ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ!!!

Closeup Photography of Purple Silk Flowers With Dewdrops

ಸರೋಜಾ ಶ್ರೀಕಾಂತ್ ಅಮಾತಿ

ಇಬ್ಬನಿಯ ಹನಿಯೊಂದು
ಲಜ್ಜೆ ಬಿಟ್ಟು
ಗೆಜ್ಜೆನಾದದ ಹೆಜ್ಜೆ
ಹೇಗಿಡಲೆಂತಂತೆ!?

ಹರಸುತ ಮೋಡಗಳೆಲ್ಲ
ಮತ್ತೇ ತುಸು
ಕತ್ತಲವ ಹೊತ್ತು
ತಂದು ಹಾರೈಸಿದವಂತೆ!

ಹಬ್ಬಿದ ಮಬ್ಬನ್ನೇ
ನೆವ ಮಾಡಿಕೊಂಡಿಬ್ಬನಿ
ಗರಿಕೆಯ
ತಬ್ಬಿಕ್ಕೊಂಡಿತಂತೆ!

White Plumeria Flower on Water

ಅರಸಿ ಬಂದ
ಸವಿಗಾಳಿಯು ಸರಸವ
ನೋಡಿ ಸುಮ್ಮನೆ
ದೂರ ಸರಿಯಿತಂತೆ!

ಸ್ಪರ್ಶದುಸಿರು ಹರ್ಷದರಸಿಗೆ
ಹೊಸದಿರಿಸ ನೆಪದಿ
ಹನಿಹನಿ ನೀರನೇ
ಪೋಣಿಸಿ ಸೀರೆಯಾಗಿಸಿತಂತೆ!

ನಾಚಿ ಇಬ್ಬನಿ
ಮುತ್ತಿಗೆ ಹಾಕಿದೆ
ಮುತ್ತೀನಿಂದಲೇ….
ಬಾಚಿ ಅಪ್ಪಿದ
ಮುಂಜಾನೆ ಮಂಜಿಗೂ
ಮತ್ತೇರುತ್ತಿದೆಯಂತೆ….!!!

***********

About The Author

1 thought on “ಕಾವ್ಯಯಾನ”

Leave a Reply

You cannot copy content of this page

Scroll to Top