ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನಸು

couple under brown tree during sunset

ಶ್ವೇತಾ ಮಂಡ್ಯ

ದಿಟ್ಟಿಸುತ ನೀ ನನ್ನ
ತುಸುವೇ ಒತ್ತರಿಸಿ
ಬಂಧಿಸಿ ಬಾಹುವಿನೊಳು …

ನಿನ್ನೊಲವಿನ ಗಾಳಿಯೊಳು
ಸುಳಿದಾಡಿದ ಮುಂಗುರಳ
ಮೆಲ್ಲನೆ ಸರಿಸಿ….

ರವಾನಿಸಿ ಎನ್ನೆದೆಗೆ ನಿನ್ನೊಲುಮೆ
ನಿಂತ ನೆಲವನೆ ಮರೆಸಿ
ಹರಸಿ ಅನೂಹ್ಯ ಪ್ರೀತಿ…

ಭಾವದ ಮಳೆಯಲಿ ನೆನೆ ನೆನಸಿ
ಅವಿಚ್ಛಿನ್ನ ಅನುಭಾವದ ಸಾಂಗತ್ಯ
ಕನಸಲಷ್ಟೇ ನಿನ್ನೊಂದಿಗೆ ಒಂದಾಗಿಸಿದೆ.
******

About The Author

Leave a Reply

You cannot copy content of this page

Scroll to Top