ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆವರ್ತನ

Yellow Ring Lights in the Ceiling

ಎನ್ ಆರ್ ರೂಪಶ್ರೀ

ಬದುಕೆಂದರೆ ಕನಸುಗಳ ಸಂತೆ
ಮನಸಿನ ಭಾವನೆಗಳ ಒರತೆ
ಕನಸಿನೂರಿನ ಪಯಣ
ಸುಖದುಃಖಗಳ ಸಮ್ಮಿಶ್ರಣ.

ಅತ್ತ ಬಂದರೂ ಬರಲಾಗದೆ
ನಿಂತರೂ ನಿಲ್ಲಲಾಗದೆ
ತವಕ ತಲ್ಲಣಗಳ ಮಹಾಪೂರ
ಅಲೆಗಳ ನಡುವಿನ ಸಾಗರ.

ಜೀವ ಜೀವದ ಜೀವಸೆಲೆಯಿದು
ನಿಲ್ಲದ ನಿರಂತರ ಪಯಣವಿದು
ಸಾಗುತ್ತಲೇ ಸಾಗುವ ಜಿನುಗುತ್ತಲೇ ಜಿನುಗುವ ತುಂತುರು ಮಳೆ ಹನಿಯಿದು.

ಕಡಿದಂತೆ ಚಿಗುರು ಕಾಂತಿಯ ಬೆರಗು
ಸವಿನಯ ಭಾವದ ಸೆರಗು
ಮತ್ತೆ ಮತ್ತೆ ಮರುಕಳಿಸುವ ಮೆರಗು ಮೌನದಿ ಜೊತೆಗೆನ್ನ ಹುದುಗು.

ಹರಿವ ಸಾಗರದಿ ಅಲೆಗಳ ನಡುವೆ
ಪ್ರೀತಿಯ ಸಂಚಲನ
ಬಾಳಹಾದಿಯಲ್ಲಿ ಸಾಗುತ್ತಲಿರುವ
ಆವತ೯ನ.

*****

About The Author

Leave a Reply

You cannot copy content of this page

Scroll to Top