ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮ ನಡುವಿನ ಅಂತ

woman in black shirt standing beside green plant

ವೀಣಾ ರಮೇಶ್

ಎಲ್ಲಾ ದಿನಗಳೂ ಖಾಲಿ
ಇದ್ದರೂ
ಮನಸಿನ ದಾರಿಯಲಿ
ನೀ ನಿರದಿದ್ದರೂ ಮುಳ್ಳುಗಳೇನಿಲ್ಲ ಚುಚ್ಚಲು
ಕಲ್ಲುಗಳಿಲ್ಲ ಎಡವಲು
ಬರವಿರದಿದ್ದರೂ ನಿನ್ನ ನೆನಪಿಗೆ
ಬೇಸರವೆನಿಸಿದೆ ಮನಸಿಗೆ
ಗೆಳತೀ
ಎಲ್ಲೆಲ್ಲೂ ನೀ ಸಿಗದೆ …

ಯಾಕೆ ಸಮಾನಾಂತರ
ರೇಖೆಗಳಾಗಿದ್ದೇವೆ
ನಡುವೆ ಎಷ್ಟೊಂದು ಅಂತರದ ಅರಿವು,
ಇರಲಿ ಸಮಾನ ಅಂತರ ಕಾಯ್ದುಕೊಂಡಿದ್ದೇವೆ,
ಮಾತು, ಮೌನಗಳಲೂ
ಬಿಗಿಅಂತರವೇ ಗೆಳತೀ…..

ಮನಸಿನಲಿ ಭಾವನೆಗಳ
ಕುಟ್ಟಿ ಪುಡಿ ಮಾಡಿರುವೆ
ಆದರೆ ಮೊಳಕೆಯೊಡೆದ,
ಹೃದಯ ತಟ್ಟುವ ,
ಉಸಿರು ಕಟ್ಟುವ,
ನಿನ್ನದೆ ನೆನಪುಗಳು,
ನೀಡುಸುಯ್ದ ಬಿಸಿಉಸಿರು
ನಿನ್ನ ಸೋಕಿರಬಹುದು
ನಿನ್ನುಸಿರ ತಣ್ಣನೆ ಗಾಳಿ
ತುರ್ತು ವಿರಾಮದ
ಪರದೆಯ ಬೇಲಿ ಹಾಕಿದೆ
ನನಗೂ ಗೊತ್ತಿದೆ ಗೆಳತೀ ….

ದಿಗಂತದ ಊರಿನಲಿ
ಯಾವ ಬೇಲಿಯ ತಡೆಯಿಲ್ಲದ
ರವಿ ಕೆಂಪಿಟ್ಟು,
ಬರುವಾಗ,
ಏನೋ ತಳಮಳ ನನ್ನೊಳಗೆ….
ನಿನ್ನ ಸಿಹಿ ನಗು
ಕಣ್ತುಂಬಿ ಕೊಳ್ಳುವ ತವಕ……
ತುಟಿ ಇಟ್ಟು ಮೆತ್ತಿದ, ಕೆಂಪು ಕೆನ್ನೆಯ ಗುಳಿಯೊಳಗೆ
ಅವಿತು ಕುಳಿತು,
ನಿನ್ನ ನೋಡುವ
ಅವಸರ ಗೆಳತೀ….

ದಿನವೂ ಖಾಲಿ,ಅಂತರದ
ಖಯಾಲಿ……….
ಅದೇನು ಶಂಕೆ,ಪ್ರೀತಿಗೂ
ಅಂತರಂಗದಲ್ಲಿ ಸೊಂಕೆ
ಹಾಗಿದ್ದರೆ ..
ನಿನ್ನ ಭಾವನೆಗಳನ್ನು
ಅಪ್ಪಿ ಕೊಳ್ಳುವುದಾದರು ಹೇಗೆ…..
ನೀ ನಲ್ಲಿ ಕಿಟಕಿಯಲ್ಲಿ
ನಾನಿಲ್ಲಿ ಹೃದಯದ ಕದ
ತೆರೆದು ನಿನ್ನ ಕಾಯುವುದು
ನಿರಂತರವೇ ಗೆಳತೀ..

******

About The Author

Leave a Reply

You cannot copy content of this page

Scroll to Top