂದು ಇದೆ, ಮತ್ತೆ   ನಾಳೆ ಇರುತ್ತದೆ. ಆದರೆ ಅದನ್ನು ಮೀರಿದವನು ನೀನು. ಹೇಳು ನೀನ್ಯಾರು? ಭಾಷೆಯೊಂದು ನಿನ್ನ ಮುಂದೆ  ಸೋತು ಶರಣಾಗುತ್ತಿದೆ. ಅದಕ್ಕೆ ನಿಲುಕುತ್ತಿಲ್ಲ ನೀನು. ಹೇಳೋ ಪ್ಲೀಸ್ ನೀನ್ಯಾರೋ??? ನಿನ್ನ ಅನಾಮಿಕತನವೂ ಆಪ್ಯಾಮಾನವಾಗಿದೆ. ಮತ್ತು ಸೋಲುವುದರ ರುಚಿ ಉಣಿಸುತ್ತಿದೆ. ಆದರೆ ನನಗೆ ಅಂದು ನೀನು ಬಯಲ ಏಕಾಂತದಲಿ ಮಳೆಯ ಹೊಡೆತಕ್ಕೆ ಎದೆಯೊಡ್ಡಿ ನಿಂತು, ನೀನು ನೀನಾಗಲ್ಲದೆ, ನಿನ್ನನ್ನು ಇಂಚಿಂಚೇ ಕಳೆದುಕೊಳ್ಳುತ್ತಾ ಅತ್ತದ್ದು ನೆನಪಾಗುತ್ತದೆ. ಖಾಲಿ ಇರುವ ನಿನ್ನ ಎದೆಯ ತೋರಿಸುತ್ತಾ ಅಲ್ಲಿ ನನ್ನನ್ನು ಆ ಕ್ಷಣವೇ  ಪ್ರತಿಷ್ಟಾಪಿಸಿ ಆವಾಹಿಸಿಕೊಳ್ಳುವ ನಿನ್ನ ಉಳಿವಿನ ತುರ್ತನ್ನು  ಅಳುವಿನ ಭಾಷೆಯಲ್ಲಿ ಹೇಳುತ್ತಿದ್ದುದ್ದನ್ನು ಕಂಡೂ ಅಸಹಾಕಳಾಗಿ ನಿಂತ ನನಗೆ, ಭೂಮಿ ಬಾಯ್ಬಿಡುವುದೇ ಸೂಕ್ತ ಎನಿಸಿತ್ತು. ಅವತ್ತು ನಾವಿಬ್ಬರೂ ಆಡಿದ್ದ ಮಾತುಗಳಷ್ಟೂ ಸತ್ತು ಹೋಗಿದ್ದವು. ಕಡು ವಿಷಾದ ಮಾತ್ರ ಹೆಪ್ಪುಗಟ್ಟಿತ್ತು. ಆದರೆ ಒಂದಾಗುವ ಸಮಯಕ್ಕೆ ಕಾಯುತ್ತಿದ್ದ ನಮ್ಮ ದಾರಿಗಳು, ಸಧ್ಯ ನಾವು ಮರಳಬೇಕಿರುವ ನಮ್ಮ ನಮ್ಮ ಪ್ರತ್ಯೇಕ ದಿಕ್ಕು ದಿಸೆಗಳನ್ನು ನೆನಪಿಸುತ್ತಿದ್ದವು. ನಾವಿಬ್ಬರೂ ಕ್ಷಣಗಳನ್ನು ಮುಂಗಾರಿನ ಹನಿಗಳಂತೆ ನಮ್ಮ ನಮ್ಮ ಬೊಗಸೆಯಲ್ಲಿ ತುಂಬಿಕೊಂಡು ವಿರುದ್ಧ ದಿಕ್ಕಿನಲ್ಲಿ ಹೊರಟುಹೋಗಿದ್ದೆವು. ಒಮ್ಮೆಯೂ ಹಿಂತಿರುಗಿ ನೋಡದೆ. ಆದರೆ ಬೆನ್ನುಗಳಲ್ಲಿ ಕಣ್ಣು ಮೂಡಿದ್ದು ಇಬ್ಬರಿಗೂ ತಿಳಿದಿದ್ದ ಆದರೆ ಒಬ್ಬರಿಂದೊಬ್ಬರು ಮುಚ್ಚಿಟ್ಟ ವಿಚಾರವಷ್ಟೇ… ಇದೆಲ್ಲವನ್ನೂ ನೆನೆಯುತ್ತ ಕೂತಿರುವ ನನ್ನ ಮುಂದೆ ಏನೊಂದೂ ಕಾಣಿಸದಷ್ಟು ಜೋರು ಸುರಿಯುತ್ತಿದೆ ಮಳೆ. ಮಳೆಯ ನೀಳ ಸಮತಲದ ಮೇಲೆ ನಿನ್ನ ಚಹರೆಯನ್ನೊಮ್ಮೆ ಹುಡುಕುತ್ತೇನೆ. ಕಾಣಿಸದಾಗ ಮಳೆಯ ಬಿರುಸಿನ ನಡುವೆ ನಿನ್ನ ಮುಖವನ್ನು ಕಾಣಲೇ ಬೇಕೆಂದು ರಚ್ಚೆ ಹಿಡಿಯಬೇಕೆನಿಸುತ್ತದೆ. ಹುಚ್ಚಿಯಂತೆ ಅಲೆಯುತ್ತಾ ಹೊರಟುಬಿಡಬೇಕು ಎನಿಸುತ್ತದೆ. ನೀನು ಸಿಕ್ಕಲ್ಲದೇ ಮರಳಲೇ ಬಾರದು ಎನಿಸುತ್ತದೆ. ಮಳೆಯ ಈ ದಿನಗಳು ಮುಗಿಯುವುದರೊಳಗಾಗಿ ನಾವಿಬ್ಬರೂ ಮತ್ತೆ ಯಾಕೆ ಎದುರು ಬದರಾಗಬಾರದು?! ತಬ್ಬಿ ನಿಲ್ಲಬಾರದು?! ಮತ್ತೆ ನಮ್ಮ ಹಾದಿಗಳನ್ನು ದಿಕ್ಕುಗಳನ್ನು ಏಕೆ ಒಂದಾಗಿಸಬಾರದು?! ನಮ್ಮನ್ನು ಸದಾ ಹಿಡಿದಿಡುವ ಸಾಂಗತ್ಯ, ಸಹಚರ್ಯವೊಂದನ್ನು ಮಳೆಯ ಹನಿಗಳಲ್ಲಿ ಏಕೆ ಹರಳುಗಟ್ಟಿಸಬಾರದು?! ಪರಿಣಾಮ ನಿನ್ನ ನಗು ಸಹಜವಾಗುತ್ತದೆ. ನನ್ನ ಒಂದೊಂದು ಸೆಕೆಂಡುಗಳ ಅರ್ಥ ಮರಳುತ್ತದೆ. ನಿನ್ನ ಎದೆ ಸಮಾಧಾನದ ಸಾಗರವಾಗುತ್ತದೆ. ನನ್ನ ಅಂತಃಕರಣ ಹಸಿಯಾಗುತ್ತದೆ. ಮುಂಗಾರು ಕಳೆಯುವುದರೊಳಗಾಗಿ ಅಲ್ಲೊಂದು ಪುಟ್ಟ ಹಾಲು ಗಲ್ಲದ ಸಸಿ ತಂದು ನೆಟ್ಟು ಅದರ ಬೆಳವಣಿಗೆಯಲ್ಲಿ ನಮ್ಮ ಪ್ರೇಮದ ಯಶೋಗಾಥೆ ಬರೆಯೋಣ. ಏನಂತಿ? ಅಲ್ಲ ಕಣೋ ಮಾರಾಯ್ನೇ… ಯಾವ ಬೇಲಿಯೂ ಶಾಶ್ವತವಲ್ಲ. ಬೇಲಿಯನ್ನು ದಾಟುವುದು ಸುಲಭವೂ ಅಲ್ಲ. ಆದರೆ ಪ್ರೇಮಕ್ಕೆ ಬೇಲಿ ಕಟ್ಟಲು ಹೊರಟವರು ಸೋಲಬೇಕಲ್ಲದೆ ಪ್ರೇಮವೆಂದಾದರೂ ಸೋಲುತ್ತದಾ? ಮತ್ತೆ ನಮ್ಮ ಪ್ರೇಮದ ಮುಂದೆ ಬೇಲಿಯೆನ್ನುವ ತೃಣಮಾತ್ರದ ಅಡೆತಡೆಗೆ ನಮ್ಮ ಓಟವನ್ನು ಕಟ್ಟಿಹಾಕುವ ಶಕ್ತಿ ಎಲ್ಲಿಂದಾದರೂ ಬರಬೇಕು?! ದೈಹಿಕ ನೋವಿಗೆ ನಮ್ಮನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಇಲ್ಲ. ನಾವು ಸಾಯುವ ಕೊನೆ ದಿನದವರೆಗೂ ಪ್ರತಿದಿನ ನನ್ನ ಪ್ರೀತಿಯಲ್ಲಿ ನೀನು, ನಿನ್ನ ಪ್ರೀತಿಯಲ್ಲಿ ನಾನು ಬೀಳುವಂಥವರು ಎನ್ನುವುದನ್ನು ಯಾರಿಗಾದಗೂ ಋಜುವಾತು ಮಾಡಿ ತೋರಿಸಬೇಕಿಲ್ಲ. ಜಗತ್ತಿನ ಮುಂದೆ ಅದು ಬಂದು ನಿಂತಾಗ ಯಾರಿಗೇ ಆಗಲಿ ನಂಬದೆ ವಿಧಿ ಇರುವುದಿಲ್ಲ. ಇಂದು… ಈಗ… ಈಗಲೇ… ನಾ ನಿನ್ನ ಮುಂದೆ ಬಂದು ನಿಲ್ಲುತ್ತೇನೆ. ನಿನ್ನ ಬೊಗಸೆಯಲ್ಲಿ ನನ್ನನ್ನು ತೆಗೆದುಕೋ. ಒಂದು ಕ್ಷಣ ತುಂಬಿದ ಕಂಗಳಿಂದ ದಿಟ್ಟಿಸುತ್ತಾ ಮೆಲ್ಲಗೆ ಬೊಗಸೆಯನ್ನು ಮೇಲೆತ್ತಿ, ತುಟಿಗೆ ಸೋಕಿಸಿ, ಒಮ್ಮೆ ಮೆಲುವಾಗಿ ಚುಂಬಿಸಿ, ಬಿಗಿಯಾಗಿ ಕಣ್ಮುಚ್ಚಿ, ಕುಡಿದುಬಿಡು. ಕಪೋಲಗಳ ದಾಟಿ ಕತ್ತಿನ ಗುಂಟ ಹರಿದು ಹೃದಯದ ಮಡುವಿಗೆ ಜಾರಿದ ಕಣ್ಣೀರ ಹನಿಯೊಂದು ನಿನ್ನ ಎದೆಬಡಿತವಾಗಲಿ. ಮತ್ತದರ ಶಬ್ಧ ನನ್ನ ಹೆಸರಾಗಲಿ… ಇದೋ ಬಂದೆ… ನಿನ್ನವಳು ನಿನ್ನವಳು ಮಾತ್ರ… *********

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಮಳೆ ಪದ್ಯಗಳು ಜಿ.ಲೋಕೇಶ ಮತ್ತೆ ಮತ್ತೆ ಮಳೆ ಹುಯ್ದುನೆನೆದ ನೆನಪು ತರಿಸಿದೆ ಹಾರಿಹೋದ ಕೊಡೆಯು ಕೂಡಕಣ್ಣು ಸನ್ನೆ ಮಾಡಿದೆ ಮೊದಲ ಭೇಟಿಗೆ ಮರದ ನೆಳಲುಮಳೆಯು ಗುಡುಗು ಜೊತೆಗೆ ಸಿಡಿಲು ಎದೆಯ ತಬ್ಬಿ ಭಯದಿ ಹಿಡಿತ ಬಿಗಿದುತಬ್ಬಲೇನು ಅಡ್ಡಿ ಯಾಕೋ ಬೆರಳು ತಡೆದು ತೋಯ್ದ ದೇಹ ತಣ್ಣನೆ ಬಿಸಿಯ ಫಲವುಇರದು ಜೀವ ಮೆಲ್ಲ ಮುರಿದುನಿಯಮವು ಕಾಲ ಹೊತ್ತ ತಬ್ಬಿದೆದೆಗೆ ಅನ್ಯ ನಾದಹುಯ್ದು ಮರೆತ ಮಳೆಗೆ ಒಂದು ಧನ್ಯವಾದ ಮತ್ತೆ ಬರಲಿ ಕ್ಷಣವು ಅವಕಾಶದಂತೆಮತ್ತೆ ತೊಯ್ದು ತೆಪ್ಪೆಯಾಗುವಂತೆ ****

ಕಾವ್ಯಯಾನ Read Post »

ಕಾವ್ಯಯಾನ

ಮತ್ತೆ ಮಳೆ ಬಂದಿದೆ.. ಹರಿವ ನೀರಲ್ಲಿ ತನ್ನ ಪುಟ್ಟ ಕೈಗಳಿಂದದೋಣಿಗಳ ಬಿಟ್ಟುಅವು ಚಲಿಸುವ ಚಂದಕ್ಕೆಬೆರಗಾಗಿ ನಕ್ಕು ಹಗುರಾಗಿದೆ ಅರಳಿದ ನೆಲಸಂಪಿಗೆಯ ಕೇಸರಗಳಮುಟ್ಟಿ ನೋಡುತ್ತಹನಿ ಮುತ್ತಿಕೊಂಡ ದಳಗಳಸವರಿ ಇನ್ನಷ್ಟು ನಯವಾಗಿಸುತ್ತದೆ ಬೀಸುವ ತಂಗಾಳಿ ಅಲೆಯುವಎಲೆಗಳ ಜೊತೆ ಗುಟ್ಟುಗಳನಿಟ್ಟುಹೂವಿಂದ ಹೂವಿಗೆ ಅಲೆದುಪರಿಮಳವ ಹೊತ್ತೊಯ್ಯುತ್ತದೆ ಸಂಜೆ ಬಂದ ಮಳೆಗೆ ಖಾಸಾನೆಂಟರ ಕರೆದುತಾಜಾ ಮೀನುಗಳ ಹಿಡಿದುಊಟ ಬಡಿಸುವ ಭೂಮಿರಾತ್ರಿ ಪಟ್ಟಾಂಗ ಹೊಡೆದುಬದುಕಿನ ಖುಷಿಯ ದ್ವಿಗುಣಗೊಳಿಸುತ್ತದೆ ರಾಶಿ ರಾಶಿ ರಾಶಿ ಮೋಡಗಳು ಜಗದ ತುಂಬೆಲ್ಲಾ ಕವಿಯುವಾಗನವಿಲಿನ ಹಜ್ಜೆಗೆ ಗೆಜ್ಜೆದನಿಮೂಡಿ ಮುಸ್ಸಂಜೆಯ ಆಲಾಪಕ್ಕೆಶೃತಿ ಕೊಡುತ್ತದೆ ಕತ್ತಲಾಗಲಿ,ಜೀರುಂಡೆಗಳ ಸಂಗೀತ ಕಚೇರಿಕಪ್ಪೆಗಳ ಕರತಾಡನಹೊಯ್ಯುವ ಮಳೆ ಸದ್ದಿಗೆಭೂರಮೆಗೆ ಖುಷಿಯೋ ಖುಷಿ! ಹದಗೊಂಡ ಹಸೆಗೆಬೆದೆಗೊಂಡ ಭೂಮಿಹಸಿರುಕ್ಕಿಸಿ ಹಸನಾಗಿದೆಯಾಕೆಂದರೆ,ಕಾದು ಕಾದು ಕಾದು ಹೋಗಿದ್ದಈ ಧರೆಗೆ ಮತ್ತೆ ಮಳೆ ಬಂದಿದೆ.! ****** ಫಾಲ್ಗುಣ ಗೌಡ ಅಚವೆ

Read Post »

You cannot copy content of this page

Scroll to Top