ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

snowy mountains behind valley

ತೇಜಾವತಿ ಹೆಚ್. ಡಿ

ಭಾರತಾಂಬೆಯ ಮಡಿಲಲ್ಲಿ ತ್ರಿವರ್ಣಗುಡಿಯು ರಾರಾಜಿಸುತ್ತಿದೆ ವೀರ
ತ್ರಿರಂಗವೂ ತನ್ನದೇ ವಿಶೇಷತೆಯ ತಿಳಿಸಿ ಹೇಳುತ್ತಿದೆ ವೀರ

ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ ಗಡಿ ಚಾಚಿ ಹರಡಿದೆ
ಅಡಿಯಿಂದ ಮುಡಿಯವರೆಗು ವಿವಿಧತೆಯಲಿ ಏಕತೆಯ ತೋರುತ್ತಿದೆ ವೀರ

ದೀಪಾವಳಿ ಕ್ರಿಸ್ಮಸ್ ಮೊಹರಂ ರಂಜಾನ್ ಹಬ್ಬಗಳೆಲ್ಲವ ಆಚರಿಸುತ್ತಿದೆ
ಜಾತಿ – ಮತ ಬೇಧವಿರದೆ ಸರ್ವಧರ್ಮ ಸಹಿಷ್ಣುತೆ ಭ್ರಾತೃತ್ವ ಸಾರುತ್ತಿದೆ ವೀರ

ಶಿಲಾಶಾಸನ ವೀರಗಲ್ಲು ಮಾಸ್ತಿಗಲ್ಲುಗಳು ಎಲ್ಲೆಂದರಲ್ಲಿ ಕಾಣಿಸುತ್ತವೆ
ಪ್ರತಿಯೊಂದರಲ್ಲೂ ಹರಿದ ಪ್ರೇಮ, ತ್ಯಾಗ ನೆತ್ತರಿನ ಕತೆಯನ್ನು ನೆನಪಿಸುತ್ತಿದೆ ವೀರ

ತನುಮನದ ನರನಾಡಿಯಲ್ಲು ದೇಶಭಕ್ತಿಯ ಮಿಂಚು ಪ್ರವಹಿಸುತ್ತಿದೆ
ತೇಜಾಳ ಎದೆಯಗೂಡಲ್ಲಿ ಭಾರತೀಯಳೆಂಬ ದೀಪ ಬೆಳಗುತ್ತಿದೆ ವೀರ

*******

About The Author

1 thought on “ಕಾವ್ಯಯಾನ”

  1. ಚಂದ್ರಶೇಖರ್

    ಈ ರೀತಿಯ ಬರಹಗಳು ಸಾಕಲ್ಲವೇ ನಿಮಗೆ,,,ಅದು ಬಿಟ್ಟು ಯಾವ್ಯಾವುದೋ ವಿಷಯಗಳ ಬರಹ, ನಿಮ್ಮ ಘನತೆಗೆ,ಬರಹದ ಮಟ್ಟಕ್ಕೆ,ಸರಿ ಅನ್ನಿಸುವುದಿಲ್ಲ,,,,

Leave a Reply

You cannot copy content of this page

Scroll to Top