ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನದಲ್ಲ ಬಿಡು

Person Foot Prints on Sands Photo

ನೀ.ಶ್ರೀಶೈಲ ಹುಲ್ಲೂರು

ಭಾರವಾದ ಹೆಜ್ಜೆಗಳಿಗೆ
ಗೆಜ್ಜೆ ಏತಕೋ
ನೊಂದುಬೆಂದ ಜೀವಕೀಗ
ಅಂದವೇತಕೋ?

ಕೋಪ ತಾಪ ಎಲ್ಲ ಬಿಡು
ರೋಷವೇತಕೋ
ನಮ್ಮ ಹಾಗೆ ಪರರ ತಿಳಿ
ವಿರಸವೇತಕೋ?

ನಮ್ಮ ನಡುವೆ ಕೊಳ್ಳಿ ಇಡುವ
ಸುಳ್ಳು ಏತಕೋ
ಅರಿತು ಬೆರೆವ ಮನಕೆ ಇರಿತ
ದುರಿತವೇತಕೋ?

ಅಳುವಿನಲೇ ನಲಿವ ಬದುಕು
ಚಿಂತೆ ಏತಕೋ
ನಾಕವಿಲ್ಲಿ ನರಕವಿಲ್ಲಿ
ಕೊರಗು ಏತಕೋ?

ನಾನು ನನದು ಎನುವ ಜನುಮ
ಇನ್ನು ಏತಕೋ
ಅವನ ಜೀವ ಅವನ ಕಾಯ
ನನಗೆ ಏತಕೋ?

*******

About The Author

Leave a Reply

You cannot copy content of this page

Scroll to Top