ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಗಬಹುದು.

ಎಂ.ಆರ್.ಅನಸೂಯ

ಆಗಬಹುದು
ಧುಮ್ಮಿಕ್ಕುವ ಕಣ್ಣೀರು
ಕೇವಲ ಕಣ್ಣಂಚಿನ ಕಂಬನಿ

ಮಲಗಬಹುದು
ಕೆರಳಿ ನಿಲ್ಲುವ ದ್ವೇಷ
ಮೊಂಡಾದ ಮಚ್ಚಾಗಿ

ಮರಗಟ್ಟಬಹುದು
ಬೆಂಕಿಯುಗುಳುವ ಕೋಪವೂ
ಕೊರೆವ ಹಿಮಗಡ್ಡೆಯಾಗಿ

ಇಳಿಯಬಹುದು
ಉಕ್ಕಿ ಹರಿವ ಉನ್ಮಾದವೂ
ನೆರೆಯಿಳಿದ ನದಿಯಾಗಿ

********

About The Author

Leave a Reply

You cannot copy content of this page

Scroll to Top