ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

500+ Heart Images | Download Free Pictures On Unsplash

ರತ್ನರಾಯಮಲ್ಲ

ನೆಮ್ಮದಿಯ ಜೀವನಕ್ಕಾಗಿ ಮನಸ್ಸನ್ನು ಮರೆತುಬಿಡು
ಶಾಂತಿಯುತ ಬದುಕಿಗಾಗಿ ಬುದ್ಧಿಯನ್ನು ಮರೆತುಬಿಡು

ಬಾಳೊಂದು ಸುಂದರ ಸ್ವಪ್ನ ಎಂಬುದನ್ನು ಮರೆಯದಿರು
ನಿರ್ಮಲ ಸಹಯೋಗದ ಸಾಂಗತ್ಯವನ್ನು ಮರೆತುಬಿಡು

ಪರಪಂಚದಲ್ಲಿ ಶೂನ್ಯ ಸಂಪಾದನೆ ಮಾಡಬೇಕಾಗಿದೆ
ಎಲ್ಲಾ ಬಲ್ಲೆನೆಂಬ ಸಿಹಿಯಾದ ಭ್ರಮೆಯನ್ನು ಮರೆತುಬಿಡು

ಮನುಷ್ಯ ಸಮಾಜ ಜೀವಿ ಎಂದು ಸಾರಲು ಹೋಗಬೇಡ
ಜಿಂದಗಿಯ ಸವಿಯನುಣಲು ಸಂಸಾರವನ್ನು ಮರೆತುಬಿಡು

‘ಮಲ್ಲಿ’ ಮರೆವು ಪ್ರಜ್ಞಾವಂತ ಜಗತ್ತಿನ ಬಹುದೊಡ್ಡ ಆಸ್ತಿ
ಶಾಶ್ವತವೆಂಬ ಮಾಯಾ ಜಿಂಕೆಯನ್ನು ಮರೆತುಬಿಡು

******

About The Author

2 thoughts on “ಕಾವ್ಯಯಾನ”

  1. ಭೀಮಾಶಂಕರ ವಿ ಜಮಾದಾರ

    ತುಂಬಾ ಅನುಭವದ ನುಡಿಗಳು ಸರ್

Leave a Reply

You cannot copy content of this page

Scroll to Top