ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾರ್ಥಿಯಾಗುತಿದ್ದೇನೆ.

Photo of Gas Masks

ಜ್ಯೋತಿ ಡಿ.ಬೊಮ್ಮಾ

ಆಗ ಬದುಕುತಿದ್ದೆ ಜೀವದುಂಬಿ ,ನಟಿಸುತ್ತಿರಲಿಲ್ಲ
ಈಗಲೂ ಬದುಕುತಿದ್ದೆನೆ , ನಟಿಸುತ್ತ

ಆಗ ಮಾತಾಡುತಿದ್ದೆ ಮನಸ್ಸು ಬಿಚ್ಚಿ
ನಿರ್ಗಳವಾಗಿ
ಈಗಲೂ ಮಾತಾಡುತ್ತೆನೆ ಅಳೆದು ತೂಗಿ
ಒಂದೊಂದೆ

ಆಗ ಪ್ರೀತಿಸುತಿದ್ದೆ ಎಲ್ಲರನ್ನೂ ನಿಸ್ವಾರ್ಥದಿಂದ
ಈಗಲೂ ಪ್ರೀತಿಸುತ್ತೆನೆ ಅಥವಾ ಪ್ರೀತಿಸುವಂತೆ
ನಾಟಕವಾಡುತ್ತೆನೆ

ಆಗ ಸ್ಪಂದಿಸುತಿದ್ದೆ ಥಟ್ಟನೆ ,ಯಾವ
ಪ್ರತಿಫಲಾಪೇಕ್ಷೆ ಇಲ್ಲದೆ..
ಈಗ ಅವರಿಂದಾಗುವ ಲಾಭ ನಷ್ಟ ಗಳು
ಅವಲಂಬಿಸಿರುತ್ತದೆ ನನ್ನ ಸಹಾಯಹಸ್ತ

ಆಗ ನಗುತಿದ್ದೆ ನಿಷ್ಕಲ್ಮಷವಾಗಿ ಮನದುಂಬಿ
ಈಗಲೂ ನಗುತ್ತೆನೆ ಹಿಂದೆ
ಮುಂದೆ ಕೊಂಚ ತುಟಿಯರಳಿಸಿ

ಆಗ ಹಾತೊರೆಯುತಿತ್ತು ಮನಸ್ಸು
ಎಲ್ಲರೊಳಗೊಂದಾಗಿ ಬೆರೆಯಲು ನಲಿಯಲು
ಈಗ ಹುದುಗುತ್ತೆನೆ ಒಂಟಿತನದ ಚಿಪ್ಪಿನಲ್ಲಿ
ನನ್ನನ್ನು ನಾನು ನಿರ್ಬಂಧಿಸಿಕೊಂಡು

ಈಗ ಅವರು ಇವರು ಎಲ್ಲರೂ ಮುಖವಾಡಗಳೆ
ತಮಗರಿವಿಲ್ಲದೆ ದಿನವೂ ನಟಿಸುವ ಪಾತ್ರಧಾರಿಗಳು

ಈಗೀಗ ಸ್ವಾರ್ಥಿಯಾಗುತ್ತಿರುವೆ ನನಗರಿವಿಲ್ಲದೆ
ಇಲ್ಲ ಇಲ್ಲ ..ಸ್ವಾರ್ಥಿಯಾಗುವಂತೆ ಪ್ರೇರೇಪಿಸುವ
ಸಮಾಜದಲ್ಲಿ ನಾನಿದ್ದೆನೆ.

*********

About The Author

1 thought on “ಸ್ವಾರ್ಥಿಯಾಗುತಿದ್ದೇನೆ.”

Leave a Reply

You cannot copy content of this page

Scroll to Top