ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ಗೀತೆ

Mumbai: 100 Dhangar students to get admission in English medium ...

ಮಂಜುಳಾ ಗೌಡ

ಬನ್ನಿರಿ ಬನ್ನಿರಿ ಗೆಳೆಯರೆ
ಶಾಲೆಗೆ ಹೊಗೋಣ
ವಿದ್ಯೆಬುದ್ದಿ ಕಲಿತು ನಾವು
ಜಾಣರಾಗೋಣ.

ಹೂವುಗಳಂತೆ ನಾವೆಲ್ಲ
ನಗುತ ಅರಳೋಣ
ಅರಳಿ ನಿಂತು ಕೀರ್ತಿಯ
ಪರಿಮಳ ಹರಡೋಣ.

ಪಾಠವ ಕಲಿಯೋಣ
ನಾವು ಆಟವ ಆಡೋಣ
ಪಾಠವ ಕಲಿತು ಆಟವ ಆಡಿ
ನಕ್ಕು ನಲಿಯೋಣ.

ಹಕ್ಕಿಯಂತೆ ಹಾರಾಡೋಣ
ದುಂಬಿಯಂತೆ ಝೇಂಕರಿಸೋಣ
ನವಿಲಿನಂತೆ ನರ್ತಿಸೋಣ
ಕೋಗಿಲೆಯಂತೆ ಹಾಡೋಣ.

ಕಥೆಗಳ ಹೆಳೋಣ ನಾವು
ನೀತಿಯ ತಿಳಿಯೋಣ.
ರಂಗುರಂಗಿನ ಚಿತ್ರವ ಬಿಡಿಸುತ
ಖುಷಿಯಾಗಿರೋಣ.

ಪುಸ್ತಕ ಓದೋಣ ವಿಧವಿಧ
ವಿಷಯವ ಅರಿಯೋಣ.ಜ್ಞಾನವ
ಪಡೆದು ಸುಜ್ಞಾನಿಗಳಾಗಿ
ದೇಶವ ಕಟ್ಟೋಣ.

*******

About The Author

Leave a Reply

You cannot copy content of this page

Scroll to Top