ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿಝಾ಼ರ್ ಖಬ್ಬಾನಿ

ಅವರ ಪ್ರೇಮ ಕವಿತೆಗಳು

Man and Woman Holding Each Others Hand Wrapped With String Lights

೧)
ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ
ಅವರು ನನ್ನ ಕಣ್ಣುಗಳಲ್ಲಿ ಮೀಯುವ
ನಿನ್ನ ಕಂಡರು
ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ
ಆದರೆ ನಾನು ಬರೆದ ಪದಗಳಲ್ಲಿ
ನಿನ್ನನ್ನು ಕಂಡರು
ಪ್ರೇಮದ ಪರಿಮಳವನ್ನು ಮುಚ್ಚಿಡಲಾಗದು

೨)
ನಾನು ನನ್ನ ಪ್ರೇಮಿಯ ಹೆಸರನ್ನು
ಗಾಳಿಯ ಮೇಲೆ ಬರೆದೆ
ನಾನು ನನ್ನ ಪ್ರೇಮಿಯ ಹೆಸರನ್ನು
ನೀರಿನ ಮೇಲೆ ಬರೆದೆ
ಆದರೆ ಗಾಳಿ ಒಬ್ಬ ಕೆಟ್ಟ ಕೇಳುಗ
ನೀರು ಹೆಸರನ್ನು ನೆನಪಿಡುವುದಿಲ್ಲ

೩)
ನನ್ನ ಪ್ರೇಮಿ ಕೇಳುತ್ತಾಳೆ-
“ನನ್ನ ಮತ್ತು ಆಗಸದ ನಡುವೆ
ಅಂತರವೇನು?”
“ಅಂತರವಿಷ್ಟೆ, ಪ್ರಿಯೆ,
ನೀನು ನಗುವಾಗ ನಾನು
ಆಗಸವನ್ನು ಮರೆತು ಬಿಡುವೆ”

*******

ಡಾ.ಗೋವಿಂದ ಹೆಗಡೆ

About The Author

Leave a Reply

You cannot copy content of this page

Scroll to Top