ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಎಲ್ಲಾ ಒಲವುಗಳು ಉಳಿಯುವುದಿಲ್ಲ 

selective photo of red and white hearts graffiti

ವಸುಂಧರಾ ಕದಲೂರು

ಪಡೆದುಕೊಳ್ಳಲಾಗದ ಒಲವು
ನೋವಾಗಿ ಕಾಡುವಾಗ ಸಂತೈಸಿಕೋ
ಮನವ.. ಏಕೆಂದರೆ,

ಎಲ್ಲಾ ಒಲವುಗಳು ನಮ್ಮದಾಗಿ
ಉಳಿಯುವುದಿಲ್ಲ.
ಭೋರೆಂದು ಸುರಿದ ಮಳೆಯ
ಹನಿ ಇಳೆಯ ಗರ್ಭಕ್ಕಿಳಿಯದೇ
ಆವಿಯಾಗಿ ಬಿಡುವುದು
ಕಡಲ ಅಲೆ ದಡಕ್ಕೆ ಅಪ್ಪಳಿಸಿದ
ಚಿಪ್ಪೊಳಗೆಂದೂ ಮುತ್ತು ಕೂಡದು
ಗಡಿಯಾರವೂ ಹಿಂದೆ ತಿರುಗಲಾರದ
ಸಂಕಟಕ್ಕೆ ಆಗಾಗ್ಗೆ ನಿಸೂರ
ನಿಟ್ಟುಸಿರಿಟ್ಟು ನಿಂತು ಬಿಡುವುದು
ಚಿಗುರೊಡೆಯದ ಬೀಜಗಳ ಕತೆ
ಗೊಬ್ಬರದ ಹಾಡಿನಲ್ಲಿ ಕೊನೆಯಾಗುವುದು
ಒಲವು ಕನಸ ಕನವರಿಕೆಯಲ್ಲರಳಿ
ಸುಗಂಧ ಸೂಸುವ ಮುನ್ನ ಭಗ್ನ
ಸ್ವಪ್ನವಾಗಿಬಿಡುವುದು
ಬರೆಯಲಾಗದ ಸಂಕಟಕ್ಕೇ ಖಾಲಿ
ಉಳಿಯುವ ಹಾಳೆಗಳು ರದ್ದಿಯಾಗುವುದು

ನೆನವರಿಕೆಯಲ್ಲಿ ಬಲುಪ್ರಿಯವಾಗುವ
ಅನನ್ಯ ಪ್ರೇಮದ ಒಲವಿನ ಸಾಂಗತ್ಯ
ನಿಜದಲ್ಲಿ ಎಂದೂ ಅಪೂರ್ಣವೇ….

**********

About The Author

1 thought on “ಕಾವ್ಯಯಾನ”

  1. ಕೆ.ಬಿ.ವೀರಲಿಂಗನಗೌಡ್ರ.

    ಚೆನ್ನಾಗಿದೆ ..
    ಅಭಿನಂದನೆಗಳು.

Leave a Reply

You cannot copy content of this page

Scroll to Top