ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮೂರ ಮಣ್ಣಿನಲಿ

Life in extreme conditions

ವಿನುತಾ ಹಂಚಿನಮನಿ

ನಮ್ಮೂರ ಬೀಸು ಗಾಳಿಯಲಿ
ಮಾಸದ ಸಂಸ್ಕೃತಿಯ ಸುಗಂಧ
ನನ್ನ ಉಸಿರ ಪರಿಮಳದಲಿ
ಇಂದಿಗೂ ಸೂಸತಾವ ಘಮಘಮ

ನಮ್ಮೂರ ಕಾಡ ಹಾದಿಯಲಿ
ನಾ ಮೂಡಿಸಿದ ಹೆಜ್ಜೆ ಗುರುತು
ನಡೆದ ದಾರಿಯ ತೋರಿಸುತಲಿ
ಇಂದಿಗೂ ಬೆನ್ಹತ್ತತಾವ ಎಡಬಲ

ನಮ್ಮೂರ ಕೆರೆಯ ನೀರಿನಲಿ
ನಾ ಒಗೆದ ಕಲ್ಲು ಹರಳು
ಅಲೆಗಳ ಮಾಲೆ ಹೆಣೆಯುತಲಿ
ಇಂದಿಗೂ ನಗತಾವ ಕಿಲಕಿಲ

ನಮ್ಮೂರ ನಿಷ್ಠ ಮಣ್ಣಿನಲಿ
ಕಷ್ಟ ಎದುರಿಸುವ ಕೆಚ್ಚು
ಕನಸಿಗೆ ಎಣ್ಣಿ ಹೊಯ್ಯತಲಿ
ಇಂದಿಗೂ ಮಿನಗತಾವ ಮಿಣಮಿಣ

**********

ನಮ್ಮೂರ ಚಿಕ್ಕ ಆಗಸದಲಿ
ಅಕ್ಕರೆಯ ಚೊಕ್ಕ ಚುಕ್ಕೆಗಳು
ಸಕ್ಕರೆಯ ಕಥೆ ಹೇಳುತಲಿ
ಇಂದಿಗೂ ನೀತಿ ಹೇಳತಾವ ಚಕಚಕ

ನಮ್ಮೂರ ಜನರ ಮನಸಿನಲಿ
ಕರುಣೆಯ ಮಹಾಪೂರ
ಸವಿ ನೆನಪುಗಳ ಸುರಿಯುತಲಿ
ಇಂದಿಗೂ ಹರಸತಾವ ಭರಪೂರ

About The Author

1 thought on “ಕಾವ್ಯಯಾನ”

Leave a Reply

You cannot copy content of this page

Scroll to Top