ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನೀನೆಂದರೆ ಮೋಹನ್ ಗೌಡ ಹೆಗ್ರೆ ನೀನೆಂದರೆ ಬರಿ ಬೆಳಕಲ್ಲ ಕುರುಡು ಕತ್ತಲೆಯ ಒಳಗೆ ಮುಳ್ಳು ಚುಚ್ಚಿದ ಕಾಲಿನ ನೋವ ಗುರುತಿಸುವ ಮಹಾಮಾತೆ ಜಗದ ತದ್ವಿರುದ್ಧಗಳ ಸಮದೂಗಿಸಿ, ಅಳುವ ಕಣ್ಣೀರಿಗೆ ಬಾಡಿ ಹೋದ ಮೊಲೆಯ ತೊಟ್ಟಿಂದ ಅಮೃತವ ಉಣಬಡಿಸುವ ಕರುಣಾಳು…. ನೀನೆಂದರೆ ಬರಿ ಕಷ್ಟಜೀವಿಯಲ್ಲ ಕಷ್ಟಗಳನೆ ಅಂಜಿಸುವ ಮಹಾತಾಯಿ ಬರೆಯದೇ ಇರುವ ಖಾಲಿ ಪುಸ್ತಕದೊಳಗೆ ನಾನೊಬ್ಬನೇ ಓದಬಹುದಾದ ಕೋಟಿ ಕಥೆ ನಿನ್ನ ಮುಖ ಯಾವ ಚಟಕ್ಕೂ ಹಾತೊರೆಸದ ದಿಗ್ಬಂಧನದ ಮಹಾ ಮಂಟಪ ಸಹಸ್ರ ಸಂಕಷ್ಟಗಳ ಹಡೆದ ನಿನ್ನ ಪಾದದಲ್ಲೆ ನನಗೆಲ್ಲಾ ಪುಣ್ಯಸ್ಥಳ….. ನೀನೆಂದರೆ ಬರಿಯ ಒಂದು ಜೀವವಲ್ಲ ದೂರದೂರದೂರಿನಲಿ ನಾನು ನೀನು ದುಡಿಯುತ್ತಿದ್ದರೂ ಪಂಚಭೂತಗಳಲ್ಲಿ ಸದಾ ನಿನ್ನಿರುವ ತೋರಿಸುವ ಜಗದ್ರೂಪಿ ಜಗತ್ತಿನ ಹೊಸೆತೆಲ್ಲವ ಹಳೆತು ಮಾಡುವ ಕಳೆದುಹೋದ ಹಳೆಯದಕ್ಕೆ ಮರು ಜೀವ ತುಂಬಿಸುವ ಎದೆಯೊಳಗೆ ಹದವಾದ ಸಿಹಿ ಒಲವ ಬಲವ ಉಣಿಸುವ ದಿವ್ಯ ಕಂಗಳ ಕಷ್ಟ, ಕಣ್ಣೀರುಗಳನೇ ಅಂಜಿಸುವ ಮಗನ ಜಗದ ” ತಾಯಿ” *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೀವ ಕನಿಷ್ಠವಲ್ಲ ಮದ್ದೂರು ಮಧುಸೂದನ ಕಾಣದ ಜೀವಿಯ ಕರಾಮತ್ತಿಗೆ ದೀಪದ ಹುಳುಗಳಾಂತದ ಭಾರತ ವಿಲವಿಲದ ನಡುವೆ ಸಾವಿನ ದಳ್ಳುರಿ ಧಗ ಧಗಿಸಿ ಆವರಿಸುತ್ತಿದ್ದರೂ ಧರ್ಮದ ಅಪೀಮು ತಿಂದವರ ದಿಗಿ ದಿಗಿ ನೃತ್ಯ ನಿಂತಿಲ್ಲ.. ಜಾತಿ ಮತ ಧರ್ಮಗಳ ಸ್ಪೃಶ್ಯ ಅಸ್ಪೃಶ್ಯಗಳ ಸೋಂಕಿತರ ನಡುವೆ ಅವರವರ ಧರ್ಮದ ಉಳುವಿಗೆ ವಿಧ ವಿಧ ಲೆಕ್ಕಚಾರದ ಅಸಹ್ಯವೂ ಸಹ್ಯ ಧರ್ಮದ ಕಿನ್ನರಿ ಮುಂದೆ ಸಾವು ತುಟ್ಟಿಯಲ್ಲ ಬಿಡಿ! ನನ್ನ ಒಂದು ಕಣ್ಣು ಕಿತ್ತಾದರೂ ವಿರೋಧಿಗಳ ಎರೆಡೆರಡು ಕಣ್ಣು ಕೀಳುವ ಕುಹಕ ಕೇಕೆ ನಡುವೆ ಜೀವವೂ ಕನಿಷ್ಠತಮ ಎನ್ನುವುದೇ ಚೋದ್ಯ ***********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರಿಯತಮೆ ವೀಣಾ ರಮೇಶ್ ಈ ಧರೆಯ ಒಡಲು ಧರಿಸಿದೆ, ಸ್ವರ್ಗದ ಹಸಿರು ತಳಿರು,ತಳೆದಿದೆ ಸೊಬಗಿನ ಸಿರಿಯ ಸೌಂದರ್ಯ ಮೇಳೈಸಿದೆ ಮೌನವಿಲ್ಲಿ ಪ್ರೀತಿಸಿದೆ ಸ್ರಷ್ಟಿಯ ಸಿರಿಯಲಿ ರಸ ವೈಭೋಗ ತೂಗಿದೆ ಮತ್ತೆ ಋತುರಾಜ ಬಂದ ಚಿಗುರು ತಂದ ಚಲುವ ನಗೆಯ  ಅರಳೋ ಮುಗುಳು ಈ ಇಳೆಯ ಹಸಿರಲಿ ನಿನ್ನ ನಗುವಿನ ಸವಾರಿ ಕೇಳೇ ನನ್ನ ವೈಯಾರಿ ಈ ಕಣ್ಣ ನೋಟದ ಬಿಗಿ ಸರಳು,ಸೆರೆಯಾದೆ ನಾ ನಿನಗೆ ಪ್ರತಿಬಿಂಬದ ಪ್ರತಿಕ್ಷಣದ ಪ್ರತಿ ನೆರಳು ಸೆಳೆವ ಕಂಗಳ ಅಂಚಿಗೆ ಮುತ್ತಿಡುವ ಈ ಮುಂಗುರುಳು ತುಟಿಮೇಲೆ ಹರಿದ ನನ್ನ ಕೆಣಕುವ ಮಂಜಿನ ಹರಳು,ಮೌನ ಸ್ಪರ್ಶದ ಪ್ರತಿನಿಮಿಷದ ಎದೆಯ ಬಡಿತಗಳು,   ಈ ನೆನಪುಗಳು, ನನ್ನ ಮೈಮನಗಳು ಮಧುರ ಯಾತನೆ ಪಲ್ಲವಿಸಿದೆ ಈ ಇರುಳು *******

ಕಾವ್ಯಯಾನ Read Post »

ಇತರೆ

ಅಂತಿಮ ನಮನ

ಟಿ.ಎಲ್.ರಾಮಸ್ವಾಮಿ ಅಪರೂಪದ ಕ್ರಿಯಾಶೀಲ, ಸೃಜನಶೀಲ ಪತ್ರಿಕಾ ಛಾಯಾಗ್ರಾಹಕ ಟಿ.ಎಲ್‌.ರಾಮಸ್ವಾಮಿಯವರು..! ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಅದರಂತೆ ಕ್ರಿಯಾಶೀಲ ಮತ್ತು ಸೃಜನಶೀಲ ಪತ್ರಿಕಾ ಛಾಯಾಚಿತ್ರ ಗ್ರಾಹಕ ಟಿ.ಎಲ್. ರಾಮಸ್ವಾಮಿಯವರು ತೀರಿದ್ದಾರೆ. ಅವರು ಆರು ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಸಾವಿರಾರು ಚಿತ್ರಗಳ ಮೂಲಕ ಕರ್ನಾಟಕದ ಆಗುಹೋಗುಗಳನ್ನು ಸೆರೆಹಿಡಿದವರು. ಅವರು ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ವಿಶಿಷ್ಟ ಪ್ರತಿಭೆಯನ್ನೂ ತೋರಿ ದೇಶ ವಿದೇಶಗಳ ಪತ್ರಿಕೆಗಳ ಗೌರವಾದರ ಪಡೆದವರು… 1950 ರಿಂದ 1985 ರವರೆಗೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕಾ ಬಳಗದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿ ಅನುಭವ ಗಳಿಸಿದವರು. ನಂತರ ಮುಕ್ತ ಪತ್ರಿಕಾ ಛಾಯಾಚಿತ್ರ ವರದಿಗಾರರಾದರೂ ಆದವರು… ಭಾರತದ ಪ್ರಮುಖ ಪತ್ರಿಕೆಗಳ ಸಂಪರ್ಕ ಪಡೆದಿದವರು. ಫೈನಾನ್ಶಿಯಲ್ ಟೈಮ್ಸ್ ಆಫ್ ಲಂಡನ್ ಸಹ ಇವರು ತೆಗೆದಿರುವ ಛಾಯಾಚಿತ್ರಗಳನ್ನು ಪ್ರಕಟಿಸಿದೆ… ಪ್ರಜಾವಾಣಿ, ಮಯೂರ, ಟೈಮ್ಸ್‌ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆ– ನಿಯತಕಾಲಿಕೆಗಳಲ್ಲಿ ಛಾಯಾಚಿತ್ರ ಅಂಕಣಕಾರರಾಗಿ ಜನಪ್ರಿಯತೆ ಗಳಿಸಿದವರು… ಜಪಾನ್‌ ನ ನಿಹಾನ್ ಸಿನ್ಬುನ್ ಕ್ಯೊಕಾಯಿ ಸಂಸ್ಥೆ ಮತ್ತು ಲಂಡನ್‌ ನ ಥಾಮ್ಸನ್ ಪ್ರತಿಷ್ಠಾನದಿಂದ ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ಡಿಪ್ಲೊಮಾ ಪಡೆದಿದವರು. ಜಪಾನ್‌ ನ ಅಸಾಹಿ ಶಿನ್‍ಬುನ್, ಮೈನಿಚಿ ಶಿನ್‍ಬುನ್, ಯೊಮಿಯುರಿ ಮತ್ತು ಕ್ಯೋಟೋ ಶಿನ್‍ಬುನ್ ಪತ್ರಿಕೆಗಳಲ್ಲಿ ದುಡಿದು ಅನುಭವ ಪಡೆದವರು. ಫ್ಲೀಟ್ ಸ್ಟ್ರೀಟ್‌ ನ ಲಂಡನ್ ಟೈಮ್ಸ್, ಡೈಲಿ ಮಿರರ್ ಪತ್ರಿಕೆಗಳಲ್ಲೂ ಅನುಭವ ಗಳಿಸಿದ ಹೆಗ್ಗಳಿಕೆ ಟಿ.ಎಲ್‌. ರಾಮಸ್ವಾಮಿಯರದು… ಟಿ.ಎಲ್. ರಾಮಸ್ವಾಮಿ ಅವರು ಜಮ್ಮು ಮತ್ತು ಪಂಜಾಬ್ ಗಡಿಗಳಲ್ಲಿ ಸಮವಸ್ತ್ರ ಧರಿಸಿ ಯುದ್ಧ ವರದಿಯ ತರಬೇತಿ ಪಡೆದಿದ್ದವರು. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ರೋಟರಿ, ಲಯನ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ಗೌರವಗಳೂ ಅವರಿಗೆ ಸಂದಿವೆ… ಕ್ರೀಡಾ ಕ್ಷೇತ್ರದ ಅವರ ಸೇವೆ ಮತ್ತು ಸಾಧನೆಯನ್ನು ಗೌರವಿಸಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಜೀವ ಸದಸ್ಯತ್ವ ನೀಡಿ ಗೌರವಿಸಿದೆ. ಈ ಎಂಭತ್ತರ ಹರೆಯದಲ್ಲಿಯೂ ಯಾವುದೇ ಕಾರ್ಯಕ್ರಮಕ್ಕೆ ಹಾಜರಾದರೂ ಹೆಗಲ ಮೇಲೆ ಕ್ಯಾಮೆರಾ ಹೊತ್ತು ಹಾಜರಾಗುವ ಪರಿಪಾಠವನ್ನು ಮುಂದುವರೆಸಿದ್ದರು. ಅಪರೂಪದ ಚಿತ್ರಗಳ ಮೂಲಕ ಈಗಲೂ ಇತಿಹಾಸದ ಪುಟಗಳನ್ನು ಸಂಪದ್ಭರಿತವಾಗಿಸುತ್ತಿದ್ದವರು ಟಿ.ಎಲ್.ರಾಮಸ್ವಾಮಿವರು… ಇಂತಹ ಟಿ.ಎಲ್. ರಾಮಸ್ವಾಮಿಯವರು ಈಗ ತೀರಿಕೊಂಡಿದ್ದಾರೆ. ಅವರಿಗಿದೋ ನಮನಗಳು… *************************************************************** ಕೆ.ಶಿವು.ಲಕ್ಕಣ್ಣವರ ‌

ಅಂತಿಮ ನಮನ Read Post »

ಇತರೆ

ಪ್ರಸ್ತುತ

ಪರೀಕ್ಷೆಗಳತ್ತ ಚಿತ್ತ ವನಜಾ ಸುರೇಶ್ ಪರೀಕ್ಷೆಗೆ  ದಿನಗಣನೆ  ಆರಂಭವಾಗಿದೆ  . ಕೆಲವು  ಮಕ್ಕಳಿಗೆ.  ಪರೀಕ್ಷೆ  ಮುಗಿದರೆ ಸಾಕೆಂಬ ಮನೋಭಾವವು ಇದೆ . ಕೆಲವರಲ್ಲಿ ಭಯವೂ ಇದೆ. 2019 ಜೂನ್ ನಿಂದು ಪ್ರಾರಂಬಿದ  ಪರೀಕ್ಷಾ ತಯಾರಿ  ಅಂತಿಮ ಹಂತಕ್ಕೆ ಬಂದು ನಿಂತಿದೆ.   ಡಿಸೆಂಬರ್ ಗೆ ಬೋದಿಸಬೇಕಾದ ಪಠ್ಯಭಾಗವನ್ನು  ಮುಗಿಸಿ  ಜನವರಿಯಿಂದ  ಪುನರಾವರ್ತನೆ ಮಾಡಲಾಗಿದೆ  ಫೆಬ್ರವರಿಯಿಂದ  ಸಾಕಷ್ಟು ಸರಣಿ ಪರೀಕ್ಷೆಗಳನ್ನು ಮಾಡಿ  ಬರವಣಿಗೆ ದೋಷವನ್ನು ಸರಿಪಡಿಸಿಕೊಳಲು ತಿಳುವಳಿಕೆ ಹೇಳಲಾಗಿದೆ ಕ್ಲಿಷ್ಟಕರಕರವೆನಿಸಿದ  ಪಠ್ಯಭಾಗವನ್ನು  ಪುನಃ ಪುನಃ ಬೋಧನೆ ಮಾಡಿ ಪರೀಕ್ಷೆ ಗಳನ್ನು ಮಾಡಿ  ತಿಳಿಸಲಾಗಿದೆ. ನಂತರ ವಿದ್ಯಾರ್ಥಿಗಳು ಕಲಿಕೆಯ ಹಾಗೂ ಅಭಿವ್ಯಕ್ತಿಯ  ಮಾನದಂಡದಂತೆ  ಎ  ಶ್ರೇಣಿ ಬಿ  ಶ್ರೇಣಿ  ಹಾಗೂ ಸಿ.  ಶ್ರೇಣಿಗಳಾಗಿ  ವಿಭಾಗಿಸಿ  ಕೊಂಡು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋದಿಸಲಾಗಿದೆ . C ಶ್ರೇಣಿಯಲ್ಲಿ ಗೆ ಕೆಲವು ಆಯ್ದ ಪಠ್ಯಭಾಗಗಳನ್ನೇ ಬೋಧಿಸಿ ನಿತ್ಯ ಬರೆಸಿ  ಮೌಖಿಕವಾಗಿ  ಹೇಳಿಸಿ  ಡ್ರಿಲ್  ವರ್ಕ್     ಮಾಡಿಸಿ,  ಅವರಿಗೂ ನಾವು ಬರೆಯಬಲ್ಲೆ ವೆಂಬ  ವಿಶ್ವಾಸ  ಮೂಡಿಸಲಾಗಿದೆ. A. ಶ್ರೇಣಿ ಯ ವಿದ್ಯಾರ್ಥಿ ಗಳಿಗೆ ಇಡೀ  ಪಠ್ಯಭಾಗವನ್ನು  ಓದಿಕೊಂಡು  ಹೇಗೆ ಪ್ರಬುದ್ಧತೆ ಯಿಂದ ಉತ್ತರ ಬರೆಯಬೇಕೆಂಬ. ಬಗೆಗೆ ತಿಳುವಳಿಕೆ ಜೊತೆ ಜೊತೆಗೆ ಹಲವು ಸುತ್ತಿನ ಬರವಣಿಗೆ ಮೂಲಕ,   ಸರಣಿ ಪರೀಕ್ಷೆ ಗಳು ಮೂಲಕ ತಯಾರಿ  ಮಾಡಿಸಲಾಗಿದೆ . ನಿಮಗೆ ಸಾಮರ್ಥ್ಯವಿದೆ  ನೂರಕ್ಕೆ , ನೂರೂ ತಗೊಂಡು ಅಚೀವ್ ಮಾಡಿರೆಂದೂ ,  ಪ್ರೋತ್ಸಾಹಿಸಿದ್ದೇವೆ . ಮಕ್ಕಳೂ ಈ ನಿಟ್ಟಿನಲ್ಲಿ ಸಿದ್ಧತಾ ಪರೀಕ್ಷೆ ಬರೆದು , ಖಾತ್ರಿಮಾಡಿಕೊಂಡಿದ್ದಾರೆ.   ಇನ್ನು ಇಡೀ ವರ್ಷವವೆಲ್ಲ  ತರಬೇತಿಗೊಳಿಸಿದ  ಶಿಕ್ಷಕರು, ಕ್ರಿಕೆಟ್  ,ತರಬೇತುದಾರ,   ಗ್ಯಾಲರಿಯಲ್ಲಿ ಕುಳಿತು  ತಮ್ಮ ಶಿಷ್ಯರ  ಅದ್ಬುತ ಪ್ರದರ್ಶನಕ್ಕೆ  ,  ಕ್ರಿಕೆಟಿಗ ಚೆಂಡನ್ನು ಎದುರಿಸಿ , ಸಿಕ್ಸರ್ ಬಾರಿಸಿ ,  ನೆರೆದ ಸಭಿಕರಿಗೆ  , ಕೋಚ್ ಗಳಿಗೆ ಸಂತಸ  ತರುವನೋ,  ಎಂದು    ಆಸೆ  ಕಾತರದಿಂದ  ಕಾಯುವಂತೆ ,  ಶಿಕ್ಷಕರಾದ  ನಾವುಗಳೂ , ಆಸೆ , ಆತಂಕ , ಕುತೂಹಲದಿಂದ ಗಳಿಂದ ಎದುರು  ನೋಡುತ್ತಿದ್ದೇವೆ .     ಪ್ರತಿಯೊಬ್ಬ ವಿದ್ಯಾರ್ಥಿಯೂ  ಒಂದೊಂದು ಪ್ರಶ್ನೆ ಯನ್ನು  ಹೇಗೇಗೆ   ಉತ್ತರಿಸಬಲ್ಲ  ಎಷ್ಟು   ಉತ್ತರಿಸ ಬಲ್ಲ ಎಷ್ಟು ಜನ ವಿದ್ಯಾರ್ಥಿಗಳು  ಯಾವ ಯಾವ ಪ್ರಶ್ನೆ ಗಳಿಗೆ  ಉತ್ತರಿಸುತ್ತಾರೆಂಬ  ಅಂಕಿ ಅಂಶವೂ  ನಮಗೀಗ  ದೃಢವಾಗಿದೆ. , ಆದರೂ ಬದಲಾದ ಪರೀಕ್ಷಾ ಪದ್ಧತಿ  ಎಂಬ. ಮಾಹಿತಿ ಗೇ ಹಲವು ಮಕ್ಕಳು  ಅಧೀರರಾಗುವುದನ್ನು , ಗಮನಿಸಿ  ಸಾಕಷ್ಟು   ಆತ್ಮವಿಶ್ವಾಸ ದ. , ಮಾತುಗಳು ಮೂಲಕ ದೈರ್ಯ ತುಂಬಿದ್ದೇವೆ .   ಮಕ್ಕಳೇ  ಮುಂದಿನ  ಪರೀಕ್ಷೆಯು  ನಿಮ್ಮ ನಿಮ್ಮ ಶಾಲೆಗಳಲ್ಲಿ  ನಡೆಯುವುದಿಲ್ಲ. , ಹಾಗೇ. ನಿಮ್ಮ ಶಿಕ್ಷಕರಿರುವುದಿಲ್ಲಾ  ಎಂಬ ಬಗ್ಗೆ  ಗಾಬರಿ  ಬೇಡ . ಅಂಜಿಕೆಯೂ ಬೇಡ .    ಯಾರಾದರೂ ಎಲ್ಲರೂ ಶಿಕ್ಷಕರೇ. ಎಲ್ಲರಿಗೂ  ವಿದ್ಯಾರ್ಥಿಗಳ ಬಗ್ಗೆ  ಪ್ರೀತಿಪೂರ್ವಕ. ಕಾಳಜಿ  ಇದ್ದೇ  ಇರುತ್ತದೆ . ಆದ್ದರಿಂದ ಎಲ್ಲರೂ ದೈರ್ಯವಾಗಿ  ಪರೀಕ್ಷಾ ಕೇಂದ್ರಗಳಿಗೆ  ತೆರಳಿ ರಿ.  ನಿಮ್ಮ ಬರವಣಿಗೆಗೆ ಯಾರೂ ಅಡ್ಡಿ ಮಾಡುವುದಿಲ್ಲಾ. ಪರೀಕ್ಷಾ ದಿನದಂದು ಅರ್ಧ ಗಂಟೆ ಮೊದಲು ಕೇಂದ್ರಕ್ಕೆ ತೆರಳಿ ರಿ  , ನಿಮ್ಮ ಹಾಜರಿ ಸಂಖ್ಯೆಗಳನ್ನು ಖಾತ್ರಿ ಮಾಡಿಕೋಳ್ಳಿರಿ ,. ಶಾಂತ ಚಿತ್ತದಿಂದ  ಪ್ರಶ್ನೆ ಪತ್ರಿಕೆ ಪೂರ್ಣ ಓದೆಕೊಂಡು ನಂತರ  ಬರೆಯಲು ಪ್ರಾರಂಭಿಸಿ .  ನಿಮಗೆ ಚೆನ್ನಾಗಿ ಬರುವೆ ಪ್ರಶ್ನೆಗಳಿಗೆ  ಮೊದಲು ಉತ್ತರಿಸಿರಿ     ಪ್ರಶ್ನೆಗಳಿಗೆ ಎಷ್ಟು  ಉತ್ತರಿಸಬೇಕು , ಒಂದು ವಾಕ್ಯ, ಎರಡು ವಾಕ್ಯ ,  ಎಂಟು ಹತ್ತು ವಾಕ್ಯ , ಇದನ್ನು ಗಮನಿಸಿಕೊಂಡು , ಉತ್ತರಿಸಿರಿ .    ಉತ್ತರ ತಿಳಿದಿದೆ ಎಂಬ ಕಾರಣಕ್ಕೆ ,  ಅನವಶ್ಯಕವಾಗಿ  , ಹೆಚ್ಚು ಬರೆದು  ಸಮಯ ವ್ಯರ್ಥಮಾಡಿಕೊಳ್ಳದಿರಿ .      ಚನ್ನಾಗಿ ಗೊತ್ತಿರುವ ಪ್ರಶ್ನೆ ಗಳನ್ನು ಮೊದಲು ಬರೆಯಿರಿ. ಆಯಾಯ ಕ್ರಮಾಕ್ಷರ  ಪ್ರಶ್ನೆ ಸಂಖ್ಯೆ ಯನ್ನು  ಮರೆಯದೆ ಬರೆಯಿರಿ, ಹಾಗೂ ಬರೆದಾದ ಪ್ರಶ್ನೆ ಯನ್ನು  ರೈಟ್ ಮಾರ್ಕ್ ಮಾಡಿಕೊಳ್ಳಿ.   ಇದರಿಂದ  ನೀವು ಇನ್ನೂ ಉತ್ತರಿಸಬೇಕಾದ ಪ್ರಶ್ನೆ ಗಳೆಷ್ಟಿವೆ ಎಂದು  ತಿಳಿಯುತ್ತದೆ. ಸಮಯ ಹೊಂದಾಣಿಕೆ ಮಾಡಿಕೊಳಲೂ ಸಹಾಯಕವಾಗುತ್ತದೆ.      ಉತ್ತರ ಪತ್ರಿಕೆ ಕೊಟ್ಟಾಗ ಮೊದಲು ನಿಮ್ಮ ಹಾಜರಿ ಸಂಖ್ಯೆಯನ್ನು ಮೊದಲು ಬರೆಯಿರಿ ಹೆಚ್ಚುವರಿ ಹಾಳೆ ತೆಗೆದು ಕೊಂಡಾಗ ಲೂ ಹಾಜರಿ ಸಂಖ್ಯೆಹಾಕಲು  ಮರೆಯದಿರಿ. ಹೊಸಜಾಗ  ಜನಜಂಗುಳಿ , ಪೊಲೀಸ್ ವ್ಯವಸ್ಥೆ , ಪೋಷಕರು ದಂಡು  ನೋಡಿ ಗಾಬರಿಯಾಗಿ ದಿಲಿ.   ಪೋಷಕರೇ  ದಯಮಾಡಿ ಪರೀಕ್ಷಾ ಕೇಂದ್ರದ ವರೆಗೆ ಹೋಗಿ  ಅತಿ ಒತ್ತಡ ಹೇರುವುದು ಮೂಲಕ ಭಯಪಡಿಸದಿರಿ.  ಪರೀಕ್ಷಾ ಕೇಂದ್ರಗಳಿಗೆ ತೆರಳುವ   ಹಿಂದಿನ ದಿನವೇ  ಚೆನ್ನಾಗಿ ಬರೆಯುವ ಎರಡು, ಮೂರು ಪೆನ್ , ನಿಮ್ಮ ಪ್ರವೇಶಪತ್ರ, , ಪನೆಸಿಲ್ , ಎರಾಸರ್, ಇತ್ಯಾದಿಗಳನ್ನು  ರೆಡಿಯಾಗಿ ಇಟ್ಟುಕೊಂಡಿರಿ.    ಮಕ್ಕಳೇ ಯಾವುದೇ ರೀತಿಯ  ಕಾಪಿಗೆ ಮನಸ್ಸು ಮಾಡಿದಿರಿ, ನೀವು ಇದುವರೆಗೆ ಕಲಿತಿರುವುದು ನನ್ನು ಬರೆಯಿರಿ , ಬೇರೆಯವರು ಹೇಳುವ  ಉತ್ತರಗಳನ್ನು ನಂಬದಿರಿ.   ಯಾವುದೋ ಒಂದು ಪ್ರಶ್ನೆಗೆ  ಸರಿಯಾಗಿ  ಉತ್ತರಿಸಲಾಗಲಿಲ್ಲಾ , ಅಯ್ಯೋ ನನಗೆ , ಅಂಕ ಕಡಿಮೆಯಾಗುತ್ತದೆ ಎಂದು ಒತ್ತಡಕ್ಕೊಳಗಾಗಬೇಡಿ ಅಂಕ ಮುಖ್ಯವಲ್ಲಾ , ಜ್ನಾನಮುಖ್ಯ.  ಜೀವನ  ದೊಡ್ಡದಿದೆ.  ಮುಂದೆ  ಇನ್ನೂ ಉತ್ತಮವಾಗಿ ಮುಂದುವರಿಯಲು ಸಾಕಷ್ಟು ಅವಕಾಶಗಳಿವೆ .  ಒಂದು ವಿಷಯ ಮುಗಿದ ನಂತರ. ಮುಗಿದ ವಿಷಯದ. ಬಗೆಗೆ ಚಿಂತಿಸಿ  ಮುಂದಿನ ವಿಷಯಕ್ಕೆ   ತೊಂದರೆಮಾಡಿಕೊಳದಿರಿ ಮುಗಿದ ವಿಷಯದ ಬಗ್ಗೆ ಚರ್ಚಿಸಲು ಹೋಗದಿರಿ.   ಪೋಷಕರೇ  ನಮ್ಮ ಒತ್ತಡಗಳನ್ನು ಸಮಸ್ಯೆಗಳನ್ನು  ಮನೆಯಲ್ಲಿ , ಚರ್ಚೆ ಮಾಡುತ್ತಾ,  ಮಕ್ಕಳ ಮನಸಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಿರಿ. ಮಕ್ಕಳೇ. ಮತ್ತೊಂದು ಮಹಾಮಾರಿ ಕೊರೋನಾ  ಎಂಬ ವೈರಾಣು ಆರೋಗ್ಯ ದ ಮೇಲೆ ದುಷ್ಪರಿಣಾಮ ಬೀರುತ್ತಿದೆ .  ಇದರಿಂದ ಸಾರ್ವಜನಿಕ ಸಂಪರ್ಕದಿಂದ ಇರಿ ಮನೆಯಲ್ಲಿಯೇ ಇರಿ , ಹಾಗೂ ಆಗಾಗ ಸಾಬೂನಿನಿಂದ ಕೈಕಾಲು ತೊಳೆಯುತ್ತಾ ಇರಿ, .ರೋಗಿ ಹರಡದಂತೆ ತಡೆಯಲು ನೀವೂ ಸಹಕರಿಸುವುದರೊಂದಿಗೆ , ನಿಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯ ಕಾಪಾಡಲು ಉತ್ತಮ ಸಹಕಾರ ಕೊಡಿ  ಹಾಗೆಯೇ ವಿಚಲಿತರಾಗದೆ ಮುಂಬರುವ ಪರೀಕ್ಷೆ ಯನ್ನು ಧೈರ್ಯದಿಂದ  ಎದುರಿಸುವ ತಯಾರಿ ಮಾಡಿಕೊಳ್ಳಲು ಸದಾವಕಾಶವಿದೆಂದು  ಭಾವಿಸಿರಿ . ಬೇಜವಾಬ್ದಾರಿ ಬೇಡ . ಭಯವೂ ಬೇಡ ಇನ್ನು ಪೋಷಕರೇ ಮಕ್ಕಳೊಂದಿಗೆ  ಪ್ರೀತಿಯಿಂದ  ವರ್ತಿಸುತ್ತಾ,  ಅವರ,  ಆರೋಗ್ಯನೋಡಿಕೊಂಡು  ಅವರೊಂದಿಗೆ  ಇರಲು. ಪ್ರಯತ್ನಿಸಿ , ಮಕ್ಕಳನ್ನು ಒಂಟಿಯಾಗಿ ಬಿಡದಿರಿ. ನೀನು. ಓದಿದೀಯಾ  ಚೆನ್ನಾಗಿ ಬರೀತೀಯಾ  ಅನ್ನೋ ನಂಬಿಕೆ ಇದೆ . ಬರೀ ಗಾಬರಿಯಾಗಬೇಡಿ ಎಂಬ ವಿಶ್ವಾಸದ   ಮಾತುಗಳ  ಮೂಲಕ  ಪ್ರೋತ್ಸಾಹಿಸಿ.   ಎಲ್ಲರಿಗೂ  ಶುಭವಾಗಲಿ .ನೀವೆಲ್ಲರೂ ಶುಭತರುವಿರೆಂಬ  ನಂಬಿಕೆಯಿಂದ ನಮಸ್ಕಾರಗಳೊಂದಿಗೆ    ******

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿಸಲಾಗುವುದಿಲ್ಲವಲ್ಲ ದೀಪಾ ಗೋನಾಳ.. ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಎನೆಲ್ಲ ನೋವು ಹತಾಷೆ, ಸಂಕಟ ಅನುಭವಿಸಿಯು ಅನದೆ ಉಳಿಯಬೇಕಲ್ಲ ಹಾವು ತುಳಿದರೂ ಹೂವು ತುಳಿದದ್ದೆಂದು ಸಂಭಾಳಿಸಬೇಕಲ್ಲ ಕನಸು ಕನವರಿಕೆ ಬೆಸುಗೆ ಹಾಕಿ ಚೆಂದದ ಮಾತ ಹೇಳಿದಾಗಲೂ ಮುನಿಸು ಮಾಡುವ ಗೆಳೆಯನ ಉಳಿಸಿಕೊಳಬೇಕಲ್ಲ ಕಾಡಿಗೆಯಿಟ್ಟ ಕಣ್ಕೆಳಗಿನ ಕಪ್ಪು ವರ್ತುಲಕೆ ಬೆಳ್ಳಂಬೆಳ್ಳಗಿನ ಪೌಡರು ಹಾಕಿ ನಿಂದು, ಒಂದೂದ್ದದ ನಿದ್ದೆ ಮಾಡಿದೆ ಕನಸಿನ ತುಂಬ ನೀನೆ ಎಂದಂದು ಅವನ ಕನಸಿನ ಹೆಣಿಕೆಗೆ ದಾರವಾಗಬೇಕಲ್ಲ ಭುಜ ಹಿಡಿದು ಅಲುಗಿಸಿದಾಗೆಲ್ಲ ಕಳೆದು ಹೋದ ಚಿಂತೆಜಾತ್ರೆಯ ಮುಚ್ಚಿಟ್ಟು ಆಕಾಶ ನಿರುಕಿಸಬೇಕಲ್ಲ ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಅವನೆಂಬ ಅಂಬಾರಿಯ ಎದೆತುಂಬ ಹೊತ್ತು ಜೀವನ ಸವಾರಿಗೆ ಸಿಗದ ಸುಖೀ ಚಣಗಳ‌‌ ಹುಡುಕುತ್ತ ರಥ‌ ಬೀದಿಯಲ್ಲಿ ಸಾಗಬೇಕಲ್ಲ ಭಾರವಾಯಿತೆನ್ನುವಂತಿಲ್ಲ ಶ್ವಾಸಕ್ಕಿಳಿದ ಗಾಳಿ, ಅರಸುತ್ತ ಉಸಿರೆಳೆದವಳು ನಾನೇ ಅಲ್ಲವೇ ಅನ್ನುತ್ತಾನಲ್ಲ ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ.. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಾಳು ಮನವೆ. ಚೈತ್ರಾ ಶಿವಯೋಗಿಮಠ ತಲ್ಲಣಿಸದಿರು ಮನವೆ! ದಟ್ಟೈಸುವ ಕಾರ್ಮೋಡಗಳ ಸುರಿದು ಹಗುರಾಗಿ ಮತ್ತೆ ಕಂಗೊಳಿಸದೆ ನೀಲ ನಭವು??? ತಲ್ಲಣಿಸದಿರು ಮನವೆ! ಕಗ್ಗತ್ತಲ ಒಡಲ ಹರಿದು ಪ್ರಖರವಾಗಿ ಇರುಳ ಗರ್ಭದಿ ಜನಿಸಿ ಬರುವನಲ್ಲವೆ ಇನನು?? ತಲ್ಲಣಿಸದಿರು ಮನವೆ! ಬೊಬ್ಬೆಯಿಟ್ಟು ಚಂಡಿಹಿಡಿದ ಕಂದನ ಹಾಲುಣಿಸಿ ಸಂತೈಸಲು ಬರಲಾರಳೇನು ಅಬ್ಬೆಯು?? ತಲ್ಲಣಿಸದಿರು ಮನವೆ! ಶೀತ ಹೇಮಂತನ ಕೊರೆತವ ಕರಗಿಸಿ ಬಿಸುಪ ಮುದ ನೀಡಲು ಬರುವಳಲವೆ ಗ್ರೀಷ್ಮಳು? ತಲ್ಲಣಿಸದಿರು ಮನವೆ! ಕಾಲಚಕ್ರವದು ನಿಲದೆ ತಿರುಗುವುದು ಅಹಿತವು ಅಳಿದು ಹಿತವು ನಿನಗಾಗಿ ಬಾರದೆ?? ತಲ್ಲಣಿಸದಿರು ಮನವೆ!! ಮಂದಸ್ಮಿತವು ವದನದೊಳಿರಲಿ!! ತಲ್ಲಣಿಸದೆ ಶಾಂತನಾಗು ಮನವೆ!! *********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಹೊಸ ಮನ್ವಂತರ ಗಣೇಶಭಟ್ ಶಿರಸಿ ಹೊಸ ಮನ್ವಂತರ ದಾರಿ ತೋರಲಿರುವ ಕೊರೋನಾ ಪಿಡುಗು ಆಗಿದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದು ಒಳ್ಳೆಯದಕ್ಕೆ. ಮುಂದಾಗುವುದೂ ಒಳ್ಳೆಯದಕ್ಕೇ ಎಂಬುದು ಭಗವದ್ಗೀತೆಯ ಪಾಠ. ಕೊರೊನಾ ಪಿಡುಗಿನಿಂದ ಉಂಟಾಗಿರುವ ಆವಾಂತರವನ್ನು ಗಮನಸಿದಾಗ ಮುಂಬರುವ ದಿನಗಳಲ್ಲಿ ಆಗುವ ಒಳಿತನ್ನು ಸುಲಭದಲ್ಲಿ ಊಹಿಸಬಹುದು. ಕೊರೊನಾ ಕುರಿತು ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳು ಭೀತಿಯನ್ನು ಹುಟ್ಟಿಸುತ್ತಿವೆ. ಕೊರೊನಾ ವೈರಾಣುವಿನಿಂದ ಸತ್ತವರ ಸಂಖ್ಯೆ ಮೂವತ್ತು ಸಾವಿರ ಮೀರಿದೆ. ಸೋಂಕಿತರ ಸಂಖ್ಯೆ ಐದು ಲಕ್ಷ ಮೀರುತ್ತಿದೆ ಇತ್ಯಾದಿ. ಯಾವುದೇ ರೋಗ ಇಡೀ ಪ್ರಪಂಚವನ್ನು ಕಾಡುತ್ತಿರುವದು ಇದು ಮೊದಲನೇ ಬಾರಿಯಂತೂ ಅಲ್ಲ. ಜನವರಿ ೧೯೧೮ ರಿಂದ ಡಿಸೆಂಬರ್ ೧೯೨೦ ರವರೆಗೆ ಇಡೀ ಜಗತ್ತನ್ನು ಆವರಿಸಿ, ಅಂದಿನ ಜನಸಂಖ್ಯೆಯ ಕಾಲು ಭಾಗದಷ್ಟು ಜನರಿಗೆ ತಗಲಿ, ಸುಮಾರು ಐದು ಕೋಟಿ ಜನರ ಮರಣಕ್ಕೆ ಕಾರಣವಾದ ಸ್ಪೇನ್‌ನ ಪ್ಲೂ ಎಂದೇ ಕರೆಯಲ್ಪಡುವ , ಪ್ಲೂ ಇತಿಹಾಸದಲ್ಲಿ ದಾಖಲಾದ ಭೀಕರ ಸಾಂಕ್ರಾಮಿಕ ರೋಗವೆಂದು ಹೇಳಲಾಗುತ್ತದೆ. ಪ್ಲೂ ವೈರಾಣುವಿನ ಆಕ್ರಮಣ ಶೀಲತೆಗಿಂತ ಅಪೌಷ್ಠಿಕತೆ , ವೈದ್ಯಕೀಯ ಸೌಲಭ್ಯಗಳ ಕೊರತೆ, ನೈರ್ಮಲ್ಯದ ಅಭಾವ ಮುಂತಾದವುಗಳೇ ಸಾವಿಗೆ ಕಾರಣವೆಂದು ನಂತರ ನಡೆಸಿದ ಅಧ್ಯಯನದಿಂದ ಬಹಿರಂಗವಾಯಿತು. ಇನ್‌ಪ್ಲೂಯೆಂಜಾ ಹಾಗೂ ಅಂತಹುದೇ ಜ್ವರಕ್ಕೆ ಕಾರಣವಾದ ವೈರಾಣುಗಳ ವಿವಿಧ ಪ್ರಬೇಧಗಳು ಮಾನವನನ್ನು ಕಾಡುತ್ತಲೇ ಇವೆ. ಇತ್ತೀಚಿನ ದಶಕಗಳಲ್ಲಿ ಜನರನ್ನು ಕಂಗೆಡಿಸುತ್ತಿರುವ ಮಂಗನಕಾಯಿಲೆ, ಚಿಕನ್‌ಗುನ್ಯ, ಸಾರ್ಸ್, ಹಂದಿಜ್ವರ ಮುಂತಾದ ಹಲವು ವಿಧದ ಅನಾರೋಗ್ಯವನ್ನುಂಟು ಮಾಡುವ ವೈರಾಣುಗಳಿಂದಲೇ ರೋಗಿಗಳ ಸಾವುಂಟಾಗುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಇತರ ರೋಗಗಳಿಂದ ಪೀಡಿತರಾಗಿರುವವರೇ ಈ ಸೋಂಕು ತಗಲಿದ ನಂತರ ಮರಣ ಹೊಂದುವದು ಕಂಡು ಬಂದಿದೆ. ಮಾಧ್ಯಮಗಳ ಅಬ್ಬರದ ಪ್ರಚಾರಕ್ಕೆ ಕಂಗೆಟ್ಟಿರುವ ಜನರನ್ನು ಇನ್ನಷ್ಟು ಬೆದರಿಸುವಂತೆ ಸರ್ಕಾರದ ನಡೆಯಿದೆ. ಕೊರೊನಾ ವೈರಸ್ ಇಂದು ಪ್ರಚಾರ ಪಡೆಯುತ್ತಿರುವಷ್ಟು ಆಕ್ರಮಣಕಾರಿಯೇ ಎಂಬುದನ್ನು ಅರಿಯಲು ವೆಬ್‌ಸೈಟ್ ಮೊರೆ ಹೋಗುವುದು ಉತ್ತಮ. ಹಲವು ದೇಶಗಳ ಆರೋಗ್ಯ ಇಲಾಖೆಯ ಅಧಿಕೃತ ವೆಬ್ ಸೈಟ್‌ಗಳು ತಮ್ಮ ದೇಶದಲ್ಲಿ ವಿವಿಧ ಕಾರಣಗಳಿಂದ ಮೃತರಾದವ ಅಂಕಿಅಂಶಗಳನ್ನು ಪ್ರಕಟಿಸುತ್ತವೆ. ಪ್ಲೂ ಸಂಬಂಧಿತ ವೈರಾಣು ಪೀಡೆಯಿಂದ ಮರಣ ಹೊಂದಿದವರು (Deaths Due to Flue Related Diseases)ಎಂದು ಅಂತರ್ಜಾಲದಲ್ಲಿ ದೇಶವಾರು ಹುಡುಕಿದರೆ ಕೆಳಗಿನ ಮಾಹಿತಿ ಲಭ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಶೀತಜ್ವರ ಸಂಬಂಧಿತ ರೋಗಗಳಿಂದ ಜಗತ್ತಿನಾದ್ಯಂತ ಪ್ರತಿ ವರ್ಷ ಆರರಿಂದ ಆರೂವರೆ ಲಕ್ಷ ಜನರು ಸಾಯುತ್ತಾರೆ. ಪೃಥ್ವಿಯ ಉತ್ತರ ಗೋಲಾಧದಲ್ಲಿ ಅಕ್ಟೋಬರ್ ಕೊನೆಯವಾರದಿಂದ ಎಪ್ರಿಲ್ ಕೊನೆಯವರೆಗೂ ಚಳಿಗಾಲ ಇರುವುದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿರುತ್ತದೆ.ಹೀಗಾಗಿ ಆ ಸಮಯದಲ್ಲಿ ಪಾಶ್ಚಾತ್ಯ ದೇಶದಲ್ಲಿ ಶೀತಜ್ವರ ಸಂಬಂಧಿತ ವೈರಾಣುಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತದೆ. ಅಮೇರಿಕಾ ಸರ್ಕಾರದ ಪ್ರಕಟಣೆಯಂತೆ ೨೦೧೭ ರಲ್ಲಿ ಆ ದೇಶದಲ್ಲಿ ಮರಣಹೊಂದಿರುವ ಒಟ್ಟು ೨೮ ಲಕ್ಷ ಜನರಲ್ಲಿ ಪ್ಲೂ ಸಂಬಂಧಿತ ವೈರಾಣುವಿನಿಂದ ಸತ್ತವರ ಸಂಖ್ಯೆ ೫೫೬೭೨. ಈ ವಿಧದ ರೋಗಗಳಿಂದ ೨೦೧೯-೨೦ ರ ಸಾಲಿನಲ್ಲಿ ಸುಮಾರು ಎಂಬತ್ತು ಸಾವಿರ ಜನರು ಮರಣ ಹೊಂದಬಹುದೆಂದು ಅಲ್ಲಿನ ಸರ್ಕಾರ ಅಂದಾಜಿಸಿತ್ತು. ಭಾರತ ಸರ್ಕಾರದ ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ (National Center For Disease Control) ಪ್ರಕಟಿಸಿರುವ ಮಾಹಿತಿಯಂತೆ ಶೀತಜ್ವರ ಸಂಬಂಧಿ ವೈರಾಣುಗಳಿಂದ ೨೦೧೯ ರಲ್ಲಿ ೨೮೭೯೮ ಜನರಿಗೆ ಸೋಂಕು ತಗುಲಿದ್ದು ೧೨೧೮ ಜನ ಸತ್ತಿದ್ದಾರೆ. ಅದೇ ವರ್ಷ ಕರ್ನಾಟಕ ದಲ್ಲಿ ೨೦೩೦ ಜನರಿಗೆ ಸೋಂಕು ತಗುಲಿದ್ದು ೯೬ ಜನರು ಮೃತ ಪಟ್ಟಿದ್ದರು. ೨೦೧೫ ರಲ್ಲಿ ಇಡೀ ದೇಶದಲ್ಲಿ ೪೨೫೯೨ ಸೋಂಕಿತರಲ್ಲಿ ೨೯೯೧ ಜನರ ಮರಣ ಹೊಂದಿದ್ದರೆ, ಕರ್ನಾಟಕದಲ್ಲಿ ಸೋಂಕಿತರು ೩೫೬೫ ಹಾಗೂ ೯೪ ಸಾವಿನ ಸಂಖ್ಯೆ. ೨೦೧೭ ರಲ್ಲಿ ದೇಶ ಹಾಗೂ ಕರ್ನಾಟಕದಲ್ಲಿ ಅನುಕ್ರಮವಾಗಿ ಸೋಂಕಿತರು ೩೮೮೧೧ ಮತ್ತು ೩೨೬೦, ಸಾವು ೨೨೭೦ ಮತ್ತು ೧೫. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೀತಜ್ವರ ವೈರಾಣುವಿನ ಕುಟುಂಬಕ್ಕೆ ಸೇರಿದ ಕೊರೊನಾದಿಂದ ಆಗುತ್ತಿರುವ ಅನಾಹುತಕ್ಕಿಂತ ಅದರ ವೈಭವೀಕರಣವೇ ಹೆಚ್ಚು ಎಂಬುದು ವೇದ್ಯವಾಗುತ್ತದೆ. 24×7 ರ ಸುದ್ದಿ ವಾಹಿನಿಗಳು, ಜಾಗತಿಕ ಆರ್ಥಿಕ ಷಡ್ಯಂತ್ರ, ಮಾಧ್ಯಮ ಪ್ರತಿನಿಧಿಗಳಲ್ಲಿ ಅಧ್ಯಯನದ ಕೊರತೆಗಳೇ ಇವಕ್ಕೆ ಮುಖ್ಯ ಕಾರಣಗಳು. ಕಳೆದ ವಾರ ಅಂದರೆ ೧೯-೦೩-೨೦೨೦ ರಂದು ಬ್ರಿಟನ್ ಸರ್ಕಾರ ಕೊರೊನಾ ವೈರಾಣುವಿನ ತೀವ್ರತೆಯ ಕುರಿತಾದ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿತು. ಅಲ್ಲಿನ ತಜ್ಞರ ತಂಡವು ಕೆಲವು ತಿಂಗಳುಗಳ ಹಿಂದೆ ನೀಡಿದ ತಮ್ಮ ಅಭಿಪ್ರಾಯವನ್ನು ಪುನರ್ವಿಮರ್ಶಿಸಿ , ಕೊರೊನಾ ವೈರಸ್ ತಾವು ಊಹಿಸಿದಷ್ಟು ಆಕ್ರಮಣಕಾರಿ ಮತ್ತು ಅಪಾಯಕಾರಿಯಲ್ಲವೆಂದು ಘೋಷಿಸಿತು. ಬ್ರಿಟನ್ ಪ್ರಧಾನಿಗೆ ಸೋಂಕು ತಗಲಿರುವುದನ್ನೇ ವೈಭವೀಕರಿಸುತ್ತಿರುವ ಮಾಧ್ಯಮದವರಿಗೆ ಈ ವರದಿ ಕಾಣಲೇ ಇಲ್ಲ. ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದ ಅತಿ ಹೆಚ್ಚು ತೊಂದರೆಗೊಳಗಾದವರೆಂದರೆ ದೈನಂದಿನ ದುಡಿಮೆಯಿಂದ ಬದುಕು ಸಾಗಿಸುವವರು. ನಿಲ್ಲಲು ನೆಲೆ ಇಲ್ಲದೆ, ದುಡಿಮೆಯ ಅವಕಾಶ ಸಿಗದೇ, ಊಟ, ತಿಂಡಿಗಾಗಿ ಪರದಾಡುವ ಬದಲು ನಗರಗಳಿಂದ ತಮ್ಮ ಗ್ರಾಮಗಳಿಗೆ ಮರು ವಲಸೆ ಹೊರಟಿದ್ದಾರೆ. ಕೊರೊನಾ ರೋಗದ ಭಯಕ್ಕಿಂತ ಹೆಚ್ಚಾಗಿ ಹಸಿವು ಅವರನ್ನು ಕಾಡುತ್ತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ನೂರಾರು ಕಿ.ಲೋ ಮೀಟರ್ ನಡೆದು ತಮ್ಮ ಊರಿನತ್ತ ಸಾಗುತ್ತಿದ್ದಾರೆ. ದುಡಿಯಲು ಬಂದಿರುವ ಊರಿನಲ್ಲಿ ಇದ್ದು, ಹಸಿವೆಯಿಂದ ಸಾಯುವ ಬದಲಿಗೆ ತಮ್ಮ ಊರಿಗೆ ತಲ್ಪಿ ರೋಗದಿಂದ ಸತ್ತರೂ ಚಿಂತೆಯಿಲ್ಲವೆಂದೂ ಗೋಳಾಡುತ್ತಿರುವ ಜನಸಾಮಾನ್ಯರ ಸಂಕಷ್ಟ ಮಾಧ್ಯಮ ಸರ್ವಜ್ಞರಿಗೆ, ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ. ಮನೆಯಲ್ಲಿ ಅಗತ್ಯ ವಸ್ತುಗಳಿಲ್ಲದೇ , ಮಾರುಕಟ್ಟೆಯಲ್ಲಿ ಲಭ್ಯವಾಗದಿರುವ ಪರಿಸ್ಥಿತಿಯಲ್ಲಿ ಜನರು ನಿಸ್ಸಹಾಯಕರಾಗಿ ಬಾಗಿಲು ಮುಚ್ಚಿರುವ ಮಾರುಕಟ್ಟೆಯಲ್ಲಿ ಕಾಣುವುದನ್ನು ನಮ್ಮ ಜನಕ್ಕೆ ಬುದ್ದಿಯೇ ಇಲ್ಲ ವೆಂದು ಕೂಗಾಡುತ್ತಿರುವ ಮಾಧ್ಯಮ ಪ್ರಭೃತಿಗಳು ಮನುಷ್ಯತ್ವವನ್ನು ಮರೆತಿದ್ದಾರೆಯೇ ಎಂದು ಎನಿಸುತ್ತದೆ. ದೇಶದ ಲಾಕ್ ಡೌನ್‌ಗೆ ಜನರು ಸ್ಪಂದಿಸುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಕೊರೊನಾದಿಂದ ಉಂಟಾಗಬಹುದಾದ ಸಾವಿನ ಭೀತಿ (ಈ ಭೀತಿ ಹುಟ್ಟ್ಟಿಸಲು ಮಾಧ್ಯಮಗಳೇ ಕಾರಣ) ಹಾಗೂ ಪೋಲೀಸ್ ಲಾಠಿಯ ಹೆದರಿಕೆ. ಬೀದಿಯಲ್ಲಿ ಜನರ ಸಂಚಾರ ವಿರಳವಾಗಿರುವುದನ್ನೇ ಲಾಕ್ ಡೌನ್ ಯಶಸ್ಸು ಎಂದು ಬಣ್ಣಿಸುವವರಿಗೆ ಕಟಾವಿಗೆ ಬಂದಿರುವ ಬೆಳೆ ಹೊಲದಲ್ಲೇ ಕೊಳೆಯುತ್ತಿರುವುದನ್ನು ಮೌನವಾಗಿ ಕಾಣುವ ರೈತನ ಹತಾಶೆ, ಅಂಗಡಿ ಬಾಗಿಲು ತೆರೆಯಲಾರದೇ ಪರಿತಪಿಸುತ್ತಿರುವ ಸಣ್ಣ ಪುಟ್ಟ ಅಂಗಡಿಕಾರರು ಹಾಗೂ ಉದ್ಯಮಿಗಳ ಹತಾಶೆ ಅರ್ಥವಾಗುವುದಿಲ್ಲ.. ಅಮೇರಿಕಾ ಮತ್ತು ಪಾಶ್ವಾತ್ಯ ದೇಶಗಳನ್ನು ಆರ್ಥಿಕವಾಗಿ ಮಣಿಸಿದ ಚೀನಾ ತೋಡಿದ ಖೆಡ್ಡಾಕ್ಕೆ ಆ ದೇಶಗಳು ಬಿದ್ದಿವೆ. ಪಾಶ್ಚಾತ್ಯ ದೇಶಗಳ ಅಂಧಾನುಕರಣೆ ಮಾಡಲು ಹೋಗಿ ಭಾರತದ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಕಬ್ಬಿಣದ ಪರದೆಯ ಹಿಂದೆ ಕಾರ್ಯನಿರ್ವಹಿಸುತ್ತಾ, ತನ್ನದೇ ಆದ ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿರುವ ಚೀನಾ ದೇಶವು , ತನ್ನ ದೇಶದಲ್ಲಿ ಕೊರೊನಾ ಪೀಡಿತವಾದ ಪ್ರದೇಶವನ್ನು ಇಡೀ ಜಗತ್ತಿಗೆ ತೆರೆದು ತೋರಿಸಿತು. ಸರ್ಕಾರದ ನಡೆ ವಿರೋಧಿಸುವ ಸಾವಿರಾರು ಜನರನ್ನು ಪ್ರತಿದಿನ ಮಟ್ಟ ಹಾಕುತ್ತಿದ್ದರೂ ಬಾಹ್ಯ ಜಗತ್ತಿಗೆ ಗುಟ್ಟು ಬಿಟ್ಟು ಕೊಡದ ಚೀನಾ , ರೋಗಗ್ರಸ್ಥರ ಕೆಲವರ ಸಾವನ್ನು ಇಡೀ ಜಗತ್ತಿಗೆ ಪ್ರದರ್ಶಿಸತೊಡಗಿತು. ಕೊರೊನಾ ನಿಯಂತ್ರಣಕ್ಕಾಗಿ ಬಲಾತ್ಕಾರದ ಲಾಕ್ ಡೌನ್ ಮಾಡುತ್ತಿದ್ದೇವೆಂದು ಮಾಧ್ಯಮಗಳೆದುರು ಚೀನಾ ಬಿಂಬಿಸಿತು. ಮನೆಮನೆಗಳಲ್ಲೂ ಸಾಮಾಜಿಕ – ಅಂತರ ಕಾದುಕೊಳ್ಳಲು ಕೆಲವೆಡೆ ಪೋಲೀಸ್ ಬಲದಿಂದ ಪ್ರಯತ್ನಿಸುತ್ತಿರುವುದಾಗಿಯೂ ತೋರಿಸಲಾಯಿತು. ಇದಾದ ಕೆಲವೇ ವಾರಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆಯೆಂದು ಘೋಷಿಸಲಾಯಿತು. ಸಾಕಷ್ಟು ಪೂರ್ವತಯಾರಿಯಿಂದ ಚೀನಾ ನಡೆಸಿದ ಈ ನಾಟಕದ ಖೆಡ್ಡಾಕ್ಕೆ ಪಾಶ್ಚಾತ್ಯ ದೇಶಗಳು ಸುಲಭವಾಗಿ ಬಿದ್ದವು. ಅಷ್ಟರಲ್ಲಾಗಲೇ ಕೊರೊನಾ ಪಾಶ್ಚಾತ್ಯ ದೇಶಗಳಲ್ಲಿ ಹಬ್ಬಿದ್ದರಿಂದ ( ಪ್ರತಿ ವರ್ಷ ಚಳಿಗಾಲದಲ್ಲಿ ವ್ಯಾಪಕವಾಗುವ ಶೀತಜ್ವರ ರೀತಿಯ ರೋಗಗಳಂತೆ) ಅವು ಕೂಡಾ ಚೀನಾದ ನಾಟಕವನ್ನು ನಂಬಿ ಲಾಕ್ ಡೌನ್ ಘೋಷಿಸಿಕೊಂಡವು. ಇದರ ಪರಿಣಾಮದಿಂದ ಆರ್ಥಿಕ ಹಿನ್ನೆಡೆಯಾಗಿ ಶೇರು ಮಾರುಕಟ್ಟೆ ಕುಸಿಯತೊಡಗಿತು. ಈ ಸನ್ನಿವೇಶವನ್ನು ನಿರೀಕ್ಷಿಸಿದ್ದ ಚೀನಾ ತನ್ನ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಬಹುರಾಷ್ಟ್ರಿಯ ಕಂಪನಿಗಳ ಶೇರನ್ನು ಖರೀದಿಸಿ ತನ್ನ ಹತೋಟಿಗೆ ತೆಗೆದುಕೊಂಡಿತು. ಸಾಮಾಜಿಕವಾಗಿ, ಆರ್ಥಿಕವಾಗಿ, ಪಾಶ್ಚಾತ್ಯ ದೇಶಗಳಿಂದ ತೀರಾ ಭಿನ್ನವಾಗಿರುವ ಭಾರತವೂ ಲಾಕ್ ಡೌನ್ ಘೋಷಿಸುವ ಪ್ರಮಾದ ಎಸಗಿ ಜನಸಾಮಾನ್ಯರನ್ನು ಹಾಗೂ ದೇಶದ ಅರ್ಥವ್ಯವಸ್ಥೆಯನ್ನು ಸಂಕಷ್ಟಕ್ಕೆ ದೂಡಿತು. ಇಲ್ಲಿ ಕೂಡಾ ಶೇರುಮಾರುಕಟ್ಟೆ ಕುಸಿತ ಕಂಡಿತು. ಬೆರಳೆಣಿಕೆಯ ಶ್ರೀಮಂತರು ಈ ಪರಿಸ್ಥಿತಿಯ ಲಾಭಪಡೆದು, ಸಾರ್ವಜನಿಕರ ಕೈ ಸೇರಿದ್ದ ತಮ್ಮದೇ ಕಂಪನಿಯ ಷೇರುಗಳನ್ನು ಅಗ್ಗದಲ್ಲಿ ಖರೀದಿ ಮಾಡಿ ತಮ್ಮ ಪಾರಮ್ಯ ಮತ್ತು ನಿಯಂತ್ರಣ ಹೆಚ್ಚಿಸಿಕೊಂಡಿದ್ದಾರೆ. ಕೊರೊನಾ ಭಯದಿಂದ ಹೊರಬಂದು ಪುನಃ ದೇಶದ ಹಾಗೂ ವೈಯಕ್ತಿಕ ಆರ್ಥಿಕತೆಯನ್ನು ಬಲಪಡಿಸುವುದು ಈಗ ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿ ಎಂದರೆ ಬಂಡವಾಳವಾದ ಆಧಾರಿತ ಕೇಂದ್ರೀಕೃತ ಅರ್ಥನೀತಿಯನ್ವಯ ಸಾಧ್ಯವಾಗದ ಕೆಲಸ. ಈ ನಿರಾಶಾದಾಯಕ ಸ್ಥಿತಿಯಲ್ಲಿ ಅಭಿವ್ಯದ್ಧಿಯ ಪರ್ಯಾಯ ಮಾದರಿಗಳ ಕುರಿತು ಚಿಂತಿಸುವುದು ಅನಿವಾರ್ಯವಾಗಲಿದೆ. ಉದಾಹಣೆಗಾಗಿ ನಗರಗಳಿಂದ ಕಾರ್ಮಿಕರ ಮರು ವಲಸೆಯಿಂದಾಗಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗದ ಹೊಸ ಸಮಸ್ಯೆ ಎದುರಾಗಲಿದೆ. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಗಳಿಂದ ಇದು ಪರಿಹಾರ ಕಾಣದು. ಪ್ರಾದೇಶಿಕ ಆರ್ಥಿಕ ಸ್ವಾವಲಂಬನೆ ಸೂತ್ರವೇ ಇದಕ್ಕೆ ಪರಿಹಾರ. ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಪ್ರದೇಶವನ್ನು ಗುರ್ತಿಸಿ ( ಇದು ಒಂದಿಡೀ ರಾಜ್ಯವಾಗಬಹುದು ಅಥವಾ ಒಂದೇ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಘಟಕಗಳೂ ಆಗಬಹುದು) ಅಲ್ಲಿನ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ಉದ್ಯೋಗ ಸೃಷ್ಟಿಸುವ ಸಲುವಾಗಿ ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಉದ್ದಿಮೆ ಸ್ಥಾಪಿಸಲು ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ದೆಹಲಿ, ಬೆಂಗಳೂರು, ಚೆನ್ನೈಗಳಲ್ಲಿ ಕೇಂದ್ರೀಕೃತವಾಗಿರುವ ಉದ್ದಿಮೆಗಳನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಕುರಿತು ಯೋಚಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ದೊರಕುತ್ತದೆ. “ಕರ್ನಾಟಕದ ಉದ್ಯೋಗ ಕನ್ನಡಿಗರ ಹಕ್ಕು”, “ಕನ್ನಡಿಗರೆಲ್ಲರಿಗೂ ಕರ್ನಾಟಕದಲ್ಲೇ ಉದ್ಯೋಗ” ಎಂಬ ಈಗಾಗಲೇ ಪ್ರಾರಂಭವಾಗಿರುವ ಅಭಿಯಾನ ಇಡೀ ದೇಶವನ್ನು ವ್ಯಾಪಿಸಲಿದೆ. ಬಿಹಾರಿಗಳಿಗೆ ಬಿಹಾರದಲ್ಲೇ ಉದ್ಯೋಗ ಓಡಿಸ್ಸಿಗರಿಗೆ ಓಡಿಶಾದಲ್ಲೇ ಉದ್ಯೋಗ, ಮುಂತಾದ ಪ್ರಾದೇಶಿಕ ಆರ್ಥಿಕ ಸ್ವಾಯತ್ತತೆಯ ಚಳವಳಿಗಳು ಬಹುಬೇಗ ರೂಪುಗೊಳ್ಳಲಿವೆ. ಜಗತ್ತಿನ ಬಹಳಷ್ಟು ರಾಷ್ಟ್ರಗಳು ಲಾಕ್ ಡೌನ್ ಅನುಸರಸುತ್ತಿರುವುದರಿಂದಾಗಿ ಆಯಾತ ನಿರ್ಯಾತಗಳಿಗೆ ತಡೆ ಬಿದ್ದಿದೆ. ಉದಾಹರಣೆಗಾಗಿ ಭಾರತ ಮತ್ತು ವಿಯೇಟ್ನಾಂ ಅಕ್ಕಿಯ ನಿರ್ಯಾತಕ್ಕೆ ತಡೆ ಒಡ್ಡಿವೆ. ಆಹಾರ ಪದಾರ್ಥಗಳ ಆಯಾತವನ್ನೇ ಅವಲಂಬಿಸಿದ ದೇಶಗಳು ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಿಸಲಿವೆ. ಇದಕ್ಕೆ ಪರಿಹಾರವೆಂದರೆ , ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು. ಚಿಕ್ಕಪುಟ್ಟ ದೇಶಗಳು, ದೇಶದ ಹಂತದಲ್ಲಿ ಸ್ವಾವಲಂಬಿ ಯಾಗುವ ರೀತಿಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತವೆ. ಆದರೆ ಭಾರತದಂತಹ ವೈವಿದ್ಯಮಯ ದೇಶದಲ್ಲಿ ಜೀವನದ ಕನಿಷ್ಠ ಅಗತ್ಯತೆಗಳ ಉತ್ಪಾದನೆಯ ಸ್ವಾವಲಂಬನೆಯನ್ನು ಪ್ರಾದೇಶಿಕ ಹಂತದಲ್ಲೇ ಸಾಧಿಸಬೇಕಾಗುತ್ತದೆ. ಪ್ರಕೃತಿ ಎಂದೂ ಪಕ್ಷಪಾತಿಯಲ್ಲ, ಪೃಥ್ವಿಯ ಎಲ್ಲೆಡೆಗೂ ಸಂಪನ್ಮೂಲಗಳನ್ನು ನೀಡಿದೆ ಹಾಗೂ ಅವುಗಳಲ್ಲಿ ವೈವಿಧತೆಯನ್ನು ತುಂಬಿದೆ. ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯನ್ನು ಗುರ್ತಿಸಿ, ಅವುಗಳನ್ನು ಸೂಕ್ತ ವಿಧಾನದಲ್ಲಿ ಬಳಸಿ, ಆ ಪ್ರದೇಶದ ವಾಸಿಗಳೆಲ್ಲರಿಗೂ ಉತ್ತಮವಾದ ಬದುಕು ಕಟ್ಟಿಕೊಳ್ಳುವ ರೀತಿಯನ್ನೂ ಕಂಡುಕೊಳ್ಳುವ ಬುದ್ಧಿಮತ್ತೆಯನ್ನು ಮಾನವನಿಗೆ ನೀಡಿದೆ. ನಿಸರ್ಗದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಮಾನವನ ಅಹಂಕಾರ ಚಿಕ್ಕ ಅಣು ಕೊರೊನಾ ವೈರಸ್ ಮುಖೇನ ಧೂಳೀಪಟವಾಗಿದೆ. ಇನ್ನು ಮುಂದಾದರೂ ಪರಿಸರ ಪೂರಕ ಅಭಿವೃದ್ಧಿ ಪಥದಲ್ಲಿ ನಡೆಯುವಂತೆ ಎಚ್ಚರಿಕೆಯನ್ನು ನೀಡಿದೆ. ಕೊರೊನಾ ವೈರಾಣು ಹರಡುವುದು ಸಂಪರ್ಕ, ಸ್ಪರ್ಶ, ಗಾಳಿಯ ಮೂಲಕ ಅಂದರೆ ಸ್ಥೂಲ ವಾಹಕಗಳ ಮೂಲಕ. ಇದಕ್ಕಿಂತ ಭಿನ್ನವಾದ, ಶಬ್ದಗಳ ಮೂಲಕ ಹರಡಬಲ್ಲ, ವಿಚಾರಗಳ ಮುಖೇನ ಪ್ರಸಾರಗೊಳ್ಳಬಲ್ಲ, ಅಣುಗಳ ಕುರಿತು

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸ್ಮಿತಾ ರಾಘವೇಂದ್ರ ಗಜಲ್ ಎಡ ಬಿಡದೇ ಸುಳಿದಾಡುವ ನೋವು ಹಿಂಸೆ ನೀಡುತ್ತದೆ. ಗವ್ ಎನ್ನುವ ತಣ್ಣಗಿನ ಮೌನ ಉಸಿರುಗಟ್ಟಿಸುತ್ತದೆ. ಗಾಳಿಯಲಿ ವಿಹರಿಸುವಾಗ ಭಾವಗಳು ಸದಾ ನಿರಾಳ/ ಬಣ್ಣದ ಚಿತ್ರಗಳ ಹಿಂದಿನ ಅಳಲು ಹೆಪ್ಪುಗಟ್ಟುತ್ತದೆ. ನೋಟಕ್ಕೆ ನಿಲುಕಿದ್ದೆಲ್ಲ ನಂಬಲರ್ಹವೇನು ಇಲ್ಲಿ/ ತಾಳ್ಮೆ ಕಳೆದುಕೊಂಡಾಗ ಸತ್ಯವೂ ಸುಳ್ಳೆನಿಸುತ್ತದೆ ತಡರಾತ್ರಿಯಲಿ ಬೆಚ್ಚಿ ಬೆವರೊಡೆದ ಒದ್ದೆ ನೆನಪು / ಕದ ಮುಚ್ಚುವಾಗ ಅಂತರಂಗ ತುಟಿ ಬಿರಿಯುತ್ತದೆ. ಆಡಿಕೊಂಬವರ ಅನುರಾಗವೋ ಭ್ರಮೆಯ ಮುಸುಕು/ ಆಪ್ತ”ಸ್ಮಿತ”ಕುಹಕವೆನಿಸಿದಾಗ ಎಲ್ಲವೂ ಸ್ತಬ್ಧವಾಗುತ್ತದೆ **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಈ ದಾರಿಗಳಿಗೆ ಎಷ್ಟೊಂದು ಮುಖ ಸತ್ಯಮಂಗಲ ಮಹಾದೇವ ಬದುಕು ಒಂದು ಜೀವನ ನೂರು ಮೊಗ ಒಂದು ಮುಖವಾಡ ಹಲವು ಪದ್ಯ ಒಂದೇ ಅನೇಕ ಪದಗಳು ಜೀವ ಒಂದೇ ಜೀವಿಸುವ ದಾರಿ ನೂರು ಆಯ್ಕೆಗೊಂದು ಮುಖ ನಡೆಗೊಂದು ಮುಖ ನೋಟದ ದಾರಿಗೂ ಒಂದು ಮುಖ ಮುಖವಾಡದೊಳಗೆ ಉಸಿರುಕಟ್ಟುವಾಗ ಝಳ ಝಳನೆ ಉದುರುವ ನೀರು ಉಪ್ಪು ನದಿಯ ನೋಡಿ ಖುಷಿ ಇಟ್ಟೆ ಕಾಲು ಒಳಸೆಳೆತದ ದಾವಂತ ಬೊಗಸಯಲ್ಲೆ ಹಿಡಿದು ಕುಡಿದೆ ಜೀವ ಉಳಿಸಿಕೊಂಡೆ ಈಗ ಜೀವ ಆ ನೀರಿನ ಹೆಸರಲ್ಲಿದೆ ನದಿಗೂ ಮುಖವಾಡವಿತ್ತು ನನ್ನ ಉಸಿರಿಗೂ ಅದರ ಸೋಂಕಿದೆ ಕರೋನ ಬಂದಿದ್ದರೆ ಪರವಾಗಿಲ್ಲ ಅದು ನೆಗಡಿ ಮೂಗು ಇರುವವರೆಗೆ ತಪ್ಪದ ನೇಹ ಹೊರಗಡೆ ಹೆಜ್ಜೆ ತಗೆದರೆ ನನ್ನ ಹೆಜ್ಜೆ ಈ ನೀರ ಗುರುತು ನೆಲಕ್ಕೊಂದು ನನ್ನ ಹೆಜ್ಜೆಯ ಮುಖವಾಡ ಬಿಸಿಲಿಗೆ ಆವಿಯಾದ ಮುಖ ಕಾಲಲ್ಲೇ ಉಳಿದ ಇನ್ನೊಂದು ಮುಖ ನಡಿಗೆಯೊಳಗೊಂದು ನುಡಿಯೊಳಗೊಂದು ಪಾದರಕ್ಷೆಯೊಳಗೊಂದು ತನ್ನ ತುಂಬಿಕೊಂಡ ಕಾಲುಚೀಲದೊಳಗೆ ಈ ಎಲ್ಲಾ ವರ್ತಮಾನಗಳ ಕಂಡು ಬೆವೆತು ಬೆಂಡಾಗಿ ಮತ್ತೆ ಚಿಗುರುವ ಆಸೆ ಈ‌ ಆಸೆಗೊಂದು ಮುಚ್ಚಿದ ಮುಖ ಇತ್ತೀಚೆಗೆ ಈ ಹೃದಯವೂ ಹೇಳಿದ ಮಾತು ಕೇಳುವುದಿಲ್ಲ ಜೀವಕ್ಕೆ ನದಿಯ ಸೆಳವು ನದಿಗೆ ಮುಖವಾಡಗಳ ಸೆಳವು ಮುಖವಾಡಗಳ ಹೊರುವ ಊರದಾರಿಯ ತುಂಬಾ ಈಗ ಮುಖ ಪುಸ್ತಕಗಳ ಮಾಡಿದ್ದಾರೆ ಮುಖಪುಸ್ತಕಗಳ ಜಾತ್ರೆ. ಅವರದೇ ಮುಖ ಅವರೊಳಗೊಂದು ಮೊಗ ಮಾನಕ್ಕೊಂದು, ಸತ್ಯಕ್ಕೊಂದು ಸುಳ್ಳಿಗೊಂದು ಮಾನವತೆಗೂ ಒಂದು ರಾಕ್ಷಸತ್ವಕ್ಕೂ ಒಂದು ರೋಗಕ್ಕೂ ಒಂದು ಆರೋಗ್ಯಕ್ಕೂ ಒಂದು ನದಿಗೆ ಹಲವು ದಾರಿ ನದಿಗೆ ಹೊರಟವನಿಗೂ ಹಲವು ದಾರಿ ಹರಿಯುವ ನದಿಗೆ ಮೈಯೆಲ್ಲಾ ದಾರಿ ಈ ದಾರಿಯು ಹರಿಯುವಾಗ ಮುಖವೇ ಒಂದು ದಾರಿ ಮುಖವಾಡಗಳಿಗಂತೂ ಭಿನ್ನ ದಾರಿ. ********

ಕಾವ್ಯಯಾನ Read Post »

You cannot copy content of this page

Scroll to Top