ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಸ್ತ್ರಗಳಿವೆ

ಲಕ್ಷ್ಮೀ ದೊಡಮನಿ

ಕಾಳಕೂಟ ಮೀರಿಸಬಲ್ಲ ವಿಷಗಳಿವೆ ನಮ್ಮೊಳಗೆ
ಅಮೃತವ ಹಾಳುಮಾಡಬಲ್ಲ
ಕುತಂತ್ರಿಗಳಿವೆ ನಮ್ಮೊಳಗೆ

ಕಟುವಾಣಿ,ಅಶ್ಲೀಲ ವಿಚಾರ,ಸಂಶಯಗಳ ಮುಖೇನ
ಅಂದದ ತನುವ ನಶಿಸಬಲ್ಲ
ರಸಾಯನಗಳಿವೆ ನಮ್ಮೊಳಗೆ

ಸಂಬಂಧದ ಲೆಕ್ಕವಿಲ್ಲ, ಸಮಯ-ಜಾಗದ ಪರಿವೆಯಿಲ್ಲ
ಸ್ತ್ರೀಯರ ಆಸಿಸಬಲ್ಲ
ಕ್ರಿಮಿಗಳಿವೆ ನಮ್ಮೊಳಗೆ

ಪ್ರಗತಿಯ ರಸ್ತೆಯಿಂದ. ಧುಮ್ಮಿಕ್ಕುವವರ ಎಳೆಯುವ
ಧ್ಯೇಯದಿಂದ ದೂರಾಗಿಸಬಲ್ಲ
ಭಾವನೆಗಳಿವೆ ನಮ್ಮೊಳಗೆ

ಅವನನ್ನುಹೊರುವ, ಅರ್ಧಾಂಗಿಯಾಗಬಲ್ಲ ಅವಳ
ಅಸಮತೆಯಿಂದ ಕಾಣಬಲ್ಲ
ನೋಟಗಳಿವೆ ನಮ್ಮೊಳಗೆ

ಬೆರಳಿಂದ ಬ್ರಹ್ಮಾಂಡವರಿವ ಶಕ್ತಿ ಹುಟ್ಟಿದೆ ‘ಚೆಲುವೆ’
ಪುಸ್ತಕ ಸಂಸ್ಕೃತಿ ಅಳಿಸಬಲ್ಲ ಅಸ್ತ್ರಗಳಿವೆ ನಮ್ಮೊಳಗೆ

*******

About The Author

Leave a Reply

You cannot copy content of this page

Scroll to Top