ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಟಂಕಾ

ಅನುವಾದಿತ ಟಂಕಾಗಳು

ಅನುವಾದಿತ ಟಂಕಾಗಳು ಮೂಲ ರಚನೆ – ವೈದೇಹಿ ಗಣೇಶ್ ಅನುವಾದ- ವಿಜಯ್ ಕುಮಾರ್ ಮಲೇಬೆನ್ನೂರು ವೃತ್ತಿ -ಪ್ರವೃತ್ತಿಜೀವನದ ಬಂಡಿಗೆಚಕ್ರಗಳಂತೆವೃತ್ತಿಗೊ ನಿವೃತ್ತತೆಪ್ರವೃತ್ತಿ ಸಾರ್ಥಕತೆ Profession – dispositionTwo wheels of chariotCalled the lifeRetirement ceases oneAccomplishment graces the other. ಬೇವು ಬಾಗಿತುಸಂಪಿಗೆಯಾಸರೆಗೆ,ಪ್ರಕೃತಿ ಸಾರಿಹೇಳಿತು, ಒಲವಿಗೆಗುಣ ಗಣತಿ ಬೇಕೇ? Bitter neem lentRecourse to fragrant magnoliaThe nature proclaimsFor the endearmentNot to census the virtues ಕರ್ಮದ ಆಟಕಾಲ ಕಲಿಸೋ ಪಾಠಸುಕರ್ಮಗಳಅರಿತು ನಡೆದರೆಗೆದ್ದೆ ಜೀವನದಾಟ Game of deeds areLessons taught by time;If persue the pathWith noble deedsVictory of life is there ಗಾಢದ ಮೌನನಿರಂತರ ಭಾವನಅಲೆ ಚಾಲನಸುಧೆಗಾಗಿ ಮಂಥನಇದೇ ಅನಂತ ಧ್ಯಾನ Intense silence,Incessant emotionsAdvances as waves ;Churn for gist sets ;That ‘s endless rumination ಹೆಪ್ಪು ಗಟ್ಟಿದತುಮುಲ ಗಳೆಲ್ಲವುನೋವ ಬೇಗೆಗೆಹನಿ ಹನಿ ಸುತ್ತಿವೆಕಣ್ಣೀರಧಾರೆಯಾಗಿ Deep frozen,Turmoils of the beingSpout tears;Drop by drop ,For the sultry agony **********

ಅನುವಾದಿತ ಟಂಕಾಗಳು Read Post »

ಕಾವ್ಯಯಾನ

ಬುದ್ಧ ಬುರಡಿ

ಬುದ್ಧ ಬುರಡಿ ಎ.ಎಸ್. ಮಕಾನದಾರ ನನ್ನ ಮೊಹಲ್ಲಾದಮನೆ ಮನಗಳಲ್ಲೂಬುದ್ಧ ಬೆಳಕಿನ ಬುರಡಿ ಅಂಗಾತ ಬಿದ್ದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲೂಅಲ್ಲಾಹನಿಗೆ ಸ್ಮರಿಸಲೂಉದ್ದಾಣಿನ ಬೆOಕಿ ನಂದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲೂವಚನ ಸಾರಕೆ ಗೆದ್ದಿಲು ಹಿಡಿದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲಿಬೇವರಘಾಟು ನಾಶವಾಗಿಅತ್ತರಿನ ಘಮಲು ಸುತ್ತಲೂ ಹರಡಿದೆ ನನ್ನ ಮೊಹಲ್ಲಾದಲ್ಲಿತುoಬಿರುವ ನೆತ್ತರಗೇರಿಹೂಳೆತ್ತಲು ಪಂಚವಾರ್ಷಿಕ ಯೋಜನೆ ರೂಪುಗೊOಡಿದೆ *********

ಬುದ್ಧ ಬುರಡಿ Read Post »

ಇತರೆ

ಒಲವಿನೋಲೆ

ಓದೋಕೊಂದು ಒಲವಿನೋಲೆ ಜಯಶ್ರೀ ಜೆ.ಅಬ್ಬಿಗೇರಿ ಜೀವದ ಗೆಳತಿ, ನೆತ್ತಿ ಸುಡುವ ಸೂರ‍್ಯನ ಅರ್ಭಟ ತಗ್ಗಿಸಲೆಂದೇ ಮಟ ಮಟ ಮಧ್ಯಾಹ್ನ ಸುರಿದ ಮಳೆ ಗಕ್ಕನೇ ನಿಂತಾಗ, ಆಗಸದಲ್ಲಿ ಕಾಮನಬಿಲ್ಲು ಮೈ ಅರಳಿಸಿಕೊಂಡು ತುಟಿ ಬಿರಿದು ನಿಂತಿತು. ಅದೇ ಕ್ಷಣ ಕಾಗದವನ್ನೇ ದೋಣಿಯಾಗಿಸಿ ನಾನು ನೀನು ಕೈ ಕೈ ಹಿಡಿದು ತೇಲಿ ಬಿಟ್ಟ ಘಳಿಗೆ ಅದೆಷ್ಟು ಮಧುರ ಅನುಭವ! ಅಲ್ಲವೇ ಗೆಳತಿ? ಅದನ್ನು ಮರೆಯಲಾದೀತೆ? ಹಾಲ್ಗಡಲು ಕಡೆಯುವಾಗ ಜನಿಸಿದ ಅಪ್ಸರೆಯಂತೆ ನಿನ್ನ ನೋಟ ಕಂಗೊಳಿಸುತ್ತಿರುವಾಗ ಗಗನದ ಮಳೆ ಬಿಲ್ಲು ನಸು ನಾಚಿ ಮರೆಯಾಯಿತು. ತಕ್ಷಣವೇ ಬಲು ಮೋಹಗೊಂಡು ನಿನ್ನ ಸುಕೋಮಲ ಬೆರಳಿಗೆ ಬೆರಳು ಬೆಸೆದೆ. ನಿನ್ನನ್ನು ಗೆಳತಿಯಾಗಿ ಪಡೆದು ಪರಿಪೂರ‍್ಣನಾದೆ ಎಂಬ ಭಾವದಲ್ಲಿ ಮಿಂದು ನನ್ನ ಹೃದಯ ಕುಣಿಯಿತು. ನಾನೇ ಭಾಗ್ಯವಂತ ನಾನೇ ಪುಣ್ಯವಂತ ನನಗರಿವಿಲ್ಲದೇ ಉಸಿರಿದೆ ..ಅದಕ್ಕೆ ನೀನು ಊಹ್ಞೂಂ ಇಲ್ಲ ನಾನೇ ಭಾಗ್ಯವತಿ ಎಂದದ್ದು ಇಂದಿಗೂ ಕಿವಿಯಲ್ಲಿ ಅನುರುಣಿಸುತ್ತಿದೆ. ಅರೆಗಳಿಗೆಯೂ ನಿನ್ನಿಂದ ದೂರಾಗಿ ಇರಲಾರೆ.ಎಂದೆನಿಸಿತು. ಆ ಕ್ಷಣವೇ ನಿನ್ನಲ್ಲಿ ಬೆರೆತು ನನ್ನನ್ನೇ ಮರೆತು ಬಿಡಬೇಕೆಂದು ಹೃದಯ ವೀಣೆಯ ತಂತಿ ಹಠ ಹಿಡಿಯಿತು. ಯಾರಿಗೂ ಕಾಣದಂತೆ ಹೃದಯದಲ್ಲಿ ಮರೆ ಮಾಡಿ ನಿನ್ನನ್ನು ಮುಚ್ಚಿಟ್ಟುಕೊಂಡು ಬಂದು ನನ್ನ ಕೋಣೆ ಸೇರಿದೆ. ನಾನೆಂದೂ ಕಾಣದ ಅನುಭವ ಮನದಲ್ಲಿ ಅಂದು ರಾತ್ರಿಯೆಲ್ಲ ಕಣ್ಣಿಗೆ ಕಣ್ಣು ಅಂಟಿಸಲು ಸಾಧ್ಯವಾಗಲೇ ಇಲ್ಲ. ನಿನ್ನನ್ನು ಕಾಣುವ ಮುನ್ನ ಈ ಕಣ್ಣುಗಳು ಅದೆಷ್ಟು ಸುಂದರಿಯರನ್ನು ಕಂಡಿವೆ ಲೆಕ್ಕವಿಲ್ಲ. ಆದರೆ ಆ ಯಾರೊಬ್ಬರಲ್ಲೂ ನಿನ್ನಂತೆ ಆಕರ್ಷಣೆಯ ಸೆಳೆತ ಇರಲಿಲ್ಲವೆಂತಲ್ಲ. ಮನಸ್ಸು ಯಾಕೋ ಅತ್ತ ವಾಲಲೇ ಇಲ್ಲ. ತೆರೆದ ಬಾಹುಗಳ ಚಾಚಿ ಬಿಗಿದಪ್ಪುವಂತ ಕನಸು ಕಾಣಲೇ ಇಲ್ಲ. ಅದಾವ ಗಳಿಗೆಯಲ್ಲಿ ಸಂಚಾರಿ ಮನಸ್ಸು ನಿನ್ನ ಕಂಡು ಬೆಸೆದುಕೊಂಡಿತೋ ತಿಳಿಯಲಿಲ್ಲ. ನಿನ್ನ ಹೆಜ್ಜೆಯೊಂದಿಗೆ ಹೆಜ್ಜೆ ಬೆಸೆಯುವ ಕೆಲಸಕ್ಕೆ ಮನಸ್ಸು ದಿನವೂ ಜಾತಕ ಪಕ್ಷಿಯಂತೆ ಕಾಯುತ್ತಿತ್ತು. ನನ್ನ ಪ್ರತಿ ನೋವನ್ನು ನಿನ್ನದೆಂದೇ ತಿಳಿದು, ಮುಂದೆ ಮುಂದೆ ನಡೆ ನಾನೂ ನಿನ್ನೊಂದಿಗಿದ್ದೇನೆ ಎಂದು ಎದೆಗೆ ಧೈರ‍್ಯ ತುಂಬಿ,ಕಣ್ಣ ಕಂಬನಿ ಒರೆಸಿದ ಪರಿಯಲ್ಲಿ ಒಡಲ ಬಳ್ಳಿಯನ್ನು ಸಂತೈಸುವ ತಾಯಿ ಹೃದಯವನ್ನು ನಿನ್ನಲ್ಲಿ ಕಂಡು ಅಚ್ಚರಿಗೊಂಡೆ. . ನಮ್ಮ ಸ್ನೇಹವೆಂದೆಂದೂ ಇರಲಿ ಹೀಗೆ ಶಾಶ್ವತ ಎಂದು ನೀ ತುಟಿಯಂಚಿನಲ್ಲಿ ನಗುತ್ತ ಹೇಳಿದಾಗ ಇದ್ದ ಕೊಂಚ ಸಂಕೋಚವೂ ದೂರ ಓಡಿತು. ತುಂಟತನದ ಆಟಗಳಲ್ಲಿ ಮೈ ಮರೆತು ಪಟ್ಟ ಖುಷಿಗೆ ಲೆಕ್ಕವಿಲ್ಲ. ಪ್ರೀತಿಯೇ ಬದುಕು ಅದಿಲ್ಲದೇ ಬದುಕಿಲ್ಲ ಎಂದು ತೋರಿದವಳು ನೀನಲ್ಲವೇ? ನಿನ್ನೊಂದಿಗಿರುವ ಬದುಕು ಅದೆಷ್ಟು ಚೆಂದವಲ್ಲವೇ? ಗೆಳತಿ ನಿನ್ನಂತೆ ಇನ್ನಾರು ಕಾಡಿಲ್ಲ ನನ್ನ ನಿದ್ದೆಗೆಡಿಸಿಲ್ಲ ನನ್ನ. ಬಂದು ಬಿಡು ನನ್ನ ಬಳಿಗೆ ಈಗ. ಕೈಯಲ್ಲಿ ಕಾಗದದ ದೋಣಿ ಹಿಡಿದು ನಿಂತಿರುವೆ. ಮಳೆ ಬಿಲ್ಲೂ ನಿನ್ನ ಬರುವಿಗಾಗಿಯೇ ಕಾಯುತ್ತಿದೆ. *************

ಒಲವಿನೋಲೆ Read Post »

ಇತರೆ, ಪರಿಸರ

ಇಕೊ ಕ್ಲಬ್ ಗಳ ಅನುಷ್ಠಾನ

ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಹಸಿರೇ ಉಸಿರು- ಪ್ರಕೃತಿಯ ವಿಸ್ಮಯಗಳನ್ನು ಒಳಗೊಂಡಿರುವ ನಮ್ಮ ಸುತ್ತಲಿನ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕಾಗಿರುವುದು ಇಂದು ಅನಿವಾರ್ಯವಾಗಿದೆ. ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ(NGC)ವು ಪರಿಸರ ಮತ್ತು ಅರಣ್ಯ ಮಂತ್ರಾಲಯ(MOEF) ಭಾರತ ಸರ್ಕಾರ (GOL)ದ ರಾಷ್ಟ್ರೀಯ ಶಾಲಾ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ ದೇಶದಾದ್ಯಂತ ಪ್ರತಿ ಜಿಲ್ಲೆಯ ಸುಮಾರು 250 ಶಾಲೆಗಳಲ್ಲಿ ಇಕೋಕ್ಲಬ್ ಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರೀಯ ಹಸಿರು ಸೈನ್ಯವನ್ನು ರೂಪಿಸಲು ಹಾಕಿಕೊಂಡ ಯೋಜನೆಯಾಗಿದೆ. ಮಕ್ಕಳ ಮನಸ್ಸುಗಳನ್ನು ಆಕರ್ಷಿಸಿ “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಗಾದೆ ಮಾತಿನಂತೆ ಪರಿಸರ ಜಾಗೃತಿಯನ್ನು ಅಚ್ಚು ಮಾಡುವುದಕ್ಕೆ ಸುಲಭವಾಗಿತ್ತದೆ. “ಯುವಕರನ್ನು ಹಿಡಿಯಿರಿ” ಎಂಬ ಮಂತ್ರವು ರಾಷ್ಟ್ರೀಯ ಹಸಿರು ಪಡೆಯ ಪ್ರಮುಖ ಅಂಶವಾಗಿದೆ. ಪ್ರಮುಖ ಉದ್ದೇಶ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಪರಿಸರ ರಕ್ಷಣೆ ಹಾಗೂ ಸುಧಾರಣೆಗಾಗಿ ಕ್ರಮಬದ್ಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಆರಂಭ – 2001 ರಲ್ಲಿ ಆರಂಭವಾದಾಗಿನಿಂದಲೂ ಹಲವು ನೋಡಲ್ ಏಜೆನ್ಸಿಗಳು ರಾಜ್ಯದಲ್ಲಿನ ಕಾರ್ಯಕ್ರಮದ ಅನುಷ್ಠಾನವನ್ನು ತೆಗೆದುಕೊಂಡಿವೆ.1 ಜನವರಿ 2009 ರಿಂದ ಕರ್ನಾಟಕದಲ್ಲಿ ಎಂಪ್ರಿ ಸಂಸ್ಥೆಯು ರಾಷ್ಟ್ರೀಯ ಹಸಿರುಪಡೆಯ ನೋಡೆಲ್ ಏಜೆನ್ಸಿ(NA)ಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿವರ್ಷ ಇಕೋಕ್ಲಬ್ ನ ವಿವಿಧ ಚಟುವಟಿಕೆಗಳನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗುವುದುಮೊದಲ ಹಂತ- ಜಾಗೃತಿ ಆಧಾರಿತ ಚಟುವಟಿಕೆಗಳುಉದಾ – ರಾಲಿ/ಜಾಥಾ, ತಜ್ಞರ ಜೊತೆ ಮಾತುಕತೆಗಳು, ಶೈಕ್ಷಣಿಕ ಚಲನಚಿತ್ರ ಪ್ರದರ್ಶನಗಳು /ವಿಚಾರಗೋಷ್ಠಿಗಳು ) ಎರಡನೆಯ ಹಂತ – ಕ್ರಿಯಾಶೀಲತೆ ಮತ್ತು ವೀಕ್ಷಣೆಉದಾ – ಸಮೀಕ್ಷೆ ಪ್ರವಾಸ, ದತ್ತಾಂಶ ಸಂಗ್ರಹ, ದಾಖಲೆಗಳ ರಕ್ಷಣೆ ಮೂರನೆಯ ಹಂತ- ಹೆಚ್ಚಿನ ಕ್ರಿಯಾಶೀಲತೆ.ಉದಾ – ತೋಟಗಳು, ವರ್ಮಿಕಾಂಪೋಸ್ಟಿಂಗ್, ನೀರು /ಶಕ್ತಿ ಸಂರಕ್ಷಣೆ ಮತ್ತು ನೈರ್ಮಲ್ಯ. ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆರ್ಥಿಕ ಸಹಾಯವಾಗಿ ವಾರ್ಷಿಕ 5000 ರೂಗಳನ್ನು ಪ್ರತಿ ಇಕೋಕ್ಲಬ್ ಶಾಲೆಗೆ ನೀಡಲಾಗುತ್ತದೆ. ನಿಯಮಿತ ಹಾಗೂ ಶಾಲಾ ಭೇಟಿಗಳನ್ನು ನಡೆಸುವ ಮೂಲಕ ಕಾರ್ಯಕ್ರಮವನ್ನು ಬಲಪಡಿಸಲು ನಿರಂತರ ಬೆಂಬಲ ಮತ್ತು ನೆರವನ್ನು ಒದಗಿಸುವಲ್ಲಿ ರಾಷ್ಟ್ರೀಯ ಹಸಿರುಪಡೆ ತಂಡವು ತೊಡಗಿಕೊಂಡಿದೆ. ಇಕೋಕ್ಲಬ್ ನ ಉಸ್ತುವಾರಿ ಶಿಕ್ಷಕರಿಗೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಕ್ತ ತರಬೇತಿ/ಕಾರ್ಯಾಗಾರವನ್ನು ಮಾಡಲಾಗಿದೆ. ಅನುಷ್ಠಾನದ ಪರಿಣಾಮಗಳು ಧನಾತ್ಮಕ ಬದಲಾವಣೆಗೆ ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿದ್ದು ವಿದ್ಯಾರ್ಥಿ/ನಿಯ ವೈಯಕ್ತಿಕ ಮಟ್ಟ, ಶಾಲಾ ಮಟ್ಟ ಹಾಗೂ ನೆರೆಹೊರೆ ಮಟ್ಟದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದಾಗಿದೆ. ಪರಿಸರಾತ್ಮಕವಾಗಿ ಸುಸ್ಥಿರತೆ – ಸಾಮಾಜಿಕವಾಗಿ ವೈಯಕ್ತಿಕವಾದ ಜೀವನ ಶೈಲಿಯಲ್ಲಿ ಬದಲಾವಣೆ, ವಿದ್ಯಾರ್ಥಿಗಳ ನಡವಳಿಕೆ /ವರ್ತನೆ / ನಡತೆಯಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸ್ಥಳೀಯ ಸಮಸ್ಯೆಗಳನ್ನು /ವಿಷಯಗಳನ್ನು ಗುರುತಿಸುವ ಅಗತ್ಯತೆಯನ್ನು ತಿಳಿಸುವುದರ ಜೊತೆಗೆ ಸಮಸ್ಯೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ಮಕ್ಕಳಿಂದ ಹೆಚ್ಚು ಕ್ರಿಯಾಧಾರಿತ ಚಟುವಟಿಕೆಗಳನ್ನು ಮಾಡಿಸುವುದರಿಂದ ಮಕ್ಕಳು ಕೂಡ ಕ್ರಿಯಾಶೀಲರಾಗುತ್ತಾರೆ. ವಿಶ್ವ ಪರಿಸರ ದಿನದ ಆಚರಣೆಯ ಬಗ್ಗೆ ಅರಿವು ಮೂಡುತ್ತದೆ. ವಿದ್ಯಾರ್ಥಿಗಳಲ್ಲಿ ಪರಿಸರದ ಮಹತ್ವ, ಅರೋಗ್ಯ ಸ್ವಚ್ಛತೆ, ಪರಿಸರ ಸ್ವಚ್ಛತೆ ಮತ್ತು ಆರೋಗ್ಯಕರ ಅಭ್ಯಾಸಗಳಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಾಳಜಿ ಮೂಡುತ್ತದೆ. ಅವರು ಕೂಡ ಶ್ರಮದಾನದಲ್ಲಿ ತೊಡಗಿ ತಮ್ಮ ಶಾಲೆಗಳನ್ನು ಶುದ್ಧವಾಗಿಟ್ಟುಕೊಳ್ಳುವರು. ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿ ಪರಿಸರದ ಕುರಿತು ಮಕ್ಕಳಲ್ಲಿ ಆಸಕ್ತಿ ಮತ್ತು ಕಾಳಜಿ ಮೂಡಿಸುವುದರಿಂದ ಎಳೆಯ ವಯಸ್ಸಿನಲ್ಲೇ ಮಕ್ಕಳು ಇದರ ಉದ್ದೇಶವನ್ನರಿತು ಪರಿಸರದೊಂದಿಗೆ ಅವಿನಾಭಾವ ಸಂಬಂಧವೊಂದನ್ನು ಬೆಳೆಸಿಕೊಳ್ಳುತ್ತಾರೆ. ಶಾಲಾ ಪರಿಸರ ಹಾಗೂ ಊರಿನ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದರ ಜೊತೆಗೆ ಇರುವ ಸಸ್ಯಗಳನ್ನು ಸಂರಕ್ಷಿಸಿ ಇನ್ನೂ ಹೆಚ್ಚಿನ ಸಸಿಗಳನ್ನು ಬೆಳೆಸುವ ಕಡೆಗೆ ಗಮನ ಹರಿಸುತ್ತಾರೆ. ಯೋಗದಿಂದ ಆರೋಗ್ಯ ವೃದ್ಧಿ – ವಿದ್ಯಾರ್ಥಿಗಳಲ್ಲಿ ಯೋಗದ ಮಹತ್ವ ಅರಿತಾಗ ಸದೃಢ ಆರೋಗ್ಯಕ್ಕಾಗಿ ಯೋಗದ ಮಹತ್ವವನ್ನು ಅರಿತು ಅಳವಡಿಸಿಕೊಳ್ಳುತ್ತಾರೆ. ವನಮಹೋತ್ಸವ ಆಚರಣೆಯ ಮೂಲಕ ಸಸಿಗಳನ್ನು ನೆಟ್ಟು ದತ್ತು ಪಡೆದು ಅವುಗಳ ಆರೈಕೆ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಜಾಥಾ ಕಾರ್ಯಕ್ರಮಗಳ ಮೂಲಕ ಸಮುದಾಯದಲ್ಲಿ ಸ್ವಚ್ಛತೆಯ ಬಗೆಗಿನ ಅರಿವನ್ನು ಮೂಡಿಸಲು ಸಾಧ್ಯವಾಗಿದೆ. ಶೌಚಾಲಯದ ಪಾತ್ರ, ಆರೋಗ್ಯಕರ ಆಹಾರ ಮತ್ತು ನೀರಿನ ಸಂರಕ್ಷಣೆಯ ವಿಧಾನ ಮುಂತಾದವುಗಳ ಘೋಷಣೆಯಿಂದ ಎಲ್ಲರಲ್ಲಿ ಜಾಗೃತಿ ಉಂಟಾಗುತ್ತದೆ. ಕೈ ತೊಳೆಯುವ ಆರು ಕ್ರಮಬದ್ಧ ಹಂತಗಳನ್ನು ಮಾದರಿಯಾಗಿ ನೋಡಿ ಪಾಲಿಸುವುದರಿಂದ ಕೈತೊಳೆಯುವ ಕ್ರಮ ಮತ್ತು ಮಹತ್ವವನ್ನು ಅರಿತಿದ್ದಾರೆ. ಪರಿಸರ ವೀಕ್ಷಣೆಗಾಗಿ ಪ್ರವಾಸ, ನೈಸರ್ಗಿಕ ನೋಟ, ಪ್ರಾಣಿ ಸಂಗ್ರಹಾಲಯ, ಜಲಪಾತ, ಪರ್ವತ ಹಾಗೂ ನದಿ ಕಣಿವೆಗಳ ವೀಕ್ಷಿಸುವುದರಿಂದ ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ, ಕುತೂಹಲ, ವೈವಿಧ್ಯ, ವಿಸ್ಮಯಗಳ ಅರಿವಾಗುತ್ತದೆ.*ವಿವಿಧ ಪರಿಸರಸ್ನೇಹಿ ಸ್ಪರ್ಧೆಗಳ ಆಯೋಜನೆಯ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಯುತ್ತದೆ.ಉದಾ – ಕೈಚೀಲ ತಯಾರಿಕೆ, ಭಾಷಣ ಸ್ಪರ್ಧೆ, ಆಶುಭಾಷಣ, ಪರಿಸರಗೀತೆಗಳ ಗಾಯನ, ಪ್ರಬಂಧ, ಚಿತ್ರಕಲಾ ಸ್ಪರ್ಧೆ ಇತ್ಯಾದಿ.. ಬೆಂಕಿ ಅವಘಡದ ಕುರಿತು ಪ್ರಾತ್ಯಕ್ಷಿಕೆ ಮತ್ತು ಜಾಗೃತಿಯನ್ನು ಮೂಡಿಸುವುದರಿಂದ ವಿಪತ್ತುಗಳ ಸಮಯದಲ್ಲಿ ತುರ್ತು ಕ್ರಮಗಳನ್ನು ಅಳವಡಿಸಿಕೊಳ್ಳುವ ಜ್ಞಾನ ವೃದ್ಧಿಯಾಗುತ್ತದೆ. ಪರಿಸರಪ್ರೇಯಿಮಗಳಾದ ಸಾಲುಮರದ ತಿಮ್ಮಕ್ಕ, ಸುಂದರಲಾಲ್ ಬಹುಗುಣರಂತಹ ಮಹಾನ್ ವ್ಯಕ್ತಿಗಳ ಪರಿಚಯ ಮತ್ತು ಅವರ ಕುರಿತು ಪ್ರಬಂಧ, ಭಾಷಣಗಳ ಮೂಲಕ ಅವರ ತತ್ವ ಆದರ್ಶಗಳನ್ನು ಮನದಟ್ಟು ಮಾಡಿಕೊಳ್ಳುತ್ತಾರೆ. ನಮ್ಮ ಸುತ್ತಮುತ್ತಲಿನ ಗಿಡಮೂಲಿಕೆಗಳ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯ ಮೂಲಕ ಆಯುರ್ವೇದದ ಬಗ್ಗೆ ಹಾಗೂ ನೈಸರ್ಗಿಕವಾಗಿ ಆರೋಗ್ಯವನ್ನು ಪ್ರಕೃತಿಯಲ್ಲಿ ದೊರೆಯುವ ಗಿಡಮೂಲಿಕೆಗಳಿಂದ ಹೇಗೆ ಕಾಪಾಡಿಕೊಳ್ಳುವುದು ಎಂಬ ಅಂಶವನ್ನು ತಿಳಿಯುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ “ಮುಸುಕಿನಿಂದ ಪರಿಸರದೆಡೆಗೆ ಪಯಣ” ಎಂಬಂತೆ ಪರಿಸದ ಮಹತ್ವ ತಿಳಿಸಿ ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ರಚನೆಯ ಅನುಷ್ಠಾನವು ಒಂದು ಮೈಲಿಗಲ್ಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಪರಿಸರದೊಂದಿಗೆ ಭಾವ ಬೆಸೆದು ಪರಿಸಸ್ನೇಹಿಗಳಾಗಿ ಬದುಕುವ ಪರಿಪಾಠವು ಕೂಡ ಮೈಗೂಡುತ್ತದೆ. ಜೂನ್ 5 ರಂದು ಪ್ರಪಂಚದಾದ್ಯಂತ ವ್ಯಾಪಕವಾಗಿ ಸಾಂಕೇತಿಕವಾಗಿ ಆಚರಿಸುತ್ತಿರುವ ವಿಶ್ವ ಪರಿಸರ ದಿನಾಚರಣೆಗೆ ಮಕ್ಕಳಲ್ಲಿ ಅವರ ಜೀವನಶೈಲಿಯಲ್ಲಿ ನಿರಂತರವಾಗಿ ಪರಿಸರ ಜಾಗೃತಿಯನ್ನು ಅಳವಡಿಸಿಕೊಳ್ಳುವ ಸ್ಫೂರ್ತಿಯನ್ನು ಇಕೋಕ್ಲಬ್ಗಳು ಮಾಡುತ್ತಿವೆ. ಇದು ಇನ್ನಷ್ಟು ಕ್ರಿಯಾಶೀಲವಾಗಿ ಅನುಷ್ಠಾನವಾದರೆ ಮುಂದಿನ ಪೀಳಿಗೆ ಪರಿಸರವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ****** ತೇಜಾವತಿ ಹೆಚ್.ಡಿ.

ಇಕೊ ಕ್ಲಬ್ ಗಳ ಅನುಷ್ಠಾನ Read Post »

You cannot copy content of this page

Scroll to Top