ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಿಯತಮೆ

gold-colored ring on hands surrounded by green leaves

ವೀಣಾ ರಮೇಶ್

ಈ ಧರೆಯ ಒಡಲು
ಧರಿಸಿದೆ, ಸ್ವರ್ಗದ ಹಸಿರು
ತಳಿರು,ತಳೆದಿದೆ
ಸೊಬಗಿನ ಸಿರಿಯ
ಸೌಂದರ್ಯ ಮೇಳೈಸಿದೆ
ಮೌನವಿಲ್ಲಿ ಪ್ರೀತಿಸಿದೆ
ಸ್ರಷ್ಟಿಯ ಸಿರಿಯಲಿ
ರಸ ವೈಭೋಗ ತೂಗಿದೆ

ಮತ್ತೆ ಋತುರಾಜ ಬಂದ
ಚಿಗುರು ತಂದ
ಚಲುವ ನಗೆಯ
 ಅರಳೋ ಮುಗುಳು
ಈ ಇಳೆಯ ಹಸಿರಲಿ
ನಿನ್ನ ನಗುವಿನ ಸವಾರಿ
ಕೇಳೇ ನನ್ನ ವೈಯಾರಿ

ಈ ಕಣ್ಣ ನೋಟದ
ಬಿಗಿ ಸರಳು,ಸೆರೆಯಾದೆ
ನಾ ನಿನಗೆ
ಪ್ರತಿಬಿಂಬದ ಪ್ರತಿಕ್ಷಣದ
ಪ್ರತಿ ನೆರಳು

ಸೆಳೆವ ಕಂಗಳ ಅಂಚಿಗೆ
ಮುತ್ತಿಡುವ ಈ ಮುಂಗುರುಳು
ತುಟಿಮೇಲೆ ಹರಿದ
ನನ್ನ ಕೆಣಕುವ ಮಂಜಿನ
ಹರಳು,ಮೌನ ಸ್ಪರ್ಶದ
ಪ್ರತಿನಿಮಿಷದ ಎದೆಯ
ಬಡಿತಗಳು,  
ಈ ನೆನಪುಗಳು, ನನ್ನ ಮೈಮನಗಳು
ಮಧುರ ಯಾತನೆ
ಪಲ್ಲವಿಸಿದೆ ಈ ಇರುಳು

*******

About The Author

Leave a Reply

You cannot copy content of this page

Scroll to Top