ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಕೊನೆಯ ಸತ್ಯ 6 ಶಾಲಿನಿ ಆರ್. ಮುಳ್ಳು ಗಿಡಗಂಟಿಗಳ ಜಾಡು ಮುಗಿಯದ ದಾರಿಯಿದು ಬರಿ ಕಾಡು, ಪಾಚಿ ಗಟ್ಟಿದ ನೆಲಕೆ ಆರದ ನೋವ ಜಾರುತಿರುವ ಸಂಬಂಧಗಳ  ಅವಯವ, ಅಂತರಂಗಕಿದು ಆಳದ ಅರಿವಿಲ್ಲ ಬರಿ ಹೂಳು ತುಂಬಿದೆ ಆಳದೆಲ್ಲೆಲ್ಲ, ಬೆಚ್ಚಗಿನ ನೆನಪಿಗು ಚಳಿಯ ಜಾಡು ಸದ್ದಿಲದೆ ಮುರಿಯುತಿದೆ ಮನದ ಎಲುಬಿನ ಗೂಡು, ತರ ತರದ ಪ್ರೀತಿಗು ಮುಖವಾಡದ  ತುತ್ತು, ಬಿಂಕದಲಿ ಬೀಗುತಿದೆ ಭ್ರಮೆ’ ನನ್ನ ಸೊತ್ತು, ಹೂಳ ತೆಗೆಯದ ಹೊರತು ಕೇಳ, ತಿಳಿಯದು ಅಂತರಾಳದ ಮೇಳ, ಅರಿಯಲಾರದ ನಿಜತನ ಹುಚ್ಚು ಸಂಕಲ್ಪ ಅರಿತ ಮೇಲು ಮರುಳು ಹೆಚ್ಚು ವಿಕಲ್ಪ, ಒಂಟಿ ಪಯಣಕಿದೆ ನೂರೆಂಟು  ಅಂಟು ದುಃಸ್ಪಪ್ನದಲು ಎಚ್ಚರವಿರದ ಇರುಳ ನಂಟು, ನೋವ ಹೊಳೆಗೆ ಹೆಚ್ಚು ಪದಗಳ ಹರಿವು ಏಕಾಂಗಿ ಮನಕೆ ಕಸುವು ಕೊಟ್ಟ ಅರಿವು , ಯಾರಿಗ್ಯಾರು ಅರಿವಿರದ ತಾರುಮಾರು ಅರಿತವರೆಲ್ಲರು ಕೊನೆಗೆ ಶೂನ್ಯದಲಿ ಸೇರು. ********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಮೂಲ: ಆಕ್ತೇವಿಯೋ ಪಾಜ಼್ (ಮೆಕ್ಸಿಕನ್ ಕವಿ) ಹೋಗಿ ಬರುವ ನಡುವೆ ಮೇಗರವಳ್ಳಿ ರಮೇಶ್ ಹೋಗುವ ಮತ್ತು ಉಳಿಯುವ ನಡುವೆಹೊಯ್ದಾಡುತ್ತದೆ ದಿನತನ್ನದೇ ಪಾರದರ್ಶಕತೆಯ ಮೇಲಿನ ಪ್ರೀತಿಯಲ್ಲಿಶೂನ್ಯ ಮಧ್ಯಾಹ್ನ ಈಗೊ೦ದು ಕೊಲ್ಲಿ.ಸ್ತಬ್ದ ಜಗತ್ತು ಅಪ್ಪಳಿಸುವುದಲ್ಲಿ. ಎಲ್ಲವೂ ಸ್ಪಷ್ಟ ಮತ್ತು ಎಲ್ಲವೂ ಗ್ರಹಿಕೆಗೆ ದೂರಎಲ್ಲವೂ ಹತ್ತಿರ ಮತ್ತು ನಿಲುಕಿಗೆ ದೂರ. ಕಾಗದ, ಪುಸ್ತಕ, ಪೆನ್ಸಿಲ್ಲು, ಗಾಜಿನ ಲೋಟತಮ್ಮ ತಮ್ಮ ಹೆಸರಿನ ನೆರಳಲ್ಲಿ ವಿಶ್ರಮಿಸಿವೆ. ನನ್ನಕಪೋಲಗಳಲ್ಲಿ ಮಿಡಿವಕಾಲ ಪುನರುಚ್ಛರಿಸುತ್ತದೆಬದಲಾಗದ ರಕ್ತದ ಅದೇ ಪದವನ್ನ. ಬೆಳಕು ನಿರ್ಲಕ್ಷ್ಯ ಗೋಡೆಯನ್ನು ಬದಲಿಸುವುದುಪ್ರತಿಫಲನಗಳ ಭಯ೦ಕರ ರ೦ಗವನ್ನಾಗಿ. ಕಣ್ಣೊ೦ದರ ನಡುವಿನಲ್ಲಿ ನನ್ನ ನಾ ಕ೦ಡೆನೋಡುತ್ತ ಅದರ ಶೂನ್ಯ ದೃಷ್ಟಿಯಲ್ಲಿ. ಚದುರಿದೆ ಕ್ಷಣಸ್ತಬ್ದವಾಗಿ ಉಳಿಯುತ್ತೇನೆಮತ್ತು ಹೋಗುತ್ತೇನೆನಾನೊ೦ದು ನಿಲ್ದಾಣ! *****

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಈರಪ್ಪ ಬಿಜಲಿ ಮನದ ಕತ್ತಲು ಕಳೆದು ಜ್ಯೋತಿ ಬೆಳಗುವದು ಪುಸ್ತಕ ನಿಜ ಸಂಗಾತಿ ಜೀವದ ಭಾವನೆಗಳ ಭಾವನಾಲೋಕದಲಿ ತೇಲಿಸುವದು ಪುಸ್ತಕ ನಿಜ ಸಂಗಾತಿ।। ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣವನು ಚೆಂದದಿ ಮಾಡುವುದು, ಯುಕ್ತಿಯ ಬಳಕೆಮಹತ್ವ ಸಾರುವ ಸಾಧನವಿದು ಪುಸ್ತಕ ನಿಜ ಸಂಗಾತಿ ।। ಮನುಜನನ್ನು ಸುಸಂಸ್ಕೃತನಾಗಿ ಪರಿವರ್ತನೆಗೊಳಿಸುವದು, ನಾಗರಿಕತೆ ಬೆಳೆಸಿ ಅನಾಗರಿಕತೆ ತೊಲಗಿಸುವದು ಪುಸ್ತಕ ನಿಜ ಸಂಗಾತಿ ।। ಜ್ಞಾನಕೋಶವನು ನಿತ್ಯ ತುಂಬಿಸಿ ಜ್ಞಾನಭಂಡಾರ ವೃದ್ಧಿಸುವದು, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗಿಸುವದು ಪುಸ್ತಕ ನಿಜ ಸಂಗಾತಿ ।। ಬಿಜಲಿಯ ಜ್ಞಾನದಾಹ ತೀರಿಸುವ ಶರಧಿಯೇ ಆಗಿರುವದು, ತಲ್ಲೀನನಾದ ಓದುಗಾರನಿಗೆ ನೂತನ ಅರಿವು ನೀಡುವದು ಪುಸ್ತಕ ನಿಜ ಸಂಗಾತಿ।। ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆಗೀಗ ಪುರುಸೊತ್ತಿಲ್ಲ! ವೈ.ಎಂ. ಯಾಕೋಳ್ಳಿ ಮತ್ತೆ ಮತ್ತೆ ಹರಿದು ಬರುವ ಕೆನ್ನೆತ್ತರ ಕಾವಲಿಯಲ್ಲಿ ಬಲಿಯಾದ ತನ್ನ ಕರುಳ ಕುಡಿಯ ಅರಸುತ್ತಿದೆ ಕವಿತೆ ಅದಕ್ಕೀಗ ಪದ ವಾಗಲು ಪುರುಸೊತ್ತಿಲ್ಲ ಅಪ್ಪನ ಬೆವರ ಹನಿ ಅವ್ವನ ಕೈತುತ್ತು ತಿಂದು ,ಪಾಠಶಾಲೆಯ ಪುಸ್ತಕದ ನಡುವೆ ಓದಿದ ಆದರ್ಶಗಳ ನೆಟ್ಟ ದಾರಿಯಲಿ ನಡೆದ ಕವಿತೆಗೆ ಎರಡು ಹೊತ್ತಿನ ಕೂಳು ಸಿಗದೆ ಪರದಾ ಡು ತ್ತಿದೆ ಅದಕ್ಕೀಗ ಪದ ವಾಗಲೂ ಪುರುಸೊತ್ತಿಲ್ಲ ತನ್ನದೇ ಓನಿಯ ಎಳೆಯ ಎದೆಗಳು ಎಲ್ಲಿಯೋ ಜೈಕಾರ ಹಾಕಿ,ಎಲ್ಲಿಯೋ ಮಲಗಿ ಯಾರದೋ ತೆವಲಿಗೆ ಹರೆಯವ ಹಾಳು ಮಾಡಿಕೊಳ್ಳುವದು ಕಂಡು ಕವಿ ತೆಯ ಎದೆಯಲ್ಲಿ ಅಳು ಜಿನುಗುತ್ತದೆ ಸಂದನಿಯೊಳಗೆ ತನ್ನದೇ ಕುಡಿ ಸಿಕ್ಕು ಗುರುತು ಸಿಗದೆ ಪರದಾಡುವ ಕವಿತೆಗಿಗ ಎದೆ ಭಾರವಾಗಿದೆ ಅದಕ್ಕೀಗ ಪದವಾಗಲು ಪುರುಸೊತ್ತಿಲ್ಲ ಮನೆಯ ಬಣ್ಣದ ಪರದೆಯ ಮೇಲೆ ಹರಿದು ಬರುತ್ತಿರುವ ಮತ್ತದೇ ಆ ಶ್ವಾಸನೆಗಳು, ಮಾತಿನ ಮಹಲಗಳು ಕವಿತೆಯನ್ನು ದಿಕ್ಕೆಡಿಸುತ್ತಿವೆ ಸುತ್ತಲಿನ ಹರೆಯಗಳು ಕೈಯ ಬಣ್ಣದ ಪಾಟಿಯ ಮೇಲಿನ ಕೀಲಿ ಮನೆಗಳ ಮೇಲೆ ಅಸ್ತವ್ಯಸ್ತವಾಗಿ ಮುಳುಗಿ ಕಾಲ ಮನೆ ಜಗತ್ತೇ ಮರೆತಿರುವುದು ಕಂಡು ಕವಿತೆ ದಿಗ್ಭ್ರಮೆ ಯಾಗಿದೆ ಅದಕ್ಕೀಗ ಪದವಾಗಲು ಪುರುಸೊತ್ತಿಲ್ಲ ಕಣ್ಣು ಕಾಣದ ಹಗಲು, ಕಣ್ಣೆ ಮುಚ್ಚದ ಇರುಳು, ರಾತ್ರಿಯ ಜಾಗದಲ್ಲಿಗ ಹಗಲು, ಹೊತ್ತೆರುವವರೆಗು ಮಲಗಿ ಹೊತ್ತು ಮುಳುಗಿದಂತೆ ಕಣ್ಣ ಕಿಲಿಸುತ್ತ ಕುಣಿವ ಕಂಗಳು ಸರಿಯಾಗಿ ಹದಿನಾರು ತುಂಬದ ಕೈ ಗಳಲ್ಲಿಗ ಎಂತೆಂಥದೋ ಬಣ್ಣದ ಗಾಜುಗಳು ಹೆಣ್ಣೋ ಗಂಡೋ ತಿಳಿಯದ ಕತ್ತಲೆಯಲ್ಲಿ ಮೈಮರೆತ ಮೈಗಳು ಕಾಣೆಯಾಗಿರುವ ತನ್ನದೇ ಕೂಸು ಅರಸುತ್ತಾ ಹೊರಟ ಕವಿತೆ ತನ್ನ ಮನೆದೇವರ ಮುಂದೆ ಬಿಕ್ಕಿ ಅಳುತ್ತಿದೆ ಸೋತು ಹೋದ ಕವಿತೆ ಎದೆಯ ಪದವಾ ದಿತು ಹೇಗೆ? ಎದೆ ತೆರೆದು ಹಾಡಿತು ಹೇಗೆ? ******************************************

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-6 ಭವಿಷ್ಯವೇನೋ ಭಗವಂತ ಬಲ್ಲ… ಇನ್ನೊಂದೇ ಪರೀಕ್ಷೆ ಮುಗಿದರೆ ನನ್ನ ಪಿಯುಸಿ ಶಿಕ್ಷಣ ಮುಗಿಯುತ್ತದೆ ಅಮ್ಮಾ ಎಂದೊಬ್ಬ ಮಗ ಹೇಳಿದರೆ, ಇನ್ನೊಬ್ಬ ಅಮ್ಮನ ಮಗ ಹತ್ತನೆಯ ತರಗತಿಯ ಪರೀಕ್ಷೆಗೆ ಓದುತ್ತಿದ್ದ. ಒಬ್ಬಳ ಮಗಳು ಎಂಟನೆಯ ಪರೀಕ್ಷೆಗೆ ಓದುತ್ತಿದ್ದರೆ ಮತ್ತೊಬ್ಬಳ ಮಗಳು ಡಿಗ್ರಿ ಪರೀಕ್ಷೆಗೆ ಓದುತ್ತಿದ್ದಳು. ಎಲ್ಲ ಶಾಲಾ ಕಾಲೇಜು ಬಾಗಿಲುಗಳು ಮುಚ್ಚಿ ‘ಕೊರೊನಾ ದೆಸೆಯಿಂದ ನಿಮಗೆ ಅನಿರ್ದಿಷ್ಟ ಅವಧಿಯವರೆಗೆ ರಜಾ’ ಎಂದವು. ಅನೇಕರು ಪರೀಕ್ಷೆ ಬರೆಯದೇ ಪಾಸಾದರು. ಅರ್ಧಮರ್ಧ ಪರೀಕ್ಷೆ ಬರೆದವರು ಮುಂದಿನ ಪರೀಕ್ಷೆಗಳಿವೆಯೇ ಇಲ್ಲವೇ ತಿಳಿಯದೇ ಪರದಾಡುತ್ತಿದ್ದಾರೆ. ನ್ಯೂಸ್ ನಲ್ಲಿ ಏನಾದರೂ ಪರೀಕ್ಷಾ ವಿವರ ಹೇಳಬಹುದೆಂದು ಟಿವಿಯ ಮುಂದೆ ಕುಳಿತ ವಿದ್ಯಾರ್ಥಿಗಳು ಕೊರೊನಾ, ರೋಗಿಗಳು, ಶಂಕಿತರು, ಕ್ವಾರಂಟೈನಿನಲ್ಲಿರುವವರು, ಕಾನೂನು ಮುರಿದವರ ಲೆಕ್ಕಾಚಾರಗಳನ್ನೆ ಮತ್ತೆ ಮತ್ತೆ ಪ್ರಸಾರ ಮಾಡುವುದನ್ನು ನೋಡಿ ನೋಡಿ ಬೇಸತ್ತು ಕಡು ಬಿಸಿಲು ಬರುವವರೆಗೂ ಮುಸುಕೆಳೆದು ಮಲಗಲು ಶುರು ಮಾಡಿದ್ದಾರೆ. ಮಗನೇ ಏಳೊ, ಮಗಳೇ ಏಳು… ಹಿಂದೆ ಲಾಲಿ ಹಾಡಿ ಮಲಗಿಸುತ್ತಿದ್ದ ಅಮ್ಮಂದಿರು ಈಗ ಎಂಟು ಗಂಟೆಗೆ ಉದಯ ರಾಗ ಹಾಡುತ್ತಿದ್ದಾರೆ. ‘ನಾವು ಯಂಗ್ ಜನರೇಶನ್ ಯೋಚಿಸುವುದು ನಿಮಗರ್ಥ ಅಗುವುದಿಲ್ಲ. ನಮ್ಮ ಫ್ರೆಂಡ್ಸ ನಮಗೆ ಸಿಗುತ್ತಿಲ್ಲ’ ಎನ್ನುವ ಮಕ್ಕಳನ್ನು ನೋಡುತ್ತಾ ಬಾರದ ಮುಗುಳುನಗುವನ್ನು ಮುಖದ ಮೇಲೆ ತರುವ ಪಾಡು ಎಲ್ಲ ಹೆತ್ತವರದ್ದು. ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಸಾಲಸೊಲ ಮಾಡಿ ಇದ್ದ ಬಿದ್ದ ಹಣ ಒಂದುಗೂಡಿಸಿ ವಿದೇಶಕ್ಕೆ ಮಕ್ಕಳನ್ನು ಕಳಿಸಿದ ಅಮ್ಮಂದಿರಂತೂ ಅಂಗೈಲಿ ಜೀವ ಹಿಡಿದಿದ್ದಾರೆ. ಇಪ್ಪತ್ತೈದರಿಂದ ಎಪ್ಪತ್ತೈದು ಲಕ್ಷದವರೆಗೆ ಸಾಲ ತೆಗೆದುಕೊಂಡು ವಿದೇಶಕ್ಕೆ ಹೋದವರು ಅಕ್ಷರಶಃ ಪರದೇಶಿಯಾಗಿದ್ದರೂ ದಿನವೂ ಪೋನ್ ಮಾಡಿ ‘ನಾನಿಲ್ಲಿ ಸುರಕ್ಷಿತವಾಗಿದ್ದೇನೆ. ಚಿಂತೆ ಮಾಡಬೇಡಿ’ ಎಂದು ಹೆತ್ತವರಿಗೆ ಸಾಂತ್ವನ ಹೇಳುತ್ತಾರೆ. ಎದೆಯಲ್ಲಿ ಭಯದ ಭತ್ತ ಕುಟ್ಟಿ ಅಕ್ಕಿ ಮಾಡುತ್ತಿದ್ದೇವೆನಿಸುತ್ತದೆ.. ಎಂದೆಲ್ಲ ಅಳಲು ತೋಡಿಕೊಳ್ಳುವ ಗೆಳತಿಯರು ಕೆಲವರು. ಇನ್ನೂ ಕೆಲವರು ಎಷ್ಟ ನಮನಿ ಅಡುಗೆ ಮಾಡಿದ್ರೂ ಕಡಿಮೆ.. ಇಡೀ ದಿನಾ ಅಡುಗೆ ಮಾಡು.. ಪಾತ್ರೆ ತೊಳೆ ಎನ್ನುವುದೇ ಆಗಿದೆ. ವಿವಿಧ ಬಗೆಯ ಅಡುಗೆ ಮಾಡು ಎಂದು ಜೀವ ತಿನ್ನುತ್ತವೆ ಈ ಮಕ್ಕಳು.. ಒಂದೇ ಒಂದು ಕೆಲಸಾ ಮಾಡೋದಿಲ್ಲ ಮಕ್ಕಳು ಎಂದು ಗೋಳಾಡುತ್ತಾರೆ. ಮಕ್ಕಳು ಮುಂದೇನು ಅರಿಯದೇ ಆತಂಕಕ್ಕೊಳಗಾಗಿದ್ದಾರೆ. ಅನೇಕ ಶಾಲಾ ಕಾಲೇಜುಗಳು ಆನ್ಲೈನ್ ಕ್ಲಾಸು ಆರಂಭಿಸಿದರೂ ಅದೆಷ್ಟು ಉಪಯುಕ್ತವೋ ತಿಳಿಯದಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳೊಂದಿಗೆ ಪಾಲಕರ ಸ್ನೇಹಪೂರ್ವಕ ನಡೆ ಅತ್ಯಂತ ಮಹತ್ವದ್ದು. ಚಿಕ್ಕ ಪುಟ್ಟ ಮನೆಕೆಲಸದಲ್ಲಿ ಮಕ್ಕಳನ್ನು ತೊಡಗಿಸಿ. ಕೆಲಸ ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಬರದಿದ್ದರೆ ಕಟುವಾಗಿ ಟೀಕಿಸಬೇಡಿ. ಅನವಶ್ಯಕವಾಗಿ ಉಪದೇಶ ಮಾಡಬೇಡಿ. ಶಾಲಾ ಕಾಲೇಜುಗಳ ಬಾಗಿಲು ತೆರೆದು ಮಕ್ಕಳ ಭವಿಷ್ಯ ಉಜ್ವಲವಾಗುವ ದಿನಗಳು ಬರಲಿ.. (ಮುಂದುವರಿಯುವುದು….) ****** ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್  ಶಿವರಾಜ್. ಡಿ ನಮ್ಮ ಅಪಮಾನ ಅವಮಾನಗಳು ಇನ್ನೂ ಸತ್ತಿಲ್ಲ ಅಸ್ಪೃಶ್ಯತೆ ಅನಾಚರ ಅಜ್ಞಾನಗಳು ಇನ್ನೂ ಸತ್ತಿಲ್ಲ ನಿಮ್ಮ ಕಾಲಿನ ಚಪ್ಪಲಿ ಹೊಲೆದವರು ನಾವು ಚಪ್ಪಲಿ ಮೆಟ್ಟು ಬೆನ್ನಿಗೆ ಹೊದ್ದ ದರ್ಪ ಇನ್ನೂ ಸತ್ತಿಲ್ಲ ಮೀಸಲಾತಿ ಸ್ವಾಭಿಮಾನ ವಿರೋಧಿಸಿದವರು ನೀವು ನಮ್ಮನ್ನು ತುಳಿದ ನಿಮ್ಮ ದುರಭಿಮಾನ ಇನ್ನೂ ಸತ್ತಿಲ್ಲ ನಿಮ್ಮ ಮನೆಯ ಹೊಲ ಗದ್ದೆ ಚಾಕರಿಗೆ ಬೇಕು ನಾವು ನಮ್ಮನ್ನು ಹೊರಗಿಟ್ಟವರ ಮಡಿವಂತಿಕೆ ಇನ್ನೂ ಸತ್ತಿಲ್ಲ ನಿಮ್ಮ ಮಲಮೂತ್ರಗಳ ಹೊಲಸು ಹೊತ್ತವರು ನಾವು ಶ್ವಪಚರೆಂದು ಜರಿದ ಕೊಳಕು ಮನಸ್ಸು ಇನ್ನೂ ಸತ್ತಿಲ್ಲ ಸಂವಿಧಾನದ ಆಶಯಗಳು ಉಳಿಯಬೇಕು ಬಾಬಾ ಬೆಂಕಿಹಚ್ಚ ಹೊರಟವರ ಹೀನ ಬುದ್ದಿ ಇನ್ನೂ ಸತ್ತಿಲ್ಲ. ********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ದಿನ

ಇವತ್ತು ಪುಸ್ತಕ ದಿನ ಶಿವಲೀಲಾ ಹುಣಸಗಿ “One Best Book is equal to Hundred Good Friends one Good Friend is equal to library”                            -APJ Abdul kalam. ಇಂದು ವಿಶ್ವ ಪುಸ್ತಕ ದಿನವಾಗಿ ಇಡೀ ವಿಶ್ವವ್ಯಾಪಿ ಪ್ರಜ್ಞಾವಂತ ಪುಸ್ತಕಪ್ರೇಮಿಗಳು ಆಚರಿಸುತ್ತಿರುವುದು. ಅನೇಕ ಗ್ರಂಥಾಲಯಗಳಲ್ಲಿ ಉಚಿತ ಪುಸ್ತಕ ನೀಡಿ  ಓದಲು ಮುಕ್ತ ಅವಕಾಶ ಕಲ್ಪಿಸುತ್ತಿರುವುದು.ಒಂದು ಓದಿನ ಪರಂಪರೆಗೆ ಹೊಸ ಅಧ್ಯಾಯ ತೆರೆದಂತೆ.ಯ್ಯಾರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿರುವರೋ ಅವರಿಗೆ ಮಾತ್ರ ಓದಿನ ರುಚಿ ಗೊತ್ತಿರುತ್ತದೆ.ಓದು ಮನುಷ್ಯನ್ನು ಮನುಷ್ಯನಾಗಿ ನೋಡುವುದನ್ನು ಕಲಿಸುತ್ತದೆ ಎಂಬುದನ್ನು ಓದಿದ ನೆನಪು.ಆದರೆ ಓದುವ ಮನಸ್ಸು ಬರುವುದು ಯಾರಲ್ಲಿ? ಎಂದು ಪ್ರಶ್ನಿಸಿದರೇ ಬಹುತೇಕವಾಗಿ ನಿರ್ಮೊಹಿಗಳು..! ಅಂದರೆ ಅಲ್ಪಸ್ವಲ್ಪ ಆಸಕ್ತಿಯನ್ನು ಉಳಿಸಿಕೊಂಡ ಮಹನೀಯರು..! ಪರೀಕ್ಷೆಯ ಪುಸ್ತಕಗಳನ್ನು ಮುಗಿಸುವುದೇ ಯಕ್ಷ ಪ್ರಶ್ನೆಯಾದಾಗ..? ಪೂರಕವಾಗಿ ಓದಲು ಸಮಯವೆಲ್ಲಿ? ಎಲ್ಲವೂ ಅಂಕಗಳಿಗೆ ಸೀಮಿತವಾದಾಗ.ಪಠ್ಯವಲ್ಲದ ಪುಸ್ತಕಗಳನ್ನು ಅಷ್ಟು ಅರ್ಥಗರ್ಭಿತವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ.! “ಪುಸ್ತಕ ಜ್ಞಾನದ ಕಿಟಕಿ ಅರಿವಿನ ಗುರಿಗೆ ಪುಸ್ತಕವೇ ಗುರು”.. ಹಾಗದರೆ ಈ ಪುಸ್ತಕ ದಿನ ಹೇಗೆ ಜಾರಿಗೆ ಬಂತು? ಎಂದು ಅವಲೋಕಿಸಿದರೆ.ಮೊದಲಿಗೆ ವೆಲೆನ್ಸಿಯಾದ ಬರಹಗಾರ *ವಿಸೆಂಟ್ ಕ್ಲವಲ್ ಆಂಡ್ರೋ*ಅವರು ಸುಪ್ರಸಿದ್ಧ ಬರಹಗಾರರು.ಅವರ ಜನ್ಮ ದಿನ ಅಕ್ಟೋಬರ್ ೭ ರಂದು  ದಿನವಾಗಿ ಆಚರಿಸುತ್ತಾ ಬಂದ ಕಾಲ.. ಅವರು ಮರಣ ಹೊಂದಿದ ತಿಂಗಳು ಎಪ್ರಿಲ್ ೨೩.ವೆಲೆನ್ಸಿಯಾದ ಜನತೆ ವಿಸೆಂಟ್ನ ನೆನಪಿಗಾಗಿ ಎಪ್ರಿಲ್ ೨೩ ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ೧೯೯೫ ರಲ್ಲಿ ಯುನೆಸ್ಕೋ ಈ ದಿನವನ್ನು ವಿಶ್ವಖ್ಯಾತ ವಿಲಿಯಂ ಷೇಕ್ಸ್‌ಪಿಯರ್ ಹಾಗೂ ಇಕಾಗಾಸಿಸ್ಕೋಡೆಲಾವೆಗಾ ಮರಣ ಹೊಂದಿದನ್ನು ಹಾಗೂ ಅನೇಕ ಬರಹಗಾರ ಜನ್ಮದಿನವನ್ನು ವಿಶ್ವ ಪುಸ್ತಕ ದಿನ ಮತ್ತು ಕೃತಿ ಸ್ವಾಮ್ಯ ದಿನವನ್ನಾಗಿ ಘೋಷಿಸಿತು. ಇದರ ಉದ್ದೇಶ “ವಿಶ್ವಪುಸ್ತಕದಿನದಂದು ದಿಟ್ಟ ನಿರ್ಧಾರ” ವೆಂದರೆ ತಪ್ಪಾಗದು.. ಪ್ರತಿಯೊಬ್ಬರಲ್ಲೂ ಓದುವ ಹವ್ಯಾಸದ ಜಾಗೃತಿ ಮೂಡಿಸುವುದು.ಅಭಿರುಚಿ ಹೆಚ್ಚಿಸುವುದು.ಜ್ಞಾನ ವ್ಯಕ್ತಿತ್ವವನ್ನು ಬೆಳಗಿಸಲು ಪುಸ್ತಕ ಸಹಕಾರಿಯೆಂದು ಮನದಟ್ಟು ಮಾಡುವುದು.ಅವಶ್ಯವಾಗಿತ್ತು. ಅಂದಿನಿಂದ ಈ ದಿನವನ್ನು ರಾಷ್ಟ್ರೀಯ ಹಬ್ಬವಾಗಿ  ರಾಷ್ಟಗಳು ಆಚರಿಸುತ್ತಿವೆ.ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಜೇತರಾದವರಿಗೆ ಪುಸ್ತಕ ಬಹುಮಾನವಾಗಿ ನೀಡಿ ಪ್ರೋತ್ಸಾಹ ನೀಡುತ್ತಿರುವುದನ್ನು ಮೆಚ್ಚಲೇಬೇಕು.. *ಕೃತಿ ಸ್ವಾಮ್ಯ ವೆಂದರೆ…* ಒಂದು ಕೃತಿ ಮೊದಲ ಬಾರಿಗೆ ಪ್ರಕಟವಾದ ಮೇಲೆ ಅದನ್ನು ಮರುಪ್ರಕಟಿಸಲು ಪ್ರತಿಗಳನ್ನು ಮಾಡಿ ಮಾರಲು,ರೂಪಾಂತರಗೊಳಿಸಲು,ಮಾರ್ಪಡಿಸಲು, ಪ್ರದರ್ಶಿಸಲು,ಅಥವಾ ನಿರೂಪಿಸಲು ಕಾನುನು ನೀಡುವ ಅನನ್ಯ ಅಧಿಕಾರ.ಹಾಗೂ ಕಾನೂನು ಮನ್ನಿತ ಸಾಹಿತ್ಯ ಸ್ವಾಮ್ಯಾಧಿಕಾರ..ಇದರಿಂದ ಪುಸ್ತಕಗಳು ಮುದ್ರಿತಗೊಳ್ಳುವಲ್ಲಿ,ಮಾರುವಲ್ಲಿ,ಓದುಗರ ಮನ ಮುಟ್ಟುವಲ್ಲಿ ಕಾರ್ಯ ಸುಲಭ.ಪುಸ್ತಕಗಳಿಂದ ಜೀವನ ಬೆಳಕು..ಓದಿದವರೆಂದೂ ಹಾಳಾದ ಉದಾಹರಣೆಯಿಲ್ಲ. ಇಂದು ನಾವೆಲ್ಲ ಆತ್ಮಸಾಕ್ಷಿಯಾಗಿ ಎಷ್ಟು ಓದುತ್ತೇವೆ ಎಂಬುದನ್ನು ಅವಲೋಕಿಸಬೇಕಿದೆ.ನೂರಾರು ಜಂಜಾಟಗಳ ನಡುವೆ ಸಮಾಧಾನಗೊಂಡು ಪುಸ್ತಕ ಅಪ್ಪಿ ಮುದ್ದಾಡುವ ಸಮಯದ ಅಭಾವ. ಅಂಬೇಡ್ಕರ್ ರಂತಹ ಮಹಾನ್ ನಾಯಕ್ ತನ್ನ ಜೀವನವನ್ನು ಪುಸ್ತಕಗಳೊಂದಿಗೆ ಕಳೆದಿದ್ದು.ಯುವ ಪಿಳಿಗೆಗೆ ಮಾದರಿ. ದೇಶದ ಮೊದಲ ಶಿಕ್ಷಕಿ ಶ್ರೀ ಮತಿ ಸಾವಿತ್ರಿಬಾಯಿಪುಲೆ..ಶಿಕ್ಷಣಕ್ಕೆ ಆದ್ಯತೆ ನೀಡಿದವರು.ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ಯುವಜನಾಂಗಕ್ಕೆ ತೋರಿದ ಮಾರ್ಗ ಮರೆಯಲಾದಿತೇ? ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಚಂದ್ರಶೇಖರ ಆಜಾದ್,ಕಿತ್ತೂರು ಚನ್ನಮ್ಮ,ಹೀಗೆ ಹತ್ತು ಹಲವಾರು ಸಂಗತಿಗಳು ರಿತ್ರೆಗಳಅರಿತುಬೆಳೆಯುವುದುಯ್ಯಾವಾಗ?? “ಜೀವನವನ್ನು ಸಾರ್ಥಕವಾಗಿ ಬದುಕಲು ಪುಸ್ತಕದ ಆಸರೆ” ಬಯಸಿದಾಗೆಲ್ಲ ನೆಮ್ಮದಿ ಒಳಸುಳಿಯಿವುದಂತು ದಿಟ.! “ಮೌಲ್ಯ ಬಿತ್ತುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದು.” ಒಮ್ಮೆ ಅವಲೋಕಿಸಿ …ಇಂದಿನ ಸರಕಾರಿ ಶಾಲೆಗಳಲ್ಲಿ *ಓದುವ ಮೂಲೆ* ತಗೆ ಪುಸ್ತಕ ಹೊರಗೆ* ಶೃದ್ಧಾ ವಾಚನಾಲಯ* ಕಾರ್ಯಕ್ರಮಗಳು.ಸರಕಾರ ಶಾಲೆಗಳಿಗೆ ಅನುದಾನ ನೀಡಿ ಗ್ರಂಥಾಲಯಕ್ಕೆ ಅವಶ್ಯಕ ಮಕ್ಕಳ ಬುದ್ದಿ ಮಟ್ಟಕ್ಕೆ ಅನುಗುಣವಾಗಿ ಹಾಗೂ ಸ್ಥಳಿಯ ಬರಹಗಾರರ ಪುಸ್ತಕ ಖರೀದಿಸುವುದರೊಂದಿಗೆ ಬರಹಗಾರರ ಮನೋಬಲವನ್ನು ಹೆಚ್ಚಿಸುವತ್ತ ದಿಟ್ಟ ನೆಡ ಹೊಂದಿ.ಎನ್ ಸಿ.ಎಪ್.೨೦೦೫ ಆಶಯದಂತೆ ವಿಷಯಗಳ ಮೇರೆಗಳನ್ನು ಮೀರಿ ಅವುಗಳಿಗೆ ಸಮಗ್ರ ದೃಷ್ಟಿಯ ಚಿಂತನೆ ಹಾಗೂ ಶಾಲೆಯ ಹೊರಗಿನ ಬದುಕಿಗೆ ಜ್ಞಾನವನ್ನು ಸಂಯೋಜಿಸುವುದು.ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವುದು.ಕಾರಣವಿಷ್ಟೇ.. *ಪುಸ್ತಕದಲ್ಲಿರುವಜ್ಞಾನಮಸ್ತಕಕ್ಕೆವರ್ಗಾವಣೆಯಾಗಬೇಕು ಅಲ್ಲಿ ಶಿಕ್ಷಕರ ಪಾತ್ರ,ಹಾಗೂ ಮನೆಯಲ್ಲಿ ಪಾಲಕ/ಪೋಷಕರ ಪಾತ್ರ ಅತೀ ಮಹತ್ವದ್ದು. ಮಕ್ಕಳಿಗೆ ಬೇಗ ಆಕರ್ಷಿಸುವ ಮಾಧ್ಯಮವೆಂದರೆ ಒಂದು ಟಿವಿ ಇನ್ನೊಂದು ಮೊಬೈಲ್.. ಬಹತೇಕ ಪಾಲಕರ ಅಸ್ತ್ರ ಮಕ್ಕಳನ್ನು ಸುಮ್ಮನೀರಿಸಲು ಬಳಸುವ ಏಕೈಕ ಸಾಧನ ಮೊಬೈಲ್…ಅದೇ ಮಗುವಿಗೆ ಬಣ್ಣಬಣ್ಣದ ಚಿತ್ರಕಥೆಗಳಿರುವ ಪುಸ್ತಕ ನೀಡಿದರೇ ಮಗು ಸಂತಸ ಪಡದು….ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಓದಿ ಹೇಳುವ ವೇದಿಕೆಗಳು ಮನೆಯಿಂದಲೇ ಪ್ರಾರಂಭವಾಗಬೇಕಿದೆ.. *ಒಂದು ಆಶ್ಚರ್ಯವೆಂದರೆ ಬಹುತೇಕರು ಪುಸ್ತಕಗಳನ್ನು ಖರೀದಿಸುವುದಿಲ್ಲ. *ಖರೀದಿಸಿ ತಂದ ಪುಸ್ತಕಗಳನ್ನು ಓದುವುದಿಲ್ಲ. *ಮನೆಯಲ್ಲಿ ಬಹತೇಕರು ಟಿವಿ ಧಾರಾವಾಹಿಗಳನ್ನು ಚಾಚು ತಪ್ಪದೇ ನೋಡುವವರು. *ಭೌತಿಕವಾಗಿ ಪುಸ್ತಕವನ್ನು ಜನರ ಆಕಷರ್ಣೆಗೆ ತರುವುದು ಕಷ್ಟ ‌. *ಪುಕ್ಕಟೇ ಓದಲು ಹಾತೋರೆವರು.ಖರೀದಿಸಲು ಹಿಂದೇಟು..! ನಾವೆಲ್ಲ ಗ್ರಹಿಸುವುದು ಓದುವವರು ಇದ್ದಾರೆ. ಪುಸ್ತಕಗಳನ್ನು ಬರೆಯುವವರು,ಮುದ್ರಿಸುವವರು, ಆದರೆ ಕೋಟ್ಯಾಂತರ ಮಂದಿಯಲ್ಲಿ ಲಕ್ಷಾಂತರ ಮಂದಿ ಪುಸ್ತಕಗಳನ್ನು ಸಮರ್ಥವಾಗಿ ಓದಬಲ್ಲ ವಿದ್ಯಾವಂತರಿದ್ದರೂ,ಸಾವಿರ ಪ್ರತಿಗಳು ಮಾರಾಟವಾಗುವುದು ಕಷ್ಟ. ಎಲ್ಲರೂಎಲ್ಲರ ಪುಸ್ತಕ ಕೊಳ್ಳುವುದಿಲ್ಲ.ಕೊಳ್ಳಬೇಕಾಗಿಲ್ಲ,ಓದಬೇಕಿಲ್ಲ ಆದರೆ ಆಸಕ್ತಿ ವಿಷಯಕ್ಕನುಕೂಲವಾಗಿ ಸಾವಿರ ಪುಸ್ತಕಗಳು ಮಾರಾಟವಾಗಬೇಕಿತ್ತು.ಆಗುತ್ತಿಲ್ಲ.ಕೆಲವು ಕಡೆಗಳಲಂತೂ ತಮ್ಮ ಸೈದ್ದಾಂತಿಕ ಬದ್ದತೆ ಮತ್ತು ನೈತಿಕ ಕರ್ತವ್ಯವೆಂಬಂತೆ ಪುಸ್ತಕ ಖರೀದಿಯಾಗುತ್ತಿದೆ.ಕನ್ನಡ ಓದುಗರೊಗಿಂತ ಆಂಗ್ಲಭಾಷೆಯ ಓದುಗರು ಹೆಚ್ಚಾಗುತ್ತಿರುವರು.ಓದುವುದಕ್ಕೆ ಬಂಧನವಾಗಲಿ,ನಿಬಂಧವಾಗಲಿ ಇಲ್ಲ. ” ಪುಸ್ತಕಗಳು ಜಗತ್ತನ್ನಾಳುತ್ತವೆ” ಎಂಬ ಸತ್ಯ ಅರಿಯಬೇಕಿದೇ… ಕನ್ನಡ ಸಾರಸ್ವತ ಲೋಕದಲ್ಲಿ ೮ ಜ್ಞಾನಪೀಠ ಪ್ರಶಸ್ತಿ ಪಡೆದ ಮೇರು ಕಣಜಗಳು.ನಮ್ಮಮುಂದಿವೆ.ಹೊಸಹೊಸ ಪ್ರತಿಭೆಗಳಿಗೆ, ಅವರ ಸಾಹಿತ್ಯಕ್ಕೆ ಬರವಣಿಗೆಗೆ ಪುಸ್ತಕ ಕೊಂಡುಓದುವ ಹಾಗೂ ವಿಮರ್ಶಿಸುವ ಮನೋಭಾವದ ಕ್ರಾಂತಿಯು ಪ್ರತಿ ಮನೆಯಲ್ಲಿ ನಡೆಯವುದರಿಂದ ಮಕ್ಕಳ ಸಾಹಿತ್ಯ ದ ಅಭಿರುಚಿ ಹೆಚ್ಚಿಸಿದಂತಾಗುತ್ತದೆ.ಕೇವಲ ಇಂದು *ವಿಶ್ವ ಪುಸ್ತಕ ದಿನವೆಂದು ಹೆಸರಿಗೆ ಓದಿಬಿಟ್ಟರೆ ಅದು ಸಾರ್ಥಕವಾಗಲಾರದು.ಬಿಡುವಿನ ವೇಳೆಯ ಸದುಪಯೋಗ ಪಡೆಯುವ ದಿಕ್ಕಿನಲ್ಲಿ ಯುವ ಪಿಳಿಗೆಯನ್ನು ಬೆಳೆಸಬೇಕಾಗಿರುವುದು ಹಿರಿಯರ ಆದ್ಯ ಕರ್ತವ್ಯ ವಾಗಿದೆ. ಮೊಬೈಲ್ ಬಳಕೆ ನಿಯಮಿತವಾಗಿದ್ದಷ್ಟು ಉತ್ತಮ.. “ಜನರು ಈಗಲೂ ಆಲೋಚಿಸುತ್ತಿದ್ದಾರೆ ಎನ್ನುವುದಕ್ಕೆ ಪುಸ್ತಕದ ಅಂಗಡಿಗಳೇ ಸಾಕ್ಷಿ”                                 —-ಚೆರ್ರಿ ಸೀನ್ ಫೆಲ್ಡ್. ಪುಸ್ತಕದ ಅಂಗಡಿಗಳಿಗೆ ಮಕ್ಕಳೊಂದಿಗೆ ಬೇಟಿನೀಡಿ.ವಿವಿಧ ಪುಸ್ತಕಗಳನ್ನು ಗಮನಿಸುವ,ಸ್ಪರ್ಶಿಸುವ ಅವಕಾಶನೀಡಿ..ಮಕ್ಕಳು ಮೌಲ್ಯಾಧಾರಿತವಾಗಿ ಬೆಳೆಯಲು ವಿಸ್ಮಯ ಜಗತ್ತನ್ನು ತರೆದಿಟ್ಟಂತಾಗುತ್ತದೆ……..ನಿಮ್ಮ ಆಸುಪಾಸಿನ ಸಾಹಿತಿಗಳ ಸಾಹಿತ್ಯ ಓದಿ.ಹುರುದುಂಬಿಸಿ ಪುಸ್ತಕ ದಿನವನ್ನು ಅರ್ಥಗರ್ಭಿತವಾಗಿ ಹೊರಹೊಮ್ಮಲಿ… “ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ         ವಸ್ತುವೆಂದರೆ.ಅದು. -ಪುಸ್ತಕ”.. ******* .

ಪುಸ್ತಕ ದಿನ Read Post »

ಕಾವ್ಯಯಾನ

ಕಾವ್ಯಯಾನ

ಮಾಯಾ ಪೆಟ್ಟಿಗೆ ಮತ್ತು ಬಾಂಬರುಗಳು    ನೂರುಲ್ಲಾ ತ್ಯಾಮಗೊಂಡ್ಲು ಅದೊ ಮಾಯಾ ಪೆಟ್ಟಿಗೆಯಿಂದವತರಿಸಿ  ಧಗ್ಗನೆದ್ದು ಬಂದಿವೆ  ಗೋದಿ ಗಾವಿಲರು, ಕೋತಿಗಳು ಅಥವ ಕಿಲಬುಕಾರರು  ಅಂದು ಕುಂಪಣಿಯ ಛೇಲಗಳಂತಿವರು  ಇಂದು ಈ ಹೊತ್ತಿಗೆ  ಅಲ್ಲಾವುದ್ದೀನನ ಚಿರಾಗ್ ಬೆಳಕಲಿ  ವಿಸ್ಮಯ ಲೋಕಕಂಡಿದ್ದ ಬಾಲ್ಯದಿನಗಳೇ ಚೆಂದ  ಇಂದು ಈ ೨೪/7 ನ ಪೆಟ್ಟಿಗೆಯಿಂದ ಪೊಳ್ಳು ಅಥವ ಬೆಂಕಿ ಕೆಕ್ಕರಿಸುವ  ದಿನಗಳು ಲೋಕವನ್ನೇ ಸುಡುತಿದೆ  ಅದೊ ಅಲ್ಲಿ ರಂಜನೆ, ರಮ್ಯಕಾಮ, ವಿನೋದ ವೂ ಉಂಟಲ್ಲ ಎಂದವನಿಗೆ ದುರಿತ ಕಾಲದ ವಿವೇಚನೆವಿಲ್ಲವೆಂದು ಮೌನವಾದೆ  ಗಡಿಗಳು ದೇಶಕೋಶಗಳಲಿ  ವಿಷವೇ ವಾಹಿನಿಯಾಗಿ ಹರಿಯುತಿಹ  ಈ ಹೊತ್ತಲಿ  ಜನರ ಅಜ್ಞಾನಕ್ಕೆ ದೀವಿಗೆ ಹಿಡಿಯಲೂ ಬಾರದ  ಬೂಟಾಟಿಕೆಯ ವ್ಯಂಜಕರಿಗೆ ಶಾಪ  ನೆನ್ನೆ ವೇದಿಕೆಯಲಿ ಗೆಳೆಯರು  ವಿಷ ಬಾಂಬುಗಳೆಸೆಯುವ ಮಾಯಾ ಪೆಟ್ಟಿಗೆ  ಯ ಕಿಂಡಿಗಳೇ ಮುಚ್ಚಿ ಶಾಶ್ವತವಾಗಿ ಎಂದಾಗ  ವಿಚಲಿತನಾದೆ  ಎನ್ನ ಮನೆಗೆ ತಾಗದ ಬಾಂಬು  ಪಕ್ಕದ ಮನೆಯವ ಬಚ್ಚಿಟ್ಟುಕೊಂಡರೆ  ಒಂದು ದಿನ ನಾವುಗಳೇ ಸಿಡಿದು ಬೂದಿಯಾಗುವೆ -ವೆಂದು ಋಜುಮಾರ್ಗದ ಕಡೆ ಕಣ್ಹೊರಳಿಸಿ ನೋಡಿದೆ ; ಅಲ್ಲಿ ಬಾಂಬುರುಗಳನ್ನು ನಿಷ್ಕ್ರಿಯಿಸಲು ಒಂದು  ನಿಷ್ಕ್ರಿಯ ಪಡೆಯಿದೆ – ಬಾ ಹೋಗೋಣ ಎಂದೆ ನಿರುಮ್ಮಳವಾಗಿ  *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮುಕ್ತಿ ದೊರಕೀತು! . ತೇಜಾವತಿ ಹೆಚ್.ಡಿ ಅಂತಹದೊಂದು ಅಂತರಂಗದ ಮಿಡಿತವ ನೀ ಅರಿತು ಗೌರವಿಸುವಿಯಾದರೆ ಬರಡಾದ ಬಂಜರಿನಲ್ಲೂ ಉಕ್ಕುವ ಚಿಲುಮೆಗಾಗಿ ಕಾತರಿಸಿದ ಅವನಿಯ, ಕಾರ್ಗತ್ತಲ ಕಾನನದಲ್ಲೂ ನೆರಳಾಗಿ ಬರುವ ಕಂದೀಲನ್ನು ತಾನು ನಿರಾಕರಿಸಲಾರದು ಯಾವ ಭಾವವೂ ಆಕರ್ಷಣೆಯೆಂದು ಹಗುರ ನುಡಿಯದೆ ಕಾಮವೇ ಐಹಿಕದ ಸುಖವೆಂದು ನೀ ತಿಳಿಯದೆ ಅದರಾಚೆಗಿನ ಪವಿತ್ರತೆಯನೊಪ್ಪಿಕೊಳ್ಳುವೆಯಾದರೆ ಶಾಪಗ್ರಸ್ತ ಜೀವಕ್ಕೆ ಮುಕ್ತಿ ದೊರೆತು ಗಂಗೆಯ ಜಲದಿ ಪಾಪಗಳೆಲ್ಲ ತೊಳೆಯಲಿ ಒಳಗಿರುವ ಮಾಣಿಕ್ಯ ಪ್ರಜ್ವಲಿಸಲಿ ಅರಿವಿಗೆ ತಾನು ಸ್ಫೂರ್ತಿಯಾಗಲಿ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಒಂದಿಷ್ಟು ಹಾಯ್ಕುಗಳು ಮದ್ದೂರು ಮದುಸೂದನ 1 ದೂರದ ಬೆಟ್ಟ ನುಣ್ಣಗೆ ಹೆಣ್ಣು ಕೂಡ 2 ಗಾಳಿ ಬಿಟ್ಟ ಪುಗ್ಗೆ ಒಮ್ಮೊಮ್ಮೆ ಬದುಕು 3 ತುದಿ ಕಾಣದ ಮುಗಿಲು ನಮ್ಮ ನಿಲ್ಲದ ಲಾಲಸೆ 4 ಬರಿದಾಗುತ್ತಿರುವ ಜೀವಜಲ ನಮ್ಮ ಜ್ಞಾನ 5 ಎಲ್ಲಿಯೂ ಒಂದಾಗದ ರೈಲಿನ ಹಳಿ ಜಾತಿಯತೆ 6 ಸದಾ ಕಾಡುವ ಕೊರತೆ ಮಾನವೀಯತೆ *********

ಕಾವ್ಯಯಾನ Read Post »

You cannot copy content of this page

Scroll to Top