ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಿಯ ಬರಹಗಾರರೆ-

ಪ್ರಿಯ ಬರಹಗಾರರೆ,
ಸಂಗಾತಿ ಬ್ಲಾಗಿಗೆ ನೀವು ಬರೆಯುತ್ತಿರುವುದು ನಮಗೆಸಂತಸದ ವಿಚಾರ.

ಅಕ್ಷರದ ಮೇಲಿನ ನಿಮ್ಮ ಪ್ರೀತಿ ದೊಡ್ಡದು.

ಇಷ್ಟು ದಿನಗಳ ನಿಮ್ಮ ಸಹಕಾರಕ್ಕೆ ಸಂಗಾತಿ ಋಣಿಯಾಗಿರುತ್ತದೆ

ಓದುಗರಿಗೆ ಒಳ್ಳೆಯ ಸಾಹಿತ್ಯಕ ಬರಹಗಳನ್ನು ನೀಡುವ ಉದ್ದೇಶದಿಂದ ಕೆಲವೊಂದು ನಿಯಮಗಳನ್ನು ನಾವು ರೂಪಿಸಿದ್ದು ಅವನ್ನು ತಮಗೆ ತಿಳಿಸಲು ಇಚ್ಚಿಸುತ್ತೇವೆ.

ಮೊದಲನೆಯದಾಗಿ ನಮ್ಮ  ಓದುಗರಿಗೆ ಹೊಸ ಬರಹಗಳನ್ನು ನೀಡಲಿಚ್ಚಿಸಿದ್ದು ಬೇರೆ ಕಡೆ ಪ್ರಕಟವಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ.

ಎರಡನನೆಯದಾಗಿ ಈಗಾಗಲೇ ಫೇಸ್ ಬುಕ್ಕಿನಲ್ಲಿ ಹಾಕಿ ಹಳತಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ.

ಮೂರನೆಯದಾಗಿ ಬ್ಲಾಗಿನ ಗುಣ ಮಟ್ಟ ಕಾಯ್ದುಕೊಳ್ಳಲು ಆಯ್ದ ಬರಹಗಳನ್ನುಮಾತ್ರ ಪ್ರಕಟಿಸಲಾಗುವುದು.

ನಾಲ್ಕನೆಯದಾಗಿ ಹಿಂದೆಯೇಹೇಳಿದಂತೆ ರಾಜಕೀಯಮತ್ತು ದಾರ್ಮಿಕ ವಿಚಾರಗಳಬರಹಗಳನ್ನು ಪ್ರಕಟಿಸಲಾಗುವುದಿಲ್ಲ.

ಕಳಿಸಿದ  ಎರಡು ದಿನದ ಒಳಗೆ ನಿಮ್ಮ ಬರಹ ಪ್ರಕಟವಾಗದಿದ್ದರೆ ಬರಹ ಸ್ವೀಕೃತವಾಗಿಲ್ಲವೆಂದು ತಾವು ತಿಳಿಯಬೇಕು.

ಈಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ.

ಸಾಹಿತ್ಯಕ್ಕೆ ಮೀಸಲಾದ ಒಂದು ಬ್ಲಾಗಿಗು-ಬೇರೆ ಜಾಲತಾಣಗಳಿಗು ಗುಣಾತ್ಮಕ ವ್ಯತ್ಯಾಸವಿರಬೇಕೆಂದು ನಾವು ಬಯಸುತ್ತೇವೆ.

ಹಾಗಾಗಿ ಈ ನಿಯಮಗಳನ್ನು ರೂಪಿಸಿದ್ದೇವೆ ಮತ್ತು ನಿಮ್ಮ ಸಲಹೆ ಸಹಕಾರಗಳನ್ನು ಕೋರುತ್ತಿದ್ದೇವೆ

ಕನ್ನಡ ಸಾಹಿತ್ಯಲೋಕದಲ್ಲಿ ನಮ್ಮ ಬ್ಲಾಗಿಗೊಂದು ಉತ್ತಮ ಹೆಸರು ತಂದು ಕೊಡುವ ನಿಟ್ಟಿನಲ್ಲಿ ನಿಮ್ಮ ಬರಹಗಳು ಇರಲಿ

ಎಂದಿನಂತೆ ನಿಮ್ಮ ಉತ್ತಮ ಬರಹಗಳನ್ನು ನಾವು ನಿರೀಕ್ಷಿಸುತ್ತೇವೆ. 

ಸಂಪಾದಕರು,ಸಂಗಾತಿ ಸಾಹಿತ್ಯ ಪತ್ರಿಕೆ

About The Author

1 thought on “ನಿಮ್ಮೊಂದಿಗೆ”

  1. ಖಂಡಿತ ಸರ್
    ಸಂಗಾತಿಯ ಸಾಹಿತ್ಯ ಸೆಲೆ ಬತ್ತಬಾರದು
    ಡಿ ಎಮ್.ನದಾಫ್, ಅಫಜಲಪುರ

Leave a Reply

You cannot copy content of this page

Scroll to Top