ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೂಕ ಭಾರತದ ನಾಯಕ

Ambedkar Jayanti 2018: 7 rare and unseen pictures of BR Ambedkar ...

ನಾಗರಾಜ ಹರಪನಹಳ್ಳಿ

ಅಂಬೇಡ್ಕರ ಅಂಬೇಡ್ಕರ
ದುಡಿವ ಜನಗಳ ಧ್ವನಿಯು ನೀನೋ || ಪಲ್ಲವಿ||

ನನ್ನ ಅವ್ವಂದಿರ ಅಕ್ಷರದ ಬೆಳಕು ನೀನೋ
ಬಡ ಭಾರತದ ಬಾಬಾ ಸಾಹೇಬ ನೀನೋ

ಜಾತಿವಾದಿಗಳ ಕೈಯ ಬೊಗಸೆ ಕೆಂಡ ನೀನೋ
ಮನುಷ್ಯವಾದಿಗಳ ಬದುಕ ಬೆಳದಿಂಗಳೊ ನೀನೋ

|| ಅಂಬೇಡ್ಕರ ಅಂಬೇಡ್ಕರ
ದುಡಿವ ಜನಗಳ ಧ್ವನಿಯು‌‌ ನೀನೋ||

ಬಡವರ ಪಾಲಿನ ಬೆಳಕು ನೀನೋ
ಬಹುತ್ವ ಭಾರತವನ್ನು ತಿಳಿದವ ನೀನೋ

ಮನುವಾದಿಗಳ ಕಣ್ಣು ತೆರೆಸಿದವ‌ ನೀನೋ
ಬ್ರಿಟಿಷರ ಮನಮನ‌ ಗೆದ್ದವ ನೀನೋ

ಷಾಹು ರಾಜನ ಹೃದಯ ಆಳ್ದವ ನೀನೋ
ಮೂಕ ಭಾರತದ ಮೂಕ‌ನಾಯಕ ನೀನೋ

|| ಅಂಬೇಡ್ಕರ ಅಂಬೇಡ್ಕರ
ದುಡಿವ ಜನಗಳ ಧ್ವನಿಯು‌‌ ನೀನೋ||

ಬಹಿಷ್ಕೃತ ಭಾರತದ ಕಣ್ಮಣಿ ನೀನೋ
ಜನುಮ‌ ಜನುಮಕೂ ನಾಯಕ ನೀನೋ

|| ಅಂಬೇಡ್ಕರ ಅಂಬೇಡ್ಕರ
ದುಡಿವ ಜನಗಳ ಧ್ವನಿಯು‌‌ ನೀನೋ||

*********

About The Author

2 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top