ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಟ್ಟಿರುವೆ ಈ ಮನೆಯ ನಾನು ನಿಧನಿಧಾನ

Living in harmony with nature will lead to better future: PM Modi ...

ಹಿಂದಿ: ರಾಮದರಶ್ ಮಿಶ್ರಾ

ಕನ್ನಡ: ಕಮಲಾಕರ ಕಡವೆ

ಕಮಲಾಕರ ಕಡವೆ

ಕಟ್ಟಿರುವೆ ಈ ಮನೆಯ ನಾನು ನಿಧನಿಧಾನ
ತೆರೆಯುತ್ತ ನನ್ನ ಕನಸುಗಳ ಪುಕ್ಕ ನಿಧನಿಧಾನ

ಯಾರ ಬೀಳಿಸಲಿಲ್ಲ, ನನ್ನ ನಾ ಹೆಚ್ಚುಗಾಣಿಸಲಿಲ್ಲ
ಸಾಗಿತು ಬಾಳ ಪಯಣ, ನಿಧನಿಧಾನ

ನೀವೆಲ್ಲಿ ಎದ್ದು ಬಿದ್ದು ತಲುಪಿರುವಿರೋ
ಅಲ್ಲಿ ನಾನೂ ಮುಟ್ಟಿಹೆನು, ನಿಧನಿಧಾನ

ಬೆಟ್ಟಗಳಿಂದ ಅದಾವ ಪೈಪೋಟಿಯಿರಲಿಲ್ಲ
ನಡೆಯುತ್ತಲುಳಿದೆ ತಲೆ ಎತ್ತಿ, ನಿಧನಿಧಾನ

ಬಿದ್ದೆನಾದರೆ ನಾನು ಅತ್ತೆ ಒಂಟಿಯಾಗಿ
ಮಾಸಿ ಗಾಯ ನೋವು ಮರೆಯಾಯ್ತು, ನಿಧನಿಧಾನ

ಅಳುವೋ, ನಗುವೋ, ಇತರರಿಗೆ ಉಣಿಸಲಿಲ್ಲ
ನನ್ನ ಪಾಲಿನ ವಿಷವ ನಾನೇ ಕುಡಿದೆ, ನಿಧನಿಧಾನ

ನೆಲ, ಮಣ್ಣುಗಳ ಜೊತೆಜೊತೆಯಲ್ಲಿ ಸಾಗಿದವ
ಕಟ್ಟಿದೆ ಅದರಲ್ಲಿಯೇ ಪಟ್ಟಣವ, ನಿಧನಿಧಾನ

ದಕ್ಕಿತೇನು ನನಗೆ ಈ ನಿನ್ನ ಜಗತ್ತು
ಪಡೆದೆ ನಾ ಪ್ರೀತಿ, ಮಾತ್ರ ನಿಧನಿಧಾನ

*******

About The Author

1 thought on “ಅನುವಾದ ಸಂಗಾತಿ”

Leave a Reply

You cannot copy content of this page

Scroll to Top